ಅತಿ ಶೀಘ್ರದಲ್ಲೇ ಮಾರುತಿ ಸ್ವಿಫ್ಟ್ ಆಟೋ ಗೇರ್ ಶಿಫ್ಟ್ ಬಿಡುಗಡೆ

By Nagaraja

ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ, ತನ್ನ ಜನಪ್ರಿಯ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಕಾರಿನಲ್ಲಿ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಗೇರ್ ಬಾಕ್ಸ್ ತಂತ್ರಜ್ಞಾನ ನೀಡುವ ಕುರಿತಾಗಿ ಕಳೆದ ಕೆಲವು ಸಮಯಗಳಿಂದ ವರದಿಗಳು ಹರಿದಾಡುತ್ತಿದೆ.

ಭಾರತದ ಜನಪ್ರಿಯ ಕಾರು ಸ್ವಿಫ್ಟ್ ಕುರಿತಾಗಿನ 9 ಸತ್ಯಗಳು!

ಈಗ ಸಮಯ ಮತ್ತಷ್ಟು ಹತ್ತಿರ ಬಂದಿದ್ದು, 2016 ಮಧ್ಯಂತರ ಅವಧಿಯಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಆಟೋ ಗೇರ್ ಶಿಫ್ಟ್ ಮಾದರಿಯು ದೇಶದ ಮಾರುಕಟ್ಟೆಗೆ ಭರ್ಜರಿ ಬಿಡುಗಡೆ ಕಾಣಲಿದೆ ಎಂದು ಮೂಲಗಳು ತಿಳಿಸಿವೆ.

ಅತಿ ಶೀಘ್ರದಲ್ಲೇ ಮಾರುತಿ ಸ್ವಿಫ್ಟ್ ಆಟೋ ಗೇರ್ ಶಿಫ್ಟ್ ಬಿಡುಗಡೆ

ಎಎಂಟಿ ತಂತ್ರಗಾರಿಕೆಯನ್ನು ಆಟೋ ಗೇರ್ ಶಿಫ್ಟ್ (ಎಜಿಟಿ) ಎಂದು ವಿಶ್ಲೇಷಿಸುತ್ತಿರುವ ಮಾರುತಿ ಸುಜುಕಿ, ಇದುವರೆಗೆ ದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಯುನಿಟ್ ಗಳನ್ನು ಮಾರಾಟಗೈದಿದೆ.

ಅತಿ ಶೀಘ್ರದಲ್ಲೇ ಮಾರುತಿ ಸ್ವಿಫ್ಟ್ ಆಟೋ ಗೇರ್ ಶಿಫ್ಟ್ ಬಿಡುಗಡೆ

ಮಾರುತಿ ಸೆಲೆರಿಯೊದಲ್ಲಿ ಮೊದಲ ಬಾರಿಗೆ ಎಜಿಟಿ ಗೇರ್ ಬಾಕ್ಸ್ ಆಯ್ಕೆಯನ್ನು ಒದಗಿಸಲಾಗಿತ್ತಲ್ಲದೆ ಮಾರಾಟದಲ್ಲಿ ಭರ್ಜರಿ ಏರುಗತಿ ಸಾಧಿಸಿತ್ತು. ತದಾ ಬಳಿಕ ಮಾರುತಿ ಆಲ್ಟೊ ಕೆ10, ಸ್ವಿಫ್ಟ್ ಡಿಜೈರ್, ವ್ಯಾಗನಾರ್ ಗಳಂತಹ ಜನಪ್ರಿಯ ಮಾದರಿಗಳಲ್ಲೂ ಮಾರುತಿ ಎಎಂಟಿ ತಂತ್ರಜ್ಞಾನವನ್ನು ಪರಿಚಯಿಸಿತ್ತು.

ಅತಿ ಶೀಘ್ರದಲ್ಲೇ ಮಾರುತಿ ಸ್ವಿಫ್ಟ್ ಆಟೋ ಗೇರ್ ಶಿಫ್ಟ್ ಬಿಡುಗಡೆ

ಮಾರುತಿ ಸ್ವಿಫ್ಟ್ ಆಟೋ ಗೇರ್ ಶಿಫ್ಟ್ ಆವೃತ್ತಿಯು ಇನ್ನೆರಡು ತಿಂಗಳೊಳಗೆ ಬಿಡುಗಡೆಯಾಗಲಿದೆ. ತದಾ ಬಳಿಕ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ವಿಟಾರಾ ಬ್ರಿಝಾದಲ್ಲೂ ಎಎಂಟಿ ಗೇರ್ ಬಾಕ್ಸ್ ಆಯ್ಕೆ ನೀಡುವ ಇರಾದೆಯನ್ನು ಸಂಸ್ಥೆ ಹೊಂದಿದೆ.

