ಹೇಗಿರಬಹುದು ಹೊಸ ಸ್ವಿಫ್ಟ್ ಡಿಜೈರ್ ? ನೀವೇ ನೋಡಿ ತಿಳ್ಕೊಳ್ಳಿರಿ

Written By:

2017 ಮಾರುತಿ ಸುಜುಕಿ ಸ್ವಿಫ್ಟ್ ಬಿಡುಗಡೆ ವಾರ್ತೆ ಹಬ್ಬುತ್ತಿರುವಂತೆಯೇ ವಾಹನ ಪ್ರೇಮಿಗಳಲ್ಲಿ ಅತಿ ಹೆಚ್ಚಿನ ಕುತೂಹಲ ಮಾಡಿದೆ. ಯಾಕೆಂದರೆ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಕಾರುಗಳಲ್ಲಿ ಸ್ವಿಫ್ಟ್ ಡಿಜೈರ್ ಮುಂಚೂಣಿಯಲ್ಲಿದೆ. ವಾಹನ ಪ್ರೇಮಿಗಳಂತೆಯೇ ವಾಹನ ತಜ್ಞರಲ್ಲೂ ಅತಿ ಹೆಚ್ಚು ಆಸಕ್ತಿಯನ್ನು ಕೆರಳಿಸಿರುವ ನೂತನ ಸ್ವಿಫ್ಟ್ ಡಿಜೈರ್ ಬಗೆಗಿನ ಎಕ್ಸ್ ಕ್ಲೂಸಿವ್ ಚಿತ್ರ ಹಾಗೂ ಮಾಹಿತಿಗಳನ್ನು ಇಲ್ಲಿ ಬಹಿರಂಗಪಡಿಸಲಿದ್ದೇವೆ.

ಹೇಗಿರಬಹುದು ಹೊಸ ಸ್ವಿಫ್ಟ್ ಡಿಜೈರ್ ? ನೀವೇ ನೋಡಿ ತಿಳ್ಕೊಳ್ಳಿರಿ

ನೂತನ 2017 ಮಾರುತಿ ಸ್ವಿಫ್ಟ್ ಡಿಜೈರ್ ಹೇಗೆ ಗೋಚರಿಸಲಿದೆ ಎಂಬುದಕ್ಕೆ ಪೂರಕವಾಗಿ ಚಿತ್ರಗಳನ್ನು ಬಿಡುಗಡೆಗೊಳಿಸಲಾಗಿದೆ. ಇದು ಈಗ ಮಾರಾಟದಲ್ಲಿರುವ ಕಾಂಪಾಕ್ಟ್ ಸೆಡಾನ್ ಕಾರುಗಿಂತಲೂ ಹೆಚ್ಚು ಪ್ರಭಾವಶಾಲಿ ವಿನ್ಯಾಸವನ್ನು ಮೈಗೂಡಿಸಿಕೊಂಡು ಬಂದಿದೆ.

ಹೇಗಿರಬಹುದು ಹೊಸ ಸ್ವಿಫ್ಟ್ ಡಿಜೈರ್ ? ನೀವೇ ನೋಡಿ ತಿಳ್ಕೊಳ್ಳಿರಿ

ನೂತನ ಮಾರುತಿ ಸ್ವಿಫ್ಟ್ ಕಾಂಪಾಕ್ಟ್ ಸೆಡಾನ್ ಕಾರಿನ ಟೆಸ್ಟಿಂಗ್ ಪ್ರಕ್ರಿಯೆ ಭರದಿಂದ ಸಾಗುತ್ತಿದ್ದು, ಇದನ್ನೇ ಆಧಾರವಾಗಿಟ್ಟುಕೊಂಡು ಹೊಸ ಡಿಜೈರ್ ರೇಖಾಚಿತ್ರವನ್ನು ಬಿಡುಗಡೆ ಮಾಡಲಾಗಿದೆ.

ಹೇಗಿರಬಹುದು ಹೊಸ ಸ್ವಿಫ್ಟ್ ಡಿಜೈರ್ ? ನೀವೇ ನೋಡಿ ತಿಳ್ಕೊಳ್ಳಿರಿ

ಕಾರಿನ ಮುಂಭಾಗದಲ್ಲಿ ಪ್ರಮುಖ ಬದಲಾವಣೆ ಕಂಡುಬಂದಿದ್ದು, ಮುಂಭಾಗಕ್ಕೆ ಬಾಗಿದ ಫ್ರಂಟ್ ಬಂಪರ್ ಹಾಗೂ ಪರಿಷ್ಕೃತ ಗ್ರಿಲ್ ಜೊತೆಗಿನ ಹೆಡ್ ಲ್ಯಾಂಪ್ ಪ್ರಮುಖ ಆಕರ್ಷಣೆಯಾಗಿದೆ.

ಹೇಗಿರಬಹುದು ಹೊಸ ಸ್ವಿಫ್ಟ್ ಡಿಜೈರ್ ? ನೀವೇ ನೋಡಿ ತಿಳ್ಕೊಳ್ಳಿರಿ

ಕಾರಿನ ಹೊರಮೈಯಲ್ಲಿ ಆಧುನಿಕತೆಗೆ ತಕ್ಕಂತೆ ಡೇಟೈಮ್ ರನ್ನಿಂಗ್ ಲೈಟ್ಸ್ (ಡಿಆರ್ ಎಲ್), ದಿಟ್ಟವಾದ ಗ್ರಿಲ್ ಹಾಗೂ ಎಲ್ ಇಡಿ ಟೈಲ್ ಲ್ಯಾಂಪ್ ಕಂಡುಬರಲಿದೆ.

ಹೇಗಿರಬಹುದು ಹೊಸ ಸ್ವಿಫ್ಟ್ ಡಿಜೈರ್ ? ನೀವೇ ನೋಡಿ ತಿಳ್ಕೊಳ್ಳಿರಿ

ಬದಿ ಭಾಗದಿಂದಲೂ ನೋಡಿದಾಗಲೂ ಕ್ರೀಡಾತ್ಮಕ ವಿನ್ಯಾಸಕ್ಕೆ ಆದ್ಯತೆಯನ್ನು ಕೊಟ್ಟಿರುವುದನ್ನು ಗಮನಿಸಬಹುದಾಗಿದೆ. ಕಪ್ಪು ವರ್ಣದ ಪಿಲ್ಲರ್ ಗಳು ಮತ್ತು ಅಲಾಯ್ ಚಕ್ರಗಳು ಮತ್ತಷ್ಟು ಮೆರಗನ್ನು ತುಂಬುತ್ತಿದೆ.

ಹೇಗಿರಬಹುದು ಹೊಸ ಸ್ವಿಫ್ಟ್ ಡಿಜೈರ್ ? ನೀವೇ ನೋಡಿ ತಿಳ್ಕೊಳ್ಳಿರಿ

ಕಾರಿನೊಳಗೂ ಗಮನಾರ್ಹ ಬದಲಾವಣೆಗಳು ಕಂಡುಬರುವುದು ಬಹುತೇಕ ಖಚಿತವೆನಿಸಿದೆ. ಈ ಸಂಬಂಧ ವಿವರಗಳು ಇನ್ನಷ್ಟೇ ಹೊರ ಬರಬೇಕಿದೆ.

ಹೇಗಿರಬಹುದು ಹೊಸ ಸ್ವಿಫ್ಟ್ ಡಿಜೈರ್ ? ನೀವೇ ನೋಡಿ ತಿಳ್ಕೊಳ್ಳಿರಿ

ಕಾರಿನೊಳಗೆ ಸ್ಮಾರ್ಟ್ ಪ್ಲೇ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆಗೆ ನೇವಿಗೇಷನ್, ರಿವರ್ಸ್ ಕ್ಯಾಮೆರಾ ಮತ್ತು ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ ವ್ಯವಸ್ಥೆಗಳಿರಲಿದೆ.

ಹೇಗಿರಬಹುದು ಹೊಸ ಸ್ವಿಫ್ಟ್ ಡಿಜೈರ್ ? ನೀವೇ ನೋಡಿ ತಿಳ್ಕೊಳ್ಳಿರಿ

ನೂತನ ಸ್ವಿಫ್ಟ್ ಡಿಜೈರ್ ಕಾರಿನ ಸುರಕ್ಷತೆಗೆ ಅತಿ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದ್ದು, ಟಾಂಪ್ ಎಂಡ್ ವೆರಿಯಂಟ್ ಗಳು ಡ್ಯುಯಲ್ ಏರ್ ಬ್ಯಾಗ್ ಜೊತೆಗೆ ಇಬಿಡಿ, ಎಬಿಎಸ್, ಕೀಲೆಸ್ ಎಂಟ್ರಿ, ಪುಶ್ ಬಟನ್ ಸ್ಟ್ಯಾರ್ಟ್ ಮತ್ತು ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಗಿಟ್ಟಿಸಿಕೊಳ್ಳುವುದು ಖಚಿತವೆನಿಸಿದೆ.

ಹೇಗಿರಬಹುದು ಹೊಸ ಸ್ವಿಫ್ಟ್ ಡಿಜೈರ್ ? ನೀವೇ ನೋಡಿ ತಿಳ್ಕೊಳ್ಳಿರಿ

ಬಲೆನೊದ ಹಗುರ ತಳಹದಿಯಲ್ಲಿ ನಿರ್ಮಾಣವಾಗಲಿರುವ 2017 ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ 80 ಕೆ.ಜಿ.ಗಳಷ್ಟು ತೂಕ ಇಳಿಸಿಕೊಳ್ಳಲಿದೆ. ಇದರೊಂದಿಗೆ ಹೆಚ್ಚಿನ ಇಂಧನ ಕ್ಷಮತೆ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ.

ಹೇಗಿರಬಹುದು ಹೊಸ ಸ್ವಿಫ್ಟ್ ಡಿಜೈರ್ ? ನೀವೇ ನೋಡಿ ತಿಳ್ಕೊಳ್ಳಿರಿ

ನೂತನ ಸ್ವಿಫ್ಟ್ ಡಿಜೈರ್, 1.2 ಕೆ ಸಿರೀಸ್ ಪೆಟ್ರೋಲ್ ಮತ್ತು 1.3 ಲೀಟರ್ ಫಿಯೆಟ್ ಮಲ್ಟಿಜೆಟ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ಗಳಿಂದ ನಿಯಂತ್ರಿಸಲ್ಪಡಲಿದೆ.

ಹೇಗಿರಬಹುದು ಹೊಸ ಸ್ವಿಫ್ಟ್ ಡಿಜೈರ್ ? ನೀವೇ ನೋಡಿ ತಿಳ್ಕೊಳ್ಳಿರಿ

ಇನ್ನು ಸುಜುಕಿಯ ನೂತನ ಕ್ರಾಂತಿಕಾರಿ ಹೈಬ್ರಿಡ್ ವೆಹಿಕಲ್ ತಂತ್ರಜ್ಞಾನವು ಆಳವಡಿಕೆಯಾಗಲಿದೆ. ಇದು ಸಹ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಆಕರ್ಷಿಸಲು ನೆರವಾಗಲಿದೆ.

ಹೇಗಿರಬಹುದು ಹೊಸ ಸ್ವಿಫ್ಟ್ ಡಿಜೈರ್ ? ನೀವೇ ನೋಡಿ ತಿಳ್ಕೊಳ್ಳಿರಿ

2017 ಹಬ್ಬದ ಆವೃತ್ತಿಗೂ ಮುಂಚಿತವಾಗಿ ನೂತನ ಮಾರುತಿ ಸ್ವಿಫ್ಟ್ ಡಿಜೈರ್ ಮಾರುಕಟ್ಟೆ ಪ್ರವೇಶಿಸಲಿದೆ.

ಹೇಗಿರಬಹುದು ಹೊಸ ಸ್ವಿಫ್ಟ್ ಡಿಜೈರ್ ? ನೀವೇ ನೋಡಿ ತಿಳ್ಕೊಳ್ಳಿರಿ

ಗುಜರಾತ್ ನಲ್ಲಿ ಆರಂಭವಾಗುವ ನೂತನ ಘಟಕದಲ್ಲಿ ಸ್ವಿಫ್ಟ್ ಡಿಜೈರ್ ನಿರ್ಮಾಣ ಪ್ರಕ್ರಿಯೆಗೆ 2017ನೇ ಆರ್ಥಿಕ ಸಾಲಿನ ಮೊದಲ ತ್ರೈಮಾಸಿಕ ಅವಧಿಯಲ್ಲೇ ಚಾಲನೆ ನೀಡುವ ಸಾಧ್ಯತೆಯಿದೆ.

ಹೇಗಿರಬಹುದು ಹೊಸ ಸ್ವಿಫ್ಟ್ ಡಿಜೈರ್ ? ನೀವೇ ನೋಡಿ ತಿಳ್ಕೊಳ್ಳಿರಿ

ನಾವು ಈಗಾಗಲೇ ವರದಿ ಮಾಡಿರುವಂತೆಯೇ 2017 ಮಾರುತಿ ಸ್ವಿಫ್ಟ್ ಡಿಜೈರ್ ಬಿಡುಗಡೆಯಾದ ಬಳಿಕವಷ್ಟೇ ಹೊಸ ತಲೆಮಾರಿನ 2017 ಮಾರುತಿ ಸ್ವಿಫ್ಟ್ ಬಿಡುಗಡೆಯಾಗುವ ಸಾಧ್ಯತೆಯಿದೆ.

ಹೇಗಿರಬಹುದು ಹೊಸ ಸ್ವಿಫ್ಟ್ ಡಿಜೈರ್ ? ನೀವೇ ನೋಡಿ ತಿಳ್ಕೊಳ್ಳಿರಿ

ಭಾರತದಲ್ಲಿ ಸ್ವಿಫ್ಟ್ ಡಿಜೈರ್ ಬೆಲೆ ಬಗೆಗಿನ ಮಾಹಿತಿಗಳು ಇನ್ನಷ್ಟೇ ಹೊರಬರಬೇಕಿದೆ. ಹಾಗಿದ್ದರೂ ಈಗ ಮಾರಾಟದಲ್ಲಿರುವ ಡಿಜೈರ್ ಕಾರಿಗಿಂತಲೂ ದುಬಾರಿಯೆನಿಸಲಿದೆ.

English summary
This Is How The 2017 Maruti Suzuki Swift Dzire Will Look Like
Story first published: Wednesday, November 2, 2016, 17:24 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark