2017 ರೇಂಜ್ ರೋವರ್ ಇವೋಕ್ ಬಿಡುಗಡೆ; ಬೆಲೆ 49.1 ಲಕ್ಷ ರು.

Written By:

ಟಾಟಾ ಮೋಟಾರ್ಸ್ ಅಧೀನತೆಯಲ್ಲಿರುವ ಬ್ರಿಟನ್ ನ ಐಕಾನಿಕ್ ಕಾರು ಸಂಸ್ಥೆ ಲ್ಯಾಂಡ್ ರೋವರ್ ಅತಿ ನೂತನ 2017 ರೇಂಜ್ ರೋವರ್ ಇವೋಕ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.

2017 ರೇಂಜ್ ರೋವರ್ ಇವೋಕ್ ಬಿಡುಗಡೆ; ಬೆಲೆ 49.1 ಲಕ್ಷ ರು.

ನೂತನ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಯಾಗಿರುವ 2017 ರೇಂಜ್ ರೋವ್ ಇವೋಕ್ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 49.1 ಲಕ್ಷ ರು.ಗಳಿಂದ 67.9 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

2017 ರೇಂಜ್ ರೋವರ್ ಇವೋಕ್ ಬಿಡುಗಡೆ; ಬೆಲೆ 49.1 ಲಕ್ಷ ರು.

ಭಾರತದಲ್ಲಿ ಬಿಡುಗೆಡಯಾಗಿರುವ ಮೊದಲ ಲ್ಯಾಂಡ್ ರೋವರ್ ಮಾದರಿಯಾಗಿರುವ ಇವೋಕ್ 2.0 ಲೀಟರ್ ಇಗ್ನೆನಿಯಂ ಡೀಸೆಲ್ ಎಂಜಿನ್ ಗಿಟ್ಟಿಸಿಕೊಳ್ಳಲಿದೆ.

2017 ರೇಂಜ್ ರೋವರ್ ಇವೋಕ್ ಬಿಡುಗಡೆ; ಬೆಲೆ 49.1 ಲಕ್ಷ ರು.

ಹೊಸ ತಲೆಮಾರಿನ ಎಂಜಿನ್ ಹಿಂದಿನ ಮಾದರಿಗಿಂತಲೂ 20 ಕೆ.ಜಿಗಳಷ್ಟು ಹಗುರ ಭಾರ ಆಗಿರಲಿದೆ. ನೂತನ ಇವೋಕ್ 2.0 ಲೀಟರ್ ಇಗ್ನೆನಿಯಂ 2.0 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೂ ಲಭ್ಯವಾಗಲಿದೆ.

2017 ರೇಂಜ್ ರೋವರ್ ಇವೋಕ್ ಬಿಡುಗಡೆ; ಬೆಲೆ 49.1 ಲಕ್ಷ ರು.

ಈ ಎರಡು ಎಂಜಿನ್ ಗಳು 9 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೊತೆಗೆ ಫೋರ್ ವೀಲ್ ಚಾಲನಾ ವ್ಯವಸ್ಥೆಯನ್ನು ಪಡೆಯಲಿದೆ. ಹಾಗೆಯೇ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಗಳು 177 ಅಶ್ವಶಕ್ತಿ ಉತ್ಪಾದಿಸಲಿದೆ.

2017 ರೇಂಜ್ ರೋವರ್ ಇವೋಕ್ ಬಿಡುಗಡೆ; ಬೆಲೆ 49.1 ಲಕ್ಷ ರು.

ಕಾರಿನ ಹೊರಮೈಯಲ್ಲಿ ಅಡಾಪ್ಟಿವ್ ಎಲ್ ಇಡಿ ಹೆಡ್ ಲೈಟ್ ಜೊತೆಗೆ ಎಲ್ ಇಡಿ ಸಿಗ್ನೇಚರ್ ಲೈಟಿಂಗ್ ಸೇವೆಗಳು ಇರಲಿದೆ. ಇನ್ನು ಆಕ್ಸ್ ಫ್ರಡ್ ಲೆಥರ್ ಸೀಟುಗಳು ಇರಲಿದೆ.

2017 ರೇಂಜ್ ರೋವರ್ ಇವೋಕ್ ಬಿಡುಗಡೆ; ಬೆಲೆ 49.1 ಲಕ್ಷ ರು.

ಕಾರಿನೊಳಗೆ 10 ಇಂಚುಗಳ ಟಚ್ ಸ್ಕ್ರೀನ್, ಹೊಸತಾದ ಇನ್ ಕಂಟ್ರೋಲ್ ಟಚ್ ಪ್ರೊ ಇನ್ಪೋಟೈನ್ಮೆಂಟ್ ಸಿಸ್ಟಂ ಇರಲಿದೆ.

2017 ರೇಂಜ್ ರೋವರ್ ಇವೋಕ್ ಬಿಡುಗಡೆ; ಬೆಲೆ 49.1 ಲಕ್ಷ ರು.

ಇನ್ನುಳಿದಂತೆ ಹೊಸತಾದ 825 ಡಬ್ಲ್ಯು ಮೆರಿಡಿಯನ್ ಸೌರಂಡ್ ಸೌಂಡ್ ಸಿಸ್ಟಂ, ಹೆಡ್ ಅಪ್ ಡಿಸ್ ಪ್ಲೇ, ಇನ್ ಕಂಟ್ರೋಲ್ ಆಪ್ ಮತ್ತು ಪವರ್ ಗೆಸ್ಟರ್ ಟೈಲ್ ಗೇಟ್ ಸೇವೆಗಳು ಇರಲಿದೆ.

2017 ರೇಂಜ್ ರೋವರ್ ಇವೋಕ್ ಬಿಡುಗಡೆ; ಬೆಲೆ 49.1 ಲಕ್ಷ ರು.

ಇದೇ ಸಂದರ್ಭದಲ್ಲಿ 2017 ಇವೋಕ್ ಎಕ್ಸ್ ಕ್ಲೂಸಿವ್ ಎಂಬೆರ್ ವಿಶೇಷ ಆವೃತ್ತಿಯನ್ನು ಬಿಡುಗಡೆಗೊಳಿಸಲಾಗಿದೆ. ಇದು ಕಾರಿನೊಳಗೆ ಫೈರನ್ಜ್ ರೆಡ್ ರೂಫ್ ಗಿಟ್ಟಿಸಿಕೊಳ್ಳಲಿದೆ. ಎಬೋನಿ ಬ್ಲ್ಯಾಕ್ ಸೀಟು ಜೊತೆ ಪೈಮೆನೊ ಕೆಂಪು ಹೊಲಿಗೆ ಕಂಡುಬರಲಿದೆ.

2017 ರೇಂಜ್ ರೋವರ್ ಇವೋಕ್ ಬಿಡುಗಡೆ; ಬೆಲೆ 49.1 ಲಕ್ಷ ರು.

ಇದೇ ಸಂದರ್ಭದಲ್ಲಿ 2017 ರೇಂಜ್ ರೋವರ್ ಇವೋಕ್ 2.0 ಲೀಟರ್ ಎಸ್ ಐ4 ಪೆಟ್ರೋಲ್ ಎಂಜಿನ್ 2017 ಜನವರಿ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಇದು 237 ಅಶ್ವಶಕ್ತಿ ಉತ್ಪಾದಿಸಲಿದ್ದು, ಫೋರ್ ವೀಲ್ ಡ್ರೈವ್ ಚಾಲನಾ ವ್ಯವಸ್ಥೆಯಿರಲಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ರೇಂಜ್ ರೋವರ್ ಇವೋಕ್ 2.0 ಲೀಟರ್ (177 ಅಶ್ವಶಕ್ತಿ) ಡೀಸೆಲ್ ಪ್ಯೂರ್: 49.10 ಲಕ್ಷ ರು.

ರೇಂಜ್ ರೋವರ್ ಇವೋಕ್ 2.0 ಲೀಟರ್ (177 ಅಶ್ವಶಕ್ತಿ) ಡೀಸೆಲ್ ಎಸ್ ಇ: 54.20 ಲಕ್ಷ ರು.

ರೇಂಜ್ ರೋವರ್ ಇವೋಕ್ 2.0 ಲೀಟರ್ (177 ಅಶ್ವಶಕ್ತಿ) ಡೀಸೆಲ್ ಎಸ್ ಇ ಡೈನಾಮಿಕ್: 56.30 ಲಕ್ಷ ರು.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ರೇಂಜ್ ರೋವರ್ ಇವೋಕ್ 2.0 ಲೀಟರ್ (177 ಅಶ್ವಶಕ್ತಿ) ಡೀಸೆಲ್ ಎಚ್ ಎಸ್ ಇ: 59.25 ಲಕ್ಷ ರು.

ರೇಂಜ್ ರೋವರ್ ಇವೋಕ್ 2.0 ಲೀಟರ್ (177 ಅಶ್ವಶಕ್ತಿ) ಡೀಸೆಲ್ ಎಚ್ ಎಸ್ ಇ ಡೈನಾಮಿಕ್: 64.65 ಲಕ್ಷ ರು.

ರೇಂಜ್ ರೋವರ್ ಇವೋಕ್ 2.0 ಲೀಟರ್ (177 ಅಶ್ವಶಕ್ತಿ) ಡೀಸೆಲ್ ಎಚ್ ಎಸ್ ಇ ಡೈನಾಮಿಕ್ ಎಂಬೆರ್ ಎಡಿಷನ್: 67.90 ಲಕ್ಷ ರು.

English summary
2017 Range Rover Evoque Launched In India Along With The ‘Ember’ Special Edition Model
Story first published: Tuesday, December 20, 2016, 17:31 [IST]
Please Wait while comments are loading...

Latest Photos