ಬ್ರಿಡ್ಜ್‌ ಸ್ಟೋನ್ ಸಂಸ್ಥೆಯಿಂದ ಭಾರತದಲ್ಲಿ 2 ಸಾವಿರ ಕೋಟಿ ಹೂಡಿಕೆ..!!

Written By:

ವಾಣಿಜ್ಯ ವಾಹನಗಳ ಟೈರ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಬ್ರಿಡ್ಜ್ ಸ್ಟೋನ್ ಸಂಸ್ಥೆಯು ಭಾರತದಲ್ಲಿ ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆ ಮಾಡುತ್ತಿದ್ದು, ಮುಂದಿನ 5 ವರ್ಷಗಳಿಗಾಗಿ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ.

To Follow DriveSpark On Facebook, Click The Like Button
ಬ್ರಿಡ್ಜ್‌ ಸ್ಟೋನ್ ಸಂಸ್ಥೆಯಿಂದ ಭಾರತದಲ್ಲಿ 2 ಸಾವಿರ ಕೋಟಿ ಹೂಡಿಕೆ

ಭಾರತದಲ್ಲಿ ಈಗಾಗಲೇ ಹಲವಾರು ಜನಪ್ರಿಯ ಟೈರ್ ಉತ್ಪಾದಕರಿದ್ದು, ಈ ನಡುವೆ ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಪಡೆದಿರುವ ಬ್ರಿಡ್ಜ್ ಸ್ಟೋನ್ ಭಾರತದಲ್ಲೂ ಪೂರ್ಣ ಪ್ರಮಾಣದ ಕಾರ್ಯಚರಣೆ ಆರಂಭಿಸುತ್ತಿದೆ. ಇಷ್ಟು ದಿನಗಳ ಕಾಲ ಆಮದು ಮೂಲಕ ಮಾತ್ರ ವಹಿವಾಟ ನಡೆಸುತ್ತಿದ್ದ ಬ್ರಿಡ್ಜ್ ಸ್ಟೋನ್ ಇನ್ಮುಂದೆ ದೇಶಿಯವಾಗಿ ಉತ್ಪಾದನೆ ಕೈಗೊಳ್ಳಲಿದೆ.

ಬ್ರಿಡ್ಜ್‌ ಸ್ಟೋನ್ ಸಂಸ್ಥೆಯಿಂದ ಭಾರತದಲ್ಲಿ 2 ಸಾವಿರ ಕೋಟಿ ಹೂಡಿಕೆ

ಇದಕ್ಕಾಗಿ ಇಂಧೋರ್ ಮತ್ತು ಪುಣೆಯಲ್ಲಿ ಪ್ರತಿದಿನ 15 ಸಾವಿರ ಟೈರ್‌ಗಳನ್ನು ಉತ್ಪಾದನಾ ಸಾಮರ್ಥ್ಯದ ಎರಡು ಉತ್ಪಾದನಾ ಘಟಕಗಳನ್ನು ತೆರೆಯಲಿರುವ ಬ್ರಿಡ್ಜ್ ಸ್ಟೋನ್ ಸಂಸ್ಥೆಯು ಇದಕ್ಕಾಗಿ 2 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡುತ್ತಿದೆ.

ಬ್ರಿಡ್ಜ್‌ ಸ್ಟೋನ್ ಸಂಸ್ಥೆಯಿಂದ ಭಾರತದಲ್ಲಿ 2 ಸಾವಿರ ಕೋಟಿ ಹೂಡಿಕೆ

2 ಸಾವಿರ ಕೋಟಿ ಬಂಡವಾಳವನ್ನು ಮುಂದಿನ 5 ವರ್ಷಗಳ ಕಾಲ ವಿವಿಧ ಯೋಜನೆಗಳ ಮೇಲೆ ಹೂಡಿಕೆ ಮಾಡುವ ಬ್ರಿಡ್ಜ್ ಸ್ಟೋನ್, 2022ರ ವೇಳೆಗೆ ಪ್ರತಿದಿನಕ್ಕೆ 41 ಸಾವಿರ ಟೈರ್ ಉತ್ಪಾದನೆ ಮಾಡುವ ಗುರಿ ಹೊಂದಿದೆ.

Recommended Video
Triumph Motorcycles And Bajaj Auto Announce Partnership - DriveSpark
ಬ್ರಿಡ್ಜ್‌ ಸ್ಟೋನ್ ಸಂಸ್ಥೆಯಿಂದ ಭಾರತದಲ್ಲಿ 2 ಸಾವಿರ ಕೋಟಿ ಹೂಡಿಕೆ

ಈ ಬಗ್ಗೆ ಮಾತನಾಡಿರುವ ಬ್ರಿಡ್ಜ್ ಸ್ಟೋನ್ ಇಂಡಿಯಾ ಎಂಡಿ ಕಜುತೋಷಿ ಒಯೊಮಾ, "ಬ್ರಿಡ್ಜ್ ಸ್ಟೋನ್‌ಗೆ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಭವಿಷ್ಯವಿದ್ದು, ಈ ನಿಟ್ಟಿನಲ್ಲಿ ದೃಡ ನಿರ್ಧಾರದೊಂದಿಗೆ ವಿವಿಧ ಯೋಜನೆಗಾಗಿ 2 ಸಾವಿರ ಕೋಟಿ ಹೂಡಿಕೆ ಮಾಡಲಾಗುತ್ತಿದೆ" ಎಂದಿದ್ದಾರೆ.

ಬ್ರಿಡ್ಜ್‌ ಸ್ಟೋನ್ ಸಂಸ್ಥೆಯಿಂದ ಭಾರತದಲ್ಲಿ 2 ಸಾವಿರ ಕೋಟಿ ಹೂಡಿಕೆ

ಇದಲ್ಲದೇ ಸ್ಥಳೀಯ ಉದ್ಯೋಗಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಬಗ್ಗೆ ಭರವಸೆ ನೀಡಿರುವ ಬ್ರಿಡ್ಜ್ ಸ್ಟೋನ್ ಸಂಸ್ಥೆಯುನುರಿತ 450 ಕಾರ್ಮಿಕರನ್ನು ನೇಮಕ ಕೂಡಾ ಮಾಡಿಕೊಳ್ಳಲಿದ್ದು, ಭಾರತದಿಂದಲೇ ರಫ್ತು ಕೈಗೊಳ್ಳುವ ಯೋಜನೆಯಲ್ಲಿದೆ.

ಬ್ರಿಡ್ಜ್‌ ಸ್ಟೋನ್ ಸಂಸ್ಥೆಯಿಂದ ಭಾರತದಲ್ಲಿ 2 ಸಾವಿರ ಕೋಟಿ ಹೂಡಿಕೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ದೇಶಿಯ ಮಾರುಕಟ್ಟೆಯಲ್ಲಿ ಈಗಾಗಲೇ ಹಲವಾರು ಬಗೆಯ ಟೈರ್ ಉತ್ಪಾದಕರು ಜನಪ್ರಿಯತೆ ಗಳಿಸಿದ್ದರು ಹೊಸ ತಂತ್ರಜ್ಞಾನ ಮತ್ತು ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರುವ ಟೈರ್‌ಗಳನ್ನು ಒದಗಿಸಿ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಬೃಹತ್ ಯೋಜನೆ ರೂಪಿಸಿರುವ ಬ್ರಿಡ್ಜ್ ಸ್ಟೋನ್ ಕ್ರಮ ಗಮನಾರ್ಹ.

Read more on ಟೈರ್ tyre
English summary
Read in Kannada about Bridgestone India To Invest Almost Rs 2000 Crore For Capacity Expansion.
Story first published: Wednesday, August 9, 2017, 10:49 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark