ಮಾರುತಿ ವ್ಯಾಗನಾರ್ ಫೆಲಿಸಿಟಿ ಸೀಮಿತ ಆವೃತ್ತಿ ಬಿಡುಗಡೆ

Written By:

ಭಾರತದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ, ತನ್ನ ಜನಪ್ರಿಯ ವ್ಯಾಗನಾರ್ ಕಾರಿನ ನೂತನ ಫೆಲಿಸಿಟಿ ಸೀಮಿತ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ನೂತನ ಮಾರುತಿ ಸುಜುಕಿ ವ್ಯಾಗನಾರ್ ಫೆಲಿಸಿಟಿ ಹ್ಯಾಚ್ ಬ್ಯಾಕ್ ಕಾರು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 4.40 ಲಕ್ಷ ರು.ಗಳಿಂದ 5.37 ಲಕ್ಷ ರು.ಗಳ ವರೆಗೆ ದುಬಾರಿಯೆನಿಸಲಿದೆ.

To Follow DriveSpark On Facebook, Click The Like Button
ಮಾರುತಿ ವ್ಯಾಗನಾರ್ ಫೆಲಿಸಿಟಿ ಸೀಮಿತ ಆವೃತ್ತಿ ಬಿಡುಗಡೆ

ಕಾರಿನ ಹೊರಮೈಯಲ್ಲಿ ವಿಶೇಷ ಗ್ರಾಫಿಕ್ಸ್ ಮತ್ತು ರಿಯರ್ ಸ್ಪಾಯರ್ ಗಳ ಹೊರತಾಗಿ ಹೆಚ್ಚಿನ ಬದಲಾವಣೆಗಳ ಕಂಡುಬಂದಿಲ್ಲ.

ಮಾರುತಿ ವ್ಯಾಗನಾರ್ ಫೆಲಿಸಿಟಿ ಸೀಮಿತ ಆವೃತ್ತಿ ಬಿಡುಗಡೆ

ಕಾರಿನ ಒಳಮೈಯಲ್ಲಿ ಹೊಸತಾದ ಸೀಟು, ಸ್ಟೀರಿಂಗ್ ಕವರ್, ಕಾರ್ಪೆಟ್ ಮ್ಯಾಟ್, ಪ್ರೀಮಿಯಂ ಕುಷನ್ ಸೆಟ್, 2 ಡಿನ್ ಮ್ಯೂಸಿಕ್ ಸಿಸ್ಟಂ ಜೊತೆಗೆ ಸ್ಪೀಕರ್ ಮತ್ತು ಬ್ಲೂಟೂತ್ ಕನೆಕ್ಟಿವಿಟಿ ಸೇವೆಗಳಿವೆ.

ಮಾರುತಿ ವ್ಯಾಗನಾರ್ ಫೆಲಿಸಿಟಿ ಸೀಮಿತ ಆವೃತ್ತಿ ಬಿಡುಗಡೆ

ಮಾರುತಿ ವ್ಯಾಗನಾರ್ ಫೆಲಿಸಿಟಿ ಮತ್ತಷ್ಟು ಅನುಕೂಲಕರವೆನಿಸಿದ್ದು ರಿಸರ್ವ್ ಪಾರ್ಕಿಂಗ್ ಸೆನ್ಸಾರ್ ಜೊತೆಗೆ ಡಿಸ್ ಪ್ಲೇ ಮತ್ತು ವಾಯ್ಸ್ ನಿರ್ದೇಶನ ವ್ಯವಸ್ಥೆಯು ಇದರಲ್ಲಿದೆ.

ಮಾರುತಿ ವ್ಯಾಗನಾರ್ ಫೆಲಿಸಿಟಿ ಸೀಮಿತ ಆವೃತ್ತಿ ಬಿಡುಗಡೆ

ಕಳೆದ ಐದು ವರ್ಷಗಳಲ್ಲಿ ಸತತವಾಗಿ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಅಗ್ರ ಐದು ಕಾರುಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ವ್ಯಾಗನಾರ್, ನೂತನ ಫೆಲಿಸಿಟಿ ಮುಖಾಂತರ ತನ್ನ ಸಾನಿಧ್ಯವನ್ನು ಮತ್ತಷ್ಟು ಉತ್ತಮಪಡಿಸುವ ನಿರೀಕ್ಷೆಯಲ್ಲಿದೆ.

ಮಾರುತಿ ವ್ಯಾಗನಾರ್ ಫೆಲಿಸಿಟಿ ಸೀಮಿತ ಆವೃತ್ತಿ ಬಿಡುಗಡೆ

ವಿಶಿಷ್ಟ ಕಾರೊಂದನ್ನು ಬಯಸುವವರಿಗೆ ಮಾರುತಿ ವ್ಯಾಗನಾರ್ ಫೆಲಿಸಿಟಿ ಕಾರು ಅತ್ಯುತ್ತಮ ಆಯ್ಕೆಯಾಗಿರಲಿದೆ ಎಂದು ಸಂಸ್ಥೆಯು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ಮಾರುತಿ ವ್ಯಾಗನಾರ್ ಫೆಲಿಸಿಟಿ ಸೀಮಿತ ಆವೃತ್ತಿ ಬಿಡುಗಡೆ

ನೂತನ ವ್ಯಾಗನಾರ್ ಫೆಲಿಸಿಟಿ ಕಾರು 998 ಸಿಸಿ ಕೆ10ಬಿ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, 90 ಎನ್ ಎಂ ತಿರುಗುಬಲದಲ್ಲಿ ಗರಿಷ್ಠ 68 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಮಾರುತಿ ವ್ಯಾಗನಾರ್ ಫೆಲಿಸಿಟಿ ಸೀಮಿತ ಆವೃತ್ತಿ ಬಿಡುಗಡೆ

ಅದೇ ಹೊತ್ತಿಗೆ ವ್ಯಾಗನಾರ್ ಸಿಎನ್ ಜಿ ಆಯ್ಕೆಯು 77 ಎನ್ ಎಂ ತಿರುಗುಬಲದಲ್ಲಿ 59 ಅಶ್ವಶಕ್ತಿಯನ್ನು ನೀಡಲಿದೆ.

ಮಾರುತಿ ವ್ಯಾಗನಾರ್ ಫೆಲಿಸಿಟಿ ಸೀಮಿತ ಆವೃತ್ತಿ ಬಿಡುಗಡೆ

ಇಂಧನ ಕ್ಷಮತೆಯಲ್ಲೂ ಯಾವುದೇ ರಾಜಿಗೂ ತಯಾರಾಗದ ವ್ಯಾಗನಾರ್ ಫೆಲಿಸಿಟಿ ಪೆಟ್ರೋಲ್ ಮತ್ತು ಸಿಎನ್ ಜಿ ಆವೃತ್ತಿಗಳು ಅನುಕ್ರಮವಾಗಿ ಪ್ರತಿ ಲೀಟರ್ ಗೆ 20.51 ಕೀ.ಮೀ. ಮತ್ತು ಪ್ರತಿ ಕೆ.ಜಿಗೆ 26.6 ಕೀ.ಮೀ. ಮೈಲೇಜನ್ನು ನೀಡಲಿದೆ.

ಮಾರುತಿ ವ್ಯಾಗನಾರ್ ಫೆಲಿಸಿಟಿ ಸೀಮಿತ ಆವೃತ್ತಿ ಬಿಡುಗಡೆ

ಮಾರುತಿ ವ್ಯಾಗನಾರ್ ಮ್ಯಾನುವಲ್, ಎಎಂಟಿ ಮತ್ತು ಸಿಎನ್ ಜಿ ಯೊಂದಿಗೆ ಎಲ್ ಎಕ್ಸ್ ಐ ಮತ್ತು ವಿಎಕ್ಸ್ ಐ ಎಂಬ ಎರಡು ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ.

ಮಾರುತಿ ವ್ಯಾಗನಾರ್ ಫೆಲಿಸಿಟಿ ಸೀಮಿತ ಆವೃತ್ತಿ ಬಿಡುಗಡೆ

ನೂತನ ವ್ಯಾಗನಾರ್ ಫೆಲಿಸಿಟಿ ಸೀಮಿತ ಆವೃತ್ತಿಯ ಕಾರು ನಿಮ್ಮದಾಗಿಸುವುದರೊಂದಿಗೆ 13,500 ರು.ಗಳ ಪ್ರಯೋಜನವನ್ನು ಗಿಟ್ಟಿಸಿಕೊಳ್ಳಬಹುದಾಗಿದೆ.

English summary
Maruti Suzuki Launches Wagon R Felicity Limited Edition
Story first published: Monday, November 28, 2016, 9:39 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark