ಫಾರ್ಚ್ಯುನರ್, ಎಂಡೀವರ್ ಗೆ ಪ್ರತಿಸ್ಪರ್ಧಿ ಕಣಕ್ಕಿಳಿಸಲಿರುವ ಇಸುಝು

ಜಪಾನ್ ಮೂಲದ ವಾಹನ ಸಂಸ್ಥೆ ಇಸುಝು ಭಾರತಕ್ಕೆ ಕಾಲಿಟ್ಟು ಆಗಲೇ ನಾಲ್ಕು ವರ್ಷಗಳಾಗುತ್ತಾ ಬಂದಿದೆ. 2012ನೇ ಇಸವಿಯಲ್ಲಿ ಭಾರತಕ್ಕೆ ಪ್ರವೇಶ ಪಡೆದಿರುವ ಇಸುಝು ಡಿ-ಮ್ಯಾಕ್ ಪಿಕಪ್ ಮತ್ತು ಎಂಯು-7 ಕ್ರೀಡಾ ಬಳಕೆಯ ವಾಹನಗಳನ್ನು ಪರಿಚಯಿಸಿದೆ.

ಈ ಪೈಕಿ ಡಿಮ್ಯಾಕ್ಸ್, ವಾಣಿಜ್ಯ ಹಾಗೂ ಜೀವನಶೈಲಿ ವಾಹನಗಳತ್ತ ಗುರಿಯಾಗಿಸಿದ್ದರೆ ಎಯು-7 ಟೊಯೊಟಾ ಫಾರ್ಚ್ಯುನರ್, ಫೋರ್ಡ್ ಎಂಡೀವರ್ ಮತ್ತು ಮಿಟ್ಸುಬಿಸಿ ಪಜೆರೊ ಸ್ಪೋರ್ಟ್ ಆವೃತ್ತಿಗಳಿಗೆ ಪೈಪೋಟಿಯನ್ನು ಒಡ್ಡಿತ್ತು.

ಫಾರ್ಚ್ಯುನರ್, ಎಂಡೀವರ್ ಗೆ ಪ್ರತಿಸ್ಪರ್ಧಿ ಕಣಕ್ಕಿಳಿಸಲಿರುವ ಇಸುಝು

ಈಗ ಬಂದಿರುವ ಮಾಹಿತಿಗಳ ಪ್ರಕಾರ ಹೊಸ ತಲೆಮಾರಿನ ಎಂಯು-ಎಕ್ಸ್ ಭಾರತಕ್ಕೆ ಪರಿಚಯಿಸಲು ಇಸುಝು ತಯಾರಿ ನಡೆಸುತ್ತಿದೆ. ಇದು ಎಂಯು-7 ಮಾದರಿಯ ಉತ್ತರಾಧಿಕಾರಿಯಾಗಲಿದೆ.

ಫಾರ್ಚ್ಯುನರ್, ಎಂಡೀವರ್ ಗೆ ಪ್ರತಿಸ್ಪರ್ಧಿ ಕಣಕ್ಕಿಳಿಸಲಿರುವ ಇಸುಝು

ವರ್ಷಾಂತ್ಯದಲ್ಲೇ ಮಾರುಕಟ್ಟೆ ತಲುಪುವ ನಿರೀಕ್ಷೆ ಹೊಂದಿರುವ ಇಸುಝು ಎಂಯು-ಎಕ್ಸು, ಆಧುನಿಕ ವಿನ್ಯಾಸ ಶೈಲಿಯೊಂದಿಗೆ ಹೆಚ್ಚುವರಿ ವೈಶಿಷ್ಟ್ಯಗಳನ್ನು ಗಿಟ್ಟಿಸಿಕೊಳ್ಳಲಿದೆ.

ಫಾರ್ಚ್ಯುನರ್, ಎಂಡೀವರ್ ಗೆ ಪ್ರತಿಸ್ಪರ್ಧಿ ಕಣಕ್ಕಿಳಿಸಲಿರುವ ಇಸುಝು

ಇಸುಝು ಎಂಯು-ಎಕ್ಸ್ 23ರಿಂದ 27 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿದೆ. ಅಲ್ಲದೆ ಷೆವರ್ಲೆ ಜೊತೆಗೆ ತಳಹದಿ ಹಂಚಿಕೊಂಡಿರುವುದರಿಂದ ಟ್ರೈಲ್ ಬ್ಲೇಜರ್ ಗೆ ಕೆಲವೊಂದು ಸಾಮ್ಯತೆಗಳನ್ನು ಪಡೆದಿದೆ.

ಫಾರ್ಚ್ಯುನರ್, ಎಂಡೀವರ್ ಗೆ ಪ್ರತಿಸ್ಪರ್ಧಿ ಕಣಕ್ಕಿಳಿಸಲಿರುವ ಇಸುಝು

ದೊಡ್ಡದಾದ ಹೆಡ್ ಲೈಟ್ ಜೊತೆಗೆ ಪ್ರೊಜೆಕ್ಟರ್ ಗಳು, ಎಲ್ ಇಡಿ ಡೈಟೈಮ್ ರನ್ನಿಂಗ್ ಲೈಟ್ಸ್, 16 ಹಾಗೂ 17 ಇಂಚುಗಳ ಅಲಾಯ್ ಚಕ್ರಗಳು ಮುಂತಾದ ವ್ಯವಸ್ಥೆಗಳು ಕಂಡುಬರಲಿದೆ.

ಫಾರ್ಚ್ಯುನರ್, ಎಂಡೀವರ್ ಗೆ ಪ್ರತಿಸ್ಪರ್ಧಿ ಕಣಕ್ಕಿಳಿಸಲಿರುವ ಇಸುಝು

ಮ್ಯಾನುವಲ್ ಜೊತೆಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನಿಂದ ನಿಯಂತ್ರಿಸಲ್ಪಡುವ ಇಸುಝು ಎಂಯು-ಎಕ್ಸ್, ಹಳೆಯ ಮಾದರಿಗಿಂತಲೂ 10 ಎಂಎಂ ಜಾಸ್ತಿ ಗ್ರೌಂಡ್ ಪಡೆಯಲಿದ್ದು, ಒಟ್ಟು 230 ಎಂಎಂ ಗಿಟ್ಟಿಸಿಕೊಳ್ಳಲಿದೆ.

ಫಾರ್ಚ್ಯುನರ್, ಎಂಡೀವರ್ ಗೆ ಪ್ರತಿಸ್ಪರ್ಧಿ ಕಣಕ್ಕಿಳಿಸಲಿರುವ ಇಸುಝು

ಕಾರಿನೊಳಗೆ ಪ್ರೀಮಿಯಂ ಜೊತೆಗೆ ಗರಿಷ್ಠ ತಂತ್ರಗಾರಿಕೆಗೆ ಆದ್ಯತೆ ಕೊಡಲಾಗಿದ್ದು, ಎಂಟು ಇಂಚುಗಳ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಬಹು ಕ್ರಿಯಾತ್ಮಕ ಸ್ಟೀರಿಂಗ್ ವೀಲ್ ಹಾಗೂ ಕ್ರೂಸ್ ಕಂಟ್ರೋಲ್ ಮುಂತಾದ ವ್ಯವಸ್ಥೆಗಳಿರಲಿದೆ.

ಫಾರ್ಚ್ಯುನರ್, ಎಂಡೀವರ್ ಗೆ ಪ್ರತಿಸ್ಪರ್ಧಿ ಕಣಕ್ಕಿಳಿಸಲಿರುವ ಇಸುಝು

ಸುರಕ್ಷತೆಯ ವಿಚಾರವನ್ನು ಗಮನಿಸಿದಾಗ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಎಮರ್ಜನ್ಸಿ ಬ್ರೇಕ್ ಅಸಿಸ್ಟ್, ಹಿಲ್ ಸ್ಟ್ಯಾರ್ಟ್ ಅಸಿಸ್ಟ್, ರಿವರ್ಸಿಂಗ್ ಕ್ಯಾಮೆರಾ, ರಿಯರ್ ಪಾರ್ಕ್ ಅಸಿಸ್ಟ್ ಸೆನ್ಸಾನ್ ಮತ್ತು ಎಂಜಿನ್ ಇಂಮೊಬಿಲೈಜರ್ ಇತ್ಯಾದಿ ವ್ಯವಸ್ಥೆಗಳಿರಲಿದೆ.

ಫಾರ್ಚ್ಯುನರ್, ಎಂಡೀವರ್ ಗೆ ಪ್ರತಿಸ್ಪರ್ಧಿ ಕಣಕ್ಕಿಳಿಸಲಿರುವ ಇಸುಝು

ಅಂದ ಹಾಗೆ ನೂತನ ಇಸುಝು ಎಂಯು-ಎಕ್ಸ್ 3,0 ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 360 ಎನ್ ಎಂ ತಿರುಗುಬಲದಲ್ಲಿ 163 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಐದು ಸ್ಪೀಡ್ ಮ್ಯಾನುವಲ್ ಜೊತೆಗೆ ಐದು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇರುತ್ತದೆ.

Most Read Articles

Kannada
English summary
Isuzu MU-X India Launch 2016-end; Endeavour & Fortuner Competitor
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X