ಹೊಸ ಅವತಾರದಲ್ಲಿ ಸ್ಕಾರ್ಪಿಯೊ; ಮನಮೆಚ್ಚಿದ ಪಿಕಪ್ ಟ್ರಕ್ ಶೈಲಿ

Written By:

ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಜನಪ್ರಿಯ ಸ್ಕಾರ್ಪಿಯೊ ಕ್ರೀಡಾ ಬಳಕೆಯ ವಾಹನದ ತಳಹದಿಯಲ್ಲಿ ಅತಿ ನೂತನ ಗೇಟ್ ವೇ ಜೀವನ ಶೈಲಿಯ ಪಿಕಪ್ ಟ್ರಕ್ ವಾಹನ ಅಭಿವೃದ್ಧಿ ಪಡಿಸುತ್ತಿರುವ ಬಗ್ಗೆ ನಾವು ಈಗಾಗಲೇ ವರದಿ ಮಾಡಿರುತ್ತೇವೆ. ಈ ನಡುವೆ ಸ್ಕಾರ್ಪಿಯೊ ಪಿಕಪ್ ಟ್ರಕ್ ಗೆ ಹೋಲುವಂತಹ ವಾಹನವೊಂದು ಅವತಾರವೆತ್ತಿರುವುದು ಕುತೂಹಲ ಮೂಡಿಸಿದೆ.

To Follow DriveSpark On Facebook, Click The Like Button
ಹೊಸ ಅವತಾರದಲ್ಲಿ ಸ್ಕಾರ್ಪಿಯೊ; ಮನಮೆಚ್ಚಿದ ಪಿಕಪ್ ಟ್ರಕ್ ಶೈಲಿ

ಸ್ಕಾರ್ಪಿಯೊ ಮೇಲಿನ ಅತೀವ ಪ್ರೀತಿಯಿಂದಾಗಿ ವಿಶೇಷವಾಗಿ ಪಿಕಪ್ ಟ್ರಕ್ ರೀತಿಯಲ್ಲಿ ಮಾರ್ಪಾಡುಗೊಳಿಸಿದ್ದಾರೆ. ಇದು ಇತರೆ ಕಸ್ಟಮೈಸ್ಡ್ ಪ್ರಿಯರನ್ನು ತನ್ನತ್ತ ಸೆಳೆಯುತ್ತಿದೆ.

ಹೊಸ ಅವತಾರದಲ್ಲಿ ಸ್ಕಾರ್ಪಿಯೊ; ಮನಮೆಚ್ಚಿದ ಪಿಕಪ್ ಟ್ರಕ್ ಶೈಲಿ

ಸ್ಕಾರ್ಪಿಯೊ ಒಟ್ಟಾರೆ ಉದ್ದಳತೆಯಲ್ಲಿ ಯಾವುದೇ ಬದಲಾವಣೆಗಳನ್ನು ತರದೆಯೇ ಎರಡು ಕ್ಯಾಬಿನ್ ಕೋಣೆಯನ್ನು ಜೋಡಿಸಲಾಗಿದೆ.

ಹೊಸ ಅವತಾರದಲ್ಲಿ ಸ್ಕಾರ್ಪಿಯೊ; ಮನಮೆಚ್ಚಿದ ಪಿಕಪ್ ಟ್ರಕ್ ಶೈಲಿ

ಇದರಲ್ಲಿ ಆಫ್ ರೋಡ್ ಚಕ್ರಗಳು, ಅಲಾಯ್ ವೀಲ್ ಹೋದಿಕೆ, ವಿಶೇಷ ಬಾಡಿ ಹೋದಿಕೆ, ರಿಯರ್ ಹ್ಯಾಂಡಲ್ ಬಾರ್, ಬದಿಯಲ್ಲಿ ಕಪ್ಪು ಪಟ್ಟಿ, ಸನ್ ರೂಫ್, ಜೆರ್ರಿ ಕ್ಯಾನ್ ಮತ್ತು ಸೈಕಲ್ ಗಳನ್ನು ಸಾಗಿಸಲು ಸೈಕಲ್ ರಾಕ್ ಗಳಿರಲಿದೆ.

ಹೊಸ ಅವತಾರದಲ್ಲಿ ಸ್ಕಾರ್ಪಿಯೊ; ಮನಮೆಚ್ಚಿದ ಪಿಕಪ್ ಟ್ರಕ್ ಶೈಲಿ

ಹಿಂದುಗಡೆ ಜಾಗಕ್ಕೆ ಕತ್ತರಿ ಪ್ರಯೋಗ ಮಾಡುವ ಮೂಲಕ ಢಿಕ್ಕಿ ಜಾಗವನ್ನು ಕಾಯ್ದುಕೊಳ್ಳಲಾಗಿದೆ. ಇದು ದೂರ ಪ್ರಯಾಣದ ವೇಳೆ ಲಗ್ಗೇಜ್ ಗಳನ್ನಿಡಲು ಸಹಕಾರಿಯಾಗಲಿದೆ.

ಹೊಸ ಅವತಾರದಲ್ಲಿ ಸ್ಕಾರ್ಪಿಯೊ; ಮನಮೆಚ್ಚಿದ ಪಿಕಪ್ ಟ್ರಕ್ ಶೈಲಿ

ಬದಲಾದ ಸ್ಕಾರ್ಪಿಯೊದ ಒಳಭಾಗಗಳಲ್ಲಿ ಏನೆಲ್ಲ ಮಾರ್ಪಾಡುಗಳನ್ನು ತರಲಾಗಿದೆ ಎಂಬುದು ಇನ್ನು ಬಯಲಾಗಿಲ್ಲ.

ಹೊಸ ಅವತಾರದಲ್ಲಿ ಸ್ಕಾರ್ಪಿಯೊ; ಮನಮೆಚ್ಚಿದ ಪಿಕಪ್ ಟ್ರಕ್ ಶೈಲಿ

ಇನ್ನೊಂದೆಡೆ ಸ್ಕಾರ್ಪಿಯೊ ತಳಹದಿಯಲ್ಲಿ ನಿರ್ಮಾಣವಾಗುತ್ತಿರುವ ಸ್ಕಾರ್ಪಿಯೊ ಗೇಟ್ ವೇ ಪಿಕಪ್ ಟ್ರಕ್ ನಲ ಪರೀಕ್ಷಾರ್ಥ ಚಾಲನೆಯು ಮುಂಬೈ-ಪುಣೆ ಎಕ್ಸ್ ಪ್ರೆಸ್ ವೇನಲ್ಲಿ ಭರದಿಂದ ಸಾಗುತ್ತಿದೆ.

ಹೊಸ ಅವತಾರದಲ್ಲಿ ಸ್ಕಾರ್ಪಿಯೊ; ಮನಮೆಚ್ಚಿದ ಪಿಕಪ್ ಟ್ರಕ್ ಶೈಲಿ

ಮುಂಭಾಗದಲ್ಲಿ ಅಪ್ಪಟ ಸ್ಕಾರ್ಪಿಯೊ ಶೈಲಿಯೊಂದಿಗೆ ಪ್ರೀಮಿಯಂ ಕ್ಯಾಬಿನ್ ಜಾಗವನ್ನು ಕಾಯ್ದುಕೊಂಡಿದ್ದು, ಹಿಂದುಗಡೆ ಪಿಕಪ್ ಟ್ರಕ್ ಡಿಸೈನ್ ಮೈಗೂಡಿಸಿಕೊಂಡಿದೆ.

ಹೊಸ ಅವತಾರದಲ್ಲಿ ಸ್ಕಾರ್ಪಿಯೊ; ಮನಮೆಚ್ಚಿದ ಪಿಕಪ್ ಟ್ರಕ್ ಶೈಲಿ

ಹೊಸ ಸ್ಕಾರ್ಪಿಯೊ ಪಿಕಪ್ ಟ್ರಕ್, ಆಧುನಿಕ ತಂತ್ರಜ್ಞಾನಗಳಿಗೆ ತಕ್ಕಂತೆ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಹನಿಕಾಂಬ್ ಗ್ರಿಲ್ ಮತ್ತು ಶಕ್ತಿಯುತ ಬಂಪರ್ ಗಿಟ್ಟಿಸಿಕೊಳ್ಳಲಿದೆ.

ಇವನ್ನೂ ಓದಿ

ಇವನ್ನೂ ಓದಿ

01. ಮುಂಬೈನಲ್ಲಿ ಲಿಮೊ ಹೋಲುವ 2 ಅಕ್ರಮ ಸ್ಕಾರ್ಪಿಯೊ ಕಾರುಗಳು ಜಫ್ತಿ

02. ಟೆಸ್ಟ್ ಡ್ರೈವ್ ಮಾಡಲೆಂದು ಬಂದು ಕಾರನ್ನೇ ಎಗರಿಸಿದ ಚತುರ ಚೋರ!

03. ಸ್ಕಾರ್ಪಿಯೊಗೆ ಕೈಕೊಟ್ಟ ಮೋದಿ; ಬಿಎಂಡಬ್ಲ್ಯು ಅಧಿಕೃತ ವಾಹನ

English summary
Mahindra Scorpio SUV Pickup Truck Avatar
Story first published: Friday, October 28, 2016, 13:55 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark