ಟಾಟಾ 'ಕೈಟ್ 5' ಮನಮೋಹಕ ಕಾರು ಮೋಡಿ ಮಾಡಿತೇ?

Written By:

ದೇಶದ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ಭದ್ರ ಅಡಿಪಾಯ ಹಾಕಲು ಹರ ಸಾಹಸ ಪಡುತ್ತಿರುವ ಭಾರತದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯುತ್ತಿರುವ 13ನೇ ಆವೃತ್ತಿಯ ಆಟೋ ಎಕ್ಸ್ ಪೋ ವಾಹನ ಪ್ರದರ್ಶನ ಮೇಳದಲ್ಲಿ ಅತ್ಯಾಕರ್ಷಕ 'ಕೈಟ್ 5' ಕಾಂಪಾಕ್ಟ್ ಸೆಡಾನ್ ಕಾರನ್ನು ಅನಾವರಣಗೊಳಿಸಿದೆ.

ನಾಲ್ಕು ಮೀಟರ್ ಉದ್ದ ಪರಿಮಿತಿಯೊಳಗೆ ನಿರ್ಮಾಣವಾಗಿರುವ ಟಾಟಾ ಕೈಟ್ ಇದೇ ಮೊದಲ ಬಾರಿಗೆ ಜಾಗತಿಕ ಪ್ರದರ್ಶನ ಕಂಡಿದೆ. ಇದು ಪ್ರಮುಖವಾಗಿಯೂ ಮಾರುಕಟ್ಟೆಯಲ್ಲಿರುವ ಇಂಡಿಗೊ ಇಸಿಎಸ್ ಸ್ಥಾನವನ್ನು ತುಂಬಲಿದೆ.

To Follow DriveSpark On Facebook, Click The Like Button
ಟಾಟಾ ಕೈಟ್ 5

ಎಂಜಿನ್ ತಾಂತ್ರಿಕತೆ

ಪೆಟ್ರೋಲ್ 1.2 ಲೀಟರ್

ಅಶ್ವಶಕ್ತಿ 84 (6000 ಆರ್‌ಪಿಎಂ)

115 ಎನ್‌ಎಂ ತಿರುಗುಬಲ (3500 ಆರ್‌ಪಿಎಂ)

ಡೀಸೆಲ್ 1.05 ಲೀಟರ್

ಅಶ್ವಶಕ್ತಿ 69 (4500 ಆರ್‌ಪಿಎಂ)

140 ಎನ್‌ಎಂ ತಿರುಗುಬಲ (1800-3000 ಆರ್‌ಪಿಎಂ)

ಗೇರ್ ಬಾಕ್ಸ್: ಫೈವ್ ಸ್ಪೀಡ್ ಮ್ಯಾನುವಲ್ ಜೊತೆಗೆ ಎಎಂಟಿ.

ಒಳಮೈ ಚಿತ್ರಗಳು...

ವಿನ್ಯಾಸ

ಝಿಕಾ ಹ್ಯಾಚ್ ಬ್ಯಾಕ್ ಕಾರಿಗೆ ಹೋಲುವಂತಹ ವಿನ್ಯಾಸವನ್ನು ಹೊಂದಿರುವ ಟಾಟಾ ಕೈಟ್ 5, ಕಾರಿನಲ್ಲೂ ಸಂಸ್ಥೆಯ ಹೊಸ ವಿನ್ಯಾಸ ನೀತಿಯನ್ನು ಅನುಸರಿಸಲಾಗಿದೆ. ನಿರ್ಮಾಣ ಗುಣಮಟ್ಟದ ಜೊತೆಗೆ ಪರಿಣಾಮಕಾರಿ ವಿನ್ಯಾಸಕ್ಕೆ ಒತ್ತು ಕೊಡಲಾಗಿದೆ.

ಲಭ್ಯತೆ ಮತ್ತು ಪ್ರತಿಸ್ಪರ್ಧಿಗಳು

ಒಮ್ಮೆ ಬಿಡುಗಡೆಯಾದಾಗ ಟಾಟಾ ಕೈಟ್ 5 ಸೆಗ್ಮೆಂಟ್ ಲೀಡರ್ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್, ಹ್ಯುಂಡೈ ಎಕ್ಸ್‌ಸೆಂಟ್, ಹೋಂಡಾ ಅಮೇಜ್, ಫೋರ್ಡ್ ಆಸ್ಪೈರ್ ಮತ್ತು ಇನ್ನಷ್ಟೇ ಬಿಡುಗಡೆಯಾಗಲಿರುವ ಫೋಕ್ಸ್ ವ್ಯಾಗನ್ ಎಮಿಯೊ ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿದೆ.

ಹೊರಮೈ ಚಿತ್ರಗಳು...

ಒಟ್ಟಿನಲ್ಲಿ ಕಾಂಪಾಕ್ಟ್ ಸೆಗ್ಮೆಂಟ್ ವಿಭಾಗದಲ್ಲಿ ಟಾಟಾ ಜೆಸ್ಟ್ ಮಾರಾಟದಲ್ಲಿರುವಾಗಲೇ ಮಗದೊಂದು ಕಾರನ್ನು ಟಾಟಾ ಸಿದ್ಧಪಡಿಸಿರುವುದರ ಹಿಂದಿನ ಗುಟ್ಟು ಮಾತ್ರ ಇನ್ನು ತಿಳಿದು ಬಂದಿಲ್ಲ. ಇವೆಲ್ಲಕ್ಕೂ ಮುಂದಿನ ದಿನಗಳಲ್ಲಿ ಉತ್ತರ ಲಭ್ಯವಾಗಲಿದೆ.

English summary
ಟಾಟಾ 'ಕೈಟ್ 5' ಮನಮೋಹಕ ಕಾರು ಮೋಡಿ ಮಾಡಿತೇ?
Story first published: Tuesday, February 9, 2016, 9:35 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

X