ಭಾರತದಲ್ಲೇ ನಿರ್ಮಾಣವಾಗಲಿರುವ ಲೆಕ್ಸಸ್ ಕಾರುಗಳು

Written By:

ಮುಂದಿನ ವರ್ಷದಿಂದ ಭಾರತದಲ್ಲಿ ಲೆಕ್ಸಸ್ ಕಾರುಗಳ ಮಾರಾಟ ಆರಂಭವಾಗಲಿದೆ. ಆರಂಭದಲ್ಲಿ ಲೆಕ್ಸಸ್ ಕಾರುಗಳು ಸಂಪೂರ್ಣವಾಗಿ ಆಮದಾಗಲಿದೆ. ಬಳಿಕ ಭವಿಷ್ಯದಲ್ಲಿ ಸ್ಥಳೀಯವಾಗಿ ಜೋಡಣೆ ಕಾರ್ಯ ಆರಂಭಿಸಲಿದೆ.

ಲೆಕ್ಸಸ್ ಮಾತೃಸಂಸ್ಥೆಯಾಗಿರುವ ಟೊಯೊಟಾ ಬೆಂಗಳೂರಿನಲ್ಲಿ ಘಟಕವನ್ನು ತೆರೆದುಕೊಳ್ಳಲಿದ್ದು, ಮೇಕ್ ಇನ್ ಇಂಡಿಯಾ ಯೋಜನೆಯ ಜೊತೆ ಕೈಜೋಡಿಸಲಿದೆ.

ಲೆಕ್ಸಸ್

ಸಂಸ್ಥೆಯ ಘಟಕದಲ್ಲಿ ಆರಂಭದಲ್ಲಿ ಹೈಬ್ರಿಡ್ ಕಾರುಗಳು ನಿರ್ಮಾಣವಾಗಲಿದೆ. ಬಲ್ಲ ಮೂಲಗಳ ಪ್ರಕಾರ ಲೆಕ್ಸಸ್ ಇಎಸ್ 300ಎಚ್ ಕಾರಿನ ನಿರ್ಮಾಣ ಮೊದಲು ಆರಂಭವಾಗಲಿದೆ.

ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ಕಾರುಗಳ ಮಾರಾಟಕ್ಕೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರಕಾರದ ಮಹತ್ತರ 'ಫೇಮ್' ಯೋಜನೆಯ ಪ್ರಯೋಜನವನ್ನು ಲೆಕ್ಸಸ್ ಕಾರುಗಳು ಗಿಟ್ಟಿಸಿಕೊಳ್ಳಲಿದೆ. ಇದು ಸ್ಪರ್ಧಾತ್ಮಕ ಬೆಲೆಗಳಲ್ಲಿ ಮಾರಾಟ ಮಾಡಲು ನೆರವಾಗಲಿದೆ.

ಟೊಯೊಟಾ ಸಂಸ್ಥೆಯು ಆಗಲೇ ಕ್ಯಾಮ್ರಿ ಹೈಬ್ರಿಡ್ ಕಾರನ್ನು ದೇಶದಲ್ಲಿ ಉತ್ಪಾದಿಸುತ್ತಿದೆ. ಲೆಕ್ಸಸ್ ಕಾರುಗಳು ದೇಶದಲ್ಲಿ ಹೆಚ್ಚಿನ ಜನಪ್ರಿಯತೆ ಕಾಯ್ದುಕೊಳ್ಳುವ ನಿರೀಕ್ಷೆಯಲ್ಲಿದೆ.

ಭಾರತದಲ್ಲಿ ಕ್ರೀಡಾ ಬಳಕೆಯ ವಾಹನಗಳಿಗೆ ಮೂಡಿ ಬಂದಿರುವ ಬೇಡಿಕೆಯನ್ನು ಮನಗಂಡಿರುವ ಲೆಕ್ಸಸ್ ದೇಶದಲ್ಲಿ ಹೈಬ್ರಿಡ್ ಜೊತೆಗೆ ಪೆಟ್ರೋಲ್ ಹಾಗೂ ಡೀಸೆಲ್ ಎಲ್ ಎಕ್ಸ್ ಎಸ್ ಯುವಿ ಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

English summary
Lexus To Assemble Cars Locally In India
Story first published: Tuesday, September 27, 2016, 16:53 [IST]
Please Wait while comments are loading...

Latest Photos

X