2016-17ನೇ ಸಾಲಿನಲ್ಲಿ ಬಿಡುಗಡೆಯಾಗಲಿರುವ ರೆನೊ ಕಾರುಗಳು

By Nagaraja

ಡಸ್ಟರ್ ಕ್ರೀಡಾ ಬಳಕೆಯ ವಾಹನದ ಬಿಡುಗಡೆಯ ಬಳಿಕ ದೇಶದ ವಾಹನ ಮಾರುಕಟ್ಟೆಯಲ್ಲಿ ತನ್ನ ಅದೃಷ್ಟ ಬದಲಾಯಿಸಿರುವ ಫ್ರಾನ್ಸ್ ಮೂಲದ ರೆನೊ ಸಂಸ್ಥೆಯು, ಕ್ವಿಡ್ ಸಣ್ಣ ಕಾರಿನ ಪ್ರವೇಶದೊಂದಿಗೆ ತನ್ನ ಸಾನಿಧ್ಯವನ್ನು ಮತ್ತಷ್ಟು ಗಟ್ಟಿಪಡಿಸಿತ್ತು.

ಈಗ ದೇಶದ ವಾಹನ ಮಾರುಕಟ್ಟೆಯಲ್ಲಿ ಗರಿಷ್ಠ ಮಾರಾಟ ಗುರಿಯಿರಿಸಿಕೊಂಡಿರುವ ರೆನೊ, 2016-17ನೇ ಸಾಲಿನಲ್ಲಿ ಮತ್ತಷ್ಟು ಆಕರ್ಷಕ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ನಿಧಾನವಾಗಿ ವಾಹನ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗುತ್ತಿರುವ ರೆನೊ ಮುಂಬರುವ ಕಾರುಗಳು ಯಾವುವು ಗೊತ್ತೇ? ಬನ್ನಿ ನೋಡೋಣ...

ರೆನೊ ಕ್ವಿಡ್ 1.0 ಲೀಟರ್ ಜೊತೆಗೆ ಎಎಂಟಿ

ರೆನೊ ಕ್ವಿಡ್ 1.0 ಲೀಟರ್ ಜೊತೆಗೆ ಎಎಂಟಿ

2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿರುವ ರೆನೊ ಕ್ವಿಡ್ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಮಾದರಿಯು ಪ್ರಸಕ್ತ ಸಾಲಿನಲ್ಲೇ ಬಿಡುಗಡೆಯಾಗಲಿದೆ. ರೆನೊ ಕ್ವಿಡ್ ಎಎಂಟಿ ಕಾರು 'ಈಸಿ-ಆರ್' ಗೇರ್ ಬಾಕ್ಸ್ ಎಂದು ಹೆಸರಿಸಿಕೊಳ್ಳಲಿದೆ.

 ರೆನೊ ಕ್ವಿಡ್ 1.0 ಲೀಟರ್ ಜೊತೆಗೆ ಎಎಂಟಿ

ರೆನೊ ಕ್ವಿಡ್ 1.0 ಲೀಟರ್ ಜೊತೆಗೆ ಎಎಂಟಿ

ನೂತನ ರೆನೊ ಕ್ವಿಡ್ ಕಾರಿನಲ್ಲಿರುವ ಹೆಚ್ಚು ಶಕ್ತಿಶಾಲಿ 1.0 ಲೀಟರ್ ಎಂಜಿನ್ 95 ಎನ್ ಎಂ ತಿರುಗುಬಲದಲ್ಲಿ 70 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಈಸಿ-ಆರ್ ಅಥವಾ ಐದು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಅಂದಾಜು ಬೆಲೆ: 3ರಿಂದ 4.5 ಲಕ್ಷ ರು.

ನಿರೀಕ್ಷಿತ ಬಿಡುಗಡೆ: 2016 ಹಬ್ಬದ ಆವೃತ್ತಿ

ರೆನೊ ಕ್ಯಾಪ್ಚರ್

ರೆನೊ ಕ್ಯಾಪ್ಚರ್

ಡಸ್ಟರ್ ಕ್ರೀಡಾ ಬಳಕೆಯ ವಾಹನದ ಯಶಸ್ಸಿನಿಂದ ಪುಳಕಿತಗೊಂಡಿರುವ ರೆನೊ, ಹೆಚ್ಚು ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿರುವ ಮಗದೊಂದು ಎಸ್‌ಯುವಿ ಬಿಡುಗಡೆ ಮಾಡುವ ಯೋಚನೆಯಲ್ಲಿದೆ. ಅದುವೇ ರೆನೊ ಕ್ಯಾಪ್ಚರ್.

ರೆನೊ ಕ್ಯಾಪ್ಚರ್

ರೆನೊ ಕ್ಯಾಪ್ಚರ್

ಆಲ್ ವೀಲ್ ಡ್ರೈವ್ ಮುಂತಾದ ವ್ಯವಸ್ಥೆಗಳನ್ನು ಪಡೆಯಲಿರುವ ರೆನೊ ಕ್ಯಾಪ್ಚರ್ ಮಾರುಕಟ್ಟೆಯಲ್ಲಿ ಮಹೀಂದ್ರ ಎಕ್ಸ್ ಯುವಿ500 ಹಾಗೂ ಟಾಟಾ ಹೆಕ್ಸಾ ಮುಂತಾದ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಅಂದಾಜು ಬೆಲೆ: 12ರಿಂದ 15 ಲಕ್ಷ ರು.

ನಿರೀಕ್ಷಿತ ಬಿಡುಗಡೆ: 2017

ರೆನೊ ಕ್ವಿಡ್ ಕಾಂಪಾಕ್ಟ್ ಎಸ್‌ಯುವಿ

ರೆನೊ ಕ್ವಿಡ್ ಕಾಂಪಾಕ್ಟ್ ಎಸ್‌ಯುವಿ

ಎಚ್‌ಬಿಸಿ ಎಂಬ ಕೋಡ್ ಪಡೆದುಕೊಂಡಿರುವ ರೆನೊ ಕ್ವಿಡ್ ಕಾಂಪಾಕ್ಟ್ ಎಸ್‌ಯುವಿ ನಿರ್ಮಾಣವು ತೆರೆಮರೆಯಲ್ಲಿ ಜೋರಾಗಿ ನಡೆಯುತ್ತಿದೆ. ಕ್ವಿಡ್ ತಳಹದಿಯಲ್ಲಿ ನಿರ್ಮಾಣವಾಗುತ್ತಿರುವ ನೂತನ ರೆನೊ ಕ್ವಿಡ್ ಕಾಂಪಾಕ್ಟ್ ಎಸ್‌ಯುವಿ ಸ್ಪರ್ಧಾತ್ಮಕ ಬೆಲೆಗಳಲ್ಲಿ ಮಾರುಕಟ್ಟೆಯನ್ನು ತಲುಪಲಿದೆ.

ರೆನೊ ಕ್ವಿಡ್ ಕಾಂಪಾಕ್ಟ್ ಎಸ್‌ಯುವಿ

ರೆನೊ ಕ್ವಿಡ್ ಕಾಂಪಾಕ್ಟ್ ಎಸ್‌ಯುವಿ

ಕ್ವಿಡ್ ಕಾರಿನಲ್ಲಿರುವದಕ್ಕೆ ಸಮಾನವಾದ 1.0 ಲೀಟರ್ ಎಂಜಿನ್ ಇದರಲ್ಲಿ ಬಳಕೆಯಾಗಲಿದೆ. ಹಾಗೆಯೇ ಎಎಂಟಿ ಜೊತೆಗೆ ಐದು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿದೆ.

ಅಂದಾಜು ಬೆಲೆ: 4 ರಿಂದ 6 ಲಕ್ಷ ರು.

ನಿರೀಕ್ಷಿತ ಬಿಡುಗಡೆ: 2017

ರೆನೊ ಕ್ವಿಡ್ ಕಾಂಪಾಕ್ಟ್ ಸೆಡಾನ್

ರೆನೊ ಕ್ವಿಡ್ ಕಾಂಪಾಕ್ಟ್ ಸೆಡಾನ್

ಕೇವಲ ಕ್ರೀಡಾ ಬಳಕೆಯ ವಾಹನ ವಿಭಾಗದಲ್ಲಿ ಮಾತ್ರವಲ್ಲದೆ ದೇಶದಲ್ಲಿ ಅತಿ ಹೆಚ್ಚು ಬೇಡಿಕೆಯಿರುವ ಕಾಂಪಾಕ್ಟ್ ಸೆಡಾನ್ ವಿಭಾಗಕ್ಕೂ ರೆನೊ ಕಾಲಿಡಲಿದೆ. ಈ ನಿಟ್ಟಿನಲ್ಲಿ ಎಲ್‌ಬಿಸಿ ಎಂಬ ಕೋಡ್ ನಲ್ಲಿ ಹೊಸ ಕಾರಿನ ಅಭಿವೃದ್ಧಿ ನಡೆಯುತ್ತಿದೆ.

ರೆನೊ ಕ್ವಿಡ್ ಕಾಂಪಾಕ್ಟ್ ಸೆಡಾನ್

ರೆನೊ ಕ್ವಿಡ್ ಕಾಂಪಾಕ್ಟ್ ಸೆಡಾನ್

ರೆನೊ ಕ್ವಿಡ್ ಕಾಂಪಾಕ್ಟ್ ಸೆಡಾನ್ ಕಾರಿನಲ್ಲೂ 1.0 ಲೀಟರ್ ಎಂಜಿನ್ ಬಳಕೆಯಾಗಲಿದ್ದು, ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಮತ್ತು ಹೋಂಡಾ ಅಮೇಜ್ ಮುಂತಾದ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಅಂದಾಜು ಬೆಲೆ: 3 ರಿಂದ 5 ಲಕ್ಷ ರು.

ನಿರೀಕ್ಷಿತ ಬಿಡುಗಡೆ: 2017

ನ್ಯೂ ಜನರೇಷನ್ ರೆನೊ ಡಸ್ಟರ್

ನ್ಯೂ ಜನರೇಷನ್ ರೆನೊ ಡಸ್ಟರ್

ಸಾವೋ ಪಾಲೋ ಮೋಟಾರು ಶೋದಲ್ಲಿ ಪ್ರದರ್ಶನ ಕಂಡಿರುವ ಓರೊಚ್ ಕಾನ್ಸೆಪ್ಟ್ ತಳಹದಿಯಲ್ಲಿ ನ್ಯೂ ಜನರೇಷನ್ ಡಸ್ಟರ್ ಕಾರಿನ ನಿರ್ಮಾಣವಾಗಲಿದೆ. ಇದರಲ್ಲಿ ಮೂರನೇ ಸಾಲಿನ ಆಸನ ವ್ಯವಸ್ಥೆಯು ಪ್ರಮುಖ ಆಕರ್ಷಣೆಯಾಗಲಿದೆ.

ನ್ಯೂ ಜನರೇಷನ್ ರೆನೊ ಡಸ್ಟರ್

ನ್ಯೂ ಜನರೇಷನ್ ರೆನೊ ಡಸ್ಟರ್

ಹಾಗಿದ್ದರೂ ಭಾರತ ಆವೃತ್ತಿಯ ಎಂಜಿನ್ ಮಾನದಂಡಗಳಲ್ಲಿ ಬದಲಾವಣೆ ಕಂಡುಬರುವ ಸಾಧ್ಯತೆ ಕಡಿಮೆಯಾಗಿದೆ. ಇದರಲ್ಲಿ ಡಸ್ಟರ್ ಗೆ ಸಮಾನವಾದ ಎಂಜಿನ್ ಬಳಕೆಯಾಗಲಿದೆ.

ಅಂದಾಜು ಬೆಲೆ: 9 ರಿಂದ 13 ಲಕ್ಷ ರು.

ನಿರೀಕ್ಷಿತ ಬಿಡುಗಡೆ: 2017

ರೆನೊ ಕಾಂಪಾಕ್ಟ್ ಫ್ಯಾಮಿಲಿ ಎಂಪಿವಿ

ರೆನೊ ಕಾಂಪಾಕ್ಟ್ ಫ್ಯಾಮಿಲಿ ಎಂಪಿವಿ

ರೆನೊ ಲೊಡ್ಜಿ ಮಾರುಕಟ್ಟೆಯಲ್ಲಿ ಅಷ್ಟೇನೂ ಸದ್ದು ಮಾಡಿಲ್ಲ. ಬಹು ಬಳಕೆಯ ವಾಹನ ವಿಭಾಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿತ್ತಾದರೂ ಗಮನಾರ್ಹ ಮಾರಾಟ ಸಾಧಿಸುವಲ್ಲಿ ವಿಫಲವಾಗಿದೆ. ಇಲ್ಲಿಗೆ ಪ್ರಯತ್ನ ಕೈಬಿಡದ ರೆನೊ ಸಂಸ್ಥೆಯೀಗ ಫ್ಯಾಮಿಲಿ ಎಂಪಿವಿ ಬಿಡುಗಡೆ ಮಾಡುವ ಇರಾದೆಯಲ್ಲಿದೆ.

ರೆನೊ ಕಾಂಪಾಕ್ಟ್ ಫ್ಯಾಮಿಲಿ ಎಂಪಿವಿ

ರೆನೊ ಕಾಂಪಾಕ್ಟ್ ಫ್ಯಾಮಿಲಿ ಎಂಪಿವಿ

ರೆನೊ ಕಾಂಪಾಕ್ಟ್ ಫ್ಯಾಮಿಲಿ ಎಂಪಿವಿ ಸಹ ಕ್ವಿಡ್‌ನ ಸಿಎಂಎಫ್-ಎ ತಳಹದಿಯಲ್ಲೇ ನಿರ್ಮಾಣವಾಗಲಿದೆ ಎಂಬುದು ಗಮನಾರ್ಹ ಸಂಗತಿ. ಅಂದರೆ ಸ್ಪರ್ಧಾತ್ಮಕ ಬೆಲೆಗಳಲ್ಲಿ ಮಾರುಕಟ್ಟೆಗೆ ಅಪ್ಪಳಿಸಲಿದೆ ಎಂಬುದಂತೂ ಗ್ಯಾರಂಟಿ.

ಅಂದಾಜು ಬೆಲೆ: 6 ರಿಂದ 8 ಲಕ್ಷ ರು.

ನಿರೀಕ್ಷಿತ ಬಿಡುಗಡೆ: 2017 ವರ್ಷಾಂತ್ಯ ಅಥವಾ 2018 ವರ್ಷಾರಂಭ

Most Read Articles

Kannada
English summary
Upcoming Renault Cars In India 2016-17
Story first published: Friday, July 15, 2016, 17:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X