ದಟ್ಸನ್ ರೆಡಿ ಗೊ ಗೋಲ್ಡ್ 1.0-ಲೀಟರ್ ಕಾರು ಆವೃತ್ತಿ ಬಿಡುಗಡೆ- ಬೆಲೆ ರೂ.3.69 ಲಕ್ಷ..!!

Written By:

ಭಾರತೀಯ ರಸ್ತೆಗಳಲ್ಲಿ ಈಗಾಗಲೇ ಉತ್ತಮ ಕಾರ್ಯಕ್ಷಮತೆಯೊಂದಿಗೆ ಜನಪ್ರಿಯತೆ ಸಾಧಿಸಿರುವ ದಟ್ಸನ್ ಸಂಸ್ಥೆಯು ಇದೀಗ ರೆಡಿ ಗೊ ಗೋಲ್ಡ್ 1.0-ಲೀಟರ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರಿನ ತಾಂತ್ರಿಕ ಅಂಶಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ದಟ್ಸನ್ ರೆಡಿ ಗೊ ಗೋಲ್ಡ್ 1.0-ಲೀಟರ್ ಕಾರು ಆವೃತ್ತಿ ಬಿಡುಗಡೆ

ರೆಡಿ ಗೊ ಗೋಲ್ಡ್ 1.0-ಲೀಟರ್ ಮಾದರಿಯು ದಟ್ಸನ್ ಸೀಮಿತ ಕಾರು ಆವೃತ್ತಿಯಾಗಿದ್ದು, ಹ್ಯಾಚ್‌ಬ್ಯಾಕ್ ವೈಶಿಷ್ಟ್ಯತೆಗಳ ಸಣ್ಣ ಗಾತ್ರದ ಕಾರು ಆವೃತ್ತಿಗಳಲ್ಲೇ ಅತಿ ಹೆಚ್ಚು ಸುಧಾರಿತ ಮಾದರಿಯಾಗಿದೆ. ಹೀಗಾಗಿ ಹೊಸ ಕಾರಿನ ಬೆಲೆಯನ್ನು ರೂ.3.69 ಲಕ್ಷಕ್ಕೆ(ದೆಹಲಿ ಎಕ್ಸ್‌ಶೋರಂ) ನಿಗದಿಪಡಿಸಲಾಗಿದೆ.

ದಟ್ಸನ್ ರೆಡಿ ಗೊ ಗೋಲ್ಡ್ 1.0-ಲೀಟರ್ ಕಾರು ಆವೃತ್ತಿ ಬಿಡುಗಡೆ

ಇನ್ನು ರೆಡಿ ಗೊ ಗೋಲ್ಡ್ 1.0-ಲೀಟರ್ ಕಾರು ಆವೃತ್ತಿಯು ಮೇಲ್ನೋಟಕ್ಕೆ ಸ್ಪೋರ್ಟಿ ಲುಕ್‌ನೊಂದಿಗೆ ಅಭಿವೃದ್ಧಿಗೊಳಿಸಲಾಗಿದ್ದು, ಇದು ಕಾರ್ ರೇಸ್ ಪ್ರಿಯರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.

ದಟ್ಸನ್ ರೆಡಿ ಗೊ ಗೋಲ್ಡ್ 1.0-ಲೀಟರ್ ಕಾರು ಆವೃತ್ತಿ ಬಿಡುಗಡೆ

ಇದರ ಜೊತೆಗೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ರೆಡಿ ಗೊ ಗೋಲ್ಡ್ 1.0-ಲೀಟರ್ ಕಾರು ಆವೃತ್ತಿಯನ್ನು ಗ್ರೇ, ಸಿಲ್ವರ್ ಮತ್ತು ವೈಟ್ ಬಣ್ಣದಲ್ಲಿ ವಿನ್ಯಾಸಗೊಳಿಸಲಾಗಿದ್ದು, ಇಂಟೆಲಿಜೆಂಟ್ ಸ್ಪಾರ್ಕ್ ಆಟೋಮೆಟೆಡ್ ಟೆಕ್ನಾಲಜಿ (ಐಎಸ್ಎಟಿ) ಅಳವಡಿಕೆ ಹೊಂದಿದೆ.

ದಟ್ಸನ್ ರೆಡಿ ಗೊ ಗೋಲ್ಡ್ 1.0-ಲೀಟರ್ ಕಾರು ಆವೃತ್ತಿ ಬಿಡುಗಡೆ

ಎಂಜಿನ್ ಸಾಮರ್ಥ್ಯ

ಈ ಮೇಲೆ ಹೇಳಿದಂತೆ ರೆಡಿ ಗೊ ಗೋಲ್ಡ್ 1.0-ಲೀಟರ್ ಕಾರು ಆವೃತ್ತಿಯು 1.0-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೊತೆ ನಿರ್ಮಾಣ ಮಾಡಲಾಗಿದ್ದು, 67-ಬಿಎಚ್‌ಪಿ ಮತ್ತು 91-ಟಾರ್ಕ್ ಉತ್ಪಾದನಾ ಶಕ್ತಿಯನ್ನು ಒದಗಿಸಲಾಗಿದೆ.

ದಟ್ಸನ್ ರೆಡಿ ಗೊ ಗೋಲ್ಡ್ 1.0-ಲೀಟರ್ ಕಾರು ಆವೃತ್ತಿ ಬಿಡುಗಡೆ

ಇದಲ್ಲದೇ ಹೊಸ ಕಾರು ಆವೃತ್ತಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ನೀಡಲಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ ರೆಡಿ ಗೊ ಗೋಲ್ಡ್ 1.0-ಲೀಟರ್ ಕಾರು ಆವೃತ್ತಿಗಳು 22.5 ಕಿ.ಮಿ ಮೈಲೇಜ್ ಒದಗಿಸುವ ಭರವಸೆ ನೀಡಲಾಗಿದೆ.

ದಟ್ಸನ್ ರೆಡಿ ಗೊ ಗೋಲ್ಡ್ 1.0-ಲೀಟರ್ ಕಾರು ಆವೃತ್ತಿ ಬಿಡುಗಡೆ

ಈ ಬಗ್ಗೆ ಮಾತನಾಡಿರುವ ದಟ್ಸನ್ ಮಾರ್ಕೆಟಿಂಗ್ ಹೆಡ್ ಜೆರೋಮಿ ಸೈಗೊಟ್, ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಉತ್ಸವ ದಿನಗಳ ಕಾರು ಮಾರಾಟ ಪ್ರಮಾಣ ಹೆಚ್ಚುತ್ತಿದ್ದು, ಈ ಹಿನ್ನೆಲೆ ಮಧ್ಯಮ ವರ್ಗದ ಗ್ರಾಹಕರನ್ನು ಗುರಿಯಾಗಿಸಿಕೊಂಡು ರೆಡಿ ಗೊ ಗೋಲ್ಡ್ 1.0-ಲೀಟರ್ ಕಾರು ಆವೃತ್ತಿಯನ್ನು ಪರಿಚಯಿಸುತ್ತಿದ್ದೇವೆ" ಎಂದಿದ್ದಾರೆ.

ದಟ್ಸನ್ ರೆಡಿ ಗೊ ಗೋಲ್ಡ್ 1.0-ಲೀಟರ್ ಕಾರು ಆವೃತ್ತಿ ಬಿಡುಗಡೆ

ಇದಲ್ಲದೇ ಹೊಸ ಕಾರು ಖರೀದಿ ಮೇಲೆ ವಿಶೇಷ ಆಫರ್‌ಗಳನ್ನು ಘೋಷಣೆ ಮಾಡಿರುವ ದಟ್ಸನ್ ಸಂಸ್ಥೆಯು, ರೆಡಿ ಗೊ ಗೋಲ್ಡ್ 1.0-ಲೀಟರ್ ಕಾರು ಆವೃತ್ತಿ ಮೇಲೆ ಗರಿಷ್ಠ ಐದು ವರ್ಷಗಳ ಕಾಲ ಸಮಗ್ರ ಬಿಡಿಭಾಗಗಳ ಸೇವಾ ಆಯ್ಕೆಯನ್ನು ಸಹ ನೀಡಿರುವುದು ಮತ್ತೊಂದು ವಿಶೇಷ ಎನ್ನಬಹುದು.

English summary
Read in Kannada about Datsun rediGO Gold 1.0-Litre Launched In India.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark