ಮುಂದಿನ ಪೀಳಿಗೆಯ ಹ್ಯುಂಡೈ ಸಾಂಟ್ರೊ ಕಾರು ಭಾರತದಲ್ಲಿ ಮತ್ತೆ ಬಿಡುಗಡೆ

ಒಂದು ಕಾಲದಲ್ಲಿ, ಭಾರತದ ಪ್ರಖ್ಯಾತ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ಸಂಸ್ಥೆಯ ಸ್ಯಾಂಟ್ರೊ ಕಾರು ಬಹಳಷ್ಟು ಜನರ ಮೆಚ್ಚಿಗೆಗೆ ಪಾತ್ರವಾಗಿತ್ತು. ಈ ಹ್ಯಾಚ್‌ಬ್ಯಾಕ್ ಕಾರಿನ ಬಗ್ಗೆ ಸದ್ಯ ವಿಚಾರವೊಂದು ಹೆಚ್ಚು ಖುಷಿ ನೀಡುವ ವಿಚಾರ ಇಲ್ಲಿದೆ.

By Girish

ಒಂದು ಕಾಲದಲ್ಲಿ, ಭಾರತದ ಪ್ರಖ್ಯಾತ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ಸಂಸ್ಥೆಯ ಸ್ಯಾಂಟ್ರೊ ಕಾರು ಬಹಳಷ್ಟು ಜನರ ಮೆಚ್ಚಿಗೆಗೆ ಪಾತ್ರವಾಗಿತ್ತು. ಈ ಹ್ಯಾಚ್‌ಬ್ಯಾಕ್ ಕಾರಿನ ಬಗ್ಗೆ ಸದ್ಯ ವಿಚಾರವೊಂದು ಹೆಚ್ಚು ಖುಷಿ ನೀಡುವ ವಿಚಾರ ಇಲ್ಲಿದೆ.

ಮುಂದಿನ ಪೀಳಿಗೆಯ ಸ್ಯಾಂಟ್ರೊ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಸೂಚನೆ ನೀಡಿದ ಹ್ಯುಂಡೈ

ಇತ್ತೀಚಿನ ತಂತ್ರಜ್ಞಾನ ಪಡೆದಿರುವ ಸ್ಯಾಂಟ್ರೊ ಹ್ಯಾಚ್‌ಬ್ಯಾಕ್ ಕಾರು ಭಾರತೀಯ ಮಾರುಕಟ್ಟೆಗೆ ಮತ್ತೆ ಕಾಲಿಡಲಿದೆ ಎಂಬ ವಿಚಾರ ಈ ವಾಹನವನ್ನು ಹೆಚ್ಚು ಇಷ್ಟ ಪಡುವವರಿಗೆ ಖುಷಿ ನೀಡುವುದಂತೂ ಖಂಡಿತ. ಹೌದು, ಹೊಚ್ಚ ಹೊಸ ಸ್ಯಾಂಟ್ರೊ ಕಾರು ಭಾರತದಲ್ಲಿ ಮತ್ತೆ ಮೋಡಿ ಮಾಡಲಿದೆ ಎನ್ನಲಾಗಿದೆ.

ಮುಂದಿನ ಪೀಳಿಗೆಯ ಸ್ಯಾಂಟ್ರೊ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಸೂಚನೆ ನೀಡಿದ ಹ್ಯುಂಡೈ

ಮುಂದಿನ ಪೀಳಿಗೆಯ ಕಾರುಗಳಿಗೆ ದಾರಿ ಮಾಡಿಕೊಡಲು, ಸರಿ ಸುಮಾರು 3000 ಕಾರುಗಳ ಮಾರಾಟ ದಾಖಲೆಯನ್ನು ಹೊಂದಿರುವ ಸ್ಯಾಂಟ್ರೊ ಕಾರಿನ ಉತ್ಪಾದನೆಯನ್ನು 2015ರಲ್ಲಿ ಹ್ಯುಂಡೈ ನಿಲ್ಲಿಸಿತ್ತು.

ಮುಂದಿನ ಪೀಳಿಗೆಯ ಸ್ಯಾಂಟ್ರೊ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಸೂಚನೆ ನೀಡಿದ ಹ್ಯುಂಡೈ

ಆದರೆ, ಹ್ಯುಂಡೈ ಕಂಪನಿಯ ಅಗ್ರ 10 ಮಾರಾಟವಾದ ವಾಹನಗಳ ಪಟ್ಟಿಯಲ್ಲಿ ಮೇಲುಗೈ ಸಾಧಿಸಿರುವ ಈ ಸ್ಯಾಂಟ್ರೊ ಕಾರನ್ನು ಮರಳಿ ತರಲು ದಕ್ಷಿಣ ಕೊರಿಯಾದ ಕಾರು ತಯಾರಕ ಹ್ಯುಂಡೈ ನಿರ್ಧರಿಸಿದೆ.

ಮುಂದಿನ ಪೀಳಿಗೆಯ ಸ್ಯಾಂಟ್ರೊ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಸೂಚನೆ ನೀಡಿದ ಹ್ಯುಂಡೈ

2018ರ ಹ್ಯುಂಡೈ ಸ್ಯಾಂಟ್ರೊ ಕಾರು ಸೇತುಂ-ಚೆನ್ನೈ ಹೆದ್ದಾರಿಯಲ್ಲಿ ಅತುರ್ ಸಮೀಪ ಪರೀಕ್ಷೆ ನೆಡೆಸುವ ವೇಳೆ ಕಾಣಿಸಿಕೊಂಡಿದೆ. ಈ ಹೊಸ ಸ್ಯಾಂಟ್ರೊ ಕಾರು, ಮಾರುತಿ ಸಂಸ್ಥೆಯ ಆಲ್ಟೊ, ರೆನಾಲ್ಟ್ ಕ್ವಿಡ್ ಮತ್ತು ಹೊಸ ಟಾಟಾ ಟಿಯೊಗೊ ಕಾರಿಗೆ ಸ್ಪರ್ಧೆ ನೆಡೆಸಲಿದೆ ಎನ್ನಬಹುದು.

ಮುಂದಿನ ಪೀಳಿಗೆಯ ಸ್ಯಾಂಟ್ರೊ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಸೂಚನೆ ನೀಡಿದ ಹ್ಯುಂಡೈ

ಹೊಸ ನೂತನ ಹ್ಯುಂಡೈ ಸ್ಯಾಂಟ್ರೊ ಕಾರು ನವೀನ ವೈಶಿಷ್ಟ್ಯಗಳೊಂದಿಗೆ ಮತ್ತೆ ಭಾರತದ ರಸ್ತೆಗಳಿಗೆ ಕಾಲಿಡಲಿದೆ ಎನ್ನುವ ನಿರೀಕ್ಷೆ ಇದೆ. ಸ್ಯಾಂಟ್ರೊ ಕಾರಿನ ಸಂಶೋಧನೆ ಮತ್ತು ಅಭಿವೃದ್ಧಿಗೆ ಹ್ಯುಂಡೈ ಸಂಸ್ಥೆಯು 1,000 ಕೋಟಿಯನ್ನು ಮೀಸಲಿಟ್ಟಿದೆ.

ಮುಂದಿನ ಪೀಳಿಗೆಯ ಸ್ಯಾಂಟ್ರೊ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಸೂಚನೆ ನೀಡಿದ ಹ್ಯುಂಡೈ

2018ರಲ್ಲಿ ಬಿಡುಗಡೆಯಾಗಲಿರುವ ಸ್ಯಾಂಟ್ರೊ ಕಾರು 800 ಸಿಸಿ ಅಥವಾ 1.0 ಲೀಟರ್ ಪೆಟ್ರೋಲ್ ಇಂಜಿನ್ ಆಯ್ಕೆಯಲ್ಲಿ ಅನಾವರಣಗೊಳ್ಳುವ ನಿರೀಕ್ಷೆ ಇದೆ. ಮುಂದಿನ ವರ್ಷದ ಫೆಬ್ರವರಿಯಲ್ಲಿ ನಡೆಯಲಿರುವ 2018ರ ಆಟೊ ಎಕ್ಸ್‌ಪೋದಲ್ಲಿ ಈ ಹ್ಯಾಚ್‌ಬ್ಯಾಕ್ ಪಾದಾರ್ಪಣೆ ಮಾಡಲಿದೆ.

ಮುಂದಿನ ಪೀಳಿಗೆಯ ಸ್ಯಾಂಟ್ರೊ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಸೂಚನೆ ನೀಡಿದ ಹ್ಯುಂಡೈ

2018ರ ಹ್ಯುಂಡೈ ಸ್ಯಾಂಟ್ರೊ ಕಾರು ವಿಶಾಲವಾಗಿರಲಿದ್ದು, ಮಿತವ್ಯಯದ ಎಂಜಿನ್‌ನೊಂದಿಗೆ ಲೋಡ್ ಆಗಿರಲಿದೆ. 800 ಸಿಸಿ ಮಾದರಿಯಲ್ಲಿ ಆಎಂಟಿ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಬಿಡುಗಡೆಯಾಗುವ ಮೊದಲ ವಾಹನವಾಗಲಿದ್ದು, ಜನರು ಹೇಗೆ ಸ್ವೀಕರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Most Read Articles

Kannada
English summary
The car which propelled Hyundai to become a household name in India, the humble Santro hatchback is making a comeback to the Indian market.
Story first published: Tuesday, November 21, 2017, 13:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X