ಭಾರತದಿಂದ ತನ್ನ ಷೆವರ್ಲೆ ಬೀಟ್ ಸೆಡಾನ್ ಕಾರನ್ನು ರಫ್ತು ಮಾಡುತ್ತೆ ಜಿಎಂ

Written By:

ಜೆನೆರಲ್ ಮೋಟಾರ್ಸ್ (ಜಿಎಂ) ಸಂಸ್ಥೆ ತನ್ನ ಷೆವರ್ಲೆ ಬೀಟ್ ಸೆಡಾನ್ ಆವೃತ್ತಿಯನ್ನು ಭಾರತದಿಂದ ಲ್ಯಾಟಿನ್ ಅಮೇರಿಕಾಗೆ ಸಾಗಾಣಿಕೆಯನ್ನು ಆರಂಭಿಸಿತು.

ಮಹಾರಾಷ್ಟ್ರದ ತನ್ನ ಟಾಲೆಗಾಂವ್ ಉತ್ಪಾದನಾ ಘಟಕದಲ್ಲಿ ಸೆಡಾನ್ ಬೀಟ್ ಕಾರಿನ ಉತ್ಪಾದನೆಯನ್ನು ಜೂನ್ 5, 2017ರಿಂದ ಜೆನೆರಲ್ ಮೋಟಾರ್ಸ್ (ಜಿಎಂ) ಸಂಸ್ಥೆ ಪ್ರಾರಂಭಿಸಲಾಗಿದ್ದು, ಮುಂದಿನ ಪ್ರಕ್ರಿಯೆಗಳಿಗೆ ಚಾಲನೆ ಕೊಟ್ಟಿದೆ.

ಈಗಾಗಲೇ ಸುಮಾರು 1,200 ಷೆವರ್ಲೆ ಬೀಟ್ ಸೆಡಾನ್ ಕಾರುಗಳನ್ನು ಲ್ಯಾಟಿನ್ ಅಮೇರಿಕಾಕ್ಕೆ ಸಾಗಿಸಲು ಲೋಡ್ ಮಾಡಿದೆ.

ಬೀಟ್ ಸೆಡಾನ್ ಕಾರು ಮೊದಲ ಬಾರಿಗೆ 2016ರಲ್ಲಿ ದೆಹಲಿಯ ಆಟೊ ಎಕ್ಸ್‌ಪೋದಲ್ಲಿ ಬಹಿರಂಗವಾಗಿದ್ದು, ಭಾರತದಲ್ಲಿ ಚೆವ್ರೊಲೆಟ್ ಎಸೆನ್ಷಿಯಾ ಎಂದು ಮಾರಾಟ ಮಾಡಲಾಗಿತ್ತು.

ಟಾಲೆಗಾಂವ್ ಸ್ಥಾವರವು ಜೆನೆರಲ್ ಮೋಟಾರ್ಸ್ (ಜಿಎಂ) ಸಂಸ್ಥೆಯ ಪ್ರಮುಖ ರಫ್ತು ಕೇಂದ್ರವಾಗಿದ್ದು ಮತ್ತು ಮೇ 2017ರಲ್ಲಿ ಭಾರತದ ಮೂರನೇ ಅತಿ ದೊಡ್ಡ ಪ್ರಯಾಣಿಕರ ವಾಹನ ರಫ್ತುದಾರ ಸ್ಥಾನವನ್ನು ಪಡೆಯುವಲ್ಲಿ ಈ ಘಟಕ ಪ್ರಮುಖ ಪಾತ್ರ ವಹಿಸಿದೆ.

ಈ ವರ್ಷದ ಮೊದಲ್ಗೊಂಡು 2017ರ ಹೊತ್ತಿಗೆ ಭಾರತದಲ್ಲಿ ಷೆವರ್ಲೆ ಬೀಟ್ ಸೆಡಾನ್ ಹಾಗು ಹಲವು ಕಾರುಗಳ ಮಾರಾಟ ಮಾಡುವುದನ್ನು ನಿಲ್ಲಿಸಲು ಜಿಎಂ ನಿರ್ಧರಿಸಿರುವ ವಿಚಾರ ನಮಗೆಲ್ಲರಿಗೂ ತಿಳಿದಿರುವಂತಹ ವಿಚಾರ.

ಕಳೆದ 2016ರಿಂದ ಮೆಕ್ಸಿಕೋಗೆ ಕಾರುಗಳನ್ನು ರಫ್ತು ಮಾಡುತ್ತಿರುವ ಜಿಎಂ, ಬೀಟ್ ಸೆಡಾನ್ ಹೊರತುಪಡಿಸಿ, ಬೀಟ್ ಹ್ಯಾಚ್ ಬ್ಯಾಕ್ ಕಾರನ್ನು ಸಹ ಭಾರತದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡಲು ಕಂಪನಿ ನಿರ್ಧರಿಸಿದೆ.

English summary
General Motors (GM) announced the commencement of shipping the sedan version of the Chevrolet Beat to Latin America from India.
Story first published: Tuesday, June 27, 2017, 13:22 [IST]
Please Wait while comments are loading...

Latest Photos