ಹ್ಯುಂಡೈ ಇಯಾನ್ ನಲ್ಲಿ ಕ್ಲಚ್ ದೋಷ; ಮಾಲಿಕರಲ್ಲಿ ಮನೆ ಮಾಡಿದ ಆತಂಕ!

Written By:

ದೋಷಪೂರಿತ ಕ್ಲಚ್ ನಿಂದಾಗಿ ದೇಶದಲ್ಲಿ 7,657 ಯುನಿಟ್ ಗಳಷ್ಟು ಹ್ಯುಂಡೈ ಇಯಾನ್ ಕಾರುಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಹ್ಯುಂಡೈ ಇಂಡಿಯಾ ನಿರ್ಧರಿಸಿದೆ. ಇದು ದೇಶದ ಜನಪ್ರಿಯ ಇಯಾನ್ ಕಾರನ್ನು ಹೊಂದಿರುವ ಮಾಲಿಕರಲ್ಲಿ ಆತಂಕವನ್ನು ಮನೆ ಮಾಡಿದೆ.

To Follow DriveSpark On Facebook, Click The Like Button
ಹ್ಯುಂಡೈ ಇಯಾನ್ ನಲ್ಲಿ ಕ್ಲಚ್ ದೋಷ; ಮಾಲಿಕರಲ್ಲಿ ಮನೆ ಮಾಡಿದ ಆತಂಕ!

2015 ಜನವರಿ ತಿಂಗಳಲ್ಲಿ ತಯಾರಾಗಿರುವ ಹ್ಯುಂಡೈ ಇಯಾನ್ ಕಾರುಗಳಲ್ಲಿ ಕ್ಲಚ್ ತೊಂದರೆ ಕಂಡುಬಂದಿದೆ. ಈ ಸಮಸ್ಯೆಯನ್ನು ಸಂಪೂರ್ಣ ಉಚಿತವಾಗಿ ಸರಿಪಡಿಸಿ ಕೊಡಲಾಗುವುದು.

ಹ್ಯುಂಡೈ ಇಯಾನ್ ನಲ್ಲಿ ಕ್ಲಚ್ ದೋಷ; ಮಾಲಿಕರಲ್ಲಿ ಮನೆ ಮಾಡಿದ ಆತಂಕ!

ಎಂಟ್ರಿ ಲೆವೆಲ್ ಹ್ಯಾಚ್ ಬ್ಯಾಕ್ ವಿಭಾಗದಲ್ಲಿ ದೇಶದ ನಂ.1 ಆಲ್ಟೊ ಕಾರಿಗೆ ಪ್ರತಿಸ್ಪರ್ಧಿಯಾಗಿರುವ ಇಯಾನ್ ತನ್ನದೇ ಆದ ವಿಶಿಷ್ಟ ವಿನ್ಯಾಸದಿಂದ ಗಮನ ಸೆಳೆದಿದೆ.

ಹ್ಯುಂಡೈ ಇಯಾನ್ ನಲ್ಲಿ ಕ್ಲಚ್ ದೋಷ; ಮಾಲಿಕರಲ್ಲಿ ಮನೆ ಮಾಡಿದ ಆತಂಕ!

ಸದ್ಯ ದೇಶದಲ್ಲಿ ಇಯಾನ್ ಪರಿಷ್ಕೃತ ಆವೃತ್ತಿಯನ್ನು ಬಿಡುಗಡೆ ಮಾಡಲು ಹ್ಯುಂಡೈ ಸಜ್ಜಾಗುತ್ತಿದೆ. ಈ ನಡುವೆ ಕ್ಲಚ್ ತೊಂದರೆ ಕಾಣಿಸಿಕೊಂಡಿರುವುದು ಸ್ವಲ್ಪ ಹಿನ್ನಡೆಗೆ ಕಾರಣವಾಗಿದೆ.

ಹ್ಯುಂಡೈ ಇಯಾನ್ ನಲ್ಲಿ ಕ್ಲಚ್ ದೋಷ; ಮಾಲಿಕರಲ್ಲಿ ಮನೆ ಮಾಡಿದ ಆತಂಕ!

2015 ಜನವರಿ 01ರಿಂದ 31ರ ಅವಧಿಯ ನಡುವೆ ನಿರ್ಮಾಣಗೊಂಡ ಹ್ಯುಂಡೈ ಇಯಾನ್ ಕಾರಿನ ಬ್ಯಾಟರಿ ಕೇಬಲ್ ಜೊತೆಗೆ ಕ್ಲಚ್ ಕೇಬಲ್ ಮಲಿನಗೊಂಡ ಹಿನ್ನಲೆಯಲ್ಲಿ ಸಮಸ್ಯೆ ಕಂಡುಬಂದಿದೆ.

ಹ್ಯುಂಡೈ ಇಯಾನ್ ನಲ್ಲಿ ಕ್ಲಚ್ ದೋಷ; ಮಾಲಿಕರಲ್ಲಿ ಮನೆ ಮಾಡಿದ ಆತಂಕ!

ಅಂದ ಹಾಗೆ ಹ್ಯುಂಡೈ ಇಯಾನ್ ನಲ್ಲಿರುವ ಚೊಕ್ಕದಾದ 0.8 ಸಿಸಿ ಎಂಜಿನ್ 75 ಎನ್ ಎಂ ತಿರುಗುಬಲದಲ್ಲಿ 56 ಅಶ್ವಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹ್ಯುಂಡೈ ಇಯಾನ್ ನಲ್ಲಿ ಕ್ಲಚ್ ದೋಷ; ಮಾಲಿಕರಲ್ಲಿ ಮನೆ ಮಾಡಿದ ಆತಂಕ!

ಇನ್ನೊಂದೆಡೆ ಹೆಚ್ಚು ಶಕ್ತಿಶಾಲಿ 998 ಸಿಸಿ ಎಂಜಿನ್ 69 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಇವೆರಡು ಐದು ಸ್ಪೀಡ್ ಗೇರ್ ಬಾಕ್ಸ್ ಸಹ ಪಡೆದಿದೆ.

ಹ್ಯುಂಡೈ ಇಯಾನ್ ನಲ್ಲಿ ಕ್ಲಚ್ ದೋಷ; ಮಾಲಿಕರಲ್ಲಿ ಮನೆ ಮಾಡಿದ ಆತಂಕ!

814 ಸಿಸಿ 3 ತ್ರಿ ಸಿಲಿಂಡರ್ ಹೊಂದಿರುವ ಹ್ಯುಂಡೈ ಇಯಾನ್ ಪ್ರತಿ ಲೀಟರ್ ಗೆ 22.03 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಮುಖ್ಯಾಂಶಗಳು - ವಿನ್ಯಾಸ

ಮುಖ್ಯಾಂಶಗಳು - ವಿನ್ಯಾಸ

ಸ್ಟೈಲಿಷ್ ವಿನ್ಯಾಸ,

ಇಂಟಿಲಿಜೆಂಟ್ ಡಿಸೈನ್,

ಹೆಚ್ಚು ಸ್ಥಳಾವಕಾಶ,

ಹೊರಮೈ

ಹೊರಮೈ

ಫ್ಯೂಚರಿಸ್ಟಿಕ್ ಹೆಡ್ ಲ್ಯಾಂಪ್,

ಇಂಟೇಗ್ರೇಟಡ್ ಸ್ಪಾಯ್ಲರ್ ಮತ್ತು ಸ್ಟೈಲಿಷ್ ಟೈಲ್ ಲ್ಯಾಂಪ್,

ದೇಹ ಬಣ್ಣದ ಡೋರ್ ಹ್ಯಾಂಡಲ್ ಮತ್ತು ಮಿರರ್

ಒಳಮೈ

ಒಳಮೈ

ಆರಾಮದಾಯಕ ಸೀಟು,

ದೊಡ್ಡದಾದ ಢಿಕ್ಕಿ ಜಾಗ,

ಮುಂಭಾಗದಲ್ಲಿ ಬಕೆಟ್ ವಿಧದ ಸೀಟು

ಸುರಕ್ಷತೆ

ಸುರಕ್ಷತೆ

ರಿಮೋಟ್ ಕೀಲೆಸ್ ಎಂಟ್ರಿ,

ಚಾಲಕ ಏರ್ ಬ್ಯಾಗ್,

ಬಲವರ್ಧಿತ ದೇಹ ರಚನೆ

ಅನುಕೂಲ

ಅನುಕೂಲ

ಪವರ್ ವಿಂಡೋ,

ಒಳಗಡೆಯಿಂದಲೇ ನಿಯಂತ್ರಿಸಬಹುದಾದ ಹೊರಗಿನ ಮಿರರ್,

ಕೀಲೆಸ್ ಎಂಟ್ರಿ ಮತ್ತು ಸೆಂಟ್ರಲ್ ಲಾಕಿಂಗ್,

ಐಪೊಡ್ ಮತ್ತು ಯುಎಸ್ ಬಿ ಕನೆಕ್ಟಿವಿಟಿ

English summary
Hyundai Recalls The Eon Over A Faulty Clutch
Story first published: Wednesday, October 5, 2016, 9:40 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark