ಮಹೀಂದ್ರ ನೂತನ ಎಲೆಕ್ಟ್ರಿಕ್ ಕಾರಿಗೆ ಹೊಸ ನಾಮಕರಣ

Written By:

ವಿದ್ಯುತ್ ಚಾಲಿತ ವಾಹನಗಳ ನಿರ್ಮಾಣದಲ್ಲಿ ಇನ್ನು ಒಂದು ಹೆಜ್ಜೆ ಮುಂದಿಟ್ಟಿರುವ ದೇಶದ ಮುಂಚೂಣಿಯ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯ ಭಾಗವಾಗಿರುವ ಮಹೀಂದ್ರ ಎಲೆಕ್ಟ್ರಿಕ್, ಅತಿ ನೂತನ ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ಇದಾದ ಬೆನ್ನಲ್ಲೇ ಟೀಸರ್ ಚಿತ್ರದ ಜೊತೆಗೆ ಹೊಸ ಎಲೆಕ್ಟ್ರಿಕ್ ಕಾರಿನ ಹೆಸರನ್ನು ಮಹೀಂದ್ರ ಬಹಿರಂಗ ಮಾಡಿದೆ. ಈ ಸಂಬಂಧ ಎಕ್ಸ್ ಕ್ಲೂಸಿಕ್ ಮಾಹಿತಿಗಳಿಗಾಗಿ ಸಂಪೂರ್ಣ ಲೇಖನವನ್ನು ಓದಿರಿ.

To Follow DriveSpark On Facebook, Click The Like Button
ಮಹೀಂದ್ರ ನೂತನ ಎಲೆಕ್ಟ್ರಿಕ್ ಕಾರಿಗೆ ಹೊಸ ನಾಮಕರಣ

ದೇಶದ ನಂ.1 ಎಲೆಕ್ಟ್ರಿಕ್ ನಿರ್ಮಾಣ ಸಂಸ್ಥೆ ಎಂಬ ಪದವಿ ಆಲಂಕರಿಸಿಕೊಂಡಿರುವ ಮಹೀಂದ್ರದ ನೂತನ ಎಲೆಕ್ಟ್ರಿಕ್ ವಾಹನ ಇ2ಒ ಪ್ಲಸ್ ಎಂಬ ಹೊಸ ನಾಮಕರಣವನ್ನು ಪಡೆದಿದೆ.

ಮಹೀಂದ್ರ ನೂತನ ಎಲೆಕ್ಟ್ರಿಕ್ ಕಾರಿಗೆ ಹೊಸ ನಾಮಕರಣ

ಇಲ್ಲಿ ಇ2ಒ ಎಂಬುದು ಆಮ್ಲಜನಕ ಶಕ್ತಿಯ ಸೂಚಕವಾದರೆ ಪ್ಲಸ್ ಎಂಬುದು ಗ್ರಾಹಕರಿಗೆ ಸಂಸ್ಥೆಯ ಧನಾತ್ಮಕ ಪರಿಣಾಮವನ್ನು ಬೀರಲಿದೆ.

ಮಹೀಂದ್ರ ನೂತನ ಎಲೆಕ್ಟ್ರಿಕ್ ಕಾರಿಗೆ ಹೊಸ ನಾಮಕರಣ

ಅತಿ ಶೀಘ್ರದಲ್ಲೇ ಮಹೀಂದ್ರ ಇ2ಒ ಪ್ಲಸ್ ಎಲೆಕ್ಟ್ರಿಕ್ ವಾಹನ ಬಿಡುಗಡೆಯಾಗಲಿದೆ. ಇದು ಶೈಲಿಯಿಂದ ಹಿಡಿದು ಚಾರ್ಜಿಂಗ್ ವರೆಗೆ ಹಿಂದಿನ ಮಾದರಿಗಿಂತಲೂ ಹೆಚ್ಚು ಪ್ರಭಾವಶಾಲಿ ಎನಿಸಿಕೊಂಡಿದೆ.

ಮಹೀಂದ್ರ ನೂತನ ಎಲೆಕ್ಟ್ರಿಕ್ ಕಾರಿಗೆ ಹೊಸ ನಾಮಕರಣ

ಶೂನ್ಯ ಮಾಲಿನ್ಯ, ಸುಲಭ ಚಾಲನೆ, ಕಡಿಮೆ ಚಾಲನೆ ವೆಚ್ಚ, ಮನೆಯಲ್ಲೇ ಚಾರ್ಜಿಂಗ್ ಹೀಗೆ ಒಂದಲ್ಲ ಎರಡಲ್ಲ ಅನೇಕ ಗುಣಗಳನ್ನು ಮಹೀಂದ್ರ ಎಲೆಕ್ಟ್ರಿಕ್ ಕಾರಿನೊಂದಿಗೆ ಲಭ್ಯವಾಗಲಿದೆ.

ಮಹೀಂದ್ರ ನೂತನ ಎಲೆಕ್ಟ್ರಿಕ್ ಕಾರಿಗೆ ಹೊಸ ನಾಮಕರಣ

ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ನೂತನ ಕಾರು ಗೇಮ್ ಚೇಂಜರ್ ಎನಿಸಿಕೊಳ್ಳಲಿದೆ ಎಂಬ ನಂಬಿಕೆಯನ್ನು ಸಂಸ್ಥೆ ವ್ಯಕ್ತಪಡಿಸಿದೆ.

ಮಹೀಂದ್ರ ನೂತನ ಎಲೆಕ್ಟ್ರಿಕ್ ಕಾರಿಗೆ ಹೊಸ ನಾಮಕರಣ

ಭಾರತದಲ್ಲಿ ಹೆಚ್ಚುತ್ತಿರುವ ಮಾಲಿನ್ಯ ಮಟ್ಟ ಹಾಗೂ ವಾಹನ ದಟ್ಟಣೆಯನ್ನು ಪರಿಗಣಿಸಿದಾಗ ಮಹೀಂದ್ರ ಎಲೆಕ್ಟ್ರಿಕ್ ವಾಹನ ಸೂಕ್ತ ಆಯ್ಕೆಯಾಗಿರಲಿದೆ.

ಮಹೀಂದ್ರ ನೂತನ ಎಲೆಕ್ಟ್ರಿಕ್ ಕಾರಿಗೆ ಹೊಸ ನಾಮಕರಣ

ಮುಂದಿನ ತಲೆಮಾರಿನ ಎಲೆಕ್ಟ್ರಿಕ್ ಕಾರಾಗಿರುವ ಇ2ಒ ಪ್ಲಸ್ ಸ್ಟೈಲಿಷ್ ಹೊರಮೈ ಹಾಗೂ ಒಳಮೈಯಲ್ಲಿ ಗರಿಷ್ಠ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

English summary
Mahindra Teases An Electric Vehicle For Indian Market
Story first published: Friday, October 7, 2016, 17:01 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark