2017ರಲ್ಲಿ ಕೊರೊಲ್ಲಾ ಆಲ್ಟೀಸ್ ಭಾರತಕ್ಕೆ ಪ್ರವೇಶ

Written By:

ಜಪಾನ್ ಮೂಲದ ದೈತ್ಯ ವಾಹನ ಸಂಸ್ಥೆ ಟೊಯೊಟಾ, 2017ರಲ್ಲಿ ಪರಿಷ್ಕೃತ ಕೊರೊಲ್ಲಾ ಆಲ್ಟೀಸ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ದೇಶದಲ್ಲಿ ಸ್ಕೋಡಾ ಒಕ್ಟಾವಿಯಾದಂತಹ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿರುವ ಕೊರೊಲ್ಲಾ ಆಲ್ಟೀಸ್, ಪ್ರೀಮಿಯಂ ವೈಶಿಷ್ಟ್ಯಗಳನ್ನು ಕಾಪಾಡಿಕೊಳ್ಳಲಿದೆ.

ನೂತನ ಕೊರೊಲ್ಲಾ ಆಲ್ಟೀಸ್, ಎಲ್ ಇಡಿ ಡೇಟೈಮ್ ರನ್ನಿಂಗ್ ಹೆಡ್ ಲ್ಯಾಂಪ್ ಜೊತೆ ಡೇಟೈಮ್ ರನ್ನಿಂಗ್ ಲೈಟ್, ಕ್ರೋಮ್ ಅಪ್ಪರ್ ಗ್ರಿಲ್, ಅಗಲವಾದ ರೇಡಿಯೇಟರ್ ಗ್ರಿಲ್ ಮತ್ತು ಎಲ್ ಇಡಿ ಟೈಲ್ ಲ್ಯಾಂಪ್ ವ್ಯವಸ್ಥೆಯಿರಲಿದೆ.

ಕೊರೊಲ್ಲಾ ಆಲ್ಟೀಸ್

ಕಾರಿನೊಳಗೆ ಹೀಟಿಂಗ್, ವೆಂಟಿಲೇಷನ್ ಮತ್ತು ಎಸಿ (ಎಚ್ ವಿಎಸಿ) ವ್ಯವಸ್ಥೆಯಲ್ಲೂ ಸುಧಾರಣೆ ಕಂಡುಬಂದಿದೆ. ಇದು ಆರಾಮದಾಯಕ ಪ್ರಯಾಣವನ್ನು ಖಾತ್ರಿಪಡಿಸಲಿದೆ.

ಹೊಸತಾದ ಟಚ್ 2 ಸಿಸ್ಟಂ ಜೊತೆ ನೇವಿಗೇಷನ್ ಮತ್ತು ಇಂಟೇಗ್ರೇಟಡ್ ಸೆಂಟ್ರಲ್ ಕನ್ಸಾಲ್ ವ್ಯವಸ್ಥೆಯಿರಲಿದೆ. ಇನ್ನು 4.2 ಇಂಚುಗಳ ಎಂಐಡಿ ಪರದೆಯು ಇದರಲ್ಲಿರುತ್ತದೆ.

ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಬದಲಾವಣೆ ಕಂಡುಬರುವ ಸಾಧ್ಯತೆಗಳಿಲ್ಲ. ಇದರಲ್ಲಿರುವ 1.8 ಲೀಟರ್ ವಿವಿಟಿ-ಐ ಪೆಟ್ರೋಲ್ ಎಂಜಿನ್ 140 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ 1.4 ಲೀಟರ್ ಡಿ-4ಡಿ ಟರ್ಬೊ ಡೀಸೆಲ್ ಆವೃತ್ತಿಯು 88 ಅಶ್ವಶಕ್ತಿಯನ್ನು ನೀಡಲಿದೆ. ಇದು 6 ಸ್ಪೀಡ್ ಗೇರ್ ಬಾಕ್ಸ್ ಮತ್ತು 7 ಸ್ಟೆಪ್ ಸಿವಿಟಿ ಯುನಿಟ್ ಇದರಲ್ಲಿರಲಿದೆ.

English summary
Toyota To Launch Facelifted 2017 Corolla Altis In India
Please Wait while comments are loading...

Latest Photos

X