ಮೋಡಿ ಮಾಡಿದ ದಟ್ಸನ್ 'ರೆಡಿ ಗೊ' ಜಾಗತಿಕ ಅನಾವರಣ

Written By:

ಭಾರಿ ನಿರೀಕ್ಷೆಯ ಬಳಿಕ ಸಣ್ಣ ಕಾರು ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿರುವ ದಟ್ಸನ್ ರೆಡಿ ಗೊ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಜಾಗತಿಕ ಅನಾವರಣಗೊಂಡಿದೆ.

ಜಪಾನ್ ಮೂಲದ ದೈತ್ಯ ವಾಹನ ಸಂಸ್ಥೆ ನಿಸ್ಸಾನ್ ಬಜೆಟ್ ಕಾರು ಬ್ರಾಂಡ್ ಆಗಿರುವ ದಟ್ಸನ್ ಈಗಗಾಲೇ ಎರಡು ಮಾದರಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ರೆಡಿ ಗೊ ದೇಶದ ರಸ್ತೆ ಪ್ರವೇಶಿಸುತ್ತಿರುವ ಮೂರನೇ ಆವೃತ್ತಿಯಾಗಿರಲಿದೆ.

ಸಿಎಂಎಫ್-ಎ ತಳಹದಿ

ಸಿಎಂಎಫ್-ಎ ತಳಹದಿ

ಫ್ರಾನ್ಸ್ ಮೂಲದ ರೆನೊ ಜೊತೆ ಸಿಎಂಎಫ್-ಎ ತಹಹದಿ ಹಂಚಿಕೊಂಡಿರುವ ನಿಸ್ಸಾನ್, ದಟ್ಸನ್ ರೆಡಿ ಗೊ ಕಾರನ್ನು ಚೆನ್ನೈನಲ್ಲಿ ಸ್ಥಿತಗೊಂಡಿರುವ ಓರಂಗಡಂ ಘಟಕದಲ್ಲಿ ನಿರ್ಮಿಸಲಿದೆ.

ಎಂಜಿನ್

ಎಂಜಿನ್

ರೆನೊ ಕ್ವಿಡ್‌ಗೆ ಸಮಾನವಾದ 800 ಸಿಸಿ ಎಂಜಿನ್ ನಿಂದ ನಿಯಂತ್ರಿಸ್ಪಡುವ ದಟ್ಸನ್ ರೆಡಿ ಗೊ 5 ಸ್ಪೀಡ್ ಗೇರ್ ಬಾಕ್ಸ್ ಪಡೆಯಲಿದೆ. ಇದು 74 ಎನ್ ಎಂ ತಿರುಗುಬಲದಲ್ಲಿ 54 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ

ಬಿಡುಗಡೆ, ವಿತರಣೆ

ಬಿಡುಗಡೆ, ವಿತರಣೆ

ಜೂನ್ 01ರಂದು ಮಾರುಕಟ್ಟೆ ಪ್ರವೇಶಿಸಲಿರುವ ದಟ್ಸನ್ ರೆಡಿ ಗೊ ಬುಕ್ಕಿಂಗ್ ಪ್ರಕ್ರಿಯೆ ಮೇ ತಿಂಗಳಿಂದ ಆರಂಭವಾಗಲಿದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ಮುಂದುಗಡೆ ದೊಡ್ಡದಾಗಿ ಎದ್ದುಕಾಣಿಸುವ ಷಡ್ಭುಜೀಯ ಆಕೃತಿಯ ಡಿ ಕಟ್ ಫ್ರಂಟ್ ಗ್ರಿಲ್ ಪ್ರಮುಖ ಆಕರ್ಷಣೆಯಾಗಲಿದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ಸಣ್ಣ ಕಾರು ಹೊರತಾಗಿಯೂ ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಸೇವೆಯನ್ನು ಒದಗಿಸುತ್ತಿರುವುದು ದಟ್ಸನ್ ರೆಡಿ ಗೊ ಕಾರನ್ನು ಇತರ ವಾಹನಗಳಿಗಿಂತ ಭಿನ್ನವಾಗಿಸಲಿದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ನೂತನ ದಟ್ಸನ್ ರೆಡಿ ಗೊ 185 ಎಂಎಂ ಗ್ರೌಂಡ್ ಕ್ಲಿಯರನ್ಸ್ ಕಾಪಾಡಿಕೊಂಡಿದೆ.

ಅರ್ಬನ್ ಕ್ರಾಸೋವರ್

ಅರ್ಬನ್ ಕ್ರಾಸೋವರ್

ಒಂದು ಹ್ಯಾಚ್ ಬ್ಯಾಕ್ ಎಂಬುದಕ್ಕಿಂತಲೂ ಮೇಲಾಗಿ ನಗರ ಪ್ರದೇಶದ ಯುವ ಗ್ರಾಹಕರನ್ನು ಹೆಚ್ಚು ಗುರಿಯಾಗಿರಿಸಿಕೊಳ್ಳಲಿರುವ ದಟ್ಸನ್ ರೆಡಿ ಗೊ ಅರ್ಬನ್ ಕ್ರಾಸೋವರ್ ಎನಿಸಿಕೊಳ್ಳಲಿದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ಕಾರಿನೊಳಗೆ ಅತ್ಯುತ್ತಮ ಸ್ಥಳಾವಕಾಶಕ್ಕೆ ಆದ್ಯತೆ ಕೊಡಲಾಗಿದ್ದು, ಬೇಕಾದಷ್ಟು ಲೆಗ್ ರೂಂ ಮತ್ತು ಹೆಡ್ ರೂಂ ಇರಲಿದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ಮೂರು ಸ್ಪೋಕ್ ಸ್ಟೀರಿಂಗ್ ವೀಲ್, ಎತ್ತರವಾದ ಗೇರ್ ಲಿವರ್, ಫ್ರಂಟ್ ಪವರ್ ವಿಂಡೋ ಸೌಲಭ್ಯಗಳಿರಲಿದೆ.

ಪ್ರತಿಸ್ಪರ್ಧಿಗಳು

ಪ್ರತಿಸ್ಪರ್ಧಿಗಳು

ಸಣ್ಣ ಕಾರು ಮಾರುಕಟ್ಟೆಯಲ್ಲಿ ಪ್ರಮುಖವಾಗಿಯೂ ರೆನೊ ಕ್ವಿಡ್, ಮಾರುತಿ ಆಲ್ಟೊ 800 ಮತ್ತು ಹ್ಯುಂಡೈ ಇಯಾನ್ ಮಾದರಿಗಳಿಗೆ ದಟ್ಸನ್ ರೆಡಿ ಗೊ ಪ್ರತಿಸ್ಪರ್ಧಿಯಾಗಲಿದೆ.

ಮೋಡಿ ಮಾಡಿದ ದಟ್ಸನ್ 'ರೆಡಿ ಗೊ' ಜಾಗತಿಕ ಅನಾವರಣ

2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿರುವ ದಟ್ಸನ್ ರೆಡಿ ಗೊ ಭಾರತೀಯ ಸಣ್ಣ ಕಾರು ಮಾರುಕಟ್ಟೆಯಲ್ಲಿ ಹೊಸತನದ ಅನುಭವ ನೀಡಲಿದೆ. ಈ ಮೂಲಕ ದಟ್ಸನ್ ತನ್ನ ಶ್ರೇಣಿಯ ಕಾರುಗಳನ್ನು ಬಲಪಡಿಸಲಿದೆ.

ಮೋಡಿ ಮಾಡಿದ ದಟ್ಸನ್ 'ರೆಡಿ ಗೊ' ಜಾಗತಿಕ ಅನಾವರಣ

ಇದು ದಟ್ಸನ್ ಬಜೆಟ್ ಬ್ರ್ಯಾಂಡ್ ನಲ್ಲಿ ಮಾತೃಸಂಸ್ಥೆ ನಿಸ್ಸಾನ್ ಬಿಡುಗಡೆ ಮಾಡುತ್ತಿರುವ ಮೂರನೇ ಕಾರಾಗಿದೆ. ಇದಕ್ಕೂ ಮೊದಲು ದಟ್ಸನ್ ಗೊ ಹ್ಯಾಚ್ ಬ್ಯಾಕ್ ಮತ್ತು ಗೊ ಪ್ಲಸ್ ಎಂಪಿವಿ ಕಾರುಗಳು ಬಿಡುಗಡೆಯಾಗಿದ್ದವು.

ಮೋಡಿ ಮಾಡಿದ ದಟ್ಸನ್ 'ರೆಡಿ ಗೊ' ಜಾಗತಿಕ ಅನಾವರಣ

ಸಣ್ಣ ಕಾರು ವಿಭಾಗದಲ್ಲಿ ಮೈಲೇಜ್ ಪ್ರಮುಖ ಘಟಕವೆನಿಸುತ್ತಿದ್ದು, ನೂತನ ರೆಡಿ ಗೊ ಪ್ರತಿ ಲೀಟರ್ ಗೆ 25.17 ಕೀ.ಮೀ. ಇಂಧನ ಕ್ಷಮತೆ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

ಮೋಡಿ ಮಾಡಿದ ದಟ್ಸನ್ 'ರೆಡಿ ಗೊ' ಜಾಗತಿಕ ಅನಾವರಣ

ಕ್ವಿಡ್ ಕಾರಿಗಿಂತಲೂ ಅಗ್ಗದ ಬೆಲೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಹೊಂದಿರುವ ರೆಡಿ ಗೊ 2.50 ಲಕ್ಷ ರು.ಗಳಿಂದ 3.50 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿದೆ.

ಮೋಡಿ ಮಾಡಿದ ದಟ್ಸನ್ 'ರೆಡಿ ಗೊ' ಜಾಗತಿಕ ಅನಾವರಣ

ನಿಕಟ ಭವಿಷ್ಯದಲ್ಲೇ ದಟ್ಸನ್ ರೆಡಿ ಗೊ ಹೆಚ್ಚು ಶಕ್ತಿಶಾಲಿ 1.0 ಲೀಟರ್ ಡೀಸೆಲ್ ಎಂಜಿನ್ ಮತ್ತು ಎಎಂಟಿ ಗೇರ್ ಬಾಕ್ಸ್ ಆಯ್ಕೆಯನ್ನು ಒದಗಿಸುವ ಇರಾದೆಯನ್ನು ಸಂಸ್ಥೆ ಹೊಂದಿದೆ.

Read more on ದಟ್ಸನ್ datsun
English summary
Datsun Redi-Go Makes Global Debut In India
Story first published: Thursday, April 14, 2016, 16:39 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark