ಫೋಕ್ಸ್ ವ್ಯಾಗನ್ ಟೈಗ್ವಾನ್ - ಅರ್ಧ ಹುಲಿ ಉಳಿದಾರ್ಧ ಏನಾಗಿರಬಹುದು?

Written By:

ಫೋಕ್ಸ್ ವ್ಯಾಗನ್ ಅಂದರೆ ಹಾಗೇ ತನ್ನ ಪ್ರತಿಯೊಂದು ಮಾದರಿಗೂ ಒಳಾರ್ಥವಿರುತ್ತದೆ. ಈ ಹಿಂದೆ ಗಾಳಿ ಸಂಬಂಧ ಹೆಸರುಗಳನ್ನು ಇಟ್ಟುಕೊಂಡು ಬಂದಿದ್ದ ಜರ್ಮನಿ ಮೂಲದ ಈ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯೀಗ ಬಹುನಿರೀಕ್ಷಿತ 2015 ಟೈಗ್ವಾನ್ ಕಾಂಪಾಕ್ಟ್ ಎಸ್‌ಯುವಿನಲ್ಲೂ ಇದೇ ರೀತಿಯ ರಹಸ್ಯವನ್ನು ಕಾಯ್ದುಕೊಂಡಿದೆ.

ವಂಶ ನಾಶಕ್ಕೆ ಒಳಪಟ್ಟಿರುವ ಇಗ್ವಾನ (ಮರದ ಮೇಲೆ ಜೀವಿಸುವ ದೊಡ್ಡ ಜಾತಿಯ ಪ್ರಾಣಿ) ಹಾಗೂ ಅರ್ಧ ಹುಲಿಯ ಪೂರ್ಣವೇ 'ಟೈಗ್ವಾನ್' ಆಗಿದೆ. ಇದಕ್ಕೆ ಸಂಬಂಧಿಸಿದಂತೆ ಆಕರ್ಷಕ ವೀಡಿಯೋವೊಂದನ್ನು ಬಿಡುಗಡೆಗೊಳಿಸಿದೆ.

volkswagen taiguan

ಇಗ್ವಾನ್ ತರಹನೇ ಟರ್ಬೊಚಾರ್ಜ್ಡ್ ಸಣ್ಣ ಕ್ರೀಡಾ ಬಳಕೆಯ ವಾಹನ ಇದುವರೆಗೆ ಅಸ್ತಿತ್ವದಲ್ಲಿರಲಿಲ್ಲ. ಈಗ ನೂತನ ಅವಿಷ್ಕಾರಕ್ಕೆ ಮುಂದಾಗಿರುವ ಫೋಕ್ಸ್ ವ್ಯಾಗನ್ ಹೊಸತಾದ 2015 ಟೈಗ್ವಾನ್ ಮೂಲಕ ಈ ಕೊರತೆಯನ್ನು ನೀಗಿಸಿಕೊಂಡಿದೆ.

ಅಂದ ಹಾಗೆ 200 ಅಶ್ವಶಕ್ತಿ ಉತ್ಪಾದಿಸಬಲ್ಲ ಫೋಕ್ಸ್ ವ್ಯಾಗನ್ ಟೈಗ್ವಾನ್ ಕಾಂಪಾಕ್ಟ್ ಎಸ್‌ಯುವಿ ಸದ್ಯದಲ್ಲೇ ಜಾಗತಿಕ ಎಂಟ್ರಿ ಕೊಡಲಿದ್ದು, ತದಾ ಬಳಿಕ ಭಾರತ ಎಂಟ್ರಿ ಪಡೆಯುವ ಸಾಧ್ಯತೆಯಿದೆ.

<iframe width="600" height="450" src="https://www.youtube.com/embed/lmFVafZIiLA" frameborder="0" allowfullscreen></iframe>
English summary
A Tiguan is a half-tiger, half-iguana creature that doesn’t exist. Just like a versatile, turbocharged small SUV didn’t exist. Until now.
Story first published: Monday, February 9, 2015, 13:46 [IST]
Please Wait while comments are loading...

Latest Photos