ಹೆಚ್ಚು ಮಾರಾಟಗೊಳ್ಳುವ ಕಾರುಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಿಂದ ಕೆಳಗಿಳಿದ 'ಆಲ್ಟೊ'

ಕಳೆದ ಕೆಲವು ತಿಂಗಳುಗಳಿಂದ ಮಾರುತಿ ಕಂಪನಿಯ ಆಲ್ಟೊ ಕಾರು ಹೆಚ್ಚು ಮಾರಾಟಗೊಳ್ಳುವ ಕಾರುಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಮುಂದುವರೆದಿತ್ತು, ಆದರೆ ಕಳೆದ ಆಗಸ್ಟ್ ತಿಂಗಳಿನ ಅಂಕಿ ಅಂಶ ಎಲ್ಲವನ್ನೂ ತಲೆಕೆಳಗಾಗಿ ಮಾಡಿದೆ.

By Girish

ಹೌದು, ಈ ವರ್ಷದ ಆಗಸ್ಟ್ 2017ರಲ್ಲಿ ಆಲ್ಟೊ ಕಾರು ಕಡಿಮೆ ಸಂಖ್ಯೆಯಲ್ಲಿ ಮಾರಾಟವಾಗಿದ್ದು, ಮಾರುತಿ ಸುಜುಕಿ ಕಂಪನಿಯು ಮತ್ತೊಂದು ಯಶಸ್ವಿ ಕಾರಾದ ಡಿಜೈರ್ ಕಾಂಪ್ಯಾಕ್ಟ್ ಸೆಡಾನ್ ಕಾರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡು ಭಾರತದಲ್ಲಿ ಹೆಚ್ಚು ಮಾರಾಟಗೊಳ್ಳುವ ಕಾರುಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

ಹೆಚ್ಚು ಮಾರಾಟಗೊಳ್ಳುವ ಕಾರುಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಿಂದ ಕೆಳಗಿಳಿದ 'ಆಲ್ಟೊ'

ಕಳೆದ ತಿಂಗಳು ಬಿಡುಗಡೆಯಾದ ಅಂಕಿ ಅಂಶಗಳ ಪ್ರಕಾರ, ಮಾರುತಿ ಸುಜುಕಿ ಕಂಪನಿಯು ಒಟ್ಟು 30,934 ಡಿಜೈರ್ ಕಾಂಪ್ಯಾಕ್ಟ್ ಸೆಡಾನ್ ಕಾರುಗಳನ್ನು ಮಾರಾಟ ಮಾಡಿ ಹೊಚ್ಚ ಹೊಸ ದಾಖಲೆಯನ್ನು ನಿರ್ಮಿಸಿದೆ.

ಹೆಚ್ಚು ಮಾರಾಟಗೊಳ್ಳುವ ಕಾರುಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಿಂದ ಕೆಳಗಿಳಿದ 'ಆಲ್ಟೊ'

ಆಗಸ್ಟ್‌ನಲ್ಲಿ ತಿಂಗಳಿನಲ್ಲಿ ಮಾರುತಿ ಕಂಪನಿಯ ಆಲ್ಟೊ ಕೇವಲ 21,521 ಸಂಖ್ಯೆಯಲ್ಲಿ ಮಾರಾಟಗೊಂಡು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದು, ಮೂರನೇ ಸ್ಥಾನದಲ್ಲಿ ಮಾರುತಿ ಬಲೆನೊ ಕಾರು ಮುಂದುವರೆದಿದೆ.

ಹೆಚ್ಚು ಮಾರಾಟಗೊಳ್ಳುವ ಕಾರುಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಿಂದ ಕೆಳಗಿಳಿದ 'ಆಲ್ಟೊ'

ಹೊಸ ತಲೆಮಾರಿನ ಡಿಜೈರ್ ಮತ್ತು ಹಿಂದಿನ ತಲೆಮಾರಿನ ಡಿಜೈರ್ ಕಾರುಗಳನ್ನು ಒಳಗೊಂಡ ಮಾರಾಟ ಅಂಕಿ ಅಂಶವನ್ನು ನೀವು ನೋಡಬಹುದಾಗಿದ್ದು, ಮುಂಬರುವ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಲಿದೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.

ಹೆಚ್ಚು ಮಾರಾಟಗೊಳ್ಳುವ ಕಾರುಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಿಂದ ಕೆಳಗಿಳಿದ 'ಆಲ್ಟೊ'

ಇತ್ತೀಚೆಗಷ್ಟೇ ಹೊಸ ವಿನ್ಯಾಸ ಮತ್ತು ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಮೂರನೇ ಪೀಳಿಗೆಯ ಡಿಜೈರ್ ಕಾರನ್ನು ಮಾರುತಿ ಪ್ರಾರಂಭಿಸಿದೆ. ಈ ಹೊಸ ಡಿಜೈರ್ ಕಾಂಪ್ಯಾಕ್ಟ್ ಸೆಡಾನ್ ಕಾರು ಎಲ್ಇಡಿ ಡಿಆರ್‌ಎಲ್‌ಗಳು, ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು ಮತ್ತು 7.0 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಪಡೆದು ನವೀಕರಣಗೊಂಡಿದೆ.

ಹೆಚ್ಚು ಮಾರಾಟಗೊಳ್ಳುವ ಕಾರುಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಿಂದ ಕೆಳಗಿಳಿದ 'ಆಲ್ಟೊ'

ಮೂರನೇ ಪೀಳಿಗೆಯ ಮಾರುತಿ ಡಿಜೈರ್ ಕಾಂಪ್ಯಾಕ್ಟ್ ಸೆಡಾನ್ ಕಾರು, 1.2 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಮತ್ತು 1.3 ಲೀಟರ್ ನಾಲ್ಕು ಸಿಲಿಂಡರ್ ಆಯಿಲ್ ಬರ್ನರ್ ಎಂಬ ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ.

Most Read Articles

Kannada
English summary
Maruti Alto has been the undisputed top-selling car in India for quite some time now, and there are hardly any models which could challenge its dominance. But that has changed in August 2017, as per sales figures Maruti Suzuki sold 30,934 units of the Dzire compact sedan setting a new record.
Story first published: Friday, September 8, 2017, 14:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X