ಬಹುನಿರೀಕ್ಷಿತ ಫೋಕ್ಸ್‌ವ್ಯಾಗನ್ ಎಮಿಯೊ ಕಾಂಪಾಕ್ಟ್ ಸೆಡಾನ್ ಕಾರು ಬಿಡುಗಡೆ

Written By:

ಜರ್ಮನಿಯ ಪ್ರಖ್ಯಾತ ವಾಹನ ಸಂಸ್ಥೆ ಫೋಕ್ಸ್ ವ್ಯಾಗನ್, ಪ್ರಮುಖವಾಗಿಯೂ ಭಾರತೀಯರಿಗಾಗಿ ಭಾರತದಲ್ಲಿ ನಿರ್ಮಿತ ಅತಿ ನೂತನ 'ಮೇಡ್ ಇನ್ ಇಂಡಿಯಾ' ಎಮಿಯೊ ಕಾರನ್ನು ಬಿಡುಗಡೆಗೊಳಿಸಿದೆ.

ಬೆಲೆ ಮಾಹಿತಿ: 5.24 ಲಕ್ಷ ರು.ಗಳಿಂದ 7.05 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ನಾಲ್ಕು ಮೀಟರ್ ಉದ್ದ ಪರಿಧಿಯೊಳಗೆ ನಿರ್ಮಾಣವಾಗಿರುವ ನೂತನ ಎಮಿಯೊ ಕಾರಿಗೆ ವಿನಾಯಿತಿ ದೊರಕುವುದರಿಂದ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಇದನ್ನು ಪುಣೆಯಲ್ಲಿರುವ ಚಕನ್ ಘಟಕದಲ್ಲಿ ಸ್ಥಳೀಯವಾಗಿ ನಿರ್ಮಿಸಲಾಗುತ್ತಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಪೆಟ್ರೋಲ್ 1.2 ಲೀಟರ್ ಎಂಪಿಐ

ಟ್ರೆಂಡ್ ಲೈನ್: 5.14 ಲಕ್ಷ ರು.

ಕಂಫರ್ಟ್ ಲೈನ್: 5.88 ಲಕ್ಷ ರು.

ಹೈಲೈನ್: 6.91 ಲಕ್ಷ ರು.

ಬಹುನಿರೀಕ್ಷಿತ ಫೋಕ್ಸ್‌ವ್ಯಾಗನ್ ಎಮಿಯೊ ಕಾಂಪಾಕ್ಟ್ ಸೆಡಾನ್ ಕಾರು ಬಿಡುಗಡೆ

ಈ ಸಬ್ ಫೋರ್ ಮೀಟರ್ ಕಾರಿನ ಅಭಿವೃದ್ಧಿ ಮತ್ತು ನಿರ್ಮಾಣಕ್ಕಾಗಿ ಜರ್ಮನಿಯ ಸಂಸ್ಥೆಯು ಬರೋಬ್ಬರಿ 720 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಿದೆ. ಅಂತೆಯೇ 2007ರಲ್ಲಿ ಎಂಟ್ರಿ ಕೊಟ್ಟ ಬಳಿಕ ಭಾರತಕ್ಕಾಗಿ 5,720 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಿದೆ.

ಬಹುನಿರೀಕ್ಷಿತ ಫೋಕ್ಸ್‌ವ್ಯಾಗನ್ ಎಮಿಯೊ ಕಾಂಪಾಕ್ಟ್ ಸೆಡಾನ್ ಕಾರು ಬಿಡುಗಡೆ

ಕಾಂಪಾಕ್ಟ್ ಸೆಡಾನ್ ವಿಭಾಗದ ಮಾರಾಟವನ್ನು ಪರಿಗಣಿಸಿದಾಗ ಶೇಕಡಾ 60ರಷ್ಟನ್ನು ಮಾರುತಿ ಸುಜುಕಿಯ ಡಿಜೈರ್ ವಶಪಡಿಸಿಕೊಂಡಿದೆ. ಇದಾದ ಬಳಿಕ ಹ್ಯುಂಡೈ ಅಮೇಜ್ ಮತ್ತು ಹ್ಯುಂಡೈ ಎಕ್ಸ್ ಸೆಂಟ್ ಗಮನಾರ್ಹ ಮಾರಾಟವನ್ನು ಸಾಧಿಸುತ್ತಿದೆ. ಇದೇ ವಿಭಾಗದಲ್ಲಿ ಟಾಟಾ ಜೆಸ್ಟ್, ಫೋರ್ಡ್ ಫಿಗೊ ಆಸ್ಪೈರ್ ಗಳಂತಹ ಕಾರುಗಳು ಸಹ ಪೈಪೋಟಿಯಲ್ಲಿದೆ.

ಬಹುನಿರೀಕ್ಷಿತ ಫೋಕ್ಸ್‌ವ್ಯಾಗನ್ ಎಮಿಯೊ ಕಾಂಪಾಕ್ಟ್ ಸೆಡಾನ್ ಕಾರು ಬಿಡುಗಡೆ

ಸದ್ಯ ಪೆಟ್ರೋಲ್ ವೆರಿಯಂಟ್ ನಲ್ಲಿ ಮಾತ್ರ ಲಭ್ಯವಿರುವ ಫೋಕ್ಸ್ ವ್ಯಾಗನ್ ಎಮಿಯೊದಲ್ಲಿರುವ 1.2 ಲೀಟರ್ ಎಂಪಿಐ ಪೆಟ್ರೋಲ್ ಎಂಜಿನ್ 110 ಎನ್ ಎಂ ತಿರುಗುಬಲದಲ್ಲಿ 74 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಸಹ ಪಡೆದಿದೆ.

ಬಹುನಿರೀಕ್ಷಿತ ಫೋಕ್ಸ್‌ವ್ಯಾಗನ್ ಎಮಿಯೊ ಕಾಂಪಾಕ್ಟ್ ಸೆಡಾನ್ ಕಾರು ಬಿಡುಗಡೆ

ಫೋಕ್ಸ್ ವ್ಯಾಗನ್ ಪೊಲೊ ಅದೇ ತಳಹದಿಯಲ್ಲಿ ನಿರ್ಮಾಣಗೊಂಡಿರುವ ಎಮಿಯೊದಲ್ಲಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಹೊಸ ಫ್ರಂಟ್ ಬಂಪರ್, ಸಮತಲವಾದ ಫಾಗ್ ಲ್ಯಾಂಪ್, ಹೊಸ ಅಲಾಯ್ ವೀಲ್ ಮತ್ತು ರಿಯರ್ ಪ್ರೊಫೈಲ್ ಗಳನ್ನು ಕಾಣಬಹುದಾಗಿದೆ.

ಬಹುನಿರೀಕ್ಷಿತ ಫೋಕ್ಸ್‌ವ್ಯಾಗನ್ ಎಮಿಯೊ ಕಾಂಪಾಕ್ಟ್ ಸೆಡಾನ್ ಕಾರು ಬಿಡುಗಡೆ

ಇನ್ನು ಕಾಂಪಾಕ್ಟ್ ಸೆಡಾನ್ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಕ್ರೂಸ್ ಕಂಟ್ರೋಲ್, ರೈನ್ ಸೆನ್ಸಿಂಗ್ ವೈಪರ್, ಆ್ಯಂಟಿ ಪಿಂಚ್ ಪವರ್ ವಿಂಡೋ, ಫ್ರಂಟ್ ಆರ್ಮ್ ರೆಸ್ಟ್ ಮತ್ತು ಸ್ಟಾಟಿಕ್ ಕಾರ್ನರಿಂಗ್ ಲೈಟ್ ಗಳನ್ನು ಪಡೆದುಕೊಳ್ಳಲಿದೆ.

ಬಹುನಿರೀಕ್ಷಿತ ಫೋಕ್ಸ್‌ವ್ಯಾಗನ್ ಎಮಿಯೊ ಕಾಂಪಾಕ್ಟ್ ಸೆಡಾನ್ ಕಾರು ಬಿಡುಗಡೆ

ಉಲ್ಲಾಸದಾಯಕ ಚಾಲನೆಗೂ ಎಮಿಯೊದಲ್ಲಿ ಆದ್ಯತೆ ಕೊಡಲಾಗಿದ್ದು, ಟಚ್ ಸ್ಕ್ರೀನ್ ಮಲ್ಟಿಮೀಡಿಯಾ ಮ್ಯೂಸಿಕ್ ಸಿಸ್ಟಂ ಜೊತೆ ಮಿರರ್ ಲಿಂಕ್, ಐ ಪೊಡ್ ಕನೆಕ್ಟಿವಿಟಿ, ಫೋನ್ ಬುಕ್, ಎಸ್ಎಂಎಸ್ ವ್ಯೂಯರ್, ಆಟೋಮ್ಯಾಟಿಕ್ ಎಸಿ, ಡಸ್ಟ್ ಫಿಲ್ಟರ್, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಹೊರಗಿನ ರಿಯರ್ ವ್ಯೂ ಮಿರರ್, ಎಲ್ ಇಡಿ ಟರ್ನ್ ಇಂಡಿಕೇಟರ್, ಕೂಲ್ಡ್ ಗ್ಲೋವ್ ಬಾಕ್ಸ್, ಟಿಲ್ಟ್ ಹಾಗೂ ಟೆಲಿಸ್ಕಾಪಿಕ್ ಸ್ಟೀರಿಂಗ್ ವೀಲ್ ಮತ್ತು ಹಿಂಬದಿಯಲ್ಲೂ ಎಸಿ ವೆಂಟ್ಸ್ ಗಳಿರಲಿದೆ.

ಬಹುನಿರೀಕ್ಷಿತ ಫೋಕ್ಸ್‌ವ್ಯಾಗನ್ ಎಮಿಯೊ ಕಾಂಪಾಕ್ಟ್ ಸೆಡಾನ್ ಕಾರು ಬಿಡುಗಡೆ

ಕಾರಿನ ಭದ್ರತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಚಾಲಕ ಮತ್ತು ಪ್ರಯಾಣಿಕ ಬದಿಯ ಏರ್ ಬ್ಯಾಗ್ ಗಳು ಮತ್ತು ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂಗಳು ಸ್ಟ್ಯಾಂಡರ್ಡ್ ಆಗಿ ದೊರಕಲಿದೆ. ಇನ್ನುಳಿದಂತೆ ರಿಯರ್ ವ್ಯೂ ಮಿರರ್ ಮತ್ತು ಪಾರ್ಕಿಂಗ್ ಸೆನ್ಸಾರ್ ಸೌಲಭ್ಯಗಳು ಇದರಲ್ಲಿವೆ.

ಬಹುನಿರೀಕ್ಷಿತ ಫೋಕ್ಸ್‌ವ್ಯಾಗನ್ ಎಮಿಯೊ ಕಾಂಪಾಕ್ಟ್ ಸೆಡಾನ್ ಕಾರು ಬಿಡುಗಡೆ

ಅಂದ ಹಾಗೆ ವರ್ಷಾರಂಭದಲ್ಲಿ ದೆಹಲಿಯಲ್ಲಿ ನಡೆದ 2016 ಆಟೋ ಎಕ್ಸ್ ಪೋದಲ್ಲಿ ಫೋಕ್ಸ್ ವ್ಯಾಗನ್ ಎಮಿಯೊ ಮೊದಲ ಬಾರಿಗೆ ಅನಾವರಣಗೊಂಡಿತ್ತು. ಈಗ ಜುಲೈ ವೇಳೆಯಾಗುವಾಗ ವಿತರಣೆ ಪ್ರಕ್ರಿಯೆ ಆರಂಭವಾಗಲಿದೆ.

ಎಮಿಯೊ ಅಂದರೇನು?

ಎಮಿಯೊ ಅಂದರೇನು?

'ಎಮೊ' ಎಂಬ ಲ್ಯಾಟಿನ್ ಪದದಿಂದ ಎಮಿಯೊ ಉಲ್ಲೇಖಿಸಲಾಗಿದೆ. ಇಲ್ಲಿ ಎಮೊ ಎಂಬುದು 'ಐ ಲವ್' ಎಂಬ ಅರ್ಥವನ್ನು ನೀಡುತ್ತದೆ.

English summary
Volkswagen Ameo Compact Sedan Launched In India For Rs. 5.14 Lakh
Story first published: Monday, June 6, 2016, 9:41 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark