ಡಬ್ಬಲ್ ಡೆಕ್ಕರ್ ಬಸ್ ಸೇವೆಗಳ ಪುನಾರಂಭಕ್ಕೆ ಕೇಂದ್ರದಿಂದ ಹೊಸ ಪ್ಲ್ಯಾನ್..!!

Written By:

ಈ ಹಿಂದೆ ರಾಜಧಾನಿ ಬೆಂಗಳೂರಿನಲ್ಲಿ ಪ್ರಮುಖ ಆಕರ್ಷಣೆಯಾಗಿದ್ದ ಡಬ್ಬಲ್ ಡೆಕ್ಕರ್ ಬಸ್ ಸೇವೆಗಳಿಗೆ ಹೊಸ ರೂಪ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರವು, ಅಂತರ್‌ರಾಜ್ಯಗಳ ಮಧ್ಯೆ ಡಬ್ಬಲ್ ಡೆಕ್ಕರ್ ಸೇವೆಯನ್ನು ಪುನಾರಂಭಿಸಲು ಮುಂದಾಗಿದೆ.

To Follow DriveSpark On Facebook, Click The Like Button
ಡಬ್ಬಲ್ ಡೆಕ್ಕರ್ ಬಸ್ ಸೇವೆಗಳ ಪುನಾರಂಭಕ್ಕೆ ಕೇಂದ್ರದಿಂದ ಪ್ಲ್ಯಾನ್..!

ಕಳೆದ ಮೂರು ದಶಕಗಳ ಹಿಂದೆ ನಗರ ದರ್ಶನಕ್ಕೆ ಮಾತ್ರ ಸೀಮಿತವಾಗಿದ್ದ ಡಬ್ಬಲ್ ಡೆಕ್ಕರ್ ಬಸ್‌ಗಳು ಕ್ರಮೇಣ ಮೂಲೆ ಸೇರಿದ್ದವು. ಆದ್ರೆ ಪ್ರಸ್ತುತ ದಿನಗಳಲ್ಲಿ ಡಬ್ಬಲ್ ಡೆಕ್ಕರ್ ಬಸ್ ಸೇವೆಗಳು ಅವಶ್ಯಕತೆಯಿದ್ದು, ಈ ನಿಟ್ಟಿನಲ್ಲಿ ಕೇಂದ್ರವು ಬೃಹತ್ ಯೋಜನೆ ರೂಪಿಸುತ್ತಿದೆ.

ಡಬ್ಬಲ್ ಡೆಕ್ಕರ್ ಬಸ್ ಸೇವೆಗಳ ಪುನಾರಂಭಕ್ಕೆ ಕೇಂದ್ರದಿಂದ ಪ್ಲ್ಯಾನ್..!

ಕೇಂದ್ರ ಸರ್ಕಾರ ಸಿದ್ಧಗೊಳಿಸಿರುವ ಹೊಸ ಯೋಜನೆಗಳ ಪ್ರಕಾರ ಡಬ್ಬಲ್ ಡೆಕ್ಕರ್ ಬಸ್ ಸೇವೆಗಳಿಂದ ಪರಿಸರ ಸಂರಕ್ಷಣೆಗೆ ಸಹಕಾರಿಯಾಗುವುದುದಲ್ಲದೇ ಪ್ರಯಾಣಿಕರ ಸುರಕ್ಷತೆಗೂ ಆದ್ಯತೆ ನೀಡುವ ಉದ್ದೇಶ ಹೊಂದಿದೆ.

Recommended Video - Watch Now!
Tata Nexon Price And Features Variant-wise - DriveSpark
ಡಬ್ಬಲ್ ಡೆಕ್ಕರ್ ಬಸ್ ಸೇವೆಗಳ ಪುನಾರಂಭಕ್ಕೆ ಕೇಂದ್ರದಿಂದ ಪ್ಲ್ಯಾನ್..!

ಡಬ್ಬರ್ ಡೆಕ್ಕರ್ ಬಸ್ ಬಳಕೆಯಿಂದ ಡೀಸೆಲ್ ಉಳಿತಾಯವಾಗುವುದಲ್ಲದೇ ಆರ್ಥಿಕವಾಗಿ ಕೂಡಾ ಸಹಕಾರಿಯಾಗಲಿದೆ. ಇದರಿಂದ ಸಾರಿಗೆ ಸಂಸ್ಥೆಗಳ ನಿರ್ವಹಣಾ ವೆಚ್ಚಗಳು ತಗ್ಗಲಿದ್ದು, ಸಾಮಾನ್ಯ ಮಾದರಿಯ ಎರಡು ಬಸ್‌ಗಳ ಡೀಸೆಲ್ ಖರ್ಚು ಡಬ್ಬಲ್ ಡೆಕ್ಕರ್ ಒಂದೇ ಬಸ್ಸಿನ ಮೂಲಕ ಸರಿದೂಗಿಸಬಹುದಾಗಿದೆ.

ಡಬ್ಬಲ್ ಡೆಕ್ಕರ್ ಬಸ್ ಸೇವೆಗಳ ಪುನಾರಂಭಕ್ಕೆ ಕೇಂದ್ರದಿಂದ ಪ್ಲ್ಯಾನ್..!

ಹೀಗಾಗಿ ಸುಧಾರಿತ ತಂತ್ರಜ್ಞಾನ ಹೊಂದಿರುವ ಡಬ್ಬಲ್ ಡೆಕ್ಕರ್ ಬಸ್ ನಿರ್ಮಾಣಕ್ಕಾಗಿ ಈಗಾಗಲೇ ಹೊರ ಗುತ್ತಿಗೆ ನೀಡಿರುವ ಕೇಂದ್ರವು, ಸದ್ಯದಲ್ಲೇ ದೇಶದ ಪ್ರಮುಖ ನಗರಗಳ ಮಧ್ಯೆ ಹೊಸ ಬಸ್ ಸಂಚಾರಕ್ಕೆಹಸಿರು ನಿಶಾನೆ ತೊರಲಿದೆ.

ಡಬ್ಬಲ್ ಡೆಕ್ಕರ್ ಬಸ್ ಸೇವೆಗಳ ಪುನಾರಂಭಕ್ಕೆ ಕೇಂದ್ರದಿಂದ ಪ್ಲ್ಯಾನ್..!

ಆಯಾ ರಾಜ್ಯಗಳ ಸಾರಿಗೆ ಸಂಸ್ಥೆಗಳ ಅಧೀನದಲ್ಲೇ ಡಬ್ಬಲ್ ಡೆಕ್ಕರ್ ಬಸ್ ಸೇವೆಗಳು ಲಭ್ಯವಿರಲಿದ್ದು, ಅಗತ್ಯಕ್ಕೆ ಅನುಗಣವಾಗಿ ಅಂತರ್‌ರಾಜ್ಯಗಳ ಮತ್ತು ರಾಜ್ಯದ ಪ್ರಮುಖ ನಗರಗಳ ನಡುವೆ ಡಬ್ಬಲ್ ಡೆಕ್ಕರ್ ಬಸ್ ಸೇವೆಗಳನ್ನು ಆರಂಭಿಸಲಿವೆ.

ಡಬ್ಬಲ್ ಡೆಕ್ಕರ್ ಬಸ್ ಸೇವೆಗಳ ಪುನಾರಂಭಕ್ಕೆ ಕೇಂದ್ರದಿಂದ ಪ್ಲ್ಯಾನ್..!

ಕೆಲವು ವರದಿಗಳ ಪ್ರಕಾರ ದೇಶದ 75 ಪ್ರಮುಖ ನಗರಗಳ ಮಧ್ಯೆ ಡಬ್ಬಲ್ ಡೆಕ್ಕರ್ ಬಸ್ ಸೇವೆಗಳು ಲಭ್ಯವಾಗಲಿದ್ದು, ಕರ್ನಾಟಕದಲ್ಲಿ ಬೆಂಗಳೂರು-ಮಂಗಳೂರು, ಬೆಂಗಳೂರು-ಚೆನ್ನೈ, ಬೆಂಗಳೂರು-ತಿರುಪತಿ ನಡುವೆ ಡಬ್ಬಲ್ ಡೆಕ್ಕರ್ ಬಸ್ ಸೇವೆ ಆರಂಭಿಸುವ ಸಾಧ್ಯತೆಗಳಿವೆ.

ಡಬ್ಬಲ್ ಡೆಕ್ಕರ್ ಬಸ್ ಸೇವೆಗಳ ಪುನಾರಂಭಕ್ಕೆ ಕೇಂದ್ರದಿಂದ ಪ್ಲ್ಯಾನ್..!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಮಾಲಿನ್ಯ ತಡೆ ಹಾಗೂ ನಿರ್ವಹಣಾ ವೆಚ್ಚ ತಗ್ಗಿಸುವ ಉದ್ದೇಶದಿಂದ ಡಬ್ಬಲ್ ಡೆಕ್ಕರ್ ಬಸ್ ಸೇವೆಗಳ ಪುನಾರಂಭ ಮಾಡುತ್ತಿರುವ ಕೇಂದ್ರದ ಯೋಜನೆ ಮಹತ್ವದಾಗಿದ್ದು, ತ್ವರಿತಗತಿಯಲ್ಲಿ ಹೊಸ ಯೋಜನೆಯನ್ನು ಜಾರಿಗೊಳಿಸುವ ಅವಶ್ಯಕತೆಯಿದೆ.

English summary
Read in Kannada about Center Plans to Introduce Double Decker Buses on Inter State Routes. Click for Details ...
Story first published: Monday, September 25, 2017, 12:40 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark