ಇನ್ನೋವಾ ಕ್ರೈಸ್ಟಾ; 'ಹಳೆ ಬಾಟಲಿಯಲ್ಲಿ ಹೊಸ ಮದ್ಯ'

Written By:

ಭಾರತೀಯ ಬಹು ಬಳಕೆಯ ವಾಹನ (ಎಂಪಿವಿ) ವಿಭಾಗವನ್ನು ತಲ್ಲಣಗೊಳಿಸಿರುವ ಜಪಾನ್ ಮೂಲದ ಐಕಾನಿಕ್ ಕಾರು ಟೊಯೊಟಾ ಇನ್ನೋವಾ ರಿ ಎಂಟ್ರಿ ಕೊಡಲು ಸಜ್ಜಾಗುತ್ತಿದೆ. ಹಳೆಯ ಬಾಟಲಿಯಲ್ಲಿ ಹೊಸ ಮದ್ಯ ಎಂಬಂತೆ ಇನ್ನೋವಾ ಹೊಸ ನಾಮಕರಣವನ್ನು ಪಡೆದಿದೆ.

ದೆಹಲಿಯಲ್ಲಿ ನಡೆಯುತ್ತಿರು 13ನೇ ಆಟೋ ಎಕ್ಸ್ ಪೋದಲ್ಲಿ ನೂತನ ಟೊಯೊಟಾ ಇನ್ನೋವಾ ಕ್ರೈಸ್ಟಾ (Toyota Innova Crysta) ಭರ್ಜರಿ ಅನಾವರಣಗೊಂಡಿದೆ. ನೂತನ ಇನ್ನೋವಾ ಕ್ರೈಸ್ಟಾ ಸಂಪೂರ್ಣ ಹೊಸತಾದ ಎಂಜಿನ್ ಪಡೆಯಲಿದೆ.

ಟೊಯೊಟಾ ಇನ್ನೋವಾ ಕ್ರೈಸ್ಟಾ

ಹೊರಮೈ ಚಿತ್ರಗಳು...

ಎಂಜಿನ್ ತಾಂತ್ರಿಕತೆ

ಡೀಸೆಲ್ 2.4 ಲೀಟರ್

147 ಅಶ್ವಶಕ್ತಿ (3400 rpm)

359 ಎನ್‌ಎಂ ತಿರುಗುಬಲವ (1200-2800 rpm)

6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್

ವಿನ್ಯಾಸ

ವಾಹನ ಪ್ರೇಮಿಗಳ ಬೇಡಿಕೆಗೆ ಅನುಸಾರವಾಗಿ ಆಕ್ರಮಣಕಾರಿ ವಿನ್ಯಾಸ ನೀತಿಯನ್ನು ಹೊಸ ಇನ್ನೋವಾ ಕ್ರೈಸ್ಟಾದಲ್ಲಿ ತರಲಾಗಿದೆ. ಮುಂಭಾಗದಲ್ಲಿ ಹೆಚ್ಚಿನ ಕ್ರೋಮ್ ಸ್ಪರ್ಶತೆಗೆ ಆದ್ಯತೆ ಕೊಡಲಾಗಿದ್ದು, ಎಲ್‌ಇಡಿ ಪ್ರೊಜೆಕ್ಟರ್ ಬೆಳಕುಗಳು ಪ್ರಮುಖ ಆಕರ್ಷಣೆಯಾಗಲಿದೆ.

ಒಳಮೈ ಚಿತ್ರಗಳು...

ವಿಶಿಷ್ಟತೆಗಳು

  • ಹೊಸ ಡೀಸೆಲ್ ಎಂಜಿನ್,
  • 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್,
  • ಹೊಸ ಚಾಸೀ,
  • ಎಬಿಎಸ್ ಜೊತೆ ಇಬಿಡಿ,
  • ಹಿಲ್ ಸ್ಟ್ಯಾರ್ಟ್ ಅಸಿಸ್ಟ್,
  • ಕೀಲೆಸ್ ಎಂಟ್ರಿ ಮತ್ತು ಪುಶ್ ಬಟನ್ ಎಂಜಿನ್ ಸ್ಟ್ಯಾರ್ಟ್/ಸ್ಟಾಪ್,
  • ಚಾಲಕ ಮತ್ತು ಪ್ರಯಾಣಿಕ ಬದಿಯ ಏರ್ ಬ್ಯಾಗ್ (ಸ್ಟ್ಯಾಂಡರ್ಡ್),
  • ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಜೊತೆ ರಿಯರ್ ಆಟೋ ಕೂಲರ್,
  • 8 ಇಂಚುಗಳ ಟಚ್ ಸ್ಕ್ರೀನ್ ನಿಯಂತ್ರಿತ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ಏರ್ ಗೆಸ್ಟರ್,
  • ಡ್ಯಾಶ್ ಬೋರ್ಡ್ ನಲ್ಲಿ ಮರದ ಸ್ಪರ್ಶ

ಬಿಡುಗಡೆ, ಬೆಲೆ, ಪ್ರತಿಸ್ಪರ್ಧಿ...

ನೂತನ ಟೊಯೊಟಾ ಇನ್ನೋವಾ ಕ್ರೈಸ್ಟಾ ಪ್ರಸಕ್ತ ಸಾಲಿನ ದ್ವಿತಿಯಾರ್ಧದ ಆರಂಭದಲ್ಲೇ ಬಿಡುಗಡೆಯಾಗುವ ಸಾಧ್ಯತೆಯಿದ್ದು, ಈಗಿರುವ ಮಾದರಿಗಿಂತಲೂ ಸ್ವಲ್ಪ ದುಬಾರಿಯೆನಿಸಲಿದೆ. ಇದು ಪ್ರಮುಖವಾಗಿಯೂ ಮಹೀಂದ್ರದ ಜನಪ್ರಿಯ ಎಕ್ಸ್‌ಯುವಿ50 ಎಸ್‌ಯುವಿ ಮಾದರಿಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

English summary
2016 Auto Expo: Toyota Innova Crysta Unveiled
Story first published: Saturday, February 6, 2016, 15:13 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

X