ಟೊಯೊಟಾ ಲಗ್ಷುರಿ ಕಾರು ಬ್ರಾಂಡ್ ಲೆಕ್ಸಸ್ 2017ರಲ್ಲಿ ಎಂಟ್ರಿ

ಟೊಯೊಟಾ ಐಷಾರಾಮಿ ಕಾರು ಬ್ರಾಂಡ್ ಲೆಕ್ಸಸ್ 2017 ಮಾರ್ಚ್ ವೇಳೆಯಾಗುವಾಗ ಭಾರತವನ್ನು ಪ್ರವೇಶಿಸಲಿದೆ.

By Nagaraja

ಜಪಾನ್ ಮೂಲದ ಪ್ರತಿಷ್ಠಿತ ಟೊಯೊಟಾ ಸಂಸ್ಥೆಯ ಐಷಾರಾಮಿ ಕಾರು ಬ್ರಾಂಡ್ ಆಗಿರುವ ಲೆಕ್ಸಸ್, 2017ನೇ ಸಾಲಿನ ಮಾರ್ಚ್ ವೇಳೆಯಾಗುವ ಭಾರತ ಮಾರುಕಟ್ಟೆಯನ್ನು ಪ್ರವೇಶ ಪಡೆಯಲಿದೆ. ಇದರೊಂದಿಗೆ ಐಷಾರಾಮಿ ಕಾರು ವಿಭಾಗದಲ್ಲಿ ಪೈಪೋಟಿ ಮತ್ತಷ್ಟು ಹೆಚ್ಚಲಿದೆ.

ಟೊಯೊಟಾ ಲಗ್ಷುರಿ ಕಾರು ಬ್ರಾಂಡ್ ಲೆಕ್ಸಸ್ 2017ರಲ್ಲಿ ಎಂಟ್ರಿ

ಭಾರತದಲ್ಲಿ ಲೆಕ್ಸಸ್ ಆರ್ ಎಕ್ಸ್450 ಮತ್ತು ಇಎಸ್ ಮಾದರಿಗಳು ಬಿಡುಗಡೆಯಾಗುವ ಸಾಧ್ಯತೆಗಳಿವೆ. ಈ ಸಂಬಂಧ ಸಂಸ್ಥೆಯಿಂದ ಇನ್ನಷ್ಟೇ ಪ್ರಕಟಣೆ ಹೊರಬೀಳಲಿದೆ.

ಟೊಯೊಟಾ ಲಗ್ಷುರಿ ಕಾರು ಬ್ರಾಂಡ್ ಲೆಕ್ಸಸ್ 2017ರಲ್ಲಿ ಎಂಟ್ರಿ

ಭಾರತದಲ್ಲಿ ಬಿಡುಗಡೆಯಾಗಲಿರುವ ಮೊದಲೆರಡು ಲೆಕ್ಸಸ್ ಮಾದರಿಗಳು ಹೈಬ್ರಿಡ್ ತಂತ್ರಗಾರಿಕೆಯನ್ನು ಪಡೆಯಲಿದೆ. ತನ್ಮೂಲಕ ಹೆಚ್ಚು ಪರಿಸರ ಸ್ನೇಹಿ ಎನಿಸಿಕೊಳ್ಳಲಿದೆ.

ಟೊಯೊಟಾ ಲಗ್ಷುರಿ ಕಾರು ಬ್ರಾಂಡ್ ಲೆಕ್ಸಸ್ 2017ರಲ್ಲಿ ಎಂಟ್ರಿ

ಭಾರತದಲ್ಲಿ ಕಾಲಿಡುವುದರೊಂದಿಗೆ ಬೆಂಗಳೂರು ಸೇರಿದಂತೆ ನಾಲ್ಕು ಪ್ರಮುಖ ಕೇಂದ್ರಗಳಲ್ಲಿ ಲೆಕ್ಸಸ್ ಶೋ ರೂಂ ತೆರೆದುಕೊಳ್ಳಲಿದೆ. ಉಳಿದ ಮೂರು ಕೇಂದ್ರಗಳು ದೆಹಲಿ ಮತ್ತು ಮುಂಬೈ ಹಂಚಿಕೊಳ್ಳಲಿದೆ.

ಟೊಯೊಟಾ ಲಗ್ಷುರಿ ಕಾರು ಬ್ರಾಂಡ್ ಲೆಕ್ಸಸ್ 2017ರಲ್ಲಿ ಎಂಟ್ರಿ

ಹಾಗಿದ್ದರೂ ಲೆಕ್ಸಸ್ ಜೊತೆ ಟೊಯೊಟಾ ತನ್ನ ಸರ್ವಿಸ್ ಜಾಲವನ್ನು ಹಂಚಿಕೊಳ್ಳಲಿದೆ. ಇದು ಲೆಕ್ಸಸ್ ಕಾರುಗಳನ್ನು ಸರ್ವಿಸ್ ಮಾಡಲು ಸಹಕಾರಿಯಾಗಲಿದೆ.

ಟೊಯೊಟಾ ಲಗ್ಷುರಿ ಕಾರು ಬ್ರಾಂಡ್ ಲೆಕ್ಸಸ್ 2017ರಲ್ಲಿ ಎಂಟ್ರಿ

ಇನ್ನು 2017 ವರ್ಷಾಂತ್ಯದ ವೇಳೆಯಾಗುವ ಎಲ್ ಎಕ್ಸ್450 ಡೀಸೆಲ್, ಎಲ್ ಎಕ್ಸ್570 ಪೆಟ್ರೋಲ್ ಮತ್ತು ಎನ್ ಎಕ್ಸ್ ಮಾದರಿಗಳು ಭಾರತದತ್ತ ಹೆಜ್ಜೆಯನ್ನಿಡಲಿದೆ.

ಟೊಯೊಟಾ ಲಗ್ಷುರಿ ಕಾರು ಬ್ರಾಂಡ್ ಲೆಕ್ಸಸ್ 2017ರಲ್ಲಿ ಎಂಟ್ರಿ

ದೇಶದಲ್ಲಿ ಆರ್ ಎಕ್ಸ್450 ಎಚ್ ಕಾರಿನ ಎಕ್ಸ್ ಶೋ ರೂಂ ಬೆಲೆಯು 90 ಲಕ್ಷಕ್ಕೂ ಹೆಚ್ಚು ದುಬಾರಿಯೆನಿಸಲಿದೆ. ಹಾಗೆಯೇ ಇಎಸ್ 300ಎಚ್ ಮಾದರಿಯು ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 60 ಲಕ್ಷ ರು.ಗಳಷ್ಟು ಬೆಲೆ ಬಾಳಲಿದೆ.

ಟೊಯೊಟಾ ಲಗ್ಷುರಿ ಕಾರು ಬ್ರಾಂಡ್ ಲೆಕ್ಸಸ್ 2017ರಲ್ಲಿ ಎಂಟ್ರಿ

ಈ ಎರಡು ಮಾದರಿಗಳು ರಫ್ತು ಆಗಲಿರುವುದರಿಂದ ಬೆಲೆ ಮತ್ತಷ್ಟು ದುಬಾರಿಯಾಗಲಿದೆ. 2018ನೇ ಸಾಲಿನಲ್ಲಿ ಮಗದೊಂದು ಎಲ್ ಎಸ್600ಎಚ್ ಕಾರನ್ನು ನಿರೀಕ್ಷೆ ಮಾಡಬಹುದಾಗಿದೆ.

Most Read Articles

Kannada
English summary
Lexus To Launch Its Cars In India In March 2017
Story first published: Saturday, December 24, 2016, 16:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X