'ಬುಗಾಟಿ ಕೈರಾನ್' ವಿಶ್ವದ ಅತಿ ವೇಗದ ಕಾರು; ವೇಗ ಎಷ್ಟು?

By Nagaraja

2016 ಜಿನೆವಾ ಮೋಟಾರು ಶೋದಲ್ಲಿ ವಿಶ್ವದ ಅತಿ ವೇಗದ ಕಾರಾಗಿರುವ ಅತಿ ನೂತನ ಬುಗಾಟಿ ಕೈರಾನ್ ಭರ್ಜರಿ ಅನಾವರಣಗೊಂಡಿದೆ. ಇದು ಭಾರತೀಯ ಬೆಲೆಯ ಪ್ರಕಾರ 17.82 ಕೋಟಿ ರುಪಾಯಿಗಳಷ್ಟು ದುಬಾರಿಯೆನಿಸುತ್ತದೆ.

ಎಲ್ಲರನ್ನು ಮನ ಸೆಳೆಯುವಂತಹ ಸಾನಿಧ್ಯವು ಬುಗಾಟಿ ಕೈರಾನ್ ಕಾರಿಗೆ ಮತ್ತಷ್ಟು ಮೆರಗನ್ನು ತುಂಬಿತ್ತು. ಇದು ಈಗಿರುವ ವೆರೊನ್ ಕಾರಿಗೆ ಉತ್ತರಾಧಿಕಾರಿ ಎಂದೇ ಬಿಂಬಿಸಲಾಗುತ್ತಿದೆ.

'ಬುಗಾಟಿ ಕೈರಾನ್' ವಿಶ್ವದ ಅತಿ ವೇಗದ ಕಾರು

ಜಿನೆವಾದಲ್ಲಿ ಶಕ್ತಿ ಪ್ರದರ್ಶನ ನಡೆಸಿರುವ ಬುಗಾಟಿ ಕೈರಾನ್, 8.0 ಲೀಟರ್ ಕ್ವಾಡ್ ಟರ್ಬೊ ಡಬ್ಲ್ಯು16 ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ.

'ಬುಗಾಟಿ ಕೈರಾನ್' ವಿಶ್ವದ ಅತಿ ವೇಗದ ಕಾರು

ಅಂತೆಯೇ ಜಗತ್ತಿನ ಅತ್ಯಂತ ಶಕ್ತಿಶಾಲಿ ಸಾಲಿನಲ್ಲಿ ಗುರುತಿಸಿಕೊಳ್ಳಲಿರುವ ಬುಗಾಟಿ ಕೈರಾನ್, ಬರೋಬ್ಬರಿ 1479 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ 1600 ಎನ್ ಎಂ ತಿರುಗುಬಲ ಇದರಲ್ಲಿದೆ.

'ಬುಗಾಟಿ ಕೈರಾನ್' ವಿಶ್ವದ ಅತಿ ವೇಗದ ಕಾರು

ಕೇವಲ 2.5 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರುವ ಬುಗಾಟಿ ಕೈರಾನ್, 6.5 ಹಾಗೂ 13.6 ಸೆಕೆಂಡುಗಳಲ್ಲೇ ಅನುಕ್ರಮವಾಗಿ ಗಂಟೆಗೆ 200 ಹಾಗೂ 300 ಕೀ.ಮೀ. ಗಳನ್ನು ಕ್ರಮಿಸಲಿದೆ.

'ಬುಗಾಟಿ ಕೈರಾನ್' ವಿಶ್ವದ ಅತಿ ವೇಗದ ಕಾರು

ವಿಶ್ವದ ಅತಿ ವೇಗದ ರಸ್ತೆ ಕಾರು ಎಂಬ ಕೀರ್ತಿಗೆ ಪಾತ್ರವಾಗಿರುವ ಬುಗಾಟಿ ಕೈರಾನ್ ಗಂಟೆಗೆ ಗರಿಷ್ಠ 420 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

'ಬುಗಾಟಿ ಕೈರಾನ್' ವಿಶ್ವದ ಅತಿ ವೇಗದ ಕಾರು

ನೂತನ ಬುಗಾಟಿ ಕೈರಾನ್ ಫೋರ್ ವೀಲ್ ಹಾಗೂ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಮುಖಾಂತರ ಎಲ್ಲ ನಾಲ್ಕು ಚಕ್ರಗಳಿಗೂ ಶಕ್ತಿ ರವಾನಿಸಲಿದೆ.

'ಬುಗಾಟಿ ಕೈರಾನ್' ವಿಶ್ವದ ಅತಿ ವೇಗದ ಕಾರು

ಅಲ್ಲದೆ ಅತಿ ಹೆಚ್ಚು ಕಾರ್ಬನ್ ಫೈಬರ್ ಪರಿಕರಗಳ ಮೂಲಕ ಭಾರವನ್ನು ಕಡಿತಗೊಳಿಸಲಾಗಿದೆ.

'ಬುಗಾಟಿ ಕೈರಾನ್' ವಿಶ್ವದ ಅತಿ ವೇಗದ ಕಾರು

ಐದು ಚಾಲನಾ ವಿಧಗಳು- ಲಿಫ್ಟ್, ಆಟೋ, ಆಟೋಬಾನ್, ಹ್ಯಾಂಡ್ಲಿಂಗ್ ಮತ್ತು ಟಾಪ್ ಸ್ಪೀಡ್

'ಬುಗಾಟಿ ಕೈರಾನ್' ವಿಶ್ವದ ಅತಿ ವೇಗದ ಕಾರು

ವಿನ್ಯಾಸದ ಬಗ್ಗೆ ಮಾತನಾಡುವುದಾದ್ದಲ್ಲಿ ಕಳೆದ ವರ್ಷ ಫ್ರಾಂಕ್ ಫರ್ಟ್ ಮೋಟಾರ್ ಶೋದಲ್ಲಿ ಪ್ರದರ್ಶಿಸಲಾದ ಬುಗಾಟಿ ವಿಷನ್ ಗ್ರ್ಯಾನ್ ಟರಿಸ್ಮೊ ಕಾನ್ಸೆಪ್ಟ್ ಕಾರಿನಿಂದ ಪ್ರೇರಣೆ ಪಡೆಯಲಾಗಿದೆ.

'ಬುಗಾಟಿ ಕೈರಾನ್' ವಿಶ್ವದ ಅತಿ ವೇಗದ ಕಾರು

ಮುಂಭಾಗದಲ್ಲಿ ಬುಗಾಟಿ ಟ್ರೇಡ್ ಮಾರ್ಕ್ ಬುಗಾಟಿ ಗ್ರಿಲ್, ಎಲ್ ಇಡಿ ಹೆಡ್ ಲ್ಯಾಂಪ್ ಪ್ರಮುಖ ಆಕರ್ಷಣೆಯಾಗಲಿದೆ.

Most Read Articles

Kannada
English summary
Bugatti Launches The Veyron's Successor - The 1479bhp Chiron
Story first published: Tuesday, March 1, 2016, 18:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X