ಬಿಎಂಡಬ್ಲ್ಯು 3 ಸಿರೀಸ್ ಗ್ರ್ಯಾನ್ ಟರಿಸ್ಮೊ ಭಾರತದಲ್ಲಿ ಬಿಡುಗಡೆ

Written By:

ಹಬ್ಬದ ಸಂಭ್ರಮಕ್ಕೆ ಕಿಚ್ಚು ಹಚ್ಚಿರುವ ಜರ್ಮನಿಯ ಮೂಲದ ಐಷಾರಾಮಿ ವಾಹನ ಸಂಸ್ಥೆ ಬಿಎಂಡಬ್ಲ್ಯು, ಅತಿ ನೂತನ 3 ಸಿರೀಸ್ ಗ್ರ್ಯಾನ್ ಟರಿಸ್ಮೊ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಚೆನ್ನೈನ ಬಿಎಂಡಬ್ಲ್ಯು ಘಟಕದಲ್ಲಿ ನಿರ್ಮಾಣವಾಗಿರುವ ನೂತನ ಕಾರು ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್ ಗಳಲ್ಲಿ ದೇಶದೆಲ್ಲ ಸಂಸ್ಥೆಯ ಡೀಲರ್ ಶಿಪ್ ಗಳಲ್ಲಿ ಲಭ್ಯವಾಗಲಿದೆ.

ಬಿಎಂಡಬ್ಲ್ಯು 3 ಸಿರೀಸ್ ಗ್ರ್ಯಾನ್ ಟರಿಸ್ಮೊ ಭಾರತದಲ್ಲಿ ಬಿಡುಗಡೆ

ನೂತನ ಬಿಎಂಡಬ್ಲ್ಯು 3 ಸಿರೀಸ್ ಗ್ರ್ಯಾನ್ ಟರಿಸ್ಮೊ ಕಾರು 43.3 ಲಕ್ಷ ರು.ಗಳಿಂದ 47.5 ಲಕ್ಷ ರು.ಗಳ ವರೆಗೆ ಬೆಲೆ ಬಾಳಲಿದೆ.

ಸಂಪೂರ್ಣ ಬೆಲೆ ಮಾಹಿತಿ

ಸಂಪೂರ್ಣ ಬೆಲೆ ಮಾಹಿತಿ

320 ಡಿ ಗ್ರ್ಯಾನ್ ಟರಿಸ್ಮೊ ಸ್ಪೋರ್ಟ್: 43.30 ಲಕ್ಷ ರು.

320ಡಿ ಗ್ರ್ಯಾನ್ ಟರಿಸ್ಮೊ ಲಗ್ಷುರಿ ಲೈನ್: 46.50 ಲಕ್ಷ ರು.

330ಐ ಗ್ರ್ಯಾನ್ ಟರಿಸ್ಮೊ ಲಗ್ಷುರಿ ಲೈನ್: 47.50 ಲಕ್ಷ ರು.

ಬಿಎಂಡಬ್ಲ್ಯು 3 ಸಿರೀಸ್ ಗ್ರ್ಯಾನ್ ಟರಿಸ್ಮೊ ಭಾರತದಲ್ಲಿ ಬಿಡುಗಡೆ

ಐಷಾರಾಮಿ ಕಾರು ವಿಭಾಗದಲ್ಲಿ ಹೊಸ ಅಧ್ಯಾಯ ತೆರೆದಿರುವ ಬಿಎಂಡಬ್ಲ್ಯು 3 ಸಿರೀಸ್ ಗ್ರ್ಯಾನ್ ಟರಿಸ್ಮೊ ಕಾರು, ನೈಜ ಚಲನೆಶೀಲತೆ ಮತ್ತು ಸ್ಥಳಾವಕಾಶದಲ್ಲಿ ಯಾವುದೇ ರಾಜಿಗೂ ತಯಾರಾಗಿಲ್ಲ.

ಬಿಎಂಡಬ್ಲ್ಯು 3 ಸಿರೀಸ್ ಗ್ರ್ಯಾನ್ ಟರಿಸ್ಮೊ ಭಾರತದಲ್ಲಿ ಬಿಡುಗಡೆ

ಎರಡು ಎಕ್ಸ್ ಕ್ಲೂಸಿವ್ ಡಿಸೈನ್ ತಂತ್ರಗಾರಿಕೆಯಲ್ಲಿ ನೂತನ ಬಿಎಂಡಬ್ಲ್ಯು 3 ಸಿರೀಸ್ ಗ್ರ್ಯಾನ್ ಟರಿಸ್ಮೊ ಲಭ್ಯವಾಗಲಿದೆ. ಅವುಗಳೆಂದರೆ,

ಸ್ಪೋರ್ಟ್ ಲೈನ್ ಮತ್ತು

ಲಗ್ಷುರಿ ಲೈನ್.

ಬಿಎಂಡಬ್ಲ್ಯು 3 ಸಿರೀಸ್ ಗ್ರ್ಯಾನ್ ಟರಿಸ್ಮೊ ಭಾರತದಲ್ಲಿ ಬಿಡುಗಡೆ

ಕ್ರೀಡಾತ್ಮಕ ಶೈಲಿ ಮತ್ತು ಒಳಮೈಗೆ ಸ್ಪೋರ್ಟ್ ಲೈಸ್ ಹೆಸರುವಾಸಿಯಾಗಿದ್ದು ಇನ್ನೊಂದೆಡೆ ಲಗ್ಷುರಿ ಲೈನ್ ಸ್ಟೈಲ್ ಜೊತೆಗೆ ಸೊಗಸಾದ ಬಾಹ್ಯ ರೇಖೆ ಹಾಗೂ ಐಷಾರಾಮಿ ವೈಶಿಷ್ಟ್ಯಗಳನ್ನು ಪಡೆಯಲಿದೆ.

ಎರಡು ವಿಭಿನ್ನ ಎಂಜಿನ್ ಆಯ್ಕೆಗಳು

ಎರಡು ವಿಭಿನ್ನ ಎಂಜಿನ್ ಆಯ್ಕೆಗಳು

320 ಡಿ: 2.0 ಲೀಟರ್ ಟರ್ಬೊಚಾರ್ಜ್ಡ್ ಡೀಸೆಲ್: 187 ಅಶ್ವಶಕ್ತಿ, 400 ಎನ್ ಎಂ ತಿರುಗುಬಲ

330ಐ: 2.0 ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್: 248.5 ಅಶ್ವಶಕ್ತಿ, 350 ಎನ್ ಎಂ ತಿರುಗುಬಲ

ಗೇರ್ ಬಾಕ್ಸ್: 8 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್.

ವೇಗವರ್ಧನೆ

ವೇಗವರ್ಧನೆ

ಡೀಸೆಲ್: 7.7 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ.

ಪೆಟ್ರೋಲ್: 6.1 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ.

ಬಿಎಂಡಬ್ಲ್ಯು 3 ಸಿರೀಸ್ ಗ್ರ್ಯಾನ್ ಟರಿಸ್ಮೊ ಭಾರತದಲ್ಲಿ ಬಿಡುಗಡೆ

ಆಲ್ಪೈನ್ ವೈಟ್ ಮತ್ತು ಈ ಕೆಳಕಂಡ ಮೆಟ್ಯಾಲಿಕ್ ಬಣ್ಣಗಳಲ್ಲಿ ನೂತನ ಬಿಎಂಡಬ್ಲ್ಯು 3 ಸಿರೀಸ್ ಗ್ರ್ಯಾನ್ ಟರಿಸ್ಮೊ ಲಭ್ಯವಾಗಲಿದೆ. ಅವುಗಳೆಂದರೆ ಬ್ಲ್ಯಾಕ್ ಸಪೈರ್, ಗ್ಲೇಸಿಯರ್ ಸಿಲ್ವರ್, ಇಂಪಿರಿಯಲ್ ಬ್ಯೂ, ಬ್ರಿಲಿಯಂಟ್ ಎಫೆಕ್ಟ್, ಮೆಲ್ಬರ್ನ್ ರೆಡ್ ಮತ್ತು ಹೆಚ್ಚುವರಿ ಬಣ್ಣಗಳು - ಜಟೊಬಾ ಮತ್ತು ಆರ್ಕಟಿಕ್ ಗ್ರೇ ಬ್ರಿಲಿಯಂಟ್ ಎಫೆಕ್ಟ್.

ಬಿಎಂಡಬ್ಲ್ಯು 3 ಸಿರೀಸ್ ಗ್ರ್ಯಾನ್ ಟರಿಸ್ಮೊ ಭಾರತದಲ್ಲಿ ಬಿಡುಗಡೆ

ಹೋದಿಕೆ ಸಂಯೋಜನೆಗಳು: ಸೆನ್ಸಾಟೆಕ್ ವೆನೆಟೊ ಬೀಜ್, ವೆನೆಟೊ ಬೀಜ್, ಸೆನ್ಸಾಟೆಕ್ ಬ್ಲ್ಯಾಕ್/ರೆಡ್ ಹೈಲೈಟ್, ಬ್ಲ್ಯಾಕ್ ಸ್ಪೋರ್ಟ್ ಲೈನ್, ಲೆಥರ್ ಡಕೊಟಾ ಬ್ಲ್ಯಾಕ್, ಬ್ಲ್ಯಾಕ್, ಲೆಥರ್ ಡಕೋಟಾ ಓಯ್ ಸ್ಟರ್, ಬ್ಲ್ಯಾಕ್ಲ ಲೆಥರ್ ಡಕೋಟಾ ಓಯ್ ಸ್ಟರ್/ಓಯಸ್ಟರ್ ಹೈಲೈಟ್, ಬ್ಲ್ಯಾಕ್, ಲೆಥರ್ ಡಕೋಟಾ ಸ್ಯಾಡಲ್ ಬ್ರೌನ್, ಬ್ರೌನ್ ಹೈಲೈಟ್ ವಿತ್ ಬೈಕಲರ್, ಲೆಥರ್ ಡಕೋಟಾ ವೆನೆಟೊ ಬೀಜ್/ಓಯ್ ಸ್ಟರ್ ಡಾರ್ಕ್ ಹೈಲೈಟ್, ವೆನೆಟೊ ಬೀಜ್ ಇನ್ ಲಗ್ಷುರಿ ಲೈನ್.

English summary
BMW 3 Series GT Launched In India; Prices Start At Rs. 43.30 Lakh

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark