ದಟ್ಸನ್‌ಗೆ ಮಗದೊಂದು ಕೋಡು - ಗೊ ಕ್ರಾಸ್ ಕಾನ್ಸೆಪ್ಟ್

Written By:

ಭಾರತೀಯ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿರುವ ನಿಸ್ಸಾನ್ ಬಜೆಟ್ ಬ್ರಾಂಡ್ ದೇಶಕ್ಕೆ ಮಗದೊಂದು ಆಕರ್ಷಕ ಕಾರನ್ನು ಪರಿಚಯಿಸುವ ತಯಾರಿಯಲ್ಲಿ ತೊಡಗಿದೆ. ಇದರಂತೆ 2016 ಆಟೋ ಎಕ್ಸ್ ಪೋದಲ್ಲಿ ಅತಿ ನೂತನ ಗೊ ಕ್ರಾಸ್ ಕ್ರಾಸೋವರ್ ಕಾರನ್ನು ಅನಾವರಣಗೊಳಿಸಿದೆ.

ಈಗಾಗಲೇ ಮಾರಾಟದಲ್ಲಿರುವ ದಟ್ಸನ್ ಗೊ ಪ್ಲಸ್ ಎಂಪಿವಿ ಕಾರಿನ ತಳಹದಿಯಲ್ಲಿ ಗೊ ಕ್ರಾಸ್ ಕಾರನ್ನು ಅಭಿವೃದ್ಧಿಪಡಿಸಲಾಗಿದೆ. ಸದ್ಯ ದೇಶದ ಮಾರುಕಟ್ಟೆಯಲ್ಲಿ ಗೊ ಹ್ಯಾಚ್ ಬ್ಯಾಕ್ ಮತ್ತು ಗೊ ಪ್ಲಸ್ ಎಂಪಿವಿ ಕಾರು ಮಾರಾಟದಲ್ಲಿದೆ.

To Follow DriveSpark On Facebook, Click The Like Button
ದಟ್ಸನ್ ಗೊ ಕ್ರಾಸ್ ಕಾನ್ಸೆಪ್ಟ್

ನೂತನ ಗೊ ಕ್ರಾಸ್ ಕಾರಿನಲ್ಲಿ ಒಂದು ಕ್ರಾಸೋವರ್ ಕಾರಿಗೆ ಬೇಕಾದ ಎಲ್ಲ ಆಕ್ರಮಣಕಾರಿ ವಿನ್ಯಾಸ ನೀತಿಯನ್ನು ಅನುಸರಿಸಲಾಗಿದೆ. ಇದನ್ನು ಮೊದಲ ಬಾರಿಗೆ 2015 ಟೊಕಿಯೊ ಮೋಟಾರು ಶೋದಲ್ಲಿ ಪ್ರದರ್ಶಿಸಲಾಗಿತ್ತು. ಅಲ್ಲದೆ ನಿಖರವಾದ ಪ್ರೊಜೆಕ್ಟರ್ ಹೆಡ್ ಲೈಟ್ ಮತ್ತು ವೃತ್ತಕಾರಾದ ಡೇಟೈಮ್ ರನ್ನಿಂಗ್ ಲೈಟ್ಸ್ ಹೆಚ್ಚು ಆಕರ್ಷಣೆಗೆ ಪಾತ್ರವಾಗಿದೆ.

ಹೊಸ ತಲೆಮಾರಿನ ಚಾಲಕರ ಆಸೆ, ಬಯಕೆಗಳನ್ನು ಈಡೇರಿಸುವಲ್ಲಿ ನೂತನ ಗೊ ಕ್ರಾಸ್ ಯಶಸ್ವಿಯಾಗಲಿದೆ ಎಂಬುದರ ಬಗ್ಗೆ ದಟ್ಸನ್ ನಂಬಿಕೆಯನ್ನು ವ್ಯಕ್ತಪಡಿಸಿದೆ. ಅಲ್ಲದೆ ಪ್ರಸಕ್ತ ಸಾಲಿನಲ್ಲೇ ಬಿಡುಗಡೆ ಮಾಡುವ ಇರಾದೆಯನ್ನು ಹೊಂದಿದೆ.

ಅಂದ ಹಾಗೆ ದಟ್ಸನ್ ರೆಡಿ ಗೊ ಸಣ್ಣ ಕಾರು ಸಹ ಇದೇ ಸಾಲಿನಲ್ಲಿ ಬಿಡುಗಡೆಯಾಗುವ ಎಲ್ಲ ಸಾಧ್ಯತೆಗಳಿವೆ. ಈ ಮೂಖಾಂತರ ದೇಶದಲ್ಲಿರುವ ತನ್ನ ಶ್ರೇಣಿಯ ಕಾರುಗಳ ಸಂಖ್ಯೆಯನ್ನು ವಿಸ್ತರಿಸಲಿರುವ ದಟ್ಸನ್ ಗರಿಷ್ಠ ಮಾರಾಟವನ್ನು ಗುರಿಯಾರಿಗಿಸಿಕೊಂಡಿದೆ.

English summary
2016 Auto Expo: Datsun Showcases Quirky Go Cross Concept Crossover
Story first published: Wednesday, February 10, 2016, 12:08 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

X