ಫುಟ್ಬಾಲ್ ಅಭಿಮಾನಿಗಳಿಗಾಗಿ ಫೋಕ್ಸ್ ವ್ಯಾಗನ್ ಪೊಲೊ ಆಲ್ ಸ್ಟಾರ್ ಎಡಿಷನ್

Written By:

ಜರ್ಮನಿಯ ಮೂಲದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆ ಫೋಕ್ಸ್ ವ್ಯಾಗನ್ ದೇಶದ ಫುಟ್ಬಾಲ್ ಅಭಿಮಾನಿಗಳಿಗಾಗಿ ವಿಶೇಷ ಆವೃತ್ತಿಯೊಂದನ್ನು ಹೊರತರುತ್ತಿದೆ. ಅದುವೇ ಫೋಕ್ಸ್ ವ್ಯಾಗನ್ ಪೊಲೊ ಆಲ್ ಸ್ಟಾರ್ ಎಡಿಷನ್.

2016 ಯುಇಎಫ್‌ಎ ಫುಟ್ಬಾಲ್ ಟೂರ್ನಮೆಂಟ್ ಪ್ರಚಾರದ ಭಾಗವಾಗಿ ನೂತನ ಫೋಕ್ಸ್ ವ್ಯಾಗನ್ ಪೊಲೊ ಆಲ್ ಸ್ಟಾರ್ ಎಡಿಷನ್ ಭಾರತದಲ್ಲಿ ಪ್ರತ್ಯಕ್ಷಗೊಂಡಿದೆ. ಈ ವೇಳೆಯಲ್ಲಿ ಎಕ್ಸ್ ಕ್ಲೂಸಿವ್ ಚಿತ್ರಗಳನ್ನು ಸೆರೆ ಹಿಡಿಯಲಾಗಿದೆ.

ಫುಟ್ಬಾಲ್ ಅಭಿಮಾನಿಗಳಿಗಾಗಿ ಫೋಕ್ಸ್‌ವ್ಯಾಗನ್ ಪೊಲೊ ಆಲ್ ಸ್ಟಾರ್ ಎಡಿಷನ್

ಫ್ರಾನ್ಸ್ ನಲ್ಲಿ ನಡೆಯಲಿರುವ ಪ್ರಖ್ಯಾತ 'ಯುರೋ 2016' ಫುಟ್ಬಾಲ್ ಟೂರ್ನಮೆಂಟ್ ಜೂನ್ 10ರಿಂದ ಜುಲೈ 10ರ ವರೆಗೆ ಸಾಗಲಿದೆ. ಇದೇ ಅವಧಿಯಲ್ಲಿ ಫೋಕ್ಸ್ ವ್ಯಾಗನ್ ನೂತನ ಕಾರು ದೇಶದಲ್ಲಿ ಬಿಡುಗಡೆಯಾಗಲಿದೆ.

ಫುಟ್ಬಾಲ್ ಅಭಿಮಾನಿಗಳಿಗಾಗಿ ಫೋಕ್ಸ್‌ವ್ಯಾಗನ್ ಪೊಲೊ ಆಲ್ ಸ್ಟಾರ್ ಎಡಿಷನ್

ನೂತನ ಫೋಕ್ಸ್ ವ್ಯಾಗನ್ ಸೀಮಿತ ಕಾರಿನ ಹೊರಗಡೆ ವಿಶಿಷ್ಟವಾದ 'ಆಲ್ ಸ್ಟಾರ್' ಬ್ಯಾಡ್ಜ್ ಕಾಣಬಹುದಾಗಿದೆ. 15 ಇಂಚುಗಳ ಡೈಮಂಡ್ ಕಟ್ ಲೈಟ್ ಅಲಾಯ್ ಚಕ್ರಗಳು ಇದರಲ್ಲಿರಲಿದೆ.

ಫುಟ್ಬಾಲ್ ಅಭಿಮಾನಿಗಳಿಗಾಗಿ ಫೋಕ್ಸ್‌ವ್ಯಾಗನ್ ಪೊಲೊ ಆಲ್ ಸ್ಟಾರ್ ಎಡಿಷನ್

ಕಾರಿನೊಳಗೂ ಆಲ್ ಸ್ಟಾರ್ ಜೊತೆಗೆ ಕ್ಲೈಮಾಟ್ರಾನಿಕ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಸಿಸ್ಟಂ, ರಿಯರ್ ಎಸಿ ವೆಂಟ್ಸ್, ನೂತನ ಟಚ್ ಸ್ಕ್ರೀನ್ ಮಾಹಿತಿ ಮನರಂಜನಾ ವ್ಯವಸ್ಥೆ, ನೇವಿಗೇಷನ್, ಬ್ಲೂಟೂತ್, ಯುಎಸ್ ಬಿ, ರೈನ್ ಸೆನ್ಸಿಂಗ್ ವೈಪರ್ ಮತ್ತು ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಗಳಂತಹ ವ್ಯವಸ್ಥೆಗಳಿರಲಿದೆ.

ಫುಟ್ಬಾಲ್ ಅಭಿಮಾನಿಗಳಿಗಾಗಿ ಫೋಕ್ಸ್‌ವ್ಯಾಗನ್ ಪೊಲೊ ಆಲ್ ಸ್ಟಾರ್ ಎಡಿಷನ್

ಜಾಗತಿಕ ಮಟ್ಟದಲ್ಲಿ ಫೋಕ್ಸ್ ವ್ಯಾಗನ್ ಪೊಲೊ ಆಲ್ ಸ್ಟಾರ್ ಎಡಿಷನ್ 1.0 ಲೀಟರ್ ಟಿಎಸ್ ಐ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, 108 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಆರು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಸಹ ಇದರಲ್ಲಿರುತ್ತದೆ.

ಫುಟ್ಬಾಲ್ ಅಭಿಮಾನಿಗಳಿಗಾಗಿ ಫೋಕ್ಸ್‌ವ್ಯಾಗನ್ ಪೊಲೊ ಆಲ್ ಸ್ಟಾರ್ ಎಡಿಷನ್

ಹಾಗಿದ್ದರೂ ಭಾರತೀಯ ಆವೃತ್ತಿಯು ಪೊಲೊಗೆ ಸಮಾನವಾದ 1.5 ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಯಿದ್ದು, ಏಳು ಸ್ಪೀಡ್ ಮ್ಯಾನುವಲ್ ಅಥವಾ ಏಳು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ. ಭಾರತ ಮಾದರಿಯು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆಯುವ ಸಾಧ್ಯತೆ ಕಡಿಮೆಯಾಗಿದೆ.

ಫುಟ್ಬಾಲ್ ಅಭಿಮಾನಿಗಳಿಗಾಗಿ ಫೋಕ್ಸ್‌ವ್ಯಾಗನ್ ಪೊಲೊ ಆಲ್ ಸ್ಟಾರ್ ಎಡಿಷನ್

ಒಟ್ಟಿನಲ್ಲಿ ದೇಶದ ಫುಟ್ಬಾಲ್ ಅಭಿಮಾನಿಗಳ ಮನ ಗೆಲ್ಲುವಲ್ಲಿ ನೂತನ ಫೋಕ್ಸ್ ವ್ಯಾಗನ್ ಪೊಲೊ ಆಲ್ ಸ್ಟಾರ್ ಎಡಿಷನ್ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಲಭ್ಯವಾಗಲಿದೆ.

Image credit: motoroids

English summary
Volkswagen Polo Allstar Edition Spotted In India; Could Launch Soon
Story first published: Tuesday, April 26, 2016, 17:48 [IST]
Please Wait while comments are loading...

Latest Photos