ಲ್ಯಾಂಡ್ ರೋವರ್ ಡಿಸ್ಕವರಿ ಕಾರು ಭಾರತದಲ್ಲಿ ಬಿಡುಗಡೆ

Written By:

ಲ್ಯಾಂಡ್ ರೋವರ್ ಸಂಸ್ಥೆಯು ಭಾರತದಲ್ಲಿ ತನ್ನ ಡಿಸ್ಕವರಿ ಎಸ್‌ಯುವಿ ಕಾರನ್ನು ಬಿಡುಗಡೆಗೊಳಿಸಿದ್ದು, ಈ ಎಸ್‌ಯುವಿ ಕಾರು ಭಾರತದಲ್ಲಿ ರೂ. 68.05 ಲಕ್ಷ ಎಕ್ಸ್ ಷೋರೂಂ ಬೆಲೆ ಪಡೆದುಕೊಂಡಿದೆ.

To Follow DriveSpark On Facebook, Click The Like Button
ಲ್ಯಾಂಡ್ ರೋವರ್ ಡಿಸ್ಕವರಿ ಕಾರು ಭಾರತದಲ್ಲಿ ಬಿಡುಗಡೆ

ಭಾರತದ ಮಾರುಕಟ್ಟೆಗೆ ಅಮೋಘವಾಗಿ ಎಂಟ್ರಿ ಕೊಟ್ಟಿರುವ ಈ ಮೂರನೆಯ ಪ್ರೀಳಿಗೆಯ ಏಳು ಆಸನದ ಪ್ರೀಮಿಯಂ ಎಸ್‌ಯುವಿ ಕಾರು, ಐದು ವಿವಿಧ ಮಾದರಿಗಳಲ್ಲಿ ಲಭ್ಯವಿದ್ದು, ಪೆಟ್ರೋಲ್ ಹಾಗು ಡೀಸೆಲ್ ಎರಡೂ ಆಯ್ಕೆಯಲ್ಲಿ ಅನಾವರಣಗೊಂಡಿದೆ.

ಲ್ಯಾಂಡ್ ರೋವರ್ ಡಿಸ್ಕವರಿ ಕಾರು ಭಾರತದಲ್ಲಿ ಬಿಡುಗಡೆ

2014ರಲ್ಲಿ ನೆಡೆದ ನ್ಯೂಯಾರ್ಕ್ ಆಟೊ ಪ್ರದರ್ಶನದಲ್ಲಿ ಮೊದಲ ಬಾರಿಗೆ ಜಗತ್ತಿಗೆ ಪರಿಚಯವಾದ ಈ ಐಷಾರಾಮಿ ಎಸ್‌ಯುವಿ ಕಾರು, ಡಿಸ್ಕವರಿ ವಿಷನ್ ಕಾನ್ಸೆಪ್ಟ್ ಆದರದ ಮೇಲೆ ನಿರ್ಮಾಣವಾಗಿದೆ.

ಲ್ಯಾಂಡ್ ರೋವರ್ ಡಿಸ್ಕವರಿ ಕಾರು ಭಾರತದಲ್ಲಿ ಬಿಡುಗಡೆ

ಹಳೆಯ ಆವೃತಿಯಲ್ಲಿ ಇದ್ದಂತಹ ಬಾಕ್ಸ್ ರೀತಿಯ ವಿನ್ಯಾಸವನ್ನು ಮುಂದುವರೆಸಲು ಇಷ್ಟ ಪಡದ ಲ್ಯಾಂಡ್ ರೋವರ್, ತನ್ನ ಹೊಸ ಆವೃತಿಯ ಡಿಸ್ಕವರಿ ಕಾರಿನಲ್ಲಿ ಹೊಸ ಡಿಸೈನ್ ಭಾಷೆಯನ್ನು ಅಳವಡಿಸಿದೆ.

ಲ್ಯಾಂಡ್ ರೋವರ್ ಡಿಸ್ಕವರಿ ಕಾರು ಭಾರತದಲ್ಲಿ ಬಿಡುಗಡೆ

ಹೊಸ ಲ್ಯಾಂಡ್ ರೋವರ್ ಡಿಸ್ಕವರಿ ಪೆಟ್ರೋಲ್ ರೂಪಾಂತರವು 3.0 ಲೀಟರ್, ವಿ6 ಟರ್ಬೊ-ಪೆಟ್ರೋಲ್ ಎಂಜಿನ್ ಪಡೆದುಕೊಂಡಿದ್ದು, 450 ಎನ್‌ಎಂ ತಿರುಗುಬಲದಲ್ಲಿ 335 ರಷ್ಟು ಬಿಎಚ್‌ಪಿ ಶಕ್ತಿ ಉತ್ಪಾದನೆ ಮಾಡಲಿದೆ.

ಲ್ಯಾಂಡ್ ರೋವರ್ ಡಿಸ್ಕವರಿ ಕಾರು ಭಾರತದಲ್ಲಿ ಬಿಡುಗಡೆ

ಹೊಸ ಲ್ಯಾಂಡ್ ರೋವರ್ ಡಿಸ್ಕವರಿ ಕಾರಿನ ಡೀಸೆಲ್ ಎಂಜಿನ್ ರೂಪಾಂತರದ ಬಗ್ಗೆ ಹೇಳುವುದಾದರೆ, ಈ ಡೀಸೆಲ್ ಎಂಜಿನ್ ಕಾರು ಸಹ 3.0 ಲೀಟರ್, ವಿ6 ಟರ್ಬೊ-ಡೀಸೆಲ್ ಎಂಜಿನ್ ಪಡೆದುಕೊಂಡಿದ್ದು, 600 ಎನ್‌ಎಂ ತಿರುಗುಬಲದಲ್ಲಿ 255 ರಷ್ಟು ಬಿಎಚ್‌ಪಿ ಶಕ್ತಿ ಉತ್ಪಾದನೆ ಮಾಡಲಿದೆ.

ಲ್ಯಾಂಡ್ ರೋವರ್ ಡಿಸ್ಕವರಿ ಕಾರು ಭಾರತದಲ್ಲಿ ಬಿಡುಗಡೆ

ಲ್ಯಾಂಡ್ ರೋವರ್ ಸಂಸ್ಥೆಯು ಝೆಡ್‌ಎಫ್ ಸ್ವಯಂಚಾಲಿತ ಗೇರ್ ಬಾಕ್ಸ್ ಮೂಲಕ ಎಲ್ಲಾ ನಾಲ್ಕು ಚಕ್ರಗಳಿಗೆ ಶಕ್ತಿ ಪ್ರಸರಣೆ ಮಾಡಲಿದೆ. 4 ಡಬ್ಲ್ಯೂಡಿ ಜೊತೆ ಟೆರೈನ್ ರೆಸ್ಪೋನ್ಸ್ ಸಿಸ್ಟಮ್ ಆಯ್ಕೆ ಸಹ ಈ ಕಾರಿನಲ್ಲಿ ನೀಡಲಾಗಿದ್ದು, ವಿವಿಧ ಡ್ರೈವಿಂಗ್ ಮೋಡ್ ಸೌಲಭ್ಯ ನೀಡಲಾಗಿದೆ.

Read more on land rover
English summary
sc
Story first published: Wednesday, August 9, 2017, 16:09 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark