ವಿಮಾನಯಾನಕ್ಕೆ ಗೌರವ; ಲಂಬೋ ಹ್ಯುರಕನ್ ಎವಿಯೊ ಸೀಮಿತ ಆವೃತ್ತಿ ಬಿಡುಗಡೆ

Written By:

ಇಟಲಿಯ ಸೂಪರ್ ಕಾರು ಸಂಸ್ಥೆ ಲಂಬೋರ್ಗಿನಿ, ಅತಿ ನೂತನ ಹ್ಯುರಕನ್ ಎವಿಯೊ ಸೀಮಿತ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಇದು 3.71 ಕೋಟಿ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

ವಿಮಾನಯಾನ ಉದ್ಯಮಕ್ಕೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಎವಿಯೊ ಮೊನಿಕರ್ ಜೊತೆ ಸೇರಿಕೊಂಡು ನೂತನ ವಿಶೇಷ ಆವೃತ್ತಿಯನ್ನು ನಿರ್ಮಿಸಲಾಗಿದೆ. ಫೈಟರ್ ಜೆಟ್ ಗಳಿಂದ ಸ್ಫೂರ್ತಿ ಪಡೆದು ನಿರ್ಮಿಸಿರುವ ಹ್ಯುರಕನ್ ಎವಿಯೊ, ಹೊರಮೈ ಹಾಗೂ ಒಳಮೈಯಲ್ಲಿ ವಿಶಿಷ್ಟ ವಿನ್ಯಾಸವನ್ನು ಕಾಪಾಡಿಕೊಂಡಿದೆ.

ವಿಮಾನಯಾನಕ್ಕೆ ಗೌರವ; ಲಂಬೋ ಹ್ಯುರಕನ್ ಎವಿಯೊ ಸೀಮಿತ ಆವೃತ್ತಿ ಬಿಡುಗಡೆ

ಪ್ರಸಕ್ತ ಸಾಲಿನಲ್ಲಿ ನಡೆದ ಜಿನೆವಾ ಮೋಟಾರು ಶೋದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿರುವ ಲಂಬೋರ್ಗಿನಿ ಹ್ಯುರಕನ್ ಎವಿಯೊ ಸೀಮಿತ 250 ಯುನಿಟ್ ಗಳಷ್ಟು ಮಾತ್ರ ನಿರ್ಮಾಣವಾಗಲಿದೆ.

ವಿಮಾನಯಾನಕ್ಕೆ ಗೌರವ; ಲಂಬೋ ಹ್ಯುರಕನ್ ಎವಿಯೊ ಸೀಮಿತ ಆವೃತ್ತಿ ಬಿಡುಗಡೆ

ನೂತನ ಕಾರಿನಲ್ಲಿ ಎಲ್63 ಲಾಂಛನವು ಪ್ರಮುಖ ವೈಶಿಷ್ಟ್ಯವಾಗಿರಲಿದೆ. ಇಲ್ಲಿ ಎಲ್ ಎಂಬುದು ಲಂಬೋರ್ಗಿನಿ ಹಾಗೂ 63 ಎಂಬುದು ಸಂಸ್ಥೆಯು ಸ್ಥಾಪನೆಗೊಂಡ ಇಸವಿಯನ್ನು ಸೂಚಿಸುತ್ತದೆ.

ವಿಮಾನಯಾನಕ್ಕೆ ಗೌರವ; ಲಂಬೋ ಹ್ಯುರಕನ್ ಎವಿಯೊ ಸೀಮಿತ ಆವೃತ್ತಿ ಬಿಡುಗಡೆ

ಐದು ಆಕರ್ಷಕ ಬಣ್ಣಗಳಲ್ಲಿ ದೊರೆಯಲಿದೆ. ಅವುಗಳೆಂದರೆ ಗ್ರೆಗಿಯೊ ಫಾಲ್ಗೊ ಜೊತೆ ಪಿಯರ್ಲ್ ಸೆಂಟ್ ಫಿನಿಶ್, ಬ್ಲೂ ಗ್ರಿಫೊ, ಗ್ರೆಗಿಯೊ ನಿಬ್ಬಿಯೊ, ಗ್ರೆಗಿಯೊ ವೋಲ್ಕನೋ ಮತ್ತು ವೆರ್ಡೆ ಟರ್ಬೈನ್.

ವಿಮಾನಯಾನಕ್ಕೆ ಗೌರವ; ಲಂಬೋ ಹ್ಯುರಕನ್ ಎವಿಯೊ ಸೀಮಿತ ಆವೃತ್ತಿ ಬಿಡುಗಡೆ

ಇಟಲಿಯ ಸೂಪರ್ ಕಾರು ತಯಾರಕ ಆ್ಯಡ್ ಪರ್ಸನಮ್ ಕಸ್ಟಮೈಸ್ಡ್ ಪ್ರೋಗ್ರಾಂ ಮುಖಾಂತರ ವಿಶೇಷವಾಗಿ ಮಾರ್ಪಾಡುಗೊಳಿಸುವ ಅವಕಾಶವೂ ಇರುತ್ತದೆ.

ವಿಮಾನಯಾನಕ್ಕೆ ಗೌರವ; ಲಂಬೋ ಹ್ಯುರಕನ್ ಎವಿಯೊ ಸೀಮಿತ ಆವೃತ್ತಿ ಬಿಡುಗಡೆ

ಅಂದ ಹಾಗೆ ಹ್ಯುರಕನ್ ಎಲ್ ಪಿ 610-4 ಕೂಪೆ ಹಾಗೂ ಸ್ಪೈಡರ್ ಮಾದರಿಗೆ ಸಮಾನವಾದ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ. ಇದರಲ್ಲಿರುವ 5.2 ಲೀಟರ್ ವಿ10 ಎಂಜಿನ್ 560 ಎನ್ ಎಂ ತಿರುಗುಬಲದಲ್ಲಿ 602 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ವಿಮಾನಯಾನಕ್ಕೆ ಗೌರವ; ಲಂಬೋ ಹ್ಯುರಕನ್ ಎವಿಯೊ ಸೀಮಿತ ಆವೃತ್ತಿ ಬಿಡುಗಡೆ

ಅಲ್ಲದೆ 3.2 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗ ಹಾಗೂ ಗಂಟೆಗೆ ಗರಿಷ್ಠ 325 ಕೀ.ಮೀ. ವೇಗವನ್ನು ಕಾಪಾಡಿಕೊಳ್ಳಲಿದೆ.

English summary
Lamborghini Launches Ultra Rare Huracan Avio In India
Story first published: Friday, September 23, 2016, 17:13 [IST]
Please Wait while comments are loading...

Latest Photos