2016ನೇ ಸಾಲಿನಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿರುವ 23 ಕಾರುಗಳು

By Nagaraja

2015ರಂತೆ 2016ನೇ ವರ್ಷವೂ ಕೂಡಾ ಭಾರತೀಯ ವಾಹನ ಮಾರುಕಟ್ಟೆಯ ಪಾಲಿಗೆ ನಿರ್ಣಾಯಕವೆನಿಸಿದೆ. ಬೆಳೆದು ಬರುತ್ತಿರುವ ಹಾಗೂ ವಿಸ್ತಾರವಾಗಿ ಹರಡಿರುವ ಭಾರತದ ವಾಹನ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡಿರುವ ಅನೇಕ ವಾಹನ ತಯಾರಿಕ ಸಂಸ್ಥೆಗಳು ದೇಶದತ್ತ ಗಮನ ಕೇಂದ್ರಿಕರಿಸಿದೆ.

ಮುಂದಿನ ತಿಂಗಳಲ್ಲಿ ಆಟೋ ಎಕ್ಸ್ ಪೋ ನಡೆಯಲಿರುವಂತೆಯೇ ಹೊಸ ಹೊಸ ಕಾನ್ಸೆಪ್ಟ್ ಗಳನ್ನು ನಿರೀಕ್ಷೆ ಮಾಡಬಹುದಾಗಿದೆ. ಪ್ರಸ್ತುತ ಲೇಖನದಲ್ಲಿ ಪ್ರಸಕ್ತ ಸಾಲಿನಲ್ಲಿ ಬಿಡುಗಡೆಯಾಗಲಿರುವ ಕಾರುಗಳ ಬಗ್ಗೆ ವಿವರಣೆ ನೀಡುವ ಪ್ರಯತ್ನ ಮಾಡಲಿದ್ದೇವೆ.

ಟಾಟಾ ಝಿಕಾ

ಟಾಟಾ ಝಿಕಾ

ಭಾರತೀಯ ಪ್ರಯಾಣಿಕ ಕಾರು ಮಾರುಕಟ್ಟೆಗೆ ಭರ್ಜರಿ ಪುನರಾಗಮನದ ನಿರೀಕ್ಷೆಯಲ್ಲಿರುವ ಟಾಟಾ ಸಂಸ್ಥೆಗೆ ನೂತನ ಝಿಕಾ ನಿರ್ಣಾಯಕವೆನಿಸಲಿದೆ. ಪ್ರಸ್ತುತ ಕಾರು ಜನವರಿ ತಿಂಗಳಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ.

ಅಂದಾಜು ಬೆಲೆ: 4 ಲಕ್ಷ ರು.

ದಟ್ಸನ್ ರೆಡಿ ಗೊ

ದಟ್ಸನ್ ರೆಡಿ ಗೊ

ರೆನೊ ಕ್ವಿಡ್ ತಳಹದಿಯಲ್ಲೇ ನಿರ್ಮಾಣವಾಗಿರುವ ದಟ್ಸನ್ ರೆಡಿ ಗೊ ಕೂಡಾ ಜನವರಿಯಲ್ಲೇ ಬಿಡುಗಡೆಯಾಗುವುದು ಬಹುತೇಕ ಖಚಿತವೆನಿಸಿದೆ. ಇದು ಕೂಡಾ ಆಲ್ಟೊ ಕಾರಿಗೆ ಪ್ರತಿಸ್ಪರ್ಧಿಯಾಗಲಿದೆ.

ಅಂದಾಜು ಬೆಲೆ: 3 ಲಕ್ಷ ರು.

ಫೋಕ್ಸ್ ವ್ಯಾಗನ್ ಪೊಲೊ ಜಿಟಿಐ

ಫೋಕ್ಸ್ ವ್ಯಾಗನ್ ಪೊಲೊ ಜಿಟಿಐ

2015 ಫ್ರಾಂಕ್ ಫರ್ಟ್ ಮೋಟಾರು ಶೋದಲ್ಲಿ ಪ್ರದರ್ಶನಕ್ಕಿರಿಸಿದ್ದ ಫೋಕ್ಸ್ ವ್ಯಾಗನ್ ಪೊಲೊ ಜಿಟಿಐ 2016 ಮಧ್ಯಂತರ ಅವಧಿಯಲ್ಲಿ ಭಾರತೀಯ ಮಾರುಕಟ್ಟೆಯನ್ನು ತಲುಪಲಿದೆ.

ಅಂದಾಜು ಬೆಲೆ: 22 ಲಕ್ಷ ರು.

ರೆನೊ ಡಸ್ಟರ್ ಫೇಸ್ ಲಿಫ್ಟ್

ರೆನೊ ಡಸ್ಟರ್ ಫೇಸ್ ಲಿಫ್ಟ್

ಈ ಹಂತದಲ್ಲಿ ಸ್ವಲ್ಪ ಕಳೆಗುಂದಿರುವ ಡಸ್ಟರ್ ಹೊಸ ಸ್ವರೂಪವನ್ನು ಪಡೆಯಬೇಕಾಗಿರುವುದು ಅವಶ್ಯಕವೆನಿಸುತ್ತದೆ. ಇದನ್ನೇ ಗಮನದಲ್ಲಿಟ್ಟುಕೊಂಡಿರುವ ಈ ಫ್ರಾನ್ಸ್ ಸಂಸ್ಥೆಯು ಪರಿಷ್ಕೃತ ಡಸ್ಟರ್ ಕಾರನ್ನು ಎಎಂಟಿ ಗೇರ್ ಬಾಕ್ಸ್ ಸೌಲಭ್ಯದೊಂದಿಗೆ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ಅಂದಾಜು ಬೆಲೆ: 8.5 ಲಕ್ಷ ರು.

ಟೊಯೊಟಾ ಇನ್ನೋವಾ

ಟೊಯೊಟಾ ಇನ್ನೋವಾ

ಸಂಪೂರ್ಣ ಹೊಸ ಮೈಬಣ್ಣ ಪಡೆಯಲಿರುವ ಟೊಯೊಟಾ ಇನ್ನೋವಾ, ಬಹು ಬಳಕೆಯ ವಾಹನ ವಿಭಾಗದಲ್ಲಿ ಮಗದೊಮ್ಮೆ ಮೋಡಿ ಮಾಡುವ ನಿರೀಕ್ಷೆಯಲ್ಲಿದೆ.

ಅಂದಾಜು ಬೆಲೆ: 10.5 ಲಕ್ಷ ರು.

ಟಾಟಾ ಹೆಕ್ಸಾ

ಟಾಟಾ ಹೆಕ್ಸಾ

ಬಹು ಬಳಕೆಯ ವಾಹನ ವಿಭಾಗಕ್ಕೂ ಕಾಲಿಡಲಿರುವ ಟಾಟಾ ಹೆಕ್ಸಾ ಕಾರನ್ನು ಬಿಡುಗಡೆ ಮಾಡಲಿದೆ. ಹಿಂದೆ ಆರಿಯಾ ಎಂಬ ಹೆಸರಿನಲ್ಲಿ ಮಾರಾಟವಾಗುತ್ತಿದ್ದ ಟಾಟಾ ಹೊಸ ಮಾದರಿಯು ಆಲ್ ವೀಲ್ ಡ್ರೈವ್ ಚಾಲನಾ ವ್ಯವಸ್ಥೆಯೊಂದಿಗೂ ಆಗಮನವಾಗುವ ನಿರೀಕ್ಷೆಯಿದೆ.

ಅಂದಾಜು ಬೆಲೆ: 13.5 ಲಕ್ಷ ರು.

ಮಹೀಂದ್ರ ಕೆಯುವಿ100

ಮಹೀಂದ್ರ ಕೆಯುವಿ100

ದೇಶದಲ್ಲಿ ಮಿನಿ ಎಸ್‌ಯುವಿಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಮಹೀಂದ್ರ ಕೆಯುವಿ100 ಹೆಚ್ಚಿನ ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

ಅಂದಾಜು ಬೆಲೆ: 5 ಲಕ್ಷ ರು.

ಮಾರುತಿ ಸುಜುಕಿ ವೈಬಿಎ (ವಿಟಾರಾ ಬ್ರಿಝಾ)

ಮಾರುತಿ ಸುಜುಕಿ ವೈಬಿಎ (ವಿಟಾರಾ ಬ್ರಿಝಾ)

ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನ ವಿಭಾಗಕ್ಕೆ ಮಾರುತಿ ಕೂಡಾ ಎಂಟ್ರಿ ಕೊಡುತ್ತಿದ್ದು, ಆಕರ್ಷಕ ವಿಟಾರಾ ಬ್ರಿಝಾ ಬಿಡುಗಡೆ ಮಾಡಲಿದೆ. ಇದು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಾಗಲಿದೆ.

ಅಂದಾಜು ಬೆಲೆ: 5 ಲಕ್ಷ ರು.

