ನೋಟು ಎಫೆಕ್ಟ್; ವಾಹನ ಮಾರಾಟ, ಉತ್ಪಾದನೆ ಕುಂಠಿತ

Written By:

ಹಳೆಯ 500 ಮತ್ತು 1000 ರುಪಾಯಿ ಚಲಾವಣೆ ರದ್ದು ಮಾಡಿರುವ ಕೇಂದ್ರ ಸರಕಾರದ ನೀತಿಯು ವಾಹನ ವಲಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇದರಿಂದಾಗಿ ವಾಹನ ಮಾರಾಟದಲ್ಲಿ ಗಣನೀಯವಾಗಿ ಕುಸಿತವುಂಟಾಗಿದ್ದು, ಪರಿಣಾಮ ವಾಹನ ಸಂಸ್ಥೆಗಳಿಗೆ ಉತ್ಪಾದನೆಯನ್ನು ಕುಂಠಿತಗೊಳಿಸುವುದು ಅನಿವಾರ್ಯವೆನಿಸಿದೆ.

ನೋಟು ಎಫೆಕ್ಟ್; ವಾಹನ ಮಾರಾಟ, ಉತ್ಪಾದನೆ ಕುಂಠಿತ

ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ಸಂಸ್ಥೆಯಾಗಿರುವ ಹೋಂಡಾ ಮೋಟಾರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಸಂಸ್ಥೆಯು ನಿರ್ಮಾಣವನ್ನು ಇಳಿಕೆಗೊಳಿಸಿದೆ ಎಂಬುದನ್ನು ಮೂಲಗಳು ಖಚಿತಪಡಿಸಿದೆ.

ನೋಟು ಎಫೆಕ್ಟ್; ವಾಹನ ಮಾರಾಟ, ಉತ್ಪಾದನೆ ಕುಂಠಿತ

ನೋಟು ನಿಷೇಧದಿಂದಾಗಿ ಬೇಡಿಕೆ ಇಳಿಮುಖವಾಗಿದ್ದು, ಇದರಿಂದಾಗಿ ಉತ್ಪಾದನಾ ರಹಿತ ದಿನವಾಗಿ ಪರಿವರ್ತನೆಗೊಳಿಸುವ ಬದಲು ನಿರ್ಮಾಣ ಸಾಮರ್ಥ್ಯವನ್ನು ಕಡಿಮೆ ಮಾಡುವ ಮೂಲಕ ಸಮತೋಲವನ್ನು ಕಾಪಾಡಿಕೊಳ್ಳುತ್ತಿದೆ.

ನೋಟು ಎಫೆಕ್ಟ್; ವಾಹನ ಮಾರಾಟ, ಉತ್ಪಾದನೆ ಕುಂಠಿತ

ಹಳೆಯ ನೋಟು ನಿಷೇಧದಿಂದ ವಾಹನ ಮಾರಾಟ ಕ್ಷೀಣವಾಗಿದೆ. ಈ ನಿಧಾನ ಮಾರಾಟ ಪ್ರಕ್ರಿಯೆಯನ್ನು ಸಮತೋಲನದಲ್ಲಿಡಲು ಉತ್ಪಾದನೆಯನ್ನು ಕಡಿಮೆ ಮಾಡಲು ಪ್ರಮುಖ ಸಂಸ್ಥೆಗಳು ನಿರ್ಧರಿಸಿದೆ.

ನೋಟು ಎಫೆಕ್ಟ್; ವಾಹನ ಮಾರಾಟ, ಉತ್ಪಾದನೆ ಕುಂಠಿತ

ಮಾರಾಟದೊಂದಿಗೆ ಹೊಂದಿಕೊಳ್ಳಲು ಹೋಂಡಾ ಕಾರ್ಸ್ ಇಂಡಿಯಾ ಸಂಸ್ಥೆಯು ಸಹ ಇದೇ ನೀತಿಯನ್ನು ಅನುಸರಿಸುತ್ತಿದೆ. ಅಷ್ಟೇ ಯಾಕೆ ಈ ತಿಂಗಳ ಬುಕ್ಕಿಂಗ್ ನಲ್ಲಿ ಶೇಕಡಾ 40ರಷ್ಟು ಇಳಿಕೆಯುಂಟಾಗಿದೆ ಎಂಬುದನ್ನು ಸ್ಪಷ್ಟಪಡಿಸಿದೆ.

ನೋಟು ಎಫೆಕ್ಟ್; ವಾಹನ ಮಾರಾಟ, ಉತ್ಪಾದನೆ ಕುಂಠಿತ

ಹಾಗಿದ್ದರೂ ಈ ಬಗ್ಗೆ ದೇಶದ ಅಗ್ರ ಸಂಸ್ಥೆಗಳಾದ ಮಾರುತಿ ಮತ್ತು ಹ್ಯುಂಡೈ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಆದರೆ ಡೀಲರುಗಳನ್ನು ಸಂಪರ್ಕಿಸಿದಾಗ ಮಾರಾಟ ಕುಸಿತವಾಗಿರುವುದನ್ನು ಖಚಿತಪಡಿಸಿದೆ.

ನೋಟು ಎಫೆಕ್ಟ್; ವಾಹನ ಮಾರಾಟ, ಉತ್ಪಾದನೆ ಕುಂಠಿತ

ಹೀರೊ ಮೊಟೊಕಾರ್ಪ್ ಸಹ ಮಾರಾಟ ಇಳಿಕೆಯನ್ನು ಒಪ್ಪಿಕೊಂಡಿದ್ದು, ಕ್ರಮೇಣ ದುಡ್ಡಿನ ಒಳ ಹರಿವು ಸಹಜ ಸ್ಥಿತಿಗೆ ತಲುಪಿದಾಗ ಎಲ್ಲವೂ ಸರಿ ಹೋಗಲಿದೆ ಎಂಬ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದೆ.

ನೋಟು ಎಫೆಕ್ಟ್; ವಾಹನ ಮಾರಾಟ, ಉತ್ಪಾದನೆ ಕುಂಠಿತ

ಇನ್ನೊಂದೆಡೆ ಬೇಡಿಕೆ ಕುಸಿದಿರುವ ಹಿನ್ನಲೆಯಲ್ಲಿ ಡೈಮ್ಲರ್ ಎಜಿ ಸಂಸ್ಥೆಯು ಕಳೆದ ವಾರದಲ್ಲಿ ಮೂರು ದಿನಗಳ ಕಾಲ ರಜೆ ಘೋಷಿಸಿದೆ. ಪ್ರಸಕ್ತ ವಾರದಲ್ಲೂ ಇದೇ ನೀತಿಯನ್ನು ಮುಂದುವರಿ

ಸುವ ಯೋಜನೆಯನ್ನಿಟ್ಟುಕೊಂಡಿದೆ.

ನೋಟು ಎಫೆಕ್ಟ್; ವಾಹನ ಮಾರಾಟ, ಉತ್ಪಾದನೆ ಕುಂಠಿತ

ಅತ್ತ ರೆನೊ ಮತ್ತು ನಿಸ್ಸಾನ್ ಸಂಸ್ಥೆಗಳು ಚೆನ್ನೈ ಓರಗಡಂ ಘಟಕದಲ್ಲಿನ ಮೂರನೇ ಸರದಿಯ ನಿರ್ಮಾಣಕ್ಕೆ ಬ್ರೇಕ್ ಹಾಕಿದೆ.

ನೋಟು ಎಫೆಕ್ಟ್; ವಾಹನ ಮಾರಾಟ, ಉತ್ಪಾದನೆ ಕುಂಠಿತ

ಹೊಸ ವರ್ಷಕ್ಕೆ ಇನ್ನೊಂದು ತಿಂಗಳು ಮಾತ್ರ ಬಾಕಿ ಉಳಿದಿರುವಂತೆಯೇ 2016 ಮಾಡೆಲ್ ಗಳ ದಾಸ್ತಾನುಗಳಿನ್ನಿಡಲು ಕಂಪನಿಯಾಗಲಿ ಅಥವಾ ಡೀಲರುಗಳಾಗಲಿ ಬಯಸುತ್ತಿಲ್ಲ. ಯಾಕೆಂದರೆ ಇದು ಹೊಸ ಮತ್ತೆ ಮಾರಾಟದ ಮೇಲೆ ಪರಿಣಾಮ ಬೀರಲಿದೆ.

ನೋಟು ಎಫೆಕ್ಟ್; ವಾಹನ ಮಾರಾಟ, ಉತ್ಪಾದನೆ ಕುಂಠಿತ

ಸೆಕೆಂಡ್ ಹ್ಯಾಂಡ್ ವಾಹನ ಮಾರುಕಟ್ಟೆ ಮತ್ತು ಬಿಡಿಭಾಗಗಳ ಮಾರಾಟದಲ್ಲೂ ಗಣನೀಯವಾದ ಇಳಿಕೆಯಾಗಿದೆ. ಪ್ರಸ್ತುತ ಸ್ಥಿತಿಯೂ ಆರೋಗ್ಯಕರವಲ್ಲ ಎಂಬುದನ್ನು ವಾಹನ ವಿಶ್ಲೇಷಕರು ಬಹಿರಂಗಪಡಿಸಿದ್ದಾರೆ.

Read more on ಕಾರು cars
English summary
Demonetisation Effect: Indian Auto Industry Cuts Production

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark