ದಟ್ಸನ್ ರೆಡಿ ಗೊ ಮುಂಗಡ ಬುಕ್ಕಿಂಗ್ ಬೆಲೆ ಬರಿ 5,000 ರು. ಮಾತ್ರ!

Written By:

ಈಗಷ್ಟೇ ಜಾಗತಿಕ ಅನಾವರಣಗೊಂಡಿರುವ ದಟ್ಸನ್ ರೆಡಿ ಗೊ ಪುಟ್ಟ ಕಾರಿನ ಮುಂಗಡ ಬುಕ್ಕಿಂಗ್ ಬೆಲೆ 5,000 ರು. ನಿಗದಿಪಡಿಸಲಾಗಿದೆ. ಅಲ್ಲದೆ ಮುಂಗಡ ಬುಕ್ಕಿಂಗ್ ಪ್ರಕ್ರಿಯೆಯು 2016 ಮೇ 1ರಂದು ದೇಶದ್ಯಂತ ಆರಂಭವಾಗಲಿದೆ.

ಜಪಾನ್ ಐಕಾನಿಕ್ ನಿಸ್ಸಾನ್ ನ ಬಜೆಟ್ ಬ್ರಾಂಡ್ ಆಗಿರುವ ದಟ್ಸನ್ ಪರಿಚಯಿಸುತ್ತಿರುವ ಮೂರನೇ ಆವೃತ್ತಿಯು ಇದಾಗಿದೆ. ದಟ್ಸನ್ ರೆಡಿ ಗೊ ಕಾರಿನ ವಿತರಣೆ ಪ್ರಕ್ರಿಯೆಯು ಜೂನ್ ತಿಂಗಳಿಂದ ಆರಂಭವಾಗಲಿದೆ.

ಪುಟ್ಟ ಕಾರು ದಟ್ಸನ್ ರೆಡಿ ಗೊ

2.5 ಲಕ್ಷ ರು.ಗಳಿಂದ 3.5 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿರುವ ದಟ್ಸನ್ ರೆಡಿ ಗೊ ವೆರಿಯಂಟ್ಸ್ ಜೂನಲ್ಲಿ ನಡೆಯಲಿರುವ ಬಿಡುಗಡೆ ವೇಳೆಯಲ್ಲಿ ತಿಳಿದು ಬರಲಿದೆ.

ಪುಟ್ಟ ಕಾರು ದಟ್ಸನ್ ರೆಡಿ ಗೊ

ನಿಸ್ಸಾನ್ ಅಧಿಕೃತ ಡೀಲರ್ ಶಿಪ್ ಗಳಲ್ಲಿ ದಟ್ಸನ್ ರೆಡಿ ಗೊ ಬುಕ್ಕಿಂಗ್ ಸ್ವೀಕರಿಸಲಾಗುತ್ತಿದೆ. ಅಲ್ಲದೆ ಇ ಕಾಮರ್ಸ್ ವೆಬ್ ಸೈಟ್ ಸ್ನ್ಯಾಪ್ ಡೀಲ್ ನಲ್ಲೂ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಪುಟ್ಟ ಕಾರು ದಟ್ಸನ್ ರೆಡಿ ಗೊ

ದಟ್ಸನ್ ರೆಡಿ ಗೊ ತಾಜಾ ಅಪ್ ಡೇಟ್ ಗಳನ್ನು ನೀಡುವುದಕ್ಕಾಗಿ ವಿಶೇಷ 'ದಟ್ಸನ್ ಇಂಡಿಯಾ ಆಪ್' ಕೂಡಾ ಬಿಡುಗಡೆಗೊಳಿಸಲಾಗಿದೆ. ಆಸಕ್ತರು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

ಪುಟ್ಟ ಕಾರು ದಟ್ಸನ್ ರೆಡಿ ಗೊ

ರೆನೊ ಕ್ವಿಡ್‌ಗೆ ಸಮಾನವಾದ 800 ಸಿಸಿ ಎಂಜಿನ್ ನಿಂದ ನಿಯಂತ್ರಿಸ್ಪಡುವ ದಟ್ಸನ್ ರೆಡಿ ಗೊ 5 ಸ್ಪೀಡ್ ಗೇರ್ ಬಾಕ್ಸ್ ಪಡೆಯಲಿದೆ. ಇದು 74 ಎನ್ ಎಂ ತಿರುಗುಬಲದಲ್ಲಿ 54 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ

ಪುಟ್ಟ ಕಾರು ದಟ್ಸನ್ ರೆಡಿ ಗೊ

ಫ್ರಾನ್ಸ್ ಮೂಲದ ರೆನೊ ಜೊತೆ ಸಿಎಂಎಫ್-ಎ ತಹಹದಿ ಹಂಚಿಕೊಂಡಿರುವ ನಿಸ್ಸಾನ್, ದಟ್ಸನ್ ರೆಡಿ ಗೊ ಕಾರನ್ನು ಚೆನ್ನೈನಲ್ಲಿ ಸ್ಥಿತಗೊಂಡಿರುವ ಓರಂಗಡಂ ಘಟಕದಲ್ಲಿ ನಿರ್ಮಿಸಲಿದೆ.

ಪುಟ್ಟ ಕಾರು ದಟ್ಸನ್ ರೆಡಿ ಗೊ

ಒಂದು ಹ್ಯಾಚ್ ಬ್ಯಾಕ್ ಎಂಬುದಕ್ಕಿಂತಲೂ ಮೇಲಾಗಿ ನಗರ ಪ್ರದೇಶದ ಯುವ ಗ್ರಾಹಕರನ್ನು ಹೆಚ್ಚು ಗುರಿಯಾಗಿರಿಸಿಕೊಳ್ಳಲಿರುವ ದಟ್ಸನ್ ರೆಡಿ ಗೊ ಅರ್ಬನ್ ಕ್ರಾಸ್ ಎನಿಸಿಕೊಳ್ಳಲಿದೆ.

ಪುಟ್ಟ ಕಾರು ದಟ್ಸನ್ ರೆಡಿ ಗೊ

ಸಣ್ಣ ಕಾರು ವಿಭಾಗದಲ್ಲಿ ಮೈಲೇಜ್ ಪ್ರಮುಖ ಘಟಕವೆನಿಸುತ್ತಿದ್ದು, ನೂತನ ರೆಡಿ ಗೊ ಪ್ರತಿ ಲೀಟರ್ ಗೆ 25.17 ಕೀ.ಮೀ. ಇಂಧನ ಕ್ಷಮತೆ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

Read more on ದಟ್ಸನ್ datsun
English summary
Book The Datsun redi-GO On May 1, Only For Rs. 5,000
Story first published: Saturday, April 30, 2016, 17:10 [IST]
Please Wait while comments are loading...

Latest Photos