ಹೋಂಡಾ ಬಿಆರ್-ವಿ

ಹೋಂಡಾ ಬಿಆರ್-ವಿ

ಮೊಬಿಲಿಯೊ ತಳಹದಿಯಲ್ಲಿ ನಿರ್ಮಾಣವಾಗಲಿರುವ ಹೋಂಡಾ ಬಿಆರ್-ವಿ ಫೆಬ್ರವರಿ ತಿಂಗಳಲ್ಲಿ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ. ಇದರಲ್ಲಿ ಹೋಂಡಾದ 1.5 ಲೀಟರ್ ಐ-ವಿಟೆಕ್ ಪೆಟ್ರೋಲ್ ಹಾಗೂ 1.5 ಲೀಟರ್ ಐ-ಡಿಟೆಕ್ ಡೀಸೆಲ್ ಎಂಜಿನ್ ಬಳಕೆಯಾಗಲಿದೆ.

ಅಂದಾಜು ಬೆಲೆ: 7.5 ಲಕ್ಷ ರು.

ಸ್ಯಾಂಗ್ಯೊಂಗ್ ಟಿವೊಲಿ

ಸ್ಯಾಂಗ್ಯೊಂಗ್ ಟಿವೊಲಿ

ಮಹೀಂದ್ರ ಸಹಯೋಗದಲ್ಲಿ ಸ್ಯಾಂಗ್ಯೊಂಗ್ ಟಿವೊಲಿ ಪ್ರಸಕ್ತ ಸಾಲಿನಲ್ಲೇ ಬಿಡುಗಡೆಯಾಲಿಗದೆ. ಇದು ರೆನೊ ಡಸ್ಟರ್, ಹ್ಯುಂಡೈ ಕ್ರೆಟಾ ಹಾಗೂ ಮಾರುತಿ ಸುಜುಕಿ ಕ್ರಾಸ್ ಮಾದರಿಗಳಿಗೆ ಪ್ರತಿಸ್ಪರ್ಧೆಯಾಗಲಿದೆ.

ಅಂದಾಜು ಬೆಲೆ: 8 ಲಕ್ಷ ರು.

ಹ್ಯುಂಡೈ ಎಲಾಂಟ್ರಾ ಫೇಸ್ ಲಿಫ್ಟ್

ಹ್ಯುಂಡೈ ಎಲಾಂಟ್ರಾ ಫೇಸ್ ಲಿಫ್ಟ್

ಹ್ಯುಂಡೈ ಕೂಡಾ ತನ್ನ ಶ್ರೇಣಿಯ ವಾಹನಗಳನ್ನು ಪರಿಷ್ಕೃತಗೊಳಿಸುವ ಇರಾದೆಯಲ್ಲಿದ್ದು, ನೂತನ ಎಲಾಂಟ್ರಾ ಇದಕ್ಕೊಂದು ಉದಾಹರಣೆಯಾಗಲಿದೆ. ನೂತನ ಹ್ಯುಂಡೈ ಎಲಾಂಟ್ರಾ 2016 ಮಧ್ಯಮತ ಅವಧಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಅಂದಾಜು ಬೆಲೆ: 14.5 ಲಕ್ಷ ರು.

ಟಾಟಾ ಝಿಕಾ ಸೆಡಾನ್

ಟಾಟಾ ಝಿಕಾ ಸೆಡಾನ್

ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಝಿಕಾ ತಳಹದಿಯಲ್ಲೇ ಟಾಟಾದಿಂದ ಮಗದೊಂದು ಆಕರ್ಷಕ ಸೆಡಾನ್ ಕಾರು ರೂಪುಗೊಳ್ಳಲಿದೆ. ಇದು ಆಗಸ್ಟ್ ವೇಳೆಯಾಗುವಾಗ ಮಾರುಕಟ್ಟೆ ತಲುಪಿದರೂ ಅಚ್ಚರಿಪಡಬೇಕಾಗಿಲ್ಲ.

ಅಂದಾಜು ಬೆಲೆ: 5 ಲಕ್ಷ ರು.

 ಫೋಕ್ಸ್ ವ್ಯಾಗನ್ ಅಮಿಯೊ

ಫೋಕ್ಸ್ ವ್ಯಾಗನ್ ಅಮಿಯೊ

ಕಾಂಪಾಕ್ಟ್ ಸೆಡಾನ್ ವಿಭಾಗಕ್ಕೂ ಎಂಟ್ರಿ ಕೊಡಲು ಉತ್ಸಾಹದಲ್ಲಿರುವ ಫೋಕ್ಸ್ ವ್ಯಾಗನ್ ಮುಂಬರುವ ಆಟೋ ಎಕ್ಸ್ ಪೋದಲ್ಲಿ ನೂತನ ಅಮಿಯೊ ಪರಿಚಯಿಸುವ ಸಾಧ್ಯತೆಯಿದೆ.

ಅಂದಾಜು ಬೆಲೆ: 7 ಲಕ್ಷ ರು.

ಮಹೀಂದ್ರ ವೆರಿಟೊ (ಎಲೆಕ್ಟ್ರಿಕ್)

ಮಹೀಂದ್ರ ವೆರಿಟೊ (ಎಲೆಕ್ಟ್ರಿಕ್)

ಪರಿಸರ ಸ್ನೇಹಿ ವಾಹನಗಳ ನಿರ್ಮಾಣದತ್ತ ಹೆಚ್ಚಿನ ಒಲವು ತೋರಿರುವ ಮಹೀಂದ್ರ ಸಂಸ್ಥೆಯು ವೆರಿಟೊ ವಿದ್ಯುತ್ ಚಾಲಿತ ವಾಹನಗಳ ನಿರ್ಮಾಣಕ್ಕೂ ಹೆಚ್ಚಿನ ಒಲವು ತೋರಿದೆ.

ಅಂದಾಜು ಬೆಲೆ: 9.5 ಲಕ್ಷ ರು.

ಫೋರ್ಡ್ ಎಂಡೀವರ್

ಫೋರ್ಡ್ ಎಂಡೀವರ್

ಪರಿಷ್ಕೃತ ಫೋರ್ಡ್ ಎಂಡೀವರ್ ಜನವರಿ ತಿಂಗಳಲ್ಲೇ ಮಾರುಕಟ್ಟೆ ತಲುಪಲಿದೆ. ಇದು ಎರಡು ಡೀಸೆಲ್ ಎಂಜಿನ್ (2.2 ಹಾಗೂ 3.2 ಲೀಟರ್) ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಅಲ್ಲದೆ ಫೋರ್ ವೀಲ್ ಡ್ರೈವ್ ಚಾಲನಾ ವ್ಯವಸ್ಥೆಯನ್ನು ಪಡೆಯುವ ಸಾಧ್ಯತೆಯೂ ಇದೆ.

ಅಂದಾಜು ಬೆಲೆ: 29 ಲಕ್ಷ ರು.

 ಜೀಪ್ ವ್ರ್ಯಾಂಗ್ಲರ್

ಜೀಪ್ ವ್ರ್ಯಾಂಗ್ಲರ್

ಭಾರತಕ್ಕೆ ತನ್ನ ಪಾದಾರ್ಪಣೆಯನ್ನು ಖಚಿತಪಡಿಸಿರುವ ಜೀಪ್ 2016 ಆಟೋ ಎಕ್ಸ್ ಪೋದಲ್ಲಿ ತನ್ನ ಶ್ರೇಣಿಯ ವಾಹನಗಳನ್ನು ಪ್ರದರ್ಶಿಸಲಿದೆ. ಈ ಪೈಕಿ ಜೀಪ್ ವ್ರ್ಯಾಂಗ್ಲರ್ ಪ್ರಸಕ್ತ ಸಾಲಿನಲ್ಲೇ ಬಿಡುಗಡೆಯಾಗಲಿದೆ.

ಅಂದಾಜು ಬೆಲೆ: 30 ಲಕ್ಷ ರು.

ಜೀಪ್ ಗ್ರಾಂಡ್ ಕೆರೊಕೆ

ಜೀಪ್ ಗ್ರಾಂಡ್ ಕೆರೊಕೆ

ಈ ಮೊದಲೇ ತಿಳಿಸಿರುವಂತೆಯೇ ಜೀಪ್ ಗ್ರ್ಯಾಂಡ್ ಕೆರೊಕೆ ಸಹ ಇದೇ ಸಾಲಿನಲ್ಲಿ ಲಭ್ಯವಾಗಲಿದೆ. ಪ್ರಸ್ತುತ ಕಾರು ಆಗಸ್ಟ್ ವೇಳೆಯಾಗುವಾಗ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

ಅಂದಾಜು ಬೆಲೆ: 40 ಲಕ್ಷ ರು.

 ಮರ್ಸಿಡಿಸ್ ಬೆಂಝ್ ಜಿಎಲ್‌ಇ 450 ಎಎಂಜಿ

ಮರ್ಸಿಡಿಸ್ ಬೆಂಝ್ ಜಿಎಲ್‌ಇ 450 ಎಎಂಜಿ

ಮರ್ಸಿಡಿಸ್‌ನ ಶಕ್ತಿಶಾಲಿ ಜಿಎಲ್‌ಇ 450 ಎಎಂಜಿ ಕಾರು ಸಹ ಭಾರತಕ್ಕೆ ಕಾಲಿಡಲು ತುದಿಗಾಲಲ್ಲಿ ನಿಂತಿದೆ. ಇದು 3.0 ಲೀಟರ್ ಟ್ವಿನ್ ಟರ್ಬೊ ವಿ6 ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ.

ಅಂದಾಜು ಬೆಲೆ: 1.25 ಕೋಟಿ ರು.

ಹೊಸ ಆಡಿ ಎ4

ಹೊಸ ಆಡಿ ಎ4

ಆಡಿ ಎ4 ಕೂಡಾ ಪ್ರಸಕ್ತ ಸಾಲಿನಲ್ಲೇ ಹೊಸ ಸ್ವರೂಪ ಪಡೆದುಕೊಳ್ಳಲಿದೆ. ಇದು ನಾಲ್ಕು ಪೆಟ್ರೋಲ್ ಹಾಗೂ ಮೂರು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಬ್ಯವಾಗಲಿದೆ.

ಅಂದಾಜು ಬೆಲೆ: 32 ಲಕ್ಷ ರು.

ಸ್ಕೋಡಾ ಸೂಪರ್ಬ್

ಸ್ಕೋಡಾ ಸೂಪರ್ಬ್

ಸ್ಕೋಡಾ ಸಂಸ್ಥೆಯ ಫ್ಲ್ಯಾಗ್ ಶಿಪ್ ಮಾದರಿಯಾಗಿರುವ ಸೂಪರ್ಬ್ ಹೊಸ ಹೊಸ ವೈಶಿಷ್ಟ್ಯಗಳೊಂದಿಗೆ ಭಾರತಕ್ಕೆ ಎಂಟ್ರಿ ಕೊಡಲಿದೆ.

ಅಂದಾಜು ಬೆಲೆ: 23 ಲಕ್ಷ ರು.

ಮರ್ಸಿಡಿಸ್ ಬೆಂಝ್ ಜಿಎಲ್‌ಸಿ

ಮರ್ಸಿಡಿಸ್ ಬೆಂಝ್ ಜಿಎಲ್‌ಸಿ

ಮರ್ಸಿಡಿಸ್ ಬೆಂಝ್ ಜಿಎಲ್ ಸಿ ಕ್ರೀಡಾ ಬಳಕೆಯ ವಾಹನವು 2016 ಮಧ್ಯಂತರ ಅವಧಿಯಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

ಅಂದಾಜು ಬೆಲೆ: 1.70 ಕೋಟಿ ರು.

ನಿಸ್ಸಾನ್ ಜಿಟಿಆರ್

ನಿಸ್ಸಾನ್ ಜಿಟಿಆರ್

ನಿಸ್ಸಾನ್‌ನ ಗರಿಷ್ಠ ನಿರ್ವಹಣಾ ಕಾರು ವಿಭಾಗವಾಗಿರುವ ಜಿಟಿಆರ್ ಭಾರತಕ್ಕೆ ಶಕ್ತಿಶಾಲಿ ಕಾರು ಪರಿಚಯಿಸುವ ಇರಾದೆಯಲ್ಲಿದೆ. ಇದರ 3.6 ಲೀಟರ್ ವಿ6 ಎಂಜಿನ್ 542 ಅಶ್ವಶಕ್ತಿಯನ್ನು ಉತ್ಪಾದಿಸಲಿದ್ದು, ಆಲ್ ವೀಲ್ ಡ್ರೈವ್ ವ್ಯವಸ್ಥೆಯೂ ಇರಲಿದೆ.

ಫೋರ್ಡ್ ಮಸ್ಟಾಂಗ್

ಫೋರ್ಡ್ ಮಸ್ಟಾಂಗ್

ಭಾರತಕ್ಕೆ ಮಗದೊಂದು ಸೂಪರ್ ಕಾರು ಎಂಟ್ರಿ ಕೊಡಲು ಕಾಲ ಸನ್ನಿಹಿತವಾಗಿದೆ. ನೂತನ ಫೋರ್ಡ್ ಮಸ್ಟಾಂಗ್ ಕಾರಿನಲ್ಲಿರುವ 2.3 ಲೀಟರ್ ಇಕೊಬೂಸ್ಟ್ ಎಂಜಿನ್ ಬರೋಬ್ಬರಿ 310 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

Most Read Articles

Kannada
English summary
New Launches 2016: List Of Upcoming Vehicles In India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X