ಮುಂಬರುವ ಕಾರುಗಳು; ಟಾಟಾ ಅದೃಷ್ಟ ಬದಲಾದಿತೇ ?

Written By:

ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆ ಟಾಟಾ ಮೋಟಾರ್ಸ್ ಇತ್ತೀಚೆಗಷ್ಟೇ ಅತಿ ನೂತನ ಟಿಯಾಗೊ ಹ್ಯಾಚ್ ಬ್ಯಾಕ್ ಕಾರನ್ನು ಬಿಡುಗಡೆಗೊಳಿಸಿತ್ತು. ನೂತನ ವಿನ್ಯಾಸ ತಂತ್ರಗಾರಿಕೆಯೊಂದಿಗೆ ಗುಣಮಟ್ಟದ ಕಾರುಗಳನ್ನು ಉತ್ಪಾದಿಸುವುದರಲ್ಲಿ ಗಮನ ಕೇಂದ್ರಿತವಾಗಿರುವ ಟಾಟಾ ನಿಕಟ ಭವಿಷ್ಯದಲ್ಲಿ ಮತ್ತಷ್ಟು ಆಕರ್ಷಕ ಕಾರುಗಳನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.

ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನಮಾವನ್ನು ಕಾಪಾಡಿಕೊಳ್ಳುವ ಇರಾದೆಯಲ್ಲಿರುವ ಟಾಟಾ, ಭಾರತೀಯ ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ನೂತನ ಮಾದರಿಗಳನ್ನು ಪರಿಚಯಿಸಲಿದೆ. ಪ್ರಸ್ತುತ ಲೇಖನದಲ್ಲಿ ಮುಂದಿನ ದಿನಗಳಲ್ಲಿ ಟಾಟಾದಿಂದ ಬಿಡುಗಡೆಯಾಗಲಿರುವ ಕಾರುಗಳ ಬಗ್ಗೆ ಮಾಹಿತಿಯನ್ನು ಕೊಡಲಿದ್ದೇವೆ.

To Follow DriveSpark On Facebook, Click The Like Button
ಟಾಟಾ ಹೆಕ್ಸಾ

ಟಾಟಾ ಹೆಕ್ಸಾ

ಟಾಟಾದ ಪ್ರೀಮಿಯಂ ಕ್ರೀಡಾ ಬಳಕೆಯ ವಾಹನವಾಗಲಿರುವ ಟಾಟಾ ಹೆಕ್ಸಾ, ಮಹೀಂದ್ರ ಎಕ್ಸ್ ಯುವಿ500, ಟೊಯೊಟಾ ಇನ್ನೋವಾ ಮತ್ತು ಹೋಂಡಾ ಬಿಆರ್ ವಿ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಟಾಟಾ ಹೆಕ್ಸಾ

ಟಾಟಾ ಹೆಕ್ಸಾ

ಟಾಟಾ ಆರಿಯಾ ತಳಹದಿಯಲ್ಲಿ ನಿರ್ಮಾಣವಾಗಲಿರುವ ನೂತನ ಹೆಕ್ಸಾ 2.2 ಲೀಟರ್ ವ್ಯಾರಿಕೋರ್ 400 ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 400 ಎನ್ ಎಂ ತಿರುಗುಬಲದಲ್ಲಿ 154 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು 10ರಿಂದ 13 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಟಾಟಾ ಕೈಟ್

ಟಾಟಾ ಕೈಟ್

ಟಾಟಾ ಕೈಟ್ 5 ಕಾಂಪಾಕ್ಟ್ ಸೆಡಾನ್ ಕಾರು ಮುಂಬರುವ ಹಬ್ಬದ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ. ಪ್ರಸ್ತುತ ಕಾರು ಟೆಸ್ಟಿಂಗ್ ವೇಳೆ ಕ್ಯಾಮೆರಾದ ರಹಸ್ಯ ಕಣ್ಣುಗಳಿಗೆ ಸೆರೆ ಸಿಕ್ಕಿದ್ದು, ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ನಾಲ್ಕು ಮೀಟರ್ ಉದ್ದ ಪರಿಧಿಯೊಳಗೆ ನಿರ್ಮಾಣವಾಗಲಿರುವ ಟಾಟಾ ಕೈಟ್ 1.2 ಲೀಟರ್ ಪೆಟ್ರೋಲ್ ಮತ್ತು 1.05 ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ.

ಟಾಟಾ ಕೈಟ್

ಟಾಟಾ ಕೈಟ್

ಫೈವ್ ಸ್ಪೀಡ್ ಮ್ಯಾನುವಲ್ ಜೊತೆಗೆ ಎಎಂಟಿ ಗೇರ್ ಬಾಕ್ಸ್ ಆಯ್ಕೆಯೂ ಲಭ್ಯವಿರುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳು ಅನುಕ್ರಮವಾಗಿ 84 (114 ಎನ್ ಎಂ ತಿರುಗುಬಲ) ಹಾಗೂ 69 (140 ಎನ್ ಎಂ ತಿರುಗುಬಲ) ಅಶ್ವಶಕ್ತಿಗಳನ್ನು ಉತ್ಪಾದಿಸಲಿದೆ.

ಟಾಟಾ ನೆಕ್ಸನ್

ಟಾಟಾ ನೆಕ್ಸನ್

ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನ ವಿಭಾಗಕ್ಕೂ ಲಗ್ಗೆಯಿಡಲಿರುವ ಟಾಟಾ ಅತ್ಯಾಕರ್ಷಕ ನೆಕ್ಸನ್ ಕಾರನ್ನು ಬಿಡುಗಡೆ ಮಾಡಲಿದೆ. ಟಾಟಾ ನೆಕ್ಸನ್ ಸಹ ಟೆಸ್ಟಿಂಗ್ ವೇಳೆ ಪತ್ತೆ ಹಚ್ಚಲಾಗಿದ್ದು, ಬೋಲ್ಟ್ ತಳಹದಿಯಲ್ಲಿ ನಿರ್ಮಾಣಗೊಳ್ಳುತ್ತಿದೆ.

ಟಾಟಾ ನೆಕ್ಸನ್

ಟಾಟಾ ನೆಕ್ಸನ್

ಇದು 1.2 ಲೀಟರ್ ರೆವೊಟ್ರಾನ್ ಟರ್ಬೊಚಾರ್ಜ್ಡ್ ಮತ್ತು 1.5 ಲೀಟರ್ ಡೀಸೆಲ್ ಫೋರ್ ಸಿಲಿಂಡರ್ ರೆವೊಟಾರ್ಕ್ ಎಂಜಿನ್ ಪಡೆಯಲಿದೆ. ಅಂತೆಯೇ ಮ್ಯಾನುವಲ್ ಜೊತೆಗೆ ಎಎಂಟಿ ಗೇರ್ ಬಾಕ್ಸ್ ಪಡೆಯಲಿದೆ.

 ಟಾಟಾ ಬೋಲ್ಟ್ ಸ್ಪೋರ್ಟ್

ಟಾಟಾ ಬೋಲ್ಟ್ ಸ್ಪೋರ್ಟ್

2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿರುವ ಬೋಲ್ಟ್ ಶಕ್ತಿಶಾಲಿ ಸ್ಪೋರ್ಟ್ ಆವೃತ್ತಿಯು ಸಹ ನಿಕಟ ಭವಿಷ್ಯದಲ್ಲೇ ರಸ್ತೆಗಿಳಿಯಲಿದೆ. ವಿಶೇಷ ಕಿಟ್ ಪ್ಯಾಕೇಜ್ ಸಹ ಬೋಲ್ಟ್ ಸ್ಪೋರ್ಟ್ ಮಾದರಿಯನ್ನು ಮತ್ತಷ್ಟು ಶಕ್ತಿಶಾಲಿಯಾಗಿಸಲಿದೆ.

ಟಾಟಾ ಬೋಲ್ಟ್ ಸ್ಪೋರ್ಟ್

ಟಾಟಾ ಬೋಲ್ಟ್ ಸ್ಪೋರ್ಟ್

ಇದರಲ್ಲಿರುವ ಶಕ್ತಿಶಾಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ 170 ಎನ್ ಎಂ ತಿರುಗುಬಲದಲ್ಲಿ 120 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ನಿಂದ ನಿಯಂತ್ರಿಸ್ಪಡಲಿದೆ.

ಟಾಟಾ ಪೆಲಿಕನ್

ಟಾಟಾ ಪೆಲಿಕನ್

ನ್ಯಾನೋದ ಅದೇ ತಳಹದಿಯಲ್ಲಿ ದೊಡ್ಡ ಹ್ಯಾಚ್‌ಬ್ಯಾಕ್ ನಿರ್ಮಾಣ ಮಾಡುವುದು ಟಾಟಾ ಗುರಿಯಾಗಿದೆ. ಇದು ಗುಜರಾತ್‌ನ ಸನಂದ್ ಘಟಕದಿಂದಲೇ ನಿರ್ಮಾಣವಾಗಲಿದ್ದು, ಈಗಾಗಲೇ 'ಪೆಲಿಕನ್' (Pelican) ಎಂಬ ಕೋಡ್ ಪಡೆದುಕೊಂಡಿದೆ.

ಟಾಟಾ ಪೆಲಿಕನ್

ಟಾಟಾ ಪೆಲಿಕನ್

ನ್ಯಾನೋ ಅಪ್‌ಗ್ರೇಡ್ ವರ್ಷನ್ ಆಗಿರುವ ಇದು 'ಎಕ್ಸ್302' ಫ್ಲ್ಯಾಟ್‌ಫಾರ್ಮ್‌ನಲ್ಲಿ ಸಿದ್ಧಗೊಳ್ಳಲಿದೆ. ಇದು ಪೆಟ್ರೋಲ್ ಜೊತೆಗೆ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಅಂದರೆ ಒಂದು ಲೀಟರ್ ಪೆಟ್ರೋಲ್ ಜೊತೆಗೆ ಅತಿ ಚಿಕ್ಕ 800 ಸಿಸಿ ಡೀಸೆಲ್ ಎಂಜಿನ್ ಇದರಲ್ಲಿರಲಿದೆ.

ಮುಂಬರುವ ಕಾರುಗಳು; ಟಾಟಾ ಅದೃಷ್ಟ ಬದಲಾದಿತೇ ?

ಈಗ ಟಾಟಾ ಕಾರುಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಿರಿ.

English summary
Tata’s Upcoming Cars For India In 2016; The Designs Are Just Getting Better
Story first published: Saturday, June 11, 2016, 15:48 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark