ಬಿಡುಗಡೆಗೂ ಮುನ್ನವೇ ದಟ್ಸನ್ ರೆಡಿ ಗೊ ಬೆಲೆ ಸೋರಿಕೆ ?

Written By:

ಅತಿ ನೂತನ ಹ್ಯಾಚ್ ಬ್ಯಾಕ್ ಕಾರು ದಟ್ಸನ್ ರೆಡಿ ಗೊ 2016 ಜೂನ್ 07ರಂದು ಭರ್ಜರಿ ಬಿಡುಗಡೆ ಕಾಣಲಿದೆ. ಈ ನಡುವೆ ಕ್ರಾಸೋವರ್ ಶೈಲಿಯ ದಟ್ಸನ್ ರೆಡಿ ಗೊ ಹ್ಯಾಚ್ ಬ್ಯಾಕ್ ಕಾರಿನ ಬೆಲೆಯು ಸೋರಿಕೆಯಾಗಿರುವ ಸುದ್ದಿ ವಾಹನ ಪ್ರೇಮಿಗಳಲ್ಲಿ ಕುತೂಹಲವನ್ನುಂಟು ಮಾಡಿದೆ.

ಸಂಸ್ಥೆಯ ಅಧಿಕೃತ ವೆಬ್ ಸೈಟ್ ನಲ್ಲೇ ಈ ಬಗ್ಗೆ ವಿವರಗಳು ಲಭ್ಯವಾಗಿದೆ ಎಂಬುದು ವರದಿಯಾಗಿದೆ. ಆದರೆ ಸಂಸ್ಥೆಯಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ. ಅಷ್ಟಕ್ಕೂ ದಟ್ಸನ್ ರೆಡಿ ಗೊ ಪ್ರಾರಂಭಿಕ ಬೆಲೆ ಎಷ್ಟು ಗೊತ್ತೇ ? ಸಮಗ್ರ ಮಾಹಿತಿಗಳಿಗಾಗಿ ಚಿತ್ರ ಪುಟವನ್ನು ಸಂದರ್ಶಿಸಿರಿ.

To Follow DriveSpark On Facebook, Click The Like Button
ಬಿಡುಗಡೆಗೂ ಮುನ್ನವೇ ದಟ್ಸನ್ ರೆಡಿ ಗೊ ಬೆಲೆ ಸೋರಿಕೆ ?

ದಟ್ಸನ್ ರೆಡಿ ಗೊ ಹ್ಯಾಚ್ ಬ್ಯಾಕ್ ಕಾರಿನ ಪ್ರಾರಂಭಿಕ ಬೆಲೆ 2.39 ಲಕ್ಷ ರು.ಗಳಾಗಿರಲಿದೆ. ಇದು ನಿಜಕ್ಕೂ ಅಚ್ಚರಿ ಮೂಡಿಸುತ್ತಿದ್ದು, ವಾಹನ ಮಾರುಕಟ್ಟೆಯಲ್ಲಿ ತಲ್ಲನವನ್ನುಂಟು ಮಾಡಲಿದೆ.

ಬಿಡುಗಡೆಗೂ ಮುನ್ನವೇ ದಟ್ಸನ್ ರೆಡಿ ಗೊ ಬೆಲೆ ಸೋರಿಕೆ ?

ಇಲ್ಲಿ ಕೊಟ್ಟಿರುವ ವಿವರಗಳು ಸುಳ್ಳು ಅಲ್ಲದಿದ್ದಲ್ಲಿ ಟಾಟಾ ನ್ಯಾನೋ ಮತ್ತು ಮಾರುತಿ ಆಲ್ಟೊ 800 ಬಳಿಕ ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಅತ್ಯಂತ ಅಗ್ಗದ ಕಾರೆಂಬ ಹೆಗ್ಗಳಿಕೆಗೆ ದಟ್ಸನ್ ರೆಡಿ ಗೊ ಪಾತ್ರವಾಗಲಿದೆ.

ಬಿಡುಗಡೆಗೂ ಮುನ್ನವೇ ದಟ್ಸನ್ ರೆಡಿ ಗೊ ಬೆಲೆ ಸೋರಿಕೆ ?

ದಟ್ಸನ್ ರೆಡಿ ಗೊ ಅದೇ ತಳಹದಿಯಲ್ಲಿ ನಿರ್ಮಾಣಗೊಂಡಿರುವ ರೆನೊ ಕ್ವಿಡ್ ಮತ್ತಷ್ಟು 13,000 ರು.ಗಳಷ್ಟು ದುಬಾರಿಯೆನಿಸುತ್ತಿದ್ದು, 2.62 ಲಕ್ಷ ರು.ಗಳ ಎಕ್ಸ್ ಶೋಂ ಪ್ರಾರಂಭಿಕ ಬೆಲೆಯನ್ನು ಪಡೆದಿದೆ.

ಬಿಡುಗಡೆಗೂ ಮುನ್ನವೇ ದಟ್ಸನ್ ರೆಡಿ ಗೊ ಬೆಲೆ ಸೋರಿಕೆ ?

ಕ್ವಿಡ್ ತರಹನೇ ರೆಡಿ ಗೊ ಸಹ ನಿರ್ಮಾಣದಲ್ಲಿ ಶೇಕಡಾ 98ರಷ್ಟು ಸ್ಥಳೀಯವಾಗಿಸಿರುವುದು ಆಕ್ರಮಣಕಾರಿ ಬೆಲೆ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ.

ಬಿಡುಗಡೆಗೂ ಮುನ್ನವೇ ದಟ್ಸನ್ ರೆಡಿ ಗೊ ಬೆಲೆ ಸೋರಿಕೆ ?

ಇದರಲ್ಲಿರುವ 799 ಸಿಸಿ ಪೆಟ್ರೋಲ್ ಎಂಜಿನ್ 72 ಎನ್ ಎಂ ತಿರುಗುಬಲದಲ್ಲಿ 54 ಅಶ್ವಶಕ್ತಿಯನ್ನು ಉತ್ಪಾದಿಸಲಿದ್ದು, ಪ್ರತಿ ಲೀಟರ್ ಗೆ 25.17 ಕೀ.ಮೀ. ಮೈಲೇಜ್ ನೀಡಲಿದೆ.

ಬಿಡುಗಡೆಗೂ ಮುನ್ನವೇ ದಟ್ಸನ್ ರೆಡಿ ಗೊ ಬೆಲೆ ಸೋರಿಕೆ ?

ಈ ನಡುವೆ ದಟ್ಸನ್ ರೆಡಿ ಗೊ ಮುಂಗಡ ಬುಕ್ಕಿಂಗ್ ಪ್ರಕ್ರಿಯೆಗೆ 2016 ಮೇ 01ರಂದು ಚಾಲನೆ ನೀಡಲಾಗಿತ್ತು. ದೇಶದೆಲ್ಲ ನಿಸ್ಸಾನ್ ಡೀಲರ್ ಶಿಪ್ ಗಳಲ್ಲಿ 5,000 ರು.ಗಳಿಗೆ ಬುಕ್ಕಿಂಗ್ ನಮೂದಿಸಲಾಗುತ್ತಿದೆ.

ಬಿಡುಗಡೆಗೂ ಮುನ್ನವೇ ದಟ್ಸನ್ ರೆಡಿ ಗೊ ಬೆಲೆ ಸೋರಿಕೆ ?

ಮುಂದುಗಡೆ ದೊಡ್ಡದಾಗಿ ಎದ್ದುಕಾಣಿಸುವ ಷಡ್ಭುಜೀಯ ಆಕೃತಿಯ ಡಿ ಕಟ್ ಫ್ರಂಟ್ ಗ್ರಿಲ್, ಎಲ್ ಇಡಿ ಡೇ ಟೈಮ್ ಲೈಟ್ಸ್ ಮತ್ತು ಪರಿಣಾಮಕಾರಿ 185 ಎಂಎಂ ಗ್ರೌಂಡ್ ಕ್ಲಿಯರನ್ಸ್ ಕಾಪಾಡಿಕೊಂಡಿದೆ.

ಬಿಡುಗಡೆಗೂ ಮುನ್ನವೇ ದಟ್ಸನ್ ರೆಡಿ ಗೊ ಬೆಲೆ ಸೋರಿಕೆ ?

ಸಣ್ಣ ಕಾರು ಮಾರುಕಟ್ಟೆಯಲ್ಲಿ ಪ್ರಮುಖವಾಗಿಯೂ ರೆನೊ ಕ್ವಿಡ್, ಮಾರುತಿ ಆಲ್ಟೊ 800 ಮತ್ತು ಹ್ಯುಂಡೈ ಇಯಾನ್ ಮಾದರಿಗಳಿಗೆ ದಟ್ಸನ್ ರೆಡಿ ಗೊ ಪ್ರತಿಸ್ಪರ್ಧಿಯಾಗಲಿದೆ.

ಬಿಡುಗಡೆಗೂ ಮುನ್ನವೇ ದಟ್ಸನ್ ರೆಡಿ ಗೊ ಬೆಲೆ ಸೋರಿಕೆ ?

ಇದು ದಟ್ಸನ್ ಬಜೆಟ್ ಬ್ರ್ಯಾಂಡ್ ನಲ್ಲಿ ಮಾತೃಸಂಸ್ಥೆ ನಿಸ್ಸಾನ್ ಬಿಡುಗಡೆ ಮಾಡುತ್ತಿರುವ ಮೂರನೇ ಕಾರಾಗಿದೆ. ಇದಕ್ಕೂ ಮೊದಲು ದಟ್ಸನ್ ಗೊ ಹ್ಯಾಚ್ ಬ್ಯಾಕ್ ಮತ್ತು ಗೊ ಪ್ಲಸ್ ಎಂಪಿವಿ ಕಾರುಗಳು ಬಿಡುಗಡೆಯಾಗಿದ್ದವು.

Read more on ದಟ್ಸನ್ datsun
English summary
Datsun redi-GO prices leaked before launch?
Story first published: Friday, June 3, 2016, 9:40 [IST]
Please Wait while comments are loading...

Latest Photos