ಹೆಚ್ಚು ಮೈಲೇಜ್ ನೀಡಿಲ್ಲ ಎಂದಾದರೆ ಮಹೀಂದ್ರ ಬ್ಲೇಝೋ ಟ್ರಕ್ ಹಿಂತುರಿಗಿಸಿ!

Written By:

ಮಹೀಂದ್ರ ಸಂಸ್ಥೆಯ ಭಾಗವಾಗಿರುವ ಮಹೀಂದ್ರ ಟ್ರಕ್ ಮತ್ತು ಬಸ್ ವಿಭಾಗವು (ಎಂಟಿಬಿಡಿ), ಭಾರಿ ವಾಣಿಜ್ಯ ವಾಹನ ವಿಭಾಗದಲ್ಲಿ ಅತಿ ನೂತನ ಬ್ಲೇಝೋ (Blazo) ಟ್ರಕ್ ಬಿಡುಗಡೆಗೊಳಿಸಿದೆ. ಕರ್ನಾಟಕದಲ್ಲಿ ಮಹೀಂದ್ರ ಬ್ಲೇಝೋ ಟ್ರಕ್ ಶ್ರೇಣಿಯು 20ರಿಂದ 35 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಮಹೀಂದ್ರ ಬ್ಲೇಝೋ ಟ್ರಕ್ ಶ್ರೇಣಿಯು ಭಾರಿ ಗಾತ್ರದ ಸರಕು ಸಾಗಣಿಕೆಯಿಂದ ಹಿಡಿದು, ಟ್ರ್ಯಾಕ್ಟರ್ ಟ್ರೈಲರ್, ಟಿಪ್ಪರ್ ಮುಂತಾದವುಗಳನ್ನು ಒಳಗೊಂಡಿರಲಿದ್ದು, ನೂತನ ಫ್ಯೂಯಲ್ ಸ್ಮಾರ್ಟ್ ತಂತ್ರಗಾರಿಕೆಯನ್ನು ಆಳವಡಿಸಲಾಗಿದೆ.

ಮಹೀಂದ್ರ ಬ್ಲೇಝೋ ಶ್ರೇಣಿಯ ಟ್ರಕ್ ಗಳು ಬಿಡುಗಡೆ

ನೂತನ ಬ್ಲೇಝೋ ಟ್ರಕ್ ನಲ್ಲಿ ಸಿಆರ್ ಡಿ ಎ ಎಂಜಿನ್ ನೊಂದಿಗೆ ಫ್ಯೂಯಲ್ ಸ್ಮಾರ್ಟ್ ತಂತ್ರಜ್ಞಾನವನ್ನು ಪರಿಚಯಿಸಲಾಗುತ್ತದೆ.

ಮಹೀಂದ್ರ ಬ್ಲೇಝೋ ಶ್ರೇಣಿಯ ಟ್ರಕ್ ಗಳು ಬಿಡುಗಡೆ

ಅದೇ ರೀತಿ ಪ್ರಯಾಣಿಕ ಕಾರುಗಳಲ್ಲಿ ಕಾಣಸಿಗುವಂತಹ ಮೂರು ಮಲ್ಟಿ ಡ್ರೈವ್ ಮೋಡ್ ಆಯ್ಕೆಗಳು ಇದರಲ್ಲಿರುತ್ತದೆ. ಅವುಗಳೆಂದರೆ, ಟರ್ಬೊ, ಹೆವಿ ಮತ್ತು ಲೈಟ್.

ಮಹೀಂದ್ರ ಬ್ಲೇಝೋ ಶ್ರೇಣಿಯ ಟ್ರಕ್ ಗಳು ಬಿಡುಗಡೆ

ರಸ್ತೆ ಪರಿಸ್ಥಿತಿ, ಹೊರುವ ಭಾರ ಇವೆಲ್ಲದಕ್ಕೂ ಅನುಗುಣವಾಗಿ ಚಾಲನಾ ವಿಧಗಳನ್ನು ಚಾಲಕರಿಗೆ ಬದಲಾಯಿಸುವ ಅವಕಾಶವಿರುತ್ತದೆ.

ಮಹೀಂದ್ರ ಬ್ಲೇಝೋ ಶ್ರೇಣಿಯ ಟ್ರಕ್ ಗಳು ಬಿಡುಗಡೆ

ಇದೇ ಸಂದರ್ಭದಲ್ಲಿ ಎರಡು ಗ್ಯಾರಂಟಿಗಳನ್ನು ಗ್ರಾಹಕರಿಗೆ ಮಹೀಂದ್ರ ಒದಗಿಸುತ್ತದೆ. ಇದು ಈಗಿರುವ ಟ್ರಕ್ ಗಿಂತಲೂ ಹೆಚ್ಚಿನ ಇಂಧನ ಕ್ಷಮತೆಯನ್ನು ನೀಡಲಿದೆ. ಹಾಗೊಂದು ವೇಳೆ ಇದು ಸಾಧ್ಯವಾಗದಿದ್ದಲ್ಲಿ ನಿಮ್ಮ ಟ್ರಕ್ ಹಿಂತಿರುಗಿಸಬಹುದಾಗಿದೆ.

ಮಹೀಂದ್ರ ಬ್ಲೇಝೋ ಶ್ರೇಣಿಯ ಟ್ರಕ್ ಗಳು ಬಿಡುಗಡೆ

ಅದೇ ಹೊತ್ತಿಗೆ ಸಮಯೋಚಿತವಾಗಿ ಬ್ರೇಕ್ ಡೌನ್ ಸೇವೆಯನ್ನು ನೀಡಲಿದ್ದು, 48 ತಾಸಿನೊಳಗೆ ಟ್ರಕ್ ರಸ್ತೆಗೆ ಮರು ಪ್ರವೇಶಿಸಲಿದೆ. ಇದು ಸಾಧ್ಯವಾಗದಿದ್ದಲ್ಲಿ ಸಂಸ್ಥೆಯು ಖುದ್ದಾಗಿ 1000 ರುಪಾಯಿಗಳನ್ನು ಗ್ರಾಹಕರಿಗೆ ಪಾವತಿಸಲಿದೆ.

ಮಹೀಂದ್ರ ಬ್ಲೇಝೋ ಶ್ರೇಣಿಯ ಟ್ರಕ್ ಗಳು ಬಿಡುಗಡೆ

ಇನ್ನು ನೂತನ ಬ್ಲೇಝೋ ಶ್ರೇಣಿಯ ಟ್ರಕ್ ಗಳಿಗೆ ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ಪ್ರಮುಖ ಪ್ರಚಾರ ರಾಯಭಾರಿಯಾಗಲಿದ್ದಾರೆ.

ಮಹೀಂದ್ರ ಬ್ಲೇಝೋ ಶ್ರೇಣಿಯ ಟ್ರಕ್ ಗಳು ಬಿಡುಗಡೆ

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಲೇಝೋ 25 ಟಿಪ್ಪರ್ ಮತ್ತು ಬ್ಲೇಝೋ 37 ಟ್ರಕ್ ಮಾದರಿಗಳನ್ನು ಪರಿಚಯಿಸಲಾಗಿತ್ತು. ಈ ಪೈಕಿ 25,000 ಕೆ.ಜಿ ತೂಕವನ್ನು ಹೊಂದಿರುವ ಬ್ಲೇಝೋ 25 ಗಂಟೆಗೆ 60 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಮಹೀಂದ್ರ ಬ್ಲೇಝೋ ಶ್ರೇಣಿಯ ಟ್ರಕ್ ಗಳು ಬಿಡುಗಡೆ

7.2 ಲೀಟರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಬ್ಲೇಝೋ 25 ಆವೃತ್ತಿಯು 950 ಎನ್ ಎಂ ತಿರುಗುಬಲದಲ್ಲಿ 274 ಅಶ್ವಶಕ್ತಿಯನ್ನು ಉತ್ಪಾದಿಸಲಿದ್ದು, ಒಂಬತ್ತು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ. ಅಲ್ಲದೆ ಇದರಲ್ಲಿ 250 ಲೀಟರ್ ಸಾಮರ್ಥ್ಯದ ಡೀಸೆಲ್ ಟ್ಯಾಂಕ್ ಜೋಡಿಸಲಾಗಿದೆ.

ಮಹೀಂದ್ರ ಬ್ಲೇಝೋ ಶ್ರೇಣಿಯ ಟ್ರಕ್ ಗಳು ಬಿಡುಗಡೆ

ಇನ್ನೊಂದೆಡೆ 7.2 ಲೀಟರ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸ್ಪಡುವ ಬ್ಲೇಝೋ 37 ಟ್ರಕ್, 800 ಎನ್ ಎಂ ತಿರುಗುಬಲದಲ್ಲಿ 220 ಅಶ್ವಶಕ್ತಿ ಉತ್ಪಾದಿಸಲಿದ್ದು, ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಮಹೀಂದ್ರ ಬ್ಲೇಝೋ ಶ್ರೇಣಿಯ ಟ್ರಕ್ ಗಳು ಬಿಡುಗಡೆ

350 ಲೀಟರ್ ಡೀಸೆಲ್ ಟ್ಯಾಂಕ್ ಸಾಮರ್ಥ್ಯದ ಬ್ಲೇಝೋ 37 ಒಟ್ಟು ಭಾರ 37,000 ಕೆ.ಜಿ ಆಗಿದ್ದು, ಗಂಟೆಗೆ 80 ಕೀ.ಮೀ. ಗಳಷ್ಟು ವೇಗದಲ್ಲಿ ಸಂಚರಿಸಲಿದೆ.

English summary
Mahindra Launches Blazo Line Of Trucks In Karnataka
Story first published: Wednesday, June 15, 2016, 15:54 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark