ಎಚ್ಚರಿಕೆಯ ಕರೆಗಂಟೆ ಬಾರಿಸಿತು; ನ್ಯೂ ಜೆನ್ ಆಲ್ಟೊ ತಯಾರಿಯಲ್ಲಿ ಮಾರುತಿ

Written By:

ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ, ಮುಂದಿನ ಮೂರು ವರ್ಷದೊಳಗೆ ಅತಿ ನೂತನ ಸಣ್ಣ ಕಾರು ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ಬಲ್ಲ ಮೂಲಗಳ ಪ್ರಕಾರ ಮಾರುತಿ ಪಾಲಿಗೆ ಅತಿ ಹೆಚ್ಚು ಯಶಸ್ಸನ್ನು ತಂದುಕೊಟ್ಟಿರುವ ಹೊಸ ತಲೆಮಾರಿನ ಆಲ್ಟೊ ಕಾರು ಇದಾಗಿರಲಿದೆ.

ಎಚ್ಚರಿಕೆಯ ಕರೆಗಂಟೆ ಬಾರಿಸಿತು; ನ್ಯೂ ಜೆನ್ ಆಲ್ಟೊ ತಯಾರಿಯಲ್ಲಿ ಮಾರುತಿ

ಸಣ್ಣ ಕಾರುಗಳಿಂದ ನಿಧಾನವಾಗಿ ಪ್ರೀಮಿಯಂ ಕಾರುಗಳತ್ತ ಹೆಜ್ಜೆಯನ್ನಿಟ್ಟಿದ್ದ ಮಾರುತಿ, ವಿಟಾರಾ ಬ್ರಿಝಾ ಎಸ್ ಯುವಿ, ಬಲೆನೊ ಪ್ರೀಮಿಯಂ ಹ್ಯಾಚ್ ಬ್ಯಾಕ್ ಮತ್ತು ಸಿಯಾಝ್ ಮಧ್ಯಮ ಗಾತ್ರದ ಸೆಡಾನ್ ಕಾರುಗಳನ್ನು ಬಿಡುಗಡೆಗೊಳಿಸಿದ್ದವು.

ಎಚ್ಚರಿಕೆಯ ಕರೆಗಂಟೆ ಬಾರಿಸಿತು; ನ್ಯೂ ಜೆನ್ ಆಲ್ಟೊ ತಯಾರಿಯಲ್ಲಿ ಮಾರುತಿ

ದೇಶದ ಜೀವನಾಡಿಯಾಗಿರುವ ಸಣ್ಣ ಕಾರು ವಿಭಾಗವನ್ನು ಮಧ್ಯಮ ವರ್ಗದ ಜನರು ಅತಿ ಹೆಚ್ಚು ನೆಚ್ಚಿಕೊಂಡಿದ್ದಾರೆ. ಇದುವೇ ಮಾರುತಿ ಯಶಸ್ಸಿನಲ್ಲೂ ಪ್ರತಿಬಿಂಬಿಸುತ್ತಿತ್ತು.

ಎಚ್ಚರಿಕೆಯ ಕರೆಗಂಟೆ ಬಾರಿಸಿತು; ನ್ಯೂ ಜೆನ್ ಆಲ್ಟೊ ತಯಾರಿಯಲ್ಲಿ ಮಾರುತಿ

ಕಳೆದ ಕೆಲವು ಸಮಯಗಳಲ್ಲಿ ಎಂಟ್ರಿ ಲೆವೆಲ್ ಕಾರು ವಿಭಾಗದಲ್ಲಿ ಮಾರುತಿ ಆಲ್ಟೊಗೆ ರೆನೊ ಕ್ವಿಡ್ ಪ್ರಬಲ ಪೈಪೋಟಿಯನ್ನು ಒಡ್ಡುತ್ತಿದೆ. ಈ ನಿಟ್ಟಿನಲ್ಲಿ ರೂಪ ಬದಲಾವಣೆ ಮಾರುತಿ ಪಾಲಿಗೆ ಅನಿವಾರ್ಯವಾಗಿದೆ.

ಎಚ್ಚರಿಕೆಯ ಕರೆಗಂಟೆ ಬಾರಿಸಿತು; ನ್ಯೂ ಜೆನ್ ಆಲ್ಟೊ ತಯಾರಿಯಲ್ಲಿ ಮಾರುತಿ

ಪ್ರಸಕ್ತ ಆರ್ಥಿಕ ಸಾಲಿನ ಮೊದಲ ಎಂಟು ತಿಂಗಳಲ್ಲಿ 1,62,894 ಯುನಿಟ್ ಗಳ ಮಾರಾಟ ದಾಖಲಿಸಿರುವ ಮಾರುತಿ ಶೇಕಡಾ 7.4ರಷ್ಟು ಮಾರಾಟ ಕುಸಿತ ಅನುಭವಿಸಿದೆ. ಇದೇ ಅವಧಿಯಲ್ಲಿ ರೆನೊ ಕ್ವಿಡ್ ಕಳೆದ ವರ್ಷವಿದ್ದ 11,044 ಮ್ಯಾಜಿಕ್ ಸಂಖ್ಯೆಯಿಂದ 73,676 ಯುನಿಟ್ ಗಳಿಗೆ ಮಾರಾಟ ಏರುಗತಿ ದಾಖಲಿಸಿದೆ.

ಎಚ್ಚರಿಕೆಯ ಕರೆಗಂಟೆ ಬಾರಿಸಿತು; ನ್ಯೂ ಜೆನ್ ಆಲ್ಟೊ ತಯಾರಿಯಲ್ಲಿ ಮಾರುತಿ

ಸಣ್ಣ ಕಾರು ವಿಭಾಗದಲ್ಲಿ ಕಳೆದ ಆರ್ಥಿಕ ಸಾಲಿನ ಎಪ್ರಿಲ್ ನಿಂದ ನವೆಂಬರ್ ವರೆಗಿದ್ದ ಆಲ್ಟೊ ಮಾರಾಟ ಶೇರು ಶೇಕಡಾ 50.9ರಿಂದ ಈ ಬಾರಿ 42ಕ್ಕೆ ಕುಸಿತ ಕಂಡಿದೆ. ಇನ್ನೊಂದೆಡೆ ಕ್ವಿಡ್ ಶೇಕಡಾ 20ರಷ್ಟು ಮಾರಾಟ ಶೇರನ್ನು ವಶಪಡಿಸಿಕೊಂಡಿದೆ.

ಎಚ್ಚರಿಕೆಯ ಕರೆಗಂಟೆ ಬಾರಿಸಿತು; ನ್ಯೂ ಜೆನ್ ಆಲ್ಟೊ ತಯಾರಿಯಲ್ಲಿ ಮಾರುತಿ

ಎಚ್ಚರಿಕೆಯ ಕರೆಗಂಟೆ ಬಾರಿಸಿದ್ದಂತೆ ಮಾರುತಿ ಗರಡಿಯಲ್ಲಿ 'ವೈ1ಕೆ' ಎಂಬ ಕೋಡ್ ಪಡೆದಿರುವ ಹೊಸತಾದ ಕಾರಿನ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. ಇದು 2019 ಹಬ್ಬದ ಆವೃತ್ತಿಯ ವೇಳೆಯಲ್ಲಿ ಮಾರುಕಟ್ಟೆ ತಲುಪಲಿದೆ.

ಎಚ್ಚರಿಕೆಯ ಕರೆಗಂಟೆ ಬಾರಿಸಿತು; ನ್ಯೂ ಜೆನ್ ಆಲ್ಟೊ ತಯಾರಿಯಲ್ಲಿ ಮಾರುತಿ

ನೂತನ ತಳಹದಿಯಲ್ಲಿ ನಿರ್ಮಾಣವಾಗಲಿರುವ ಹೊಸ ಆಲ್ಟೊ, ಭಾರತೀಯ ರಸ್ತೆ ಮಾನದಂಡಗಳನ್ನೆಲ್ಲ ಪಾಲಿಸಲಿದೆ. ಇದಕ್ಕಾಗಿ ಬರೋಬ್ಬರಿ 2000 ಕೋಟಿ ರುಪಾಯಿಗಳನ್ನು ಮಾರುತಿ ಹೂಡಿಕೆ ಮಾಡಲಿದೆ.

ಎಚ್ಚರಿಕೆಯ ಕರೆಗಂಟೆ ಬಾರಿಸಿತು; ನ್ಯೂ ಜೆನ್ ಆಲ್ಟೊ ತಯಾರಿಯಲ್ಲಿ ಮಾರುತಿ

ಗ್ರಾಮೀಣ ಮಾರುಕಟ್ಟೆಯಲ್ಲಿ ಮಾರುತಿ ಈಗಲೂ ಪ್ರಬಲ ಹಿಡಿತವನ್ನು ಹೊಂದಿದೆ. ಇವೆಲ್ಲದರ ನೆರವನೊಂದಿಗೆ ಹೆಚ್ಚಿನ ಮಾರಾಟವನ್ನು ಗುರಿಯಾಗಿರಿಸಿದೆ.

English summary
Maruti Suzuki Plans To Launch New Small Car Within Three Years
Story first published: Saturday, December 24, 2016, 11:12 [IST]
Please Wait while comments are loading...

Latest Photos