ಹೊಸ ಫೋಕ್ಸ್‌ವ್ಯಾಗನ್ ಪೊಲೊ ಕಾರು ಪ್ರಪಂಚದಾದ್ಯಂತ ಜೂನ್ 16ರಂದು ಬಿಡುಗಡೆ
ಜರ್ಮನ್ ಕಾರ್ ತಯಾರಕ ಫೋಕ್ಸ್‌ವ್ಯಾಗನ್ ಹೊಸ ಪೊಲೊ ಹ್ಯಾಚ್ ಬ್ಯಾಕ್ ಕಾರನ್ನು ಪರಿಚಯಿಸಲು ಮುಂದಾಗಿದೆ, ಈ ಹೊಸ ಕಾರು ಇದೇ ತಿಂಗಳ 16 ರಂದು ಪ್ರಪಂಚದಾದ್ಯಂತ ಪ್ರವೇಶಿಸಲಿದೆ.
ಜರ್ಮನ್ ಕಾರ್ ತಯಾರಕ ಫೋಕ್ಸ್‌ವ್ಯಾಗನ್ ಹೊಸ ಪೊಲೊ ಹ್ಯಾಚ್ ಬ್ಯಾಕ್ ಕಾರನ್ನು ಪರಿಚಯಿಸಲು ಮುಂದಾಗಿದೆ, ಈ ಹೊಸ ಕಾರು ಇದೇ ತಿಂಗಳ 16 ರಂದು ಪ್ರಪಂಚದಾದ್ಯಂತ ಪ್ರವೇಶಿಸಲಿದೆ.

ಫೋಕ್ಸ್‌ವ್ಯಾಗನ್ ತನ್ನ ಹೊಸ ಪೊಲೊ ಕಾರನ್ನು ಜರ್ಮನ್ ದೇಶದ ರಾಜಧಾನಿಯಾದ ಬರ್ಲಿನ್‌ನಲ್ಲಿ ವಿಶೇಷ ಸಮಾರಂಭ ಏರ್ಪಡಿಸಿ ಈ ಕಾರಿನ ಬಿಡುಗಡೆಯನ್ನು ಮಾಡಲಾಗುತ್ತದೆ ಎಂದು ಸಂಸ್ಥೆ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇದೇ ಸಮಾರಂಭವನ್ನು ಲೈವ್ ಸ್ಟ್ರೀಮ್ ಮೂಲಕ ಪ್ರಪಂಚದಾದ್ಯಂತ ಬಿಡುಗಡೆಗೊಳಿಸಲು ಫೋಕ್ಸ್‌ವ್ಯಾಗನ್ ತೀರ್ಮಾನಿಸಿದ್ದು, ಈಗಾಗಲೇ ಈ ನಿಟ್ಟಿನಲ್ಲಿ ಕಂಪನಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಯಾವುದೇ ಹೊದಿಕೆ ಇಲ್ಲದ ಹೊಸ ಪೊಲೊ ಈಗಾಗಲೇ ಹೆಚ್ಚು ಬಾರಿ ಕಾಣಿಸಿಕೊಂಡಿದ್ದು, ಈ ಹೊಸ ಹ್ಯಾಚ್ ಬ್ಯಾಕ್ ಫೋಕ್ಸ್‌ವ್ಯಾಗನ್ MQB ಪ್ಲೇಟ್‌ಫಾರಂ ಆಧರಿಸಿ ಉತ್ಪಾದಿಸಲಾಗಿದೆ.

ಹೊಸ ಮಾದರಿಯು ಈ ಹಿಂದಿನ ಮಾದರಿಗಿಂತ ಸ್ವಲ್ಪ ದೊಡ್ಡದಾಗಿದೆ ಎನ್ನುವ ಮಾಹಿತಿ ಇದ್ದು, ಪ್ರಯಾಣಿಕರಿಗೆ ಅರಮಧಾಯಕ ಪ್ರಯಾಣಕ್ಕೆ ಹೆಚ್ಚು ಸ್ಥಳಾವಕಾಶ ದೊರೆಯಲಿದೆ ಮತ್ತು ಯಾವುದೇ ಹೆಚ್ಚಿನ ಮಟ್ಟದ ಬದಲಾವಣೆಯನ್ನು ಕಾಣದೆ ಈ ಕಾರು ಬಿಡುಗಡೆಗೊಳ್ಳುತ್ತಿದೆ.

ಭಾರತದಲ್ಲಿ ಬಿಡುಗಡೆಗೊಳ್ಳಲಿರುವ ಪೊಲೊ ಕಾರು ನೈಸರ್ಗಿಕವಾಗಿ ಆವಿಷ್ಕರಿಸಿದ 1.2-ಲೀಟರ್ ಮತ್ತು 1.5-ಲೀಟರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಮುಂದುವರಿಸಲಿದೆ.

ಹೊಸ ಪೊಲೊ 2017ರ ಎರಡನೇ ವರ್ಷದ ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಂಸ್ಥೆ ನಿರ್ಧರಿಸಿದೆ.


Click it and Unblock the Notifications