ಅತಿ ಶೀಘ್ರದಲ್ಲೇ ಮಾರುತಿ ಸ್ವಿಫ್ಟ್ ಆಟೋ ಗೇರ್ ಶಿಫ್ಟ್ ಬಿಡುಗಡೆ

ಇಟಲಿಯ ಹೆಸರಾಂತ ಮ್ಯಾಗ್ನೆಟ್ಟಿ ಮೆರೆಲ್ಲಿ ಸಂಸ್ಥೆಯು ಮಾರುತಿಗೆ ಎಎಂಟಿ ಗೇರ್ ಬಾಕ್ಸ್ ಗಳನ್ನು ರವಾನಿಸುತ್ತಿದೆ. ಅಲ್ಲದೆ ಮಾರುತಿಯು ಕಳೆದ ಆರ್ಥಿಕ ಸಾಲಿನಲ್ಲಿ ಎಎಂಟಿ ಗೇರ್ ಬಾಕ್ಸ್ ಗಳ ಮಾರಾಟದಲ್ಲಿ ಶೇಕಡಾ 82ರಷ್ಟು ಏರಿಕೆ ಸಾಧಿಸಿತ್ತು.

ಅತಿ ಶೀಘ್ರದಲ್ಲೇ ಮಾರುತಿ ಸ್ವಿಫ್ಟ್ ಆಟೋ ಗೇರ್ ಶಿಫ್ಟ್ ಬಿಡುಗಡೆ

2015ರಿಂದ 2016ರ ಆರ್ಥಿಕ ಸಾಲಿನಲ್ಲಿ ಮಾರುತಿ ಒಟ್ಟಾರೆ 54,700 ಯುನಿಟ್ ಗಳ ಮಾರಾಟ ಸಾಧಿಸಿದೆ. ಈ ಪೈಕಿ ಶೇಕಡಾ 50ರಷ್ಟು ಮಾರಾಟವನ್ನು ಸೆಲೆರಿಯೊ ಆಕ್ರಮಿಸಿಕೊಂಡಿದೆ.

ಅತಿ ಶೀಘ್ರದಲ್ಲೇ ಮಾರುತಿ ಸ್ವಿಫ್ಟ್ ಆಟೋ ಗೇರ್ ಶಿಫ್ಟ್ ಬಿಡುಗಡೆ

ಎಎಂಟಿ ಗೇರ್ ಬಾಕ್ಸ್ ಗಳಿಗೆ ಲಭಿಸುತ್ತಿರುವ ಅಭೂತಪೂರ್ವ ಪ್ರತಿಕ್ರಿಯೆಯಿಂದಾಗಿ ಸಂಸ್ಥೆಯು ಇಟಲಿಯ ಮ್ಯಾಗ್ನೆಟ್ಟಿ ಮರೆಲ್ಲಿ ಜೊತೆಗೂಡಿ ವಾರ್ಷಿಕ 1.20 ಲಕ್ಷ ಯುನಿಟ್ ಗಳ ನಿರ್ಮಾಣ ಸಾಮರ್ಥ್ಯದ ಘಟಕಕ್ಕೆ ಚಾಲನೆ ನೀಡಿತ್ತು.

ಅತಿ ಶೀಘ್ರದಲ್ಲೇ ಮಾರುತಿ ಸ್ವಿಫ್ಟ್ ಆಟೋ ಗೇರ್ ಶಿಫ್ಟ್ ಬಿಡುಗಡೆ

ಹಾಗಿದ್ದರೂ ನೂತನ ಸ್ವಿಫ್ಟ್ ಕಾರಿನ ಎಂಜಿನ್ ತಾಂತ್ರಿಕತೆಯಲ್ಲಿ ಯಾವುದೇ ಬದಲಾವಣೆ ಕಂಡುಬರುವ ಸಾಧ್ಯತೆಯಿಲ್ಲ. ಇದು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಅತಿ ಶೀಘ್ರದಲ್ಲೇ ಮಾರುತಿ ಸ್ವಿಫ್ಟ್ ಆಟೋ ಗೇರ್ ಶಿಫ್ಟ್ ಬಿಡುಗಡೆ

ನ್ಯೂ ಜನರೇಷನ್ ಮಾರುತಿ ಸ್ವಿಫ್ಟ್; ಹತ್ತಿರದಿಂದ ಅರಿಯೋಣವೇ?

ಅತಿ ಶೀಘ್ರದಲ್ಲೇ ಮಾರುತಿ ಸ್ವಿಫ್ಟ್ ಆಟೋ ಗೇರ್ ಶಿಫ್ಟ್ ಬಿಡುಗಡೆ

ಮಾರುತಿ ಸ್ವಿಫ್ಟ್ ಡಿಜೈರ್ ಎಎಂಟಿ ಕಾರು ಭಾರತದಲ್ಲಿ ಭರ್ಜರಿ ಬಿಡುಗಡೆ

Most Read Articles

Kannada
English summary
Maruti Swift AMT Possible Launch In Second Half Of 2016
Story first published: Thursday, May 12, 2016, 13:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X