ಜಿಎಸ್‌ಟಿ ಎಫೆಕ್ಟ್- ಹೈಬ್ರಿಡ್ ಕಾರುಗಳ ಖರೀದಿ ಇನ್ಮುಂದೆ ಬಲು ದುಬಾರಿ..!!

ಜುಲೈ 1ರಿಂದ ಜಿಎಸ್‌ಟಿ ಜಾರಿಗೆ ಬರುತ್ತಿದ್ದು, ಹೈಬ್ರಿಡ್ ಕಾರುಗಳ ಮೇಲಿನ ತೆರಿಗೆ ಪ್ರಮಾಣ ಹೆಚ್ಚುತ್ತಿದೆ. ಈ ಹಿನ್ನೆಲೆ ಹೈಬ್ರಿಡ್ ಕಾರುಗಳ ಖರೀದಿ ಇನ್ಮುಂದೆ ದುಬಾರಿಯಾಗಲಿದ್ದು, ಹೆಚ್ಚುವರಿ ತೆರಿಗೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

By Praveen

ಒಂದಡೆ ಜಿಎಸ್‌ಟಿ ಜಾರಿಗೂ ಮುನ್ನವೇ ಹತ್ತಾರು ಕಾರು ಉತ್ಪಾದಕರು ಕಾರು ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡುತ್ತಿದ್ದರೆ ಇತ್ತ ಅದೇ ಕಾರು ಉತ್ಪಾದಕರು ಹೈಬ್ರಿಡ್ ಕಾರುಗಳ ಉತ್ಪಾದನೆ ಮತ್ತು ಮಾರಾಟದ ವಿಚಾರವಾಗಿ ಅಸಮಾಧಾನದಲ್ಲಿದ್ದಾರೆ.

ಜಿಎಸ್‌ಟಿ ಎಫೆಕ್ಟ್- ಹೈಬ್ರಿಡ್ ಕಾರುಗಳ ಖರೀದಿ ಇನ್ಮುಂದೆ ಬಲು ದುಬಾರಿ..!!

ಇದಕ್ಕೆ ಕಾರಣ ಜುಲೈ 1ರಿಂದ (ಏಕ ರೂಪದ ತೆರಿಗೆ ಪದ್ದತಿ)ಜಿಎಸ್‌ಟಿ ಜಾರಿಗೆ ಬರುತ್ತಿದ್ದು, ಹೈಬ್ರಿಡ್ ಕಾರು ಉತ್ಪಾದನೆ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಗಳಿವೆ.

ಜಿಎಸ್‌ಟಿ ಎಫೆಕ್ಟ್- ಹೈಬ್ರಿಡ್ ಕಾರುಗಳ ಖರೀದಿ ಇನ್ಮುಂದೆ ಬಲು ದುಬಾರಿ..!!

ಸದ್ಯ ಹೈಬ್ರಿಡ್ ಕಾರುಗಳ ಮೇಲೆ ಶೇ.30.3 ತೆರಿಗೆ ವಿಧಿಸಲಾಗುತ್ತಿದ್ದು, ಜಿಎಸ್‌ಟಿ ಜಾರಿಗೆ ಬಂದಲ್ಲಿ ಅದು ಶೇ.30.3ರಿಂದ ಶೇ.43ಕ್ಕೆ ಏರಿಕೆಯಾಗಿದೆ.

ಜಿಎಸ್‌ಟಿ ಎಫೆಕ್ಟ್- ಹೈಬ್ರಿಡ್ ಕಾರುಗಳ ಖರೀದಿ ಇನ್ಮುಂದೆ ಬಲು ದುಬಾರಿ..!!

ಹೀಗಾಗಿ ಹೈಬ್ರಿಡ್ ಕಾರು ಉತ್ಪಾದನೆ ಮತ್ತು ಮಾರಾಟ ಮೇಲೆ ತೀವ್ರ ಪರಿಣಾಮ ಸಾಧ್ಯತೆಗಳಿದ್ದು, ಹೊಸ ತೆರಿಗೆ ಪದ್ದತಿಗಳ ಕುರಿತು ಪ್ರಮುಖ ಆಟೋ ಮೊಬೈಲ್ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಜಿಎಸ್‌ಟಿ ಎಫೆಕ್ಟ್- ಹೈಬ್ರಿಡ್ ಕಾರುಗಳ ಖರೀದಿ ಇನ್ಮುಂದೆ ಬಲು ದುಬಾರಿ..!!

ಈ ಹಿನ್ನೆಲೆ ಕೇಂದ್ರ ಹಣಕಾಸು ಸಚಿವರನ್ನು ಭೇಟಿ ಮಾಡಿದ್ದ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳು ಹೈಬ್ರಿಡ್ ಕಾರುಗಳ ಮೇಲಿನ ತೆರಿಗೆಗಳನ್ನು ತಗ್ಗಿಸಲು ಮನವಿ ಮಾಡಿದ್ದವು.

ಜಿಎಸ್‌ಟಿ ಎಫೆಕ್ಟ್- ಹೈಬ್ರಿಡ್ ಕಾರುಗಳ ಖರೀದಿ ಇನ್ಮುಂದೆ ಬಲು ದುಬಾರಿ..!!

ತೆರಿಗೆಗಳನ್ನು ಹೊರತುಪಡಿಸಿ ಸೆಸ್ ‌ಪ್ರಮಾಣವನ್ನು ಕಡಿತ ಮಾಡುವಂತೆ ಬೇಡಿಕೆ ಸಲ್ಲಿದ್ದ ಕಾರು ಉತ್ಪಾದನಾ ಸಂಸ್ಥೆಗಳು, ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳಿಗೆ ನೀಡಲಾಗಿರುವ ತೆರಿಗೆ ಮಾದರಿಗಳನ್ನು ಹೈಬ್ರಿಡ್ ಕಾರು ಮಾದರಿಗಳಿಗೂ ಅನ್ವಯಿಸುವಂತೆ ನಿಯಮ ತಿದ್ದುಪಡಿಗೆ ಒತ್ತಾಯಿಸಿದ್ದವು.

ಜಿಎಸ್‌ಟಿ ಎಫೆಕ್ಟ್- ಹೈಬ್ರಿಡ್ ಕಾರುಗಳ ಖರೀದಿ ಇನ್ಮುಂದೆ ಬಲು ದುಬಾರಿ..!!

ಆದ್ರೆ ಹೈಬ್ರಿಡ್ ಕಾರು ಉತ್ಪಾದಕರ ಬೇಡಿಕೆಗಳನ್ನು ತಳ್ಳಿಹಾಕಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ, ಯಾವುದೇ ಕಾರಣಕ್ಕೂ ಹೈಬ್ರಿಡ್ ಕಾರುಗಳ ಮೇಲೆ ತೆರಿಗೆ ವಿನಾಯ್ತಿ ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಜಿಎಸ್‌ಟಿ ಎಫೆಕ್ಟ್- ಹೈಬ್ರಿಡ್ ಕಾರುಗಳ ಖರೀದಿ ಇನ್ಮುಂದೆ ಬಲು ದುಬಾರಿ..!!

ಇದರಿಂದಾಗಿ ಜಿಎಸ್‌ಟಿ ಜಾರಿಗೆ ಬಂದ ನಂತರ ಹೈಬ್ರಿಡ್ ಕಾರುಗಳ ಬೆಲೆಗಳು ಭಾರೀ ಏರಿಕೆಯಾಗಿದ್ದು, ಆಟೋ ಉದ್ಯಮದ ಅದು ಯಾವ ರೀತಿ ಪರಿಣಾಮ ಬೀರಲಿದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.

Most Read Articles

Kannada
English summary
Read in Kannada about Arun Jaitley Hints At No Change Of GST Rate On Hybrid Cars.
Story first published: Monday, June 12, 2017, 16:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X