ಸಂಕ್ರಾಂತಿ ಕೊಡುಗೆ; ಮಹೀಂದ್ರ ಕೆಯುವಿ100 ಭರ್ಜರಿ ಬಿಡುಗಡೆ

By Nagaraja

ಹೊಸ ವರ್ಷ ಆಗಮನವಾಗಿರುವಂತೆಯೇ ಸಂಕ್ರಾಂತಿ ಹಬ್ಬದ ಆಚರಣೆಯಲ್ಲಿರುವ ನಾಡಿನ ಜನತೆಗೆ ದೇಶದ ಎಸ್‌ಯುವಿ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಅತಿ ನೂತನ ಕೆಯುವಿ100 ಕಾರನ್ನು ಭರ್ಜರಿ ಬಿಡುಗಡೆ ಮಾಡಿದೆ. ಇದರ ಪ್ರಾರಂಭಿಕ ಬೆಲೆ 4.42 ಲಕ್ಷ ರು.ಗಳಾಗಿದ್ದು, ನಿಜಕ್ಕೂ ಪ್ರಭಾವಿ ಎನಿಸಿಕೊಂಡಿದೆ.

Also Read: ಮಹೀಂದ್ರ ಕೆಯುವಿ100 - ನೀವು ತಿಳಿದುಕೊಳ್ಳಬೇಕಾದ ಅಂಶಗಳು

ಇದಕ್ಕೂ ಮೊದಲು 'ಎಸ್101' ಎಂಬ ಕೋಡ್ ಪಡೆದುಕೊಂಡಿದ್ದ ಈ ಬಹುನಿರೀಕ್ಷಿತ ಕ್ರೀಡಾ ಬಳಕೆಯ ವಾಹನಕ್ಕೆ 'ಕೆಯುವಿ100' ಎಂಬ ನಾಮಕರಣ ಮಾಡಲಾಗಿತ್ತು. ಅಲ್ಲದೆ ಬಾಲಿವುಡ್‌ನ ಉದಯೋನ್ಮುಖ ನಟ ವರುಣ್ ಧವನ್ ಈ ಆಕರ್ಷಕ ಕಾರಿನ ಮುಖ್ಯ ಪ್ರಚಾರ ರಾಯಭಾರಿಯಾಗಿರಲಿದ್ದಾರೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಪುಣೆ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಪುಣೆ)

ಪೆಟ್ರೋಲ್

  • ಕೆ2: 4,42,000 ರು.
  • ಕೆ2 ಪ್ಲಸ್: 4,64,000 ರು.
  • ಕೆ4: 4,77,000 ರು.
  • ಕೆ4 ಪ್ಲಸ್: 4,99,000 ರು.
  • ಕೆ6: 5,36,000 ರು.
  • ಕೆ6 ಪ್ಲಸ್: 5,58,000 ರು.
  • ಕೆ8: 5,91,000
  • ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಪುಣೆ)

    ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಪುಣೆ)

    ಡೀಸೆಲ್

    • ಕೆ2: 5,22,000 ರು.
    • ಕೆ2 ಪ್ಲಸ್: 5,44,000 ರು.
    • ಕೆ4: 5,57,000 ರು.
    • ಕೆ4 ಪ್ಲಸ್: 5,79,000 ರು.
    • ಕೆ6: 6,21,000 ರು.
    • ಕೆ6 ಪ್ಲಸ್: 6,43,000 ರು.
    • ಕೆ8: 6,76,000 ರು.
    • ಮೈಲೇಜ್

      ಮೈಲೇಜ್

      • ಡೀಸೆಲ್ 25.32 ಕೀ.ಮೀ
      • ಪೆಟ್ರೋಲ್ 18.15 ಕೀ.ಮೀ.
      • ಸಂಕ್ರಾಂತಿ ಕೊಡುಗೆ; ಮಹೀಂದ್ರ ಕೆಯುವಿ100 ಭರ್ಜರಿ ಬಿಡುಗಡೆ

        ಮಹೀಂದ್ರ ಎಕ್ಸ್‌ಯುವಿ500 ಹಾಗೂ ಟಿಯುವಿ100 ಕೆಳ ದರ್ಜೆಯಲ್ಲಿ ಗುರುತಿಸಿಕೊಳ್ಳಲಿರುವ ನೂತನ ಕೆಯುವಿ100 ಕಾರಿನಲ್ಲಿ ಅತಿ ನೂತನ ವಿಶ್ವ ದರ್ಜೆಯ ಎಂಫಾಲ್ಕನ್ ಎಂಜಿನ್ ಬಳಕೆ ಮಾಡಲಾಗುತ್ತದೆ. ಹಾಗೆಯೇ ಪೆಟ್ರೋಲ್ ಎಂಜಿನ್ ವಿಭಾಗಕ್ಕೂ ಮಹೀಂದ್ರ ಕಾಲಿಡಲಿದೆ.

        ಎಂಜಿನ್ ಪೆಟ್ರೋಲ್:

        ಎಂಜಿನ್ ಪೆಟ್ರೋಲ್:

        mFALCON, G80

        ಎಂಜಿನ್ ಸಾಮರ್ಥ್ಯ: 1198 ಸಿಸಿ

        ಗರಿಷ್ಠ ಪವರ್: 82(61)@5500 bhp(kW)@rpm

        ತಿರುಗುಬಲ: 115@3500-3600 Nm@rpm

        ಎಂಜಿನ್ ಡೀಸೆಲ್:

        ಎಂಜಿನ್ ಡೀಸೆಲ್:

        mFALCON, D75

        ಎಂಜಿನ್ ಸಾಮರ್ಥ್ಯ: 1198 ಸಿಸಿ

        ಗರಿಷ್ಠ ಪವರ್: 77(57)@3750 (bhp(kW)@rpm)

        ತಿರುಗುಬಲ: 190@1750-2250 Nm@rpm

        'ಪ್ರೆ' (prey) ಬೇಟೆಹಕ್ಕಿಯ ಹೆಸರನ್ನು ಇದಕ್ಕಿಡಲಾಗಿದೆ.

        ಮೊನೊಕಾಕ್ ಸಂರಚನೆ

        ಮೊನೊಕಾಕ್ ಸಂರಚನೆ

        ಸಂಪೂರ್ಣವಾಗಿ ಸ್ವದೇಶಿ ನಿರ್ಮಿತ ಮೊನೊಕಾಕ್ ಸಂರಚನೆಯ ಕೆಯುವಿ100 ಗುಟಮಟ್ಟ, ತಾಂತ್ರಿಕತೆ, ನಿರ್ವಹಣೆ ಎಲ್ಲದರಲ್ಲೂ ಅದ್ಭುತ ಚಾಲನಾ ಅನುಭವ ನೀಡಲಿದೆ.ಇದಕ್ಕೂ ಮೊದಲು ಎಕ್ಸ್‌ಯುವಿ500 ನಿರ್ಮಾಣದಲ್ಲೂ ಇದೇ ನೀತಿ ಅನುಸರಿಸಲಾಗಿತ್ತು.

        ಕೆಯುವಿ1oo ಉಚ್ಚಾರಣೆ ಹೇಗೆ?

        ಕೆಯುವಿ1oo ಉಚ್ಚಾರಣೆ ಹೇಗೆ?

        ಇಲ್ಲಿ 'K' ಎಂಬುದು ಕೂಲ್ (kool), 'UV' ಎಂಬುದು ಎಸ್‌ಯುವಿ ಮತ್ತು '100' ಎಂಬುದು 1 ಹಾಗೂ ಡಬಲ್ oh ಸಂಕೇತಿಸುತ್ತದೆ.

        ವೆರಿಯಂಟ್

        ವೆರಿಯಂಟ್

        ಎಲ್ಲ ವೆರಿಯಂಟ್ ಗಳಲ್ಲೂ ಆ್ಯಂಟಿ ಬ್ರೇಕಿಂಗ್ ಸಿಸ್ಟಂ ಸ್ಟ್ಯಾಂಡರ್ಡ್ ಆಗಿ ಲಭ್ಯ.

        ಬೇಸ್ ವೆರಿಯಂಟ್: ಕೆ2 ಮತ್ತು ಕೆ2 ಪ್ಲಸ್ (ಡ್ಯುಯಲ್ ಏರ್ ಬ್ಯಾಗ್)

        ಮಿಡ್ ವೆರಿಯಂಟ್: ಕೆ4 ಮತ್ತು ಕೆ4 ಪ್ಲಸ್ (ಡ್ಯುಯಲ್ ಏರ್ ಬ್ಯಾಗ್)

        ಹೈ ವೆರಿಯಂಟ್: ಕೆ6 ಮತ್ತು ಕೆ6 ಪ್ಲಸ್ (ಡ್ಯುಯಲ್ ಏರ್ ಬ್ಯಾಗ್)

        ಟಾಪ್ ಎಂಡ್ ವೆರಿಯಂಟ್: ಕೆ8 (ಡ್ಯುಯಲ್ ಏರ್ ಬ್ಯಾಗ್)

        ಸಂಕ್ರಾಂತಿ ಕೊಡುಗೆ; ಮಹೀಂದ್ರ ಕೆಯುವಿ100 ಭರ್ಜರಿ ಬಿಡುಗಡೆ

        ಆಕ್ರಮಣಕಾರಿ ವಿನ್ಯಾಸ, ಎಸ್‌ಯುವಿ ಶೈಲಿ ಮೈಗೂಡಿಸಿ ಬಂದಿರುವ ಮಹೀಂದ್ರ ಕೆಯುವಿ100 ಕಾರನ್ನು ಸಂಸ್ಥೆಯ ಚೆನ್ನೈನ ಸಂಶೋಧನಾ ಘಟಕದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದು ಪ್ರಮುಖವಾಗಿಯೂ ಯುವ ಗ್ರಾಹಕರನ್ನು ಗುರಿ ಮಾಡಲಿದ್ದು, ಇದೇ ಕಾರಣಕ್ಕೆ ಯುವ ಎಸ್‌ಯುವಿ ಎಂಬ ಥೀಮ್ ಹೆಸರನ್ನು ಪಡೆದಿದೆ.

        ಏಳು ಆಕರ್ಷಕ ಬಣ್ಣಗಳು

        ಏಳು ಆಕರ್ಷಕ ಬಣ್ಣಗಳು

        Fiery Orange,

        Flamboyant Red,

        Dazzling Silver,

        Aquamarine,

        Pearl White,

        Designer Grey,

        Midnight Black

        ಬುಕ್ಕಿಂಗ್ ಪ್ರಾರಂಭ

        ಬುಕ್ಕಿಂಗ್ ಪ್ರಾರಂಭ

        ಅಂದ ಹಾಗೆ ನೂತನ ಕೆಯುವಿ100 ಮಿನಿ ಎಸ್‌ಯುವಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಲಾಗಿದೆ. ಆಸಕ್ತರು ನಿಮ್ಮ ಹತ್ತಿರದ ಮಹೀಂದ್ರ ಅಧಿಕೃತ ಶೋ ರೂಂಗಳಿಗೆ ಭೇಟಿ ಕೊಡಬಹುದಾಗಿದೆ.

        ಸಂಕ್ರಾಂತಿ ಕೊಡುಗೆ; ಮಹೀಂದ್ರ ಕೆಯುವಿ100 ಭರ್ಜರಿ ಬಿಡುಗಡೆ

        3+3 ಆಸನ ವ್ಯವಸ್ಥೆಯನ್ನು ಹೊಂದಿರುವ ಮಹೀಂದ್ರ ಕೆಯುವಿ100 ಮುಂಭಾಗದಲ್ಲಿ ಸ್ಲಿಮ್ ಆದ ಫ್ರಂಟ್ ಗ್ರಿಲ್, ಕ್ರೀಡಾತ್ಮಕ ಹೆಡ್ ಲ್ಯಾಂಪ್, ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಪ್ರಮುಖ ಆಕರ್ಷಣೆಯಾಗಿರಲಿದೆ.

        ಸಂಕ್ರಾಂತಿ ಕೊಡುಗೆ; ಮಹೀಂದ್ರ ಕೆಯುವಿ100 ಭರ್ಜರಿ ಬಿಡುಗಡೆ

        ಯುವ ಪೀಳಿಗೆಯನ್ನು ಹೆಚ್ಚೆಚ್ಚು ಆಕರ್ಷಿಸಲಿರುವ ನೂತನ ಕೆಯುವಿ100 ಕಾರಿನಲ್ಲಿ ಡ್ಯುಯಲ್ ಟೋನ್ ಇಂಟಿರಿಯರ್, ಕ್ರೀಡಾತ್ಮಕ ಸ್ಟೀರಿಂಗ್ ವೀಲ್ ಜೊತೆಗೆ ಒಟ್ಟಾರೆ ಕ್ರೀಡಾತ್ಮಕ ವಿನ್ಯಾಸವನ್ನು ಕಾಪಾಡಿಕೊಳ್ಳಲಾಗಿದೆ. ಇದು ಪ್ರಮುಖವಾಗಿಯೂ ಮಾರುಕಟ್ಟೆಯಲ್ಲಿ ಸ್ವಿಫ್ಟ್ , ಗ್ರಾಂಡ್ ಐ10 ಹಾಗೂ ಮಾರುತಿ ಸ್ವಿಫ್ಟ್ ಡಿಜೈರ್ ಮಾದರಿಗಳಿಗೆ ಪೈಪೋಟಿ ಒಡ್ಡಲಿದೆ.

Most Read Articles

Kannada
English summary
Mahindra has launched the much awaited KUV100 in India for Rs.4.42 lakh ex-showroom (Pune). The Mahindra KUV100 is the third product from the carmaker in the sub-4 metre category after the Quanto and the TUV300.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X