2017 ಸ್ಕೋಡಾ ಒಕ್ಟಾವಿಯಾ ವಿಆರ್‌ಎಸ್ ಅನಾವರಣ

2017 ಸ್ಕೋಡಾ ಒಕ್ಟಾವಿಯಾ ವಿಆರ್ ಎಸ್ ಭರ್ಜರಿ ಅನಾವರಣ

By Nagaraja

ಜೆಕ್ ಗಣರಾಜ್ಯದ ಪ್ರಖ್ಯಾತ ವಾಹನ ಸಂಸ್ಥೆ ಸ್ಕೋಡಾ, 2017 ಒಕ್ಟಾವಿಯಾ ವಿಆರ್ ಎಸ್ (vRS) ಕಾರನ್ನು ಅನಾವರಣಗೊಳಿಸಿದೆ. ಇದು ಭಾರತ ಮಾರುಕಟ್ಟೆಯನ್ನು 2017 ದ್ವಿತಿಯಾರ್ಧದಲ್ಲಿ ತಲುಪುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

2017 ಸ್ಕೋಡಾ ಒಕ್ಟಾವಿಯಾ ವಿಆರ್‌ಎಸ್ ಅನಾವರಣ

ಹೊಸತಾದ ಮುಂಭಾಗದ ವಿನ್ಯಾಸ, ಡ್ಯುಯಲ್ ಹೆಡ್ ಲೈಟ್ಸ್ ಹಾಗೂ 2.0 ಟಿಎಸ್ ಐ ಎಂಜಿನ್ ಜೋಡಣೆಯಾಗಲಿದೆ.

2017 ಸ್ಕೋಡಾ ಒಕ್ಟಾವಿಯಾ ವಿಆರ್‌ಎಸ್ ಅನಾವರಣ

ನೂತನ ಸ್ಕೋಡಾ ಒಕ್ಟಾವಿಯಾ ವಿಆರ್ ಎಸ್ ಕಾರು ಸಂಪೂರ್ಣ ಅಡಾಪ್ಟಿವ್ ಎಲ್ ಇಡಿ ಹೆಡ್ ಲೈಟ್ಸ್, ಅಲ್ಕಂಟರಾ ಹೋದಿಕೆ ಮತ್ತು ವಿಶೇಷ ಬೆಳಕಿನ ಸಂಯೋಜನೆಯಿರಲಿದೆ.

2017 ಸ್ಕೋಡಾ ಒಕ್ಟಾವಿಯಾ ವಿಆರ್‌ಎಸ್ ಅನಾವರಣ

ಇವೆಲ್ಲದರ ಜೊತೆಗೆ ಪ್ರಯಾಣಿಕ ಸೀಟಿನಡಿಯಲ್ಲಿ ಕೊಡೆ ಮತ್ತು ಢಿಕ್ಕಿ ಜಾಗದಲ್ಲಿ ಎಲ್ ಇಡಿ ಟಾರ್ಚ್ ಉಪಯುಕ್ತತೆಗಳನ್ನು ಕೊಡಲಾಗಿದೆ.

2017 ಸ್ಕೋಡಾ ಒಕ್ಟಾವಿಯಾ ವಿಆರ್‌ಎಸ್ ಅನಾವರಣ

18 ಅಥವಾ 19 ಇಂಚುಗಳ ಅಲಾಯ್ ಚಕ್ರಗಳು ಉರುಳಿವಿಕೆ ಜವಾಬ್ದಾರಿಯನ್ನು ವಹಿಸಲಿದೆ.

2017 ಸ್ಕೋಡಾ ಒಕ್ಟಾವಿಯಾ ವಿಆರ್‌ಎಸ್ ಅನಾವರಣ

ಪೆಟ್ರೋಲ್ ನಿಯಂತ್ರಿತ ವಿಆರ್ ಎಸ್ ಕಾರು ಕೇವಲ 6.7 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸಲಿದೆ. ಹಾಗೆಯೇ ಗಂಟೆಗೆ ಗರಿಷ್ಠ 248 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

2017 ಸ್ಕೋಡಾ ಒಕ್ಟಾವಿಯಾ ವಿಆರ್‌ಎಸ್ ಅನಾವರಣ

ಸ್ಕೋಡಾದ ಡೈನಾಮಿಕ್ ಚಾಸೀ ಕಂಟ್ರೋಲ್ ವ್ಯವಸ್ಥೆಯೊಂದಿಗೆ ಸ್ಪೋರ್ಟ್, ನಾರ್ಮಲ್ ಮತ್ತು ಕಂಫರ್ಟ್ ಗಳೆಂಬ ಚಾಲನಾ ವಿಧಗಳು ಜೋಡಣೆಯಾಗಿದೆ.

2017 ಸ್ಕೋಡಾ ಒಕ್ಟಾವಿಯಾ ವಿಆರ್‌ಎಸ್ ಅನಾವರಣ

ಟ್ರೈಲರ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಟ್, ರಿಯರ್ ಟ್ರಾಫಿಕ್ ಅಲರ್ಟ್ ಇತ್ಯಾದಿ ವೈಶಿಷ್ಟ್ಯಗಳು ಚಾಲಕನಿಗೆ ನೆರವಾಗಲಿದೆ.

2017 ಸ್ಕೋಡಾ ಒಕ್ಟಾವಿಯಾ ವಿಆರ್‌ಎಸ್ ಅನಾವರಣ

ಸ್ಕೋಡಾ ಒಕ್ಟಾವಿಯಾ ವಿಆರ್ ಎಸ್ ಕಾರಿನಡಿಯಲ್ಲಿರುವ 2.0 ಟಿಎಸ್ ಐ ಪೆಟ್ರೋಲ್ ಎಂಜಿನ್ 350 ಎನ್ ಎಂ ತಿರುಗುಬಲದಲ್ಲಿ 226 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

2017 ಸ್ಕೋಡಾ ಒಕ್ಟಾವಿಯಾ ವಿಆರ್‌ಎಸ್ ಅನಾವರಣ

ಅಂತೆಯೇ ವಿಆರ್‌ಎಸ್ 2.0 ಟಿಡಿಐ ಎಂಜಿನ್ 380 ಎನ್ ಎಂ ತಿರುಗುಬಲದಲ್ಲಿ 181 ಅಶ್ವಶಕ್ತಿ ನೀಡಲಿದೆ. ಇದು 7.9 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ಮತ್ತು ಗಂಟೆಗೆ ಗರಿಷ್ಠ 230 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

2017 ಸ್ಕೋಡಾ ಒಕ್ಟಾವಿಯಾ ವಿಆರ್‌ಎಸ್ ಅನಾವರಣ

ಇವೆರಡು ಎಂಜಿನ್ ಗಳು ಆರು ಸ್ಪೀಡ್ ಮ್ಯಾನುವಲ್ ಹಾಗೂ ಆರು ಸ್ಪೀಡ್ ಡಿಎಸ್ ಜಿ ಗೇರ್ ಬಾಕ್ಸ್ ಪಡೆಯಲಿದೆ. ಹಾಗೆಯೇ ಡೀಸೆಲ್ ಆವೃತ್ತಿಯು ಫೋರ್ ವೀಲ್ ಚಾಲನಾ ವ್ಯವಸ್ಥೆಯನ್ನು ಇದರಲ್ಲಿರಲಿದೆ.

Most Read Articles

Kannada
Read more on ಸ್ಕೋಡಾ skoda
English summary
2017 Facelifted Skoda Octavia vRS Revealed
Story first published: Thursday, December 22, 2016, 13:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X