ಬೆಲೆ ಏರಿಕೆ ನೀತಿಗೆ ಕೈಜೋಡಿಸಿದ ಫೋಕ್ಸ್ ವ್ಯಾಗನ್

Written By:

ಬೆಲೆ ಏರಿಕೆ ನೀತಿಯೊಂದಿಗೆ ಕೈಜೋಡಿಸಿಕೊಂಡಿರುವ ಜರ್ಮನಿಯ ಮೂಲದ ಪ್ರಖ್ಯಾತ ವಾಹನ ಸಂಸ್ಥೆ ಫೋಕ್ಸ್ ವ್ಯಾಗನ್, ಹೊಸ ವರ್ಷದಿಂದ ದೇಶದಲ್ಲಿರುವ ತನ್ನೆಲ್ಲ ಶ್ರೇಣಿಯ ಕಾರುಗಳಿಗೆ ಬೆಲೆ ಏರಿಕೆಗೊಳಿಸಲು ನಿರ್ಧರಿಸಿದೆ.

ಬೆಲೆ ಏರಿಕೆ ನೀತಿಗೆ ಕೈಜೋಡಿಸಿದ ಫೋಕ್ಸ್ ವ್ಯಾಗನ್

ಭಾರತದಲ್ಲಿರುವ ಫೋಕ್ಸ್ ವ್ಯಾಗನ್ ಕಾರುಗಳಿಗೆ ಶೇಕಡಾ 3ರಷ್ಟು ಬೆಲೆ ಏರಿಕೆಯಾಗಲಿದೆ. ಇದರಲ್ಲಿ ಎಮಿಯೊ ಕಾಂಪಾಕ್ಟ್ ಸೆಡಾನ್ ಕಾರು ಸಹ ಸೇರಿಕೊಂಡಿದೆ.

ಬೆಲೆ ಏರಿಕೆ ನೀತಿಗೆ ಕೈಜೋಡಿಸಿದ ಫೋಕ್ಸ್ ವ್ಯಾಗನ್

ಫೋಕ್ಸ್ ವ್ಯಾಗನ್ ಬೆಲೆ ಏರಿಕೆಯು 2017 ಜನವರಿ ತಿಂಗಳಿಂದಲೇ ಜಾರಿಗೆ ಬರಲಿದೆ. ಇದು ಮಾರಾಟಕ್ಕೆ ಧಕ್ಕೆಯನ್ನುಂಟು ಮಾಡಬಹುದೇ ಎಂಬುದು ಭೀತಿಗೆ ಕಾರಣವಾಗಿದೆ.

ಬೆಲೆ ಏರಿಕೆ ನೀತಿಗೆ ಕೈಜೋಡಿಸಿದ ಫೋಕ್ಸ್ ವ್ಯಾಗನ್

ಭಾರತದಲ್ಲಿ 5.24 ಲಕ್ಷ ರು. ದೆಹಲಿ ಎಕ್ಸ್ ಶೋ ರೂಂ ಬೆಲೆಯ ಎಮಿಯೊದಿಂದ ಹಿಡಿದು 27.83 ಲಕ್ಷ ರು.ಗಳಷ್ಟು ದುಬಾರಿಯ ಬೀಟ್ಲ್ ಕಾರುಗಳನ್ನು ಮಾರಾಟ ಮಾಡುತ್ತಿದೆ.

ಬೆಲೆ ಏರಿಕೆ ನೀತಿಗೆ ಕೈಜೋಡಿಸಿದ ಫೋಕ್ಸ್ ವ್ಯಾಗನ್

ಫೋಕ್ಸ್ ವ್ಯಾಗನ್ ಕಾರುಗಳ ಸಾಲಿನಲ್ಲಿ ಪೊಲೊ, ವೆಂಟೊ ಹಾಗೂ ಜೆಟ್ಟಾ ಕೂಡಾ ಸೇರಿದೆ. ಹಾಗೆಯೇ 26 ಲಕ್ಷ ರು.ಗಳ ಬೆಲೆಬಾಳುವ ಪೊಲೊ ಜಿಟಿಐ ಕೂಡಾ ಇದರಲ್ಲಿದೆ.

ಬೆಲೆ ಏರಿಕೆ ನೀತಿಗೆ ಕೈಜೋಡಿಸಿದ ಫೋಕ್ಸ್ ವ್ಯಾಗನ್

ಡೀಸೆಲ್ ಎಂಜಿನ್ ಮಹಾ ಮೋಸದ ಬಳಿಕ ಚೇತರಿಕೆಯ ಹಂತದಲ್ಲಿರುವ ಫೋಕ್ಸ್ ವ್ಯಾಗನ್ ನಿರಂತರ ಅಂತರಾಳದಲ್ಲಿ ಅತ್ಯುತ್ತಮ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿದೆ.

ಬೆಲೆ ಏರಿಕೆ ನೀತಿಗೆ ಕೈಜೋಡಿಸಿದ ಫೋಕ್ಸ್ ವ್ಯಾಗನ್

2017ನೇ ಸಾಲಿನಲ್ಲೂ ಇದು ಮುಂದುವರಿಯಲಿದ್ದು, ಹೊಸ ತಲೆಮಾರಿನ ಪಸ್ಸಾಟ್ ಮತ್ತು ಟೈಗನ್ ಕಾರುಗಳನ್ನು ಬಿಡುಗಡೆ ಮಾಡಲಿದೆ.

ಬೆಲೆ ಏರಿಕೆ ನೀತಿಗೆ ಕೈಜೋಡಿಸಿದ ಫೋಕ್ಸ್ ವ್ಯಾಗನ್

ಫೋಕ್ಸ್ ವ್ಯಾಗನ್ ಹೊರತಾಗಿ, ಟೊಯೊಟಾ, ಟಾಟಾ ಮೋಟಾರ್ಸ್, ನಿಸ್ಸಾನ್ ಮತ್ತು ಹ್ಯುಂಡೈ ಸಂಸ್ಥೆಗಳು ಈಗಾಗಲೇ ಬೆಲೆ ಏರಿಕೆಯನ್ನು ಘೋಷಿಸಿದೆ.

English summary
Volkswagen India Joins The Bandwagon In Increasing Prices Of Its Cars
Please Wait while comments are loading...

Latest Photos