ಮದುವೆಗೆ ಹೋಗುತ್ತಿದ್ದವರು ಮಸಣಕ್ಕೆ- ಅಪಘಾತದಲ್ಲಿ 7 ಮಂದಿ ದುರ್ಮರಣ
ಮರ ಸಾಗಿಸುತ್ತಿದ್ದ ಲಾರಿ ಮತ್ತು ಇನ್ನೋವಾ ಮಧ್ಯೆ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ 7 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಸ್ನೇಹಿತನೊಬ್ಬನ ವಿವಾಹ ಸಮಾಂರಭಕ್ಕೆ ತೆರಳುತ್ತಿದ್ದಾಗ ಇನ್ನೋವಾ ಕಾರು ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಒಟ್ಟು 7 ಮಂದಿ ದುರ್ಮಣಕ್ಕಿಡಾಗಿರುವ ಘಟನೆ ನಡೆದಿದೆ.

ನಿನ್ನೆ ತಡರಾತ್ರಿ ಈ ದುರಂತ ನಡೆದಿದ್ದು, ಅಪಘಾತದ ತೀವ್ರತೆಗೆ ಲಾರಿಯಲ್ಲಿದ್ದ ಮರಗಳ ದಿಮ್ಮಿಗಳ ಅಡಿ ಕಾರು ಸಿಲುಕಿಕೊಂಡಿತ್ತು. ಬಳಿಕ ಕ್ರೇನ್ ಮೂಲಕ ಹೊರತೆಗೆಯಲಾಗಿದೆ.

ಮೃತರನ್ನು ಬೆಂಗಳೂರಿನ ಮಾಗಡಿ ನಿವಾಸಿಗಳಾದ ಮಧು, ಪ್ರವೀಣ್, ಜಾಲಹಳ್ಳಿ ನಿವಾಸಿ ಶ್ರೀಧರ್, ಮಂಡ್ಯ ನಿವಾಸಿ ಮಲ್ಲೇಶ್, ಸೊರಬ ನಿವಾಸಿ ರಾಜಶೇಖರ್, ಶಿಕಾರಿಪುರದ ರಾಘವೇಂದ್ರ ಮತ್ತು ಚೋರಡಿಯ ಮಂಜುನಾಥ್ ಎಂದು ಗುರುತಿಸಲಾಗಿದೆ.

ಇವರೆಲ್ಲರೂ ಶಿವಮೊಗ್ಗದ ಸಾಗರದಲ್ಲಿ ನಡೆಯುತ್ತಿದ್ದ ಸ್ನೇಹಿತನೊಬ್ಬನ ವಿವಾಹ ಸಮಾರಂಭಕ್ಕೆ ಆಗಮಿಸುತ್ತಿದ್ದರು, ಆದ್ರೆ ದುರ್ದೈವ ಮದುವೆ ಹೋಗಬೇಕಾಗಿದ್ದವರು ಮಸಣ ಸೇರಿದ್ದಾರೆ.

ಸದ್ಯ ಘಟನಾ ಸ್ಥಳದಿಂದ ಕಾರು ತೆರವುಗೊಳಿಸಲಾಗಿದ್ದು, ಅತಿವೇಗದ ಕಾರು ಚಾಲನೆಯೇ ಘಟನೆಗೆ ಕಾರಣ ಎನ್ನಲಾಗುತ್ತಿದೆ.

ಘಟನಾ ಸ್ಥಳಕ್ಕೆ ಎಎಸ್ಪಿ ಮುತ್ತುರಾಜ್ ಹಾಗೂ ಡಿವೈಎಸ್ಪಿ ಚಂದ್ರಶೇಖರ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕುಂಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಧು ಹಾಗೂ ಶ್ರೀಧರ್ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಡ್ರೈವರ್ ಗಳಾಗಿ ಕೆಲಸ ಮಾಡುತ್ತಿದ್ದು, ಪ್ರವೀಣ್ ಸಿನೆಮಾ ಕ್ಷೇತ್ರದಲ್ಲಿ ಮೇಕಪ್ ಕಲಾವಿದನಾಗಿ ಕಾರ್ಯ ನಿರ್ವಹಿಸುತ್ತಿದ್ದ.

ಇನ್ನು ಮಂಜುನಾಥ್ ಹಾಗೂ ರಾಜೇಶ್, ಮಲ್ಲೇಶ್ ಮೂವರೂ ಬೆಂಗಳೂರಿನಲ್ಲಿ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದು, ಘಟನೆಯಿಂದ ಪೋಷಕರು ಕಂಗಾಲಾಗಿದ್ದಾರೆ.

ಇದಲ್ಲದೇ ಶಿವಮೊಗ್ಗ-ಬೆಂಗಳೂರು ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಆಗಾಗ ಇಂತಹ ಘಟನೆಗಳು ನಡೆಯುತ್ತಲೇ ಇದ್ದು, ಶಾಶ್ವತ ಪರಿಹಾರಕ್ಕೆ ಇಲ್ಲಿನ ಸ್ಥಳೀಯರ ಹಲವು ದಿನಗಳಿಂದ ಒತ್ತಾಯಿಸುತ್ತಲೇ ಇದ್ದಾರೆ.

ಈಗಲಾದ್ರೂ ಎಚ್ಚೇತ್ತುಕೊಳ್ಳಬೇಕಿರುವ ಸಂಬಂಧಪಟ್ಟ ಅಧಿಕಾರಿಗಳು ಅಪಘಾತ ವಲಯದಲ್ಲಿ ಕೆಲವು ಮನ್ನೆಚ್ಚೆರಿಕೆ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಇದಲ್ಲದೇ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ಜೋಡಿ ರಸ್ತೆ ಮಾಡಬೇಕೇಂಬ ಬಹುದಿನಗಳ ಬೇಡಿಕೆಗೆ ಸ್ಪಂದಿಸಬೇಕಿದೆ.


Click it and Unblock the Notifications








