ಮಾರುತಿ ಇಗ್ನಿಸ್; ಒಂದು ಸುಂದರ ಕಾಂಪಾಕ್ಟ್ ಕ್ರಾಸೋವರ್ ಕಾರು

Written By:

ತವರೂರಾದ ಜಪಾನ್ ಮಾರುಕಟ್ಟೆ ಪ್ರವೇಶಿಸಿರುವ ಇಗ್ನಿಸ್ ಕಾಂಪಾಕ್ಟ್ ಕ್ರಾಸೋವರ್ ಕಾರು ನಿಕಟ ಭವಿಷ್ಯದಲ್ಲಿ ಭಾರತ ಮಾರುಕಟ್ಟೆಗೂ ತಲುಪುವ ನಿರೀಕ್ಷೆಯಿದೆ. ಪ್ರಸ್ತುತ ಕಾರು ಮುಂಬರುವ 2016 ಇಂಡಿಯನ್ ಆಟೋ ಎಕ್ಸ್ ಪೋದಲ್ಲೂ ಪ್ರಮುಖ ಆಕರ್ಷಣೆಯಾಗಲಿದೆ.

Also Read: 2016 ಆಟೋ ಎಕ್ಸ್‌ಪೋದಲ್ಲಿ ಬರಲಿರುವ ಎಸ್‌ಯುವಿಗಳು ಮುಂದಕ್ಕೆ ಓದಿ

ಈ ನಡುವೆ ನಾಲ್ಕು ಮೀಟರ್ ಉದ್ದ ಪರಿಧಿಯೊಳಗಿನ ಈ ಆಕರ್ಷಕ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಗಳು ಹೊರ ಬಂದಿವೆ. ಇದು ಭಾರತೀಯ ರಸ್ತೆ ಪರಿಸ್ಥಿತಿಗೆ ಹೆಚ್ಚು ಹೊಂದಿಕೆಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

1.2 ಲೀಟರ್ ಫೋರ್ ಸಿಲಿಂಡರ್ ಕೆ12ಸಿ ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ ಜೊತೆ ವಿವಿಟಿ ಮತ್ತು ಎಸ್‌ಎಚ್‌ವಿಸಿ ಮಿಡ್ ಹೈಬ್ರಿಡ್ ತಂತ್ರಜ್ಞಾನವೂ ಇರಲಿದೆ. ಇದು 119 ಎನ್‌ಎಂ ತಿರುಗುಬಲದಲ್ಲಿ 91 ಅಶ್ವಶಕ್ತಿಯನ್ನು ಉತ್ಪಾದಿಸಲಿದ್ದು, ಇದರ ಡಿಸಿ ಮೋಟಾರ್ ಹೆಚ್ಚುವರಿ 3.1 ಅಶ್ವಶಕ್ತಿ (50 ಎನ್‌ಎಂ ತಿರುಗುಬಲ) ಉತ್ಪಾದಿಸಲು ನೆರವಾಗಲಿದೆ. ಅಂತೆಯೇ ಸಿವಿಟ್ ಗೇರ್ ಬಾಕ್ಸ್ ಆಯ್ಕೆಯೂ ಇರುತ್ತದೆ.

ಮಾರುತಿ ಇಗ್ನಿಸ್; ಒಂದು ಸುಂದರ ಕಾಂಪಾಕ್ಟ್ ಕ್ರಾಸೋವರ್ ಕಾರು

ಇಗ್ನಿಸ್ ಟು ವೀಲ್ ಚಾಲನಾ ಆಯ್ಕೆಯ ವೆರಿಯಂಟ್ 880 ಕೆ.ಜಿ ಭಾರವನ್ನು ಹೊಂದಿರಲಿದ್ದು, ಪ್ರತಿ ಲೀಟರ್ ಗೆ 28 ಕೀ.ಮೀ. ಮೈಲೇಜ್ ನೀಡಲಿದೆ. ಅಂತೆಯೇ ಇಗ್ನಿಸ್ ಫೋರ್ ವೀಲ್ ಡ್ರೈವ್ 920 ಕೆ.ಜಿ ತೂಕದೊಂದಿಗೆ ಪ್ರತಿ ಲೀಟರ್ ಗೆ 25.4 ಕೀ.ಮೀ. ಇಂಧನ ಕ್ಷಮತೆ ನೀಡಲಿದೆ.

ಆಯಾಮ

ಆಯಾಮ

3,700 ಎಂಎಂ ಉದ್ದ,

1660 ಎಂಎಂ ಅಗಲ,

1595 ಎಂಎಂ ಎತ್ತರ,

1435 ಎಂಎಂ ಚಕ್ರಾಂತರ,

180 ಎಂಎಂ ಗ್ರೌಂಡ್ ಕ್ಲಿಯರನ್ಸ್

 ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ಫೋರ್ ವೀಲ್ ಚಾಲನಾ ವ್ಯವಸ್ಥೆಯ ಜೊತೆಗೆ ಹಿಲ್ ಡಿಸೆಂಟ್ ಕಂಟ್ರೋಲ್, ಸುಜುಕಿ ಅಡಾಪ್ಟಿವ್ ಡ್ಯುಯಲ್ ಕ್ಯಾಮೆರಾ ಬ್ರೇಕಿಂಗ್ ಸಿಸ್ಟಂ (ಡಿಸಿಬಿಎಸ್), ಲೇನ್ ಮ್ಯಾನೇಜ್ ಮೆಂಟ್ ಸಿಸ್ಟಂ, ಮುಂಭಾಗ, ಹಿಂಭಾಗ ಹಾಗೂ ಬದಿಯಲ್ಲಿ ಪಾರ್ಕಿಂಗ್ ಅಸಿಸ್ಟ್ ಸೇರಿದಂತೆ ಎಬಿಎಸ್, ಇಬಿಡಿ ಹಾಗೂ ಡ್ಯುಯಲ್ ಏರ್ ಬ್ಯಾಗ್ ಸೌಲಭ್ಯಗಳಿರಲಿದೆ.

ಮಾರುತಿ ಇಗ್ನಿಸ್; ಒಂದು ಸುಂದರ ಕಾಂಪಾಕ್ಟ್ ಕ್ರಾಸೋವರ್ ಕಾರು

ಮುಂಭಾಗದಲ್ಲಿ ಎಲ್‌ಇಡಿ ಹೆಡ್ ಲ್ಯಾಂಪ್, ಕ್ರೋಮ್ ಗ್ರಿಲ್, ಫಾಗ್ ಲ್ಯಾಂಪ್ ಹಾಗೂ ಸರಳವಾದ ಬಂಪರ್ ಕೊಡಲಾಗಿದೆ. ಕಾರಿನೊಳಗೆ 3 ಸ್ಪೋಕ್ ಬಹು ಕ್ರಿಯಾತ್ಮಕ ಸ್ಟೀರಿಂಗ್ ವೀಲ್, ಟಚ್ ಸ್ಕ್ರೀನ್ ಮಾಹಿತಿ ಮನರಂಜನಾ ಸಿಸ್ಟಂ, ಶುಭ್ರವಾದ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇತ್ಯಾದಿ ಸೌಲಭ್ಯಗಳಿರಲಿದೆ.

ಮಾರುತಿ ಇಗ್ನಿಸ್; ಒಂದು ಸುಂದರ ಕಾಂಪಾಕ್ಟ್ ಕ್ರಾಸೋವರ್ ಕಾರು

ಭಾರತದಲ್ಲಿ ಮಹೀಂದ್ರ ಕೆಯುವಿ100 ಮಾದರಿಗೆ ಎದುರಾಳಿಯಾಗಲಿರುವ ಮಾರುತಿ ಇಗ್ನಿಸ್ ಸಂಸ್ಥೆಯ ಪ್ರೀಮಿಯಂ ನೆಕ್ಸಾ ಶೋ ರೂಂ ಮುಖಾಂತರ ಮಾರಾಟವಾಗುವ ಸಾಧ್ಯತೆಗಳಿವೆ.

ಇವನ್ನೂ ಓದಿ

2016 ಆಟೋ ಎಕ್ಸ್ ಪೋದಲ್ಲಿ 7 ಸೀಟುಗಳ ವ್ಯಾಗನಾರ್ ಮ್ಯಾಜಿಕ್; ಮುಂದಕ್ಕೆ ಓದಲು ಕ್ಲಿಕ್ಕಿಸಿ

English summary
Maruti Suzuki Ignis: Features And Specs Revealed
Story first published: Wednesday, January 27, 2016, 12:57 [IST]
Please Wait while comments are loading...

Latest Photos