ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕೂಪೆ 'ನೈಟ್ ಎಡಿಷನ್'

Written By:

ಮರ್ಸಿಡಿಸ್ ಬೆಂಝ್ ಎಸ್-ಎಸ್ ಕೂಪೆ ಶ್ರೇಷ್ಠ ಕಾರು ಎಂಬುದರಲ್ಲಿ ಸಂಶಯವೇ ಇಲ್ಲ. ಇದಕ್ಕೀಗ ಜರ್ಮನಿಯ ಐಷಾರಾಮಿ ವಾಹನ ಸಂಸ್ಥೆಯು ಮಗದೊಂದು ಎಲ್ಲ ಕಪ್ಪು ವರ್ಣದಿಂದ ಕೂಡಿರುವ 'ನೈಟ್ ಎಡಿಷನ್' ಕಾರನ್ನು ಸೇರ್ಪಡೆಗೊಳಿಸಿದೆ.

ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕೂಪೆ 'ನೈಟ್ ಎಡಿಷನ್'

ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ಕೂಪೆ ನೈಟ್ ಎಡಿಷನ್ ಕಾರು 2017 ಜನವರಿ ತಿಂಗಳಲ್ಲಿ ನಡೆಯಲಿರುವ ಡೆಟ್ರಾಯ್ಟ್ ಆಟೋ ಶೋದಲ್ಲಿ ಅನಾವರಣಗೊಳ್ಳಲಿದೆ.

ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕೂಪೆ 'ನೈಟ್ ಎಡಿಷನ್'

ಬಳಿಕ ಎಪ್ರಿಲ್ ತಿಂಗಳಲ್ಲಿ ಯುರೋಪ್ ಮಾರುಕಟ್ಟೆಯನ್ನು ಹಾಗೂ ಆಗಸ್ಟ್ ತಿಂಗಳಲ್ಲಿ ಅಮೆರಿಕ ಮಾರುಕಟ್ಟೆಯನ್ನು ಪ್ರವೇಶ ಪಡೆಯಲಿದೆ.

ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕೂಪೆ 'ನೈಟ್ ಎಡಿಷನ್'

ಹಾಗಿದ್ದರೂ ಬೆಂಝ್ ಎಸ್ ಕ್ಲಾಸ್ ಕೂಪೆ ನೈಟ್ ಎಡಿಷನ್ ಕಾರು ಎಷ್ಟು ದುಬಾರಿಯಾಗಲಿದೆ ಎಂಬುದು ತಿಳಿದು ಬಂದಿಲ್ಲ. 2017 ಜನವರಿ 09ರ ವೇಳೆಯಲ್ಲಷ್ಟೇ ಈ ಬಗ್ಗೆ ಮಾಹಿತಿ ಸಿಗಲಿದೆ.

ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕೂಪೆ 'ನೈಟ್ ಎಡಿಷನ್'

ಕಾರಿನ ಮುಂಭಾಗದಲ್ಲಿ ಎಎಂಜಿ ಸ್ಪೂರ್ತಿ ಪಡೆದ ಸಿಂಗಲ್ ಸ್ಲೇಟ್ ಫ್ರಂಟ್ ಗ್ರಿಲ್ ಕಂಡುಬರಲಿದೆ. ಹಿಂದುಗಡೆ ಬಂಪರ್ ಸಹ ಎಎಂಜಿ ಸಂಯೋಜನೆ ಪಡೆಯಲಿದೆ.

ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕೂಪೆ 'ನೈಟ್ ಎಡಿಷನ್'

20 ಇಂಚುಗಳ ಮಲ್ಟಿ ಸ್ಪೋಕ್ ಅಲಾಯ್ ಚಕ್ರಗಳು ಸಹ ಇಲ್ಲಿ ಕಂಡುಬಂದಿರುವ ಪ್ರಮುಖ ಆಕರ್ಷಣೆಯಾಗಿದೆ. ಗ್ಲೋಸ್ ಬ್ಲ್ಯಾಕ್ ಸ್ಪರ್ಶವನ್ನು ಇಲ್ಲಿ ಕೊಡಲಾಗಿದೆ.

ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕೂಪೆ 'ನೈಟ್ ಎಡಿಷನ್'

ನೂತನ ಕಾರಿನಲ್ಲಿ ನೈಟ್ ಎಡಿಷನ್ ಲಾಂಛನ ಎದ್ದು ಕಾಣಿಸಲಿದೆ. ಇನ್ನು ಐಚ್ಛಿಕ ಸೆಲೆನೈಟ್ ಗ್ರೇ ಮ್ಯಾಗ್ನೊ ಬಣ್ಣದ ಆಯ್ಕೆಯೂ ಇರುತ್ತದೆ.

ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕೂಪೆ 'ನೈಟ್ ಎಡಿಷನ್'

ಕಾರಿನೊಳಗೂ ಕಪ್ಪು ವರ್ಣದ ಥೀಮ್ ಕಂಡುಬರಲಿದೆ. ಎಎಂಜಿ ಸ್ಟೀರಿಂಗ್ ವೀಲ್ ಜೊತೆಗೆ ನಪ್ಪಾ ಲೆಥರ್ ಹೋದಿಕೆಯು ಇದರಲ್ಲಿರುತ್ತದೆ.

ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕೂಪೆ 'ನೈಟ್ ಎಡಿಷನ್'

ನಪ್ಪಾ ಲೆಥರ್ ಹೋದಿಕೆಯು ವಿವಿಧ ಬಣ್ಣಗಳ ಸಂಯೋಜನೆಯನ್ನು ಕಾಣಬಹುದಾಗಿದೆ. ಗ್ರಾಹಕರ ಆಸಕ್ತಿಗೆ ಇಲ್ಲಿ ವಿಶೇಷ ಗಮನ ಕೊಡಲಾಗುವುದು.

ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕೂಪೆ 'ನೈಟ್ ಎಡಿಷನ್'

ಇವುಗಳಲ್ಲಿ ಬ್ಲ್ಯಾಕ್/ಬ್ಲ್ಯಾಕ್, ಗ್ರೇ/ಬ್ಲ್ಯಾಕ್, ರೆಡ್/ಬ್ಲ್ಯಾಕ್ ಜೊತೆಗೆ ಹೈ ಗ್ಲೋಸ್ ಬ್ಲ್ಯಾಕ್ ವುಡ್ ಆಯ್ಕೆಯೂ ಇರುತ್ತದೆ.

ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕೂಪೆ 'ನೈಟ್ ಎಡಿಷನ್'

ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ಕಾರಿನ ಜನಪ್ರಿಯ ಎಸ್400 4 ಮ್ಯಾಟಿಕ್, ಎಸ್500 ಮತ್ತು ಎಸ್500 4ಮ್ಯಾಟಿಕ್ ವೆರಿಯಂಟ್ ಗಳಲ್ಲಿ ನೈಟ್ ಎಡಿಷನ್ ಸೌಲಭ್ಯಗಳು ಲಭ್ಯವಾಗಲಿದೆ.

ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕೂಪೆ 'ನೈಟ್ ಎಡಿಷನ್'

ಇನ್ನು 367 ಅಶ್ವಶಕ್ತಿ ಉತ್ಪಾದಿಸುವ ವಿ6 3.0 ಲೀಟರ್ ಎಂಜಿನ್ ಮತ್ತು 455 ಅಶ್ವಶಕ್ತಿ ಉತ್ಪಾದಿಸಬಲ್ಲ ವಿ8 4.7 ಲೀಟರ್ ಎಂಜಿನ್ ಆಯ್ಕೆಗಳು ಇರುತ್ತದೆ.

English summary
Life Begins At “Night”: Mercedes-Benz S-Class Coupe Night Edition
Story first published: Saturday, December 17, 2016, 13:02 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark