ಫೋಕ್ಸ್ ವ್ಯಾಗನ್ ವೆಂಟೊ ಬಿಡುಗಡೆಗೆ ಕ್ಷಣಗಣನೆ

Written By:

ಜರ್ಮನಿಯ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆ ಫೋಕ್ಸ್ ವ್ಯಾಗನ್ ನಾಳೆ (2015 ಜೂನ್ 23) ಮಂಗಳವಾರದಂದು ಎಲ್ಲ ಹೊಸತನದ ವೆಂಟೊ ಕಾರನ್ನು ಬಿಡುಗಡೆ ಮಾಡಲಿದೆ. ಇದರೊಂದಿಗೆ ಕ್ಷಣಗಣನೆ ಆರಂಭವಾಗಿದೆ.

ನೂತನ ವೆಂಟೊ ಫೇಸ್ ಲಿಫ್ಟ್ ಮಾದರಿಯಾಗಲಿದ್ದು, ಕಾರಿನ ಒಳಮೈ ಹಾಗೂ ಹೊರಮೈಯಲ್ಲಿ ಬದಲಾವಣೆ ಕಂಡುಬರಲಿದೆ.

To Follow DriveSpark On Facebook, Click The Like Button
ಫೋಕ್ಸ್ ವ್ಯಾಗನ್ ವೆಂಟೊ

ಹೊಸ ವೆಂಟೊ ಕಾರಿನಲ್ಲಿ ಪಸ್ಸಾಟ್ ಮಾದರಿಂದ ಗ್ರಿಲ್ ಆಮದು ಮಾಡಲಾಗಿದೆ. ಅಲ್ಲದೆ ರಿಯರ್ ಬಂಪರ್ ನಲ್ಲೂ ಬದಲಾವಣೆ ಕಾಣಬಹುದಾಗಿದೆ. ಇನ್ನು ಹೊಸ ಫಾಗ್ ಲ್ಯಾಂಪ್, ಕಾರ್ನರಿಂಗ್ ಲೈಟ್, ಹೊಸ ಟೈಲ್ ಲೈಟ್ ಹಾಗೂ ಹೆಚ್ಚಿನ ಕ್ರೋಮ್ ಸ್ಪರ್ಶವನ್ನು ನೋಡಬಹುದಾಗಿದೆ.

ಕಾರಿನೊಳಗೂ ಬದಲಾವಣೆ ಕಾಣಬಹುದಾಗಿದ್ದು, ಬೀಜ್ ಬ್ಲ್ಯಾಕ್ ಹೋದಿಕೆಯ ಆನಂದ ಸಿಗಲಿದೆ. ಇನ್ನು ಕೂಲ್ಡ್ ಗ್ಲೋವ್ ಬಾಕ್ಸ್ ಹಾಗೂ ಸ್ಪೇಸ್ ಮ್ಯಾಕ್ಸ್ ತಂತ್ರಗಾರಿಕೆಯು ಆಳವಡಿಕೆಯಾಗಲಿದೆ.

ಫೋಕ್ಸ್ ವ್ಯಾಗನ್ ವೆಂಟೊ

ಹೊಸ ಬಣ್ಣಗಳ ಆಯ್ಕೆಯೂ ಹೊಸ ವೆಂಟೊ ಸೆಡಾನ್ ಕಾರಿನ ವಿಶೇಷತೆಯಾಗಿರಲಿದೆ. ಪ್ರಸ್ತುತ ಕಾರು ಈಗಿರುವ ವೆಂಟೊಗಿಂತಲೂ ಸ್ವಲ್ಪ ದುಬಾರಿಯಾಗುವ ಸಾಧ್ಯತೆಯಿದೆ.

ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಅಲ್ಲದೆ ಪ್ರಮುಖವಾಗಿಯೂ ಮಾರುತಿ ಸುಜುಕಿ ಸಿಯಾಝ್, ಹೋಂಡಾ ಸಿಟಿ ಹಾಗೂ ಹ್ಯುಂಡೈ ವೆರ್ನಾ ಮಾದರಿಗಳ ಸವಾಲನ್ನು ಎದುರಿಸಲಿದೆ.

English summary
German automobile manufacturer is launching its facelifted version of Vento on 23rd June, 2015. This new update will provide subtle exterior and interior changes.
Story first published: Monday, June 22, 2015, 17:35 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark