ಬ್ರಿಡ್ಜ್‌ಸ್ಟೋನ್ ಸಂಸ್ಥೆಯಿಂದ 'ಎಕ್ಸ್‌ಟ್ರಾ ಮೈಲೇಜ್' ಟೈರ್ ಬಿಡುಗಡೆ

Written By:

ವಾಹನಗಳ ಅತ್ಯತ್ತಮ ಕಾರ್ಯನಿರ್ವಹಣೆಗೆ ಗುಣಮಟ್ಟದ ಟೈರ್ ತುಂಬಾ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನಗಳೊಂದಿಗೆ ಸಿದ್ದಗೊಂಡಿರುವ ಎಕ್ಸ್‌ಟ್ರಾ ಮೈಲೇಜ್ ಎನ್ನುವ ಟೈರ್ ಉತ್ಪನ್ನವನ್ನು ಬ್ರಿಡ್ಜ್‌ಸ್ಟೋನ್ ಸಂಸ್ಥೆ ಬಿಡುಗಡೆಗೊಳಿಸಿದೆ.

ಬ್ರಿಡ್ಜ್‌ಸ್ಟೋನ್ ಸಂಸ್ಥೆಯಿಂದ 'ಎಕ್ಸ್‌ಟ್ರಾ ಮೈಲೇಜ್' ಟೈರ್ ಬಿಡುಗಡೆ

ವಾಣಿಜ್ಯ ವಾಹನಗಳು ಮತ್ತು ಭಾರೀ ಗಾತ್ರದ ವಾಹನಗಳಿಗಾಗಿ ಎಕ್ಸ್‌ಟ್ರಾ ಮೈಲೇಜ್ ಟೈರ್‌ಗಳನ್ನು ವಿಶೇಷವಾಗಿ ಅಭಿವೃದ್ಧಿಗೊಳಿಸಲಾಗಿದ್ದು, ಹೊಸ ಉತ್ಪನ್ನಕ್ಕೆ '10.00 ಆ20 ಎಂ 851 ಎಕ್ಸ್‌ಟ್ರಾ ಮೈಲೇಜ್' ಎಂದು ಹೆಸರಿಡಲಾಗಿದೆ.

ಬ್ರಿಡ್ಜ್‌ಸ್ಟೋನ್ ಸಂಸ್ಥೆಯಿಂದ 'ಎಕ್ಸ್‌ಟ್ರಾ ಮೈಲೇಜ್' ಟೈರ್ ಬಿಡುಗಡೆ

ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಕ್ಸ್‌ಟ್ರಾ ಮೈಲೇಜ್ ಟೈರ್ ಉತ್ಪನ್ನವನ್ನು ಬಿಡುಗಡೆಗೊಳಿಸಿದ ಬ್ರಿಡ್ಜ್‌ಸ್ಟೋನ್ ಸಂಸ್ಥೆಯು, ಹೊಸ ಟೈರ್ ಉತ್ಪನ್ನವು ಉತ್ತಮ ಬಾಳಿಕೆಯೊಂದಿಗೆ ಕಡಿಮೆ ರೋಲಿಂಗ್ ಪ್ರತಿರೋಧನವನ್ನು ಸಹ ನಿರ್ವಹಿಸುತ್ತವೆ ಎಂದಿದೆ.

ಬ್ರಿಡ್ಜ್‌ಸ್ಟೋನ್ ಸಂಸ್ಥೆಯಿಂದ 'ಎಕ್ಸ್‌ಟ್ರಾ ಮೈಲೇಜ್' ಟೈರ್ ಬಿಡುಗಡೆ

ಪ್ರಸ್ತುತ ಮಾರುಕಟ್ಟೆಯಲ್ಲಿ ಇತರೆ ಮಾದರಿಗಳಿಗೆ ಹೋಲಿಕೆ ಮಾಡಿದರೆ ಬ್ರಿಡ್ಜ್ ಸ್ಟೋನ್ ಟೈರ್‌ಗಳು ಉತ್ತಮವಾಗಿದ್ದು, ಈ ಹಿನ್ನೆಲೆ ಬೆಲೆಗಳು ದುಬಾರಿ ಎನ್ನಿಸಿದರು ಉತ್ತಮ ಬಾಳಿಕೆಯ ನಂಬಿಕೆಯನ್ನು ಹೊಂದಿವೆ.

ಬ್ರಿಡ್ಜ್‌ಸ್ಟೋನ್ ಸಂಸ್ಥೆಯಿಂದ 'ಎಕ್ಸ್‌ಟ್ರಾ ಮೈಲೇಜ್' ಟೈರ್ ಬಿಡುಗಡೆ

ಟೈರ್ ಬಸ್ಟ್, ಕ್ಸಿಡ್‌ಗಳನ್ನು ನಿಯಂತ್ರಿಸುವ ಗುಣಗಳನ್ನು ಹೊಂದಿದರುವ ಎಕ್ಸ್‌ಟ್ರಾ ಮೈಲೇಜ್ ಟೈರ್‌ಗಳು ಕಳೆದ 1 ದಶಕಗಳ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಹೊಂದಿದ್ದು, ಅನಾವಶ್ಯಕ ನಿರ್ವಹಣೆಯನ್ನು ತಗ್ಗಿಸಲಿವೆ.

ಬ್ರಿಡ್ಜ್‌ಸ್ಟೋನ್ ಸಂಸ್ಥೆಯಿಂದ 'ಎಕ್ಸ್‌ಟ್ರಾ ಮೈಲೇಜ್' ಟೈರ್ ಬಿಡುಗಡೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸದ್ಯ ಮಾರುಕಟ್ಟೆಯಲ್ಲಿ ಹಲವು ಬಗೆಯ ಟೈರ್ ಉತ್ಪನ್ನಗಳು ಲಭ್ಯವಿದ್ದು, ಅತ್ಯುತ್ತಮ ಕಾರ್ಯನಿರ್ವಹಣೆಯ ಮೂಲಕ ಬ್ರಿಡ್ಜ್‌ಸ್ಟೋನ್ ಉತ್ಪನ್ನಗಳು ಇತರೆ ಮಾದರಿಗಳಿಂದ ಭಿನ್ನತೆ ಹೊಂದಿವೆ.

Read more on ಟೈರ್ tyre
English summary
Read in Kannada about Bridgestone Launches XTRA Mileage Tyre in India.
Story first published: Saturday, July 29, 2017, 11:23 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark