ಕಾರಿನ ಮೇಲೆ ಕೆಂಪು ದೀಪಗಳ ಅಳವಡಿಕೆ ರದ್ದು : ಪ್ರತಿಯೊಬ್ಬ ಭಾರತೀಯನೂ ವಿಐಪಿ ಎಂದ ಪ್ರಧಾನಿ ಮೋದಿ

ಪ್ರಧಾನ ಮಂತ್ರಿ, ಕೇಂದ್ರ ಸಚಿವರು ಸೇರಿದಂತೆ ದೇಶದ ಪ್ರತಿಯೊಬ್ಬ ಗಣ್ಯರ ಕಾರುಗಳ ಮೇಲೆ ಮೇ.1 ರಿಂದ ಕೆಂಪು ದೀಪ ಬಳಸುವ ಹಾಗಿಲ್ಲ ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

By Girish

ವಿಐಪಿ ಸಂಸ್ಕೃತಿಯನ್ನು ತೆಗೆದುಹಾಕುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿರುವ ಭಾರತದ ಪ್ರಧಾನಿ ಮೋದಿಯವರು, ಮೇ 1ರಿಂದ ಜಾರಿಯಾಗುವಂತೆ, ಪ್ರಧಾನಿ ಸೇರಿದಂತೆ ದೇಶದ ಎಲ್ಲಾ ಅತಿಗಣ್ಯರ ವಾಹನಗಳ ಮೇಲೆ ಕೆಂಪು ದೀಪ ಮತ್ತು ಸೈರನ್‌ ಬಳಕೆ ಮಾಡುವಂತಿಲ್ಲ ಎಂಬ ತೀರ್ಮಾನ ಕೈಗೊಂಡಿದ್ದಾರೆ.

ಕಾರಿನ ಮೇಲೆ ಕೆಂಪು ದೀಪಗಳ ಅಳವಡಿಕೆ ರದ್ದು : ಪ್ರತಿಯೊಬ್ಬ ಭಾರತೀಯನೂ ವಿಐಪಿ ಎಂದ ಪ್ರಧಾನಿ ಮೋದಿ

ರಾಷ್ಟ್ರಪತಿ, ಪ್ರಧಾನಿ, ಸಚಿವರು, ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳ ಹಾಗು ನ್ಯಾಯಮೂರ್ತಿಗಳನ್ನೂ ಒಳಗೊಂಡು, ಯಾರ ವಾಹನದ ಮೇಲೂ ಕೆಂಪು ದೀಪ ಮತ್ತು ಸೈರನ್ ಇರುವಂತಿಲ್ಲ ಎಂದು ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಕಾರಿನ ಮೇಲೆ ಕೆಂಪು ದೀಪಗಳ ಅಳವಡಿಕೆ ರದ್ದು : ಪ್ರತಿಯೊಬ್ಬ ಭಾರತೀಯನೂ ವಿಐಪಿ ಎಂದ ಪ್ರಧಾನಿ ಮೋದಿ

ತುರ್ತು ಸೇವೆಗಳು ಮತ್ತು ಆ್ಯಂಬುಲೆನ್ಸ್ ಹೊರತು ಪಡಿಸಿ ಇನ್ನು ಯಾರೂ ಸಹ ಕೆಂಪು ಮತ್ತು ನೀಲಿ ಬಣ್ಣವನ್ನು ದೀಪವನ್ನು ಬಳಸದಂತೆ ಆದೇಶ ಹೊರಡಿಸಿದ್ದು ಸದ್ಯ ಅಳವಡಿಸಿರುವ ಕಾರುಗಳ ಮೇಲಿನ ಕೆಂಪು ದೀಪವನ್ನು ತೆಗೆಯಲಾಗುವುದು.

ಕಾರಿನ ಮೇಲೆ ಕೆಂಪು ದೀಪಗಳ ಅಳವಡಿಕೆ ರದ್ದು : ಪ್ರತಿಯೊಬ್ಬ ಭಾರತೀಯನೂ ವಿಐಪಿ ಎಂದ ಪ್ರಧಾನಿ ಮೋದಿ

ದೇಶದಲ್ಲಿ ಹೆಚ್ಚುತ್ತಿರುವ ವಿಐಪಿ ಸಂಸ್ಕೃತಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಬುಧವಾರ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಈ ನಿರ್ಧಾರಕ್ಕೆ ಎಲ್ಲೆಡೆಯಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.

ಕಾರಿನ ಮೇಲೆ ಕೆಂಪು ದೀಪಗಳ ಅಳವಡಿಕೆ ರದ್ದು : ಪ್ರತಿಯೊಬ್ಬ ಭಾರತೀಯನೂ ವಿಐಪಿ ಎಂದ ಪ್ರಧಾನಿ ಮೋದಿ

ಈಗಾಗಲೇ ಹೊಸದಾಗಿ ರಚನೆಯಾಗಿರೋ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರ ಹಾಗೂ ಅಮರೀಂದರ್ ಸಿಂಗ್ ನೇತೃತ್ವದ ಪಂಜಾಬ್ ಸರ್ಕಾರ ವಿಐಪಿ ವಾಹನಗಳ ಮೇಲೆ ಕೆಂಪು ದೀಪ ಬಳಕೆಯನ್ನ ನಿಷೇಧಿಸಿವೆ.

ಕಾರಿನ ಮೇಲೆ ಕೆಂಪು ದೀಪಗಳ ಅಳವಡಿಕೆ ರದ್ದು : ಪ್ರತಿಯೊಬ್ಬ ಭಾರತೀಯನೂ ವಿಐಪಿ ಎಂದ ಪ್ರಧಾನಿ ಮೋದಿ

ಕೆಲವು ರಾಜ್ಯಗಳಲ್ಲಿ ಶಾಸಕರು ಸಹ ಕೆಂಪು ದೀಪವನ್ನು ತಮ್ಮ ಕಾರುಗಳಿಗೆ ಅಳವಡಿಸಿರುವುದನ್ನು ನಾವು ನೋಡಬಹುದಾಗಿದ್ದು, ಇನ್ನೂ ಕೆಲವರು ಬಳಸಿ ನಂತರ ತೆಗೆದಿರಿಸಬಹುದಾದ ಕೆಂಪು ದೀಪಗಳನ್ನು ಬಳಸುತ್ತಿರುವುದು ಕೂಡ ಈ ನಿರ್ಧಾರಕ್ಕೆ ಬರಲು ಮುಖ್ಯ ಕಾರಣ ಎನ್ನಬಹುದು.

ಕಾರಿನ ಮೇಲೆ ಕೆಂಪು ದೀಪಗಳ ಅಳವಡಿಕೆ ರದ್ದು : ಪ್ರತಿಯೊಬ್ಬ ಭಾರತೀಯನೂ ವಿಐಪಿ ಎಂದ ಪ್ರಧಾನಿ ಮೋದಿ

1989ರ ಕೇಂದ್ರ ಮೋಟಾರು ವಾಹನ ಕಾಯ್ದೆಯ ಪ್ರಕಾರ, ವಾಹನದ ಚಾವಣಿ ಮೇಲೆ ಕೆಂಪು, ನೀಲಿ ಮತ್ತು ಬಿಳಿ ದೀಪಗಳನ್ನು ಬಳಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಅವಕಾಶ ಮಾಡಿಕೊಡಲಾಗಿತ್ತು.

ಕಾರಿನ ಮೇಲೆ ಕೆಂಪು ದೀಪಗಳ ಅಳವಡಿಕೆ ರದ್ದು : ಪ್ರತಿಯೊಬ್ಬ ಭಾರತೀಯನೂ ವಿಐಪಿ ಎಂದ ಪ್ರಧಾನಿ ಮೋದಿ

ಸದ್ಯ ದೇಶದ ಯಾವ ಯಾವ ವ್ಯಕ್ತಿಗಳು ಕೆಂಪು ದೀಪ ಬಳಸಬಹುದು ಎಂಬುದನ್ನು ವಿವರಿಸುವ 108-1 (3) ಕಾಯ್ದೆಯನ್ನು ತೆಗೆದುಹಾಕಲಾಗಿದ್ದು, ಇದರಿಂದಾಗಿ ಕೆಂಪು ದೀಪ ನಿಯಮ ಸಂಪೂರ್ಣವಾಗಿ ಬಂದ್ ಆಗಲಿದೆ.

ಕಾರಿನ ಮೇಲೆ ಕೆಂಪು ದೀಪಗಳ ಅಳವಡಿಕೆ ರದ್ದು : ಪ್ರತಿಯೊಬ್ಬ ಭಾರತೀಯನೂ ವಿಐಪಿ ಎಂದ ಪ್ರಧಾನಿ ಮೋದಿ

ಈಗಾಗಲೇ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಎಲ್ಲಾ ಸಚಿವರು ಕೆಂಪು ದೀಪದ ಕಾರು ಬಳಕೆಯನ್ನು ನಿಲ್ಲಿಸಿದ್ದು, ಇತ್ತೀಚೆಗೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ವಿಐಪಿ ಸಂಸ್ಕೃತಿಯಿಂದ ದೂರ ಉಳಿಯುವಂತೆ ಸಹೋದ್ಯೋಗಿಗಳಿಗೆ ತಿಳಿಸಿದ್ದರು.

ಕಾರಿನ ಮೇಲೆ ಕೆಂಪು ದೀಪಗಳ ಅಳವಡಿಕೆ ರದ್ದು : ಪ್ರತಿಯೊಬ್ಬ ಭಾರತೀಯನೂ ವಿಐಪಿ ಎಂದ ಪ್ರಧಾನಿ ಮೋದಿ

‘ಸದ್ಯ ಹೊರಡಿಸಲಾಗಿರುವ ಈ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಲೂ ಅವಕಾಶ ಇರಲಿದೆ. ಶೀಘ್ರದಲ್ಲೇ ಈ ಬಗ್ಗೆ ಅಧಿಸೂಚನೆ ಹೊರಡಿಸಲಾಗುತ್ತದೆ' ಎಂದು ಕೇಂದ್ರ ಹೇಳಿದೆ.

ಕಾರಿನ ಮೇಲೆ ಕೆಂಪು ದೀಪಗಳ ಅಳವಡಿಕೆ ರದ್ದು : ಪ್ರತಿಯೊಬ್ಬ ಭಾರತೀಯನೂ ವಿಐಪಿ ಎಂದ ಪ್ರಧಾನಿ ಮೋದಿ

ಅತ್ತ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಕೂಡಾ ತಮ್ಮ ಕಾರಿನ ಮೇಲಿನ ಕೆಂಪು ದೀಪ ತೆಗೆಸಿದ್ದಾರೆ. ಅಷ್ಟೇ ಅಲ್ಲ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳು ಹಾಗೂ ಅಧಿಕಾರಿಗಳಿಗೂ ಕೆಂಪು ದೀಪ ತೆಗೆಸುವಂತೆ ಸೂಚನೆ ನೀಡಿದ್ದಾರೆ.

ಕಾರಿನ ಮೇಲೆ ಕೆಂಪು ದೀಪಗಳ ಅಳವಡಿಕೆ ರದ್ದು : ಪ್ರತಿಯೊಬ್ಬ ಭಾರತೀಯನೂ ವಿಐಪಿ ಎಂದ ಪ್ರಧಾನಿ ಮೋದಿ

ಗೃಹ ಸಚಿವ ಜಿ. ಪರಮೇಶ್ವರ್ ಅವರ ಕಾರಿನ ಮೇಲಿನ ಕೆಂಪು ದೀಪ ಕಂಡು ಕೆಲವರು ಕೂಗಿದಾಗ ಸ್ವತಃ ಜಿ. ಪರಮೇಶ್ವರ್, ತಮ್ಮ ಸಿಬ್ಬಂದಿಗೆ ಹೇಳಿ ಕೆಂಪು ದೀಪ ತೆಗೆಸಿದ್ದಾರೆ. ಬಳಿಕ ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಚಿಕ್ಕಮಗಳೂರಿನಲ್ಲಿ ಕಾರಿನ ಮೇಲಿನ ಕೆಂಪು ದೀಪವನ್ನು ತೆಗೆಸಬೇಕೆಂದು ತೀರ್ಮಾನಿಸಿದ್ದೆ ಎಂದಿದ್ದಾರೆ.

Most Read Articles

Kannada
Read more on ವಿಐಪಿ vip
English summary
Read in Kannada about Beacons on cars to be removed effective May 1. Get more details about Central govt desission about Beacons on cars to be removed effective May 1 and more.
Story first published: Thursday, April 20, 2017, 15:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X