ಟೊಯೊಟಾ ರಷ್ ಕಾಂಪಾಕ್ಟ್ ಎಸ್‌ಯುವಿ ಭಾರತಕ್ಕೆ?

By Nagaraja

ವಾರೆವ್ಹಾ...ಮಗದೊಂದು ಸೊಗಸಾದ ಕಾರು ಭಾರತ ಪ್ರವೇಶಿಸಲು ಕ್ಷಣಗಣನೆ ಆರಂಭವಾಗಿದೆ. ದೇಶದ ವಾಹನ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆ ಕಂಡುಕೊಂಡಿರುವ ಕಾಂಪಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಇದು ಹೊಸ ಪೈಪೋಟಿಗೆ ನಾಂದಿ ಹಾಡಲಿದೆ.

ಬಹು ಬಳಕೆಯ ವಾಹನಗಳಲ್ಲಿ ಈಗಾಗಲೇ ಗಮನ ಸೆಳೆದಿರುವ ಜಪಾನ್‌ನ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಟೊಯೊಟಾ, ಭಾರತ ಮಾರುಕಟ್ಟೆಗೆ ನೂತನ ರಷ್ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನವನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

toyota rush

ಇಲ್ಲಿ ಗಮನಾರ್ಹ ಸಂಗತಿಯೆಂದರೆ ರಷ್ ಟೆಸ್ಟಿಂಗ್ ವೇಳೆ ಈಗಾಗಲೇ ಕ್ಯಾಮೆರಾ ರಹಸ್ಯ ಕಣ್ಣುಗಳಿಗೆ ಸೆರೆ ಸಿಕ್ಕಿದೆ. ಇದು ಭಾರತ ಪ್ರವೇಶಕ್ಕೆ ಇನ್ನಷ್ಟು ಪುಷ್ಠಿ ನೀಡುವಂತಾಗಿದೆ.

ಟೊಯೊಟಾ ಐಕಾನಿಕ್ ಮಾದರಿಗಳನ್ನು ಗಮನಿಸಿದಾಗ ರಷ್ ಭಾರತ ಪ್ರವೇಶಕ್ಕೆ ಯಾವುದೇ ಅಡೆ ತಡೆ ಎದುರಾಗುವ ಸಾಧ್ಯತೆಯಿಲ್ಲ. ಯಾಕೆಂದರೆ ಟೊಯೊಟಾ ಇನ್ನೋವಾ ಈಗಾಗಲೇ ಎಂಪಿವಿ ವಿಭಾಗದಲ್ಲಿ ತನ್ನ ಅಧಿಪತ್ಯ ಸ್ಥಾಪಿಸಿದೆ.

ಅಂದ ಹಾಗೆ ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಮಾರಾಟದಲ್ಲಿ ರಷ್ ಕಾಂಪಾಕ್ಟ್ ಎಸ್‌ಯುವಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದ್ದು, 141.2 ತಿರುಗುಬಲದಲ್ಲಿ 107.5 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಹಾಗೂ 4 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಸಹ ಹೊಂದಿದೆ.

ಹಾಗೊಂದು ಟೊಯೊಟಾ ರಷ್ ಭಾರತ ಪ್ರವೇಶಿಸಿದ್ದಲ್ಲಿ ಇದು ಫೋರ್ಡ್ ಇಕೊಸ್ಪೋರ್ಟ್ ಹಾಗೂ ರೆನೊ ಡಸ್ಟರ್ ಜೊತೆಗೆ ಇನ್ನಷ್ಟೇ ಬಿಡುಗಡೆಯಾಗಲಿರುವ ಹ್ಯುಂಡೈ ಐಎಕ್ಸ್25 ಮಾದರಿಗಳಿಗೆ ಪೈಪೋಟಿ ಒಡ್ಡಲಿದೆ.

ಗಮನಿಸಿ: ಪ್ರಸ್ತುತ ಟೆಸ್ಟಿಂಗ್ ಹಂತದಲ್ಲಿರುವ ಮುಂದಿನ ಪೀಳಿಗೆಯ ಇನ್ನೋವಾ 2016ನೇ ಸಾಲಿನಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

Most Read Articles

Kannada
English summary
Japanese carmaker Toyota is mulling a compact SUV for the Indian market. The carmaker is reportedly planning to launch its Rush compact SUV in India.
Story first published: Saturday, January 3, 2015, 11:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X