ಹ್ಯುಂಡೈ ತವರೂರಿಗೆ ಐ30 ಕೊಡುಗೆ; ಭಾರತಕ್ಕಿಲ್ಲ ಸಿಹಿ ಸುದ್ದಿ!

Written By:

ದಕ್ಷಿಣ ಕೊರಿಯಾ ಮೂಲದ ವಾಹನ ಸಂಸ್ಥೆ ಹ್ಯುಂಡೈ, ತನ್ನ ಜನಪ್ರಿಯ ಐ30 ಮಾದರಿಯ ಹೊಸ ಅವತರಣಿಕೆಯ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ನೂತನ 2017 ಹ್ಯುಂಡೈ ಐ30 ಸಂಬಂಧಪಟ್ಟಂತೆ ವಿಶೇಷವಾದ ವಿಡಿಯೋವನ್ನು ಸಂಸ್ಥೆಯು ಬಿಡುಗಡೆಗೊಳಿಸಿದೆ.

ಮೂರನೇ ತಲೆಮಾರಿನ ಹ್ಯುಂಡೈ ಐ30 ಮುಂಬರುವ ಸೆಪ್ಟೆಂಬರ್ 07ರಂದು ಅನಾವರಣಗೊಳ್ಳಲಿದ್ದು, ಬಳಿಕ 2016 ಪ್ಯಾರಿಸ್ ಮೋಟಾರು ಶೋದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಲಭ್ಯವಾಗಲಿದೆ.

ಹ್ಯುಂಡೈ ತವರೂರಿಗೆ ಐ30 ಕೊಡುಗೆ; ಭಾರತಕ್ಕಿಲ್ಲ ಸಿಹಿ ಸುದ್ದಿ!

ತವರೂರಾದ ದಕ್ಷಿಣ ಕೊರಿಯಾ ಮಾರುಕಟ್ಟೆಯಲ್ಲಿ ನೂತನ ಹ್ಯುಂಡೈ ಐ30 ಐದು ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ. ಅವುಗಳೆಂದರೆ, ಸ್ಮಾರ್ಟ್, ಮಾರ್ಡನ್, ಪ್ರೀಮಿಯಂ, ಸ್ಪೋರ್ಟ್ಸ್ ಮತ್ತು ಸ್ಪೋರ್ಟ್ಸ್ ಪ್ರೀಮಿಯಂ.

ಎಂಜಿನ್ ಆಯ್ಕೆಗಳು

ಎಂಜಿನ್ ಆಯ್ಕೆಗಳು

1.4 ಲೀಟರ್ ಟರ್ಬೊ ಚಾರ್ಜ್ಡ್ ಪೆಟ್ರೋಲ್ - 140 ಅಶ್ವಶಕ್ತಿ

1.6 ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ - 204 ಅಶ್ವಶಕ್ತಿ

1.6 ಲೀಟರ್ ಟರ್ಬೊಚಾರ್ಜ್ಡ್ ಡೀಸೆಲ್

ಹ್ಯುಂಡೈ ತವರೂರಿಗೆ ಐ30 ಕೊಡುಗೆ; ಭಾರತಕ್ಕಿಲ್ಲ ಸಿಹಿ ಸುದ್ದಿ!

ಈ ಪೈಕಿ 1.4 ಲೀಟರ್ ಪೆಟ್ರೋಲ್ ಹಾಗೂ 1.6 ಲೀಟರ್ ಡೀಸೆಲ್ ಎಂಜಿನ್ ಎಂಜಿನ್ ಗಳು ಸ್ಮಾರ್ಟ್, ಮಾರ್ಡನ್ ಹಾಗೂ ಪ್ರೀಮಿಯಂ ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ. ಅದೇ ಹೊತ್ತಿಗೆ 1.6 ಲೀಟರ್ ಪೆಟ್ರೋಲ್ ಎಂಜಿನ್ ಗಳು ಸ್ಪೋರ್ಟ್ಸ್ ಹಾಗೂ ಸ್ಪೋರ್ಟ್ಸ್ ಪ್ರೀಮಿಯಂ ವೆರಿಯಂಟ್ ಗಳಲ್ಲಿ ಸಿಗಲಿದೆ.

ಹ್ಯುಂಡೈ ತವರೂರಿಗೆ ಐ30 ಕೊಡುಗೆ; ಭಾರತಕ್ಕಿಲ್ಲ ಸಿಹಿ ಸುದ್ದಿ!

ಹಾಗಿದ್ದರೂ ಗೇರ್ ಬಾಕ್ಸ್ ಬಗ್ಗೆ ಮಾಹಿತಿಯನ್ನು ಸಂಸ್ಥೆಯು ಹೊರಗೆಡವಿಲ್ಲ. ಇದು ಆರು ಸ್ಪೀಡ್ ಮ್ಯಾನುವಲ್ ಅಥವಾ ಏಳು ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಹ್ಯುಂಡೈ ತವರೂರಿಗೆ ಐ30 ಕೊಡುಗೆ; ಭಾರತಕ್ಕಿಲ್ಲ ಸಿಹಿ ಸುದ್ದಿ!

ನೂತನ 2017 ಹ್ಯುಂಡೈ ಐ30 ಆವೃತ್ತಿಯು ಸಂಪೂರ್ಣ ಎಲ್ ಇಡಿ ಹೆಡ್ ಲೈಟ್, ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಎಲ್ ಇಡಿ ಟರ್ನ್ ಇಂಡಿಕೇಟರ್, ಎಲ್ ಇಡಿ ಟೈಲ್ ಲೈಟ್, ಹೀಟಡ್ ಮಿರರ್ ಜೊತೆ ಎಲೆಕ್ಟ್ರಿಕ್ ಹೊಂದಾಣಿಕೆ ಹಾಗೂ ಪವರ್ ಫೋಲ್ಡಿಂಗ್ ಮುಂತಾದ ಸೌಲಭ್ಯಗಳಿರಲಿದೆ.

ಹ್ಯುಂಡೈ ತವರೂರಿಗೆ ಐ30 ಕೊಡುಗೆ; ಭಾರತಕ್ಕಿಲ್ಲ ಸಿಹಿ ಸುದ್ದಿ!

ಇನ್ನು 18 ಇಂಚುಗಳ ಅಲಾಯ್ ವೀಲ್, ಡ್ಯುಯಲ್ ಮಫ್ಲರ್ ಟಿಪ್ಸ್, ಲೆಥರ್ ಸ್ಟೀರಿಂಗ್ ವೀಲ್, ಹೀಟಡ್ ಫ್ರಂಟ್ ಸೀಟು, ಎಂಟು ಇಂಚುಗಳ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ನೇವಿಗೇಷನ್, ಆಪಲ್ ಕಾರ್ ಪ್ಲೇ ಸಪೋರ್ಟ್, ಏಳು ಸ್ಪೀಕರ್, ಜೆಬಿಎಲ್ ಪ್ರೀಮಿಯಂ ಸೌಂಡ್ ಸಿಸ್ಟಂ ಸಹ ಇರಲಿದೆ.

ಹ್ಯುಂಡೈ ತವರೂರಿಗೆ ಐ30 ಕೊಡುಗೆ; ಭಾರತಕ್ಕಿಲ್ಲ ಸಿಹಿ ಸುದ್ದಿ!

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಏಳು ಏರ್ ಬ್ಯಾಗ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್‌ಸಿ), ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ ಮೆಂಟ್ (ವಿಎಸ್ ಎಂ), ಮುಂದುವರಿದ ಟ್ರಾಕ್ಷನ್ ಕಾರ್ನರಿಂಗ್ ಕಂಟ್ರೋಲ್ (ಎಟಿಸಿಸಿ), ಹಿಲ್ ಸ್ಟ್ಯಾರ್ಟ್ ಅಸಿಸ್ಟ್ ಕಂಟ್ರೋಲ್ (ಎಚ್ ಎಸಿ), ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ (ಬಿಎಸ್ ಡಿ) ಮತ್ತು ಎಮರ್ಜನ್ಸಿ ಸ್ಟಾಪ್ ಸಿಗ್ನಲ್ (ಇಎಸ್ ಎಸ್) ವ್ಯವಸ್ಥೆಗಳಿರಲಿದೆ.

ಹ್ಯುಂಡೈ ತವರೂರಿಗೆ ಐ30 ಕೊಡುಗೆ; ಭಾರತಕ್ಕಿಲ್ಲ ಸಿಹಿ ಸುದ್ದಿ!

ಸದ್ಯ ಭಾರತದಲ್ಲಿ ಐ10 ಹಾಗೂ ಐ20 ಆವೃತ್ತಿಗಳು ಮಾರಾಟದಲ್ಲಿದ್ದು, ಭವಿಷ್ಯದಲ್ಲಿ ಐ30 ಸಹ ಬಿಡುಗಡೆಯಾಗಬಹುದೇ ಎಂಬುದಕ್ಕೆ ಸಂಬಂಧಿಸಿದಂತೆ ಸ್ಪಷ್ಟ ಮಾಹಿತಿಗಳಿಲ್ಲ. ಇಲ್ಲಿ ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಹ್ಯುಂಡೈ ಕಾಯುವಿಕೆ ನೀತಿಯನ್ನು ಅನುಸರಿಸುತ್ತಿರುವುದು ಕಂಡುಬಂದಿದೆ.

ವಿಡಿಯೋ ವೀಕ್ಷಿಸಿ

English summary
Hyundai Reveals Specifications Of The Third-Generation i30 [Video]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark