ವಿಟಾರಾ ಬ್ರಿಝಾ ಎಂಟ್ರಿಯೊಂದಿಗೆ ಆಟೋ ಎಕ್ಸ್ ಪೋಗೆ ಭರ್ಜರಿ ಚಾಲನೆ

By Nagaraja

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 2016 ಆಟೋ ಎಕ್ಸ್ ಪೋಗೆ ಭರ್ಜರಿ ಚಾಲನೆ ದೊರಕಿದ್ದು, ಆರಂಭದ ಎರಡು ದಿನಗಳಷ್ಟು ಕಾಲ ಮಾಧ್ಯಮ ಮಿತ್ರರಿಗೆ ಮಾತ್ರ ಮೀಸಲಾಗಿದ್ದ ಮೇಳದಲ್ಲಿ ಅನೇಕ ಕಾರು ಹಾಗ ಬೈಕ್ ಗಳು ಪ್ರದರ್ಶನಗೊಂಡಿದ್ದವು.

ಆಟೋ ಎಕ್ಸ್ ಪೋ ಮತ್ತಷ್ಟು ಕಾರು ಬೈಕ್ ಸುದ್ದಿಗಾಗಿ ಇಲ್ಲಿಗೆ ಭೇಟಿ ಕೊಡುತ್ತಿರಿ

ನಿಮ್ಮ ಮಾಹಿತಿಗಾಗಿ ಪ್ರತಿ ಎರಡು ವರ್ಷಗಳಿಗೊಮ್ಮೆ ಆಯೋಜನೆಯಾಗುತ್ತಿರುವ ಇಂಡಿಯನ್ ಆಟೋ ಎಕ್ಸ್ ಪೋ ಏಷ್ಯಾದ ಅಗ್ರ ಹಾಗೂ ವಿಶ್ವದ ಎರಡನೇ ಅತಿ ದೊಡ್ಡ ವಾಹನ ಪ್ರದರ್ಶನ ಮೇಳವಾಗಿದೆ. ಆಟೋಮೋಟಿವ್ ಕಾಂಪೊನೆಟ್ ತಯಾರಕ ಸಂಸ್ಥೆ (ಎಸಿಎಂಎ), ಭಾರತೀಯ ಕೈಗಾರಿಕಾ ಒಕ್ಕೂಟ (ಸಿಸಿಐ) ಹಾಗೂ ಭಾರತೀಯ ವಾಹನ ತಯಾರಕ ಸಂಸ್ಥೆಗಳ ಒಕ್ಕೂಟದ (ಸಿಯಾಮ್) ಜಂಟಿ ಪ್ರಾಯೋಜಕತ್ವದಲ್ಲಿ ಈ ಬಾರಿಯ ಆಟೋ ಎಕ್ಸ್ ಪೋ ಫೆಬ್ರವರಿ 05ರಿಂದ 09ರ ವರೆಗೆ ಸಾಗಲಿದೆ. ಈ ಪೈಕಿ ವಾಹನ ಪ್ರದರ್ಶನ ಮೇಳ ಗ್ರೇಟರ್ ನೋಯ್ಡಾದಲ್ಲಿ ಫೆ. 5ರಿಂದ 9ರ ವರೆಗೂ ಮತ್ತು ಕಾಂಪೊನೆಟ್ ಶೋ 4ರಿಂದ 07ರ ವರೆಗೆ ಪ್ರಗತಿ ಮೈದಾನದಲ್ಲಿ ಆಯೋಜನೆಯಾಗಲಿದೆ. ಇದಕ್ಕೂ ಮುಂಚಿತವಾಗಿ ಫೆಬ್ರವರಿ 03 ಹಾಗೂ 04ರಂದು ಮಾಧ್ಯಮ ಮಿತ್ರರಿಗಾಗಿ ವಿಶೇಷ ಪ್ರದರ್ಶನವೂ ಜರಗಿತ್ತು. [ಎಕ್ಸ್ ಕ್ಲೂಸಿವ್ ಚಿತ್ರಗಳನ್ನು ಕೆಳಗಡೆ ಕೊಡಲಾಗಿದೆ.]

ಮಾರುತಿ ಸುಜುಕಿ ವಿಟಾರಾ ಬ್ರಿಝಾ


ಈ ಬಾರಿಯ ಆಟೋ ಎಕ್ಸ್ ಪೋದಲ್ಲಿ ಮೊದಲ ಪ್ರದರ್ಶನದ ಭಾಗ್ಯ ಮಾರುತಿ ಸುಜುಕಿ ಸಂಸ್ಥೆಯ ಮುಂಬರುವ ವಿಟಾರಾ ಬ್ರಿಝಾಗೆ ಲಭ್ಯವಾಗಿತ್ತು. ಇದು ದೇಶದಲ್ಲಿ ಸಂಸ್ಥೆಯಿಂದ ಬಿಡುಗಡೆಯಾಗುತ್ತಿರುವ ನಾಲ್ಕು ಮೀಟರ್ ಉದ್ದದೊಳಗಿನ ಚೊಚ್ಚಲ ಕ್ರೀಡಾ ಬಳಕೆಯ ವಾಹನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಎಂಜಿನ್ ತಾಂತ್ರಿಕತೆ

  • 1.3 ಲೀಟರ್ ಡೀಸೆಲ್,
  • ಶಕ್ತಿ: 89 ಅಶ್ವಶಕ್ತಿ @ 4000 rpm
  • ತಿರುಗುಬಲ: 200 ಎನ್‌ಎಂ @ 1750 rpm

ಈ ಮೊದಲು ಸಿಯಾಝ್ ಕಾರಿನಲ್ಲಿ ಕಂಡುಬಂದಿರುವುದಕ್ಕೆ ಸಮಾನವಾದ ಡೀಸೆಲ್ ಹೈಬ್ರಿಡ್ ತಂತ್ರಗಾರಿಕೆಯು ನೂತನ ವಿಟಾರಾ ಬ್ರಿಝಾದಲ್ಲಿ ಬಳಕೆಯಾಗಲಿದೆ. ಅಲ್ಲದೆ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಸಹ ಇದರಲ್ಲಿರಲಿದೆ.

ಮಾರುತಿ ಸುಜುಕಿ ವಿಟಾರಾ ಬ್ರಿಝಾ


ವಿಶಿಷ್ಟತೆಗಳು

  • ಎಬಿಎಸ್ ಜೊತೆ ಇಬಿಡಿ (ಎಲ್ಲ ವೆರಿಯಂಟ್ ಗಳಲ್ಲೂ)
  • ಪ್ರಯಾಣಿಕ ಏರ್ ಬ್ಯಾಗ್,
  • ಕ್ರೂಸ್ ಕಂಟ್ರೋಲ್,
  • ರೈನ್ ಸೆನ್ಸಿಂಗ್ ವೈಪರ್,
  • ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಹೊರಗಿನ ರಿಯರ್ ವ್ಯೂ ಮಿರರ್ ಜೊತೆಗೆ ಟರ್ನ್ ಇಂಡಿಕೇಟರ್,
  • ಕೀಲೆಸ್ ಎಂಟ್ರಿ,
  • ಪುಶ್ ಬಟನ್ ಸ್ಟ್ಯಾರ್ಟ್,
  • ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ,
  • ಡ್ಯುಯಲ್ ಟೋನ್ ಬಣ್ಣಗಳು,
  • ಆಟೋಮ್ಯಾಟಿಕ್ ಕಂಟ್ರೋಲ್ ಎಸಿ,
  • ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ಆಪಲ್ ಕಾರ್ ಪ್ಲೇ

ಮಾರುತಿ ಸುಜುಕಿ ವಿಟಾರಾ ಬ್ರಿಝಾ


ವಿನ್ಯಾಸ
ನೂತನ ವಿಟಾರಾ ಬ್ರಿಝಾ ಕಾರಿನಲ್ಲಿ ಆಕ್ರಮಣಕಾರಿ ವಿನ್ಯಾಸ ನೀತಿಯನ್ನು ಅನುಸರಿಸಿರುವ ಮಾರುತಿ ಸಂಸ್ಥೆಯು ಕಳೆದ ಬಾರಿ ಪ್ರದರ್ಶನಗೊಂಡಿರವು ಎಕ್ಸ್‌ಎ ಆಲ್ಪಾ ಕಾನ್ಸೆಪ್ಟ್ ನಿಂದಲೂ ಕೆಲವೊಂದು ವಿನ್ಯಾಸ ನೀತಿ ಆಮದು ಮಾಡಿಕೊಂಡಿದೆ.

ಮುಂದುಗಡೆ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಡೇಟೈಮ್ ರನ್ನಿಂಗ್ ಲೈಟ್ಸ್, ಕ್ರೋಮ್ ಸ್ಪರ್ಶಿತ ಗ್ರಿಲ್ ಹಾಗೂ ಹಿಂದುಗಡೆ ವಿಶಿಷ್ಟ ವಿನ್ಯಾಸದ ಟೈಲ್ ಲ್ಯಾಂಪ್ ಎಲ್ಲವೂ ಆಕರ್ಷಕವಾಗಿರಲಿದೆ.

ಅಂದ ಹಾಗೆ ಪ್ರಸಕ್ತ ಸಾಲಿನಲ್ಲೇ ಮಾರುಕಟ್ಟೆ ಎಂಟ್ರಿ ಕೊಡಲಾಗಿರುವ ನೂತನ ಮಾರುತಿ ಸುಜುಕಿ ವಿಟಾರಾ ಬ್ರಿಝಾ ಪ್ರಮುಖವಾಗಿಯೂ ಫೋರ್ಡ್ ಇಕೊಸ್ಪೋರ್ಟ್ ಹಾಗೂ ಹ್ಯುಂಡೈ ಕ್ರೆಟಾ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

Most Read Articles

Kannada
English summary
2016 Auto Expo: Maruti Suzuki Vitara Brezza Revealed
Story first published: Friday, February 5, 2016, 9:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